ಈ ಮೂಲಕ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್‌ಗೆ, ರಾತ್ರಿ 10 ಗಂಟೆಯ ಒಳಗೆ ಸಂಪರ್ಕಿಸಲು ಒಪ್ಪಿಗೆ ನೀಡುತ್ತೇನೆ. ಇದು ನನ್ನ NDNC ನೋಂದಣಿಯನ್ನು ಮೀರುವ ಒಪ್ಪಂದವೆಂದು ಒಪ್ಪುತ್ತೇನೆ.
ಈ ಮೂಲಕ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್‌ಗೆ, ರಾತ್ರಿ 10 ಗಂಟೆಯ ಒಳಗೆ ಸಂಪರ್ಕಿಸಲು ಒಪ್ಪಿಗೆ ನೀಡುತ್ತೇನೆ. ಇದು ನನ್ನ NDNC ನೋಂದಣಿಯನ್ನು ಮೀರುವ ಒಪ್ಪಂದವೆಂದು ಒಪ್ಪುತ್ತೇನೆ.
ನೀವು ಭಾರತೀಯ ರಸ್ತೆಗಳಲ್ಲಿ ಪ್ರಯಾಣಿಸಿದ್ದರೆ, ನಿಮ್ಮ ಕಣ್ಮುಂದೆ ಮಾರುತಿ ಕಾರು ಹಾದುಹೋಗಿರುವ ಸಾಧ್ಯತೆ ಇದೆ! ಪ್ರತಿ ಅವಶ್ಯಕತೆಗೆ, ಬಜೆಟ್‍ಗೆ ಮತ್ತು ಜೀವನಶೈಲಿಗೆ ತಕ್ಕಂತಹ ವೇರಿಯಂಟ್‍ಗಳೊಂದಿಗೆ, ಮಾರುತಿ ಸುಜುಕಿ ಕಳೆದ ಮೂರು ದಶಕಗಳಿಂದ ಇಡೀ ದೇಶವನ್ನೇ ತನ್ನ ಕಾರುಗಳ ಚಕ್ರಗಳ ಮೇಲಿರಿಸಿದೆ . ಭಾರತೀಯ ಮಧ್ಯಮ ವರ್ಗವನ್ನು ಮೋಟರೈಸ್ ಮಾಡುವ ದೃಷ್ಟಿಯಿಂದ 1983 ರಲ್ಲಿ ಸ್ಥಾಪಿಸಲಾದ ಮಾರುತಿ ಸಂಸ್ಥೆಯು, ಮಾರುತಿ ಉದ್ಯೋಗ್ ಲಿಮಿಟೆಡ್ ಮತ್ತು ಜಪಾನ್‍ನ ಸುಜುಕಿ ಮೋಟಾರ್ ಕಾರ್ಪೊರೇಶನ್ ನಡುವಿನ ಜಂಟಿ ಉದ್ಯಮವಾಗಿ ಆರಂಭವಾಯಿತು. ಇಂದಿಗೆ, ಈ ಆಟೋಮೊಬೈಲ್ ದೈತ್ಯ ವರ್ಷಕ್ಕೆ ಐದು ಲಕ್ಷ ಕಾರುಗಳನ್ನು ಮಾರಾಟ ಮಾಡುತ್ತ, "ಸಾಮಾನ್ಯ ಜನರ ಕಾರು" ಎಂದು ಹೆಸರು ಪಡೆದಿದೆ.
ಕಳೆದ ವರ್ಷಗಳಲ್ಲಿ, ಈ ತಯಾರಕರು ಪರಿಚಯಿಸಿದ ಕಾರುಗಳು, ಮಾರುಕಟ್ಟೆಯಲ್ಲಿ ಹೆಚ್ಚಾಗಿ ಮಾರಾಟವಾಗುವ ಟಾಪ್ 5 ಕಾರುಗಳ ಸ್ಥಾನವನ್ನು ನಿರಂತರವಾಗಿ ಕಾಪಾಡಿಕೊಂಡು ಬಂದಿವೆ. ಈಗ ನೆಕ್ಸಾ ಆರಂಭಿಸಿದ ನಂತರ, ಮಾರುತಿ ಸುಜುಕಿ ಪ್ರೀಮಿಯಂ SUV (ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್) ಮತ್ತು ಸೆಡಾನ್ ವಿಭಾಗಗಳಲ್ಲಿ ನೆಲೆಯೂರುವ ಗುರಿ ಹೊಂದಿದೆ. ಹಣಕ್ಕೆ ತಕ್ಕ ಮೌಲ್ಯ ಒದಗಿಸುವ ಆಫರ್‌ಗಳ ಜೊತೆಗೆ, ಉತ್ತಮ ಮಾರಾಟ-ನಂತರದ ನೆಟ್ವರ್ಕ್ ಹೊಂದಿರುವ ಕಾರಣ ಮಾರುತಿ ಸುಜುಕಿ ಪ್ರಮುಖ ವಾಹನ ದಿಗ್ಗಜ ಮತ್ತು ವಿಶ್ವಾಸಾರ್ಹ ಸೇವೆ ಒದಗಿಸುವ ಸಂಸ್ಥೆ ಎನಿಸಿದೆ.
ಇಂದಿಗೂ ಸಹ, ಅದು ಸ್ವಿಫ್ಟ್, ಬಲೆನೊ ಅಥವಾ ಆಲ್ಟೋ ಯಾವುದೇ ಆಗಿರಲಿ, ಮಾರುತಿ ಕಾರನ್ನು ಹೊಂದುವುದು ಭಾರತದಾದ್ಯಂತ ಅನೇಕರಿಗೆ ಅದೊಂದು ಹೆಮ್ಮೆಯ ಸಂಕೇತವಾಗಿದೆ ಮತ್ತು ನಿಮ್ಮ ಮೌಲ್ಯಯುತ ಮಾಲಿಕತ್ವಕ್ಕೆ ಉತ್ತಮ ಇನ್ಶೂರೆನ್ಸ್ ಅಗತ್ಯವಿದೆ. ಥರ್ಡ್ ಪಾರ್ಟಿ ಕವರೇಜ್‌ನಿಂದ ಹಿಡಿದು ಹೆಚ್ಚುವರಿ ಪ್ರಯೋಜನಗಳವರೆಗೆ, ಎಚ್‌ಡಿಎಫ್‌ಸಿ ಎರ್ಗೋದ ಮಾರುತಿ ಕಾರ್ ಇನ್ಶೂರೆನ್ಸ್ ಎಲ್ಲವನ್ನೂ ಒದಗಿಸುತ್ತದೆ - ನಿಮ್ಮ ಮಾರುತಿ ಕಾರಿನಲ್ಲಿ ನಿಮ್ಮಂತೆಯೇ ಪ್ರೀತಿಯನ್ನು ಬೆಳೆಸುತ್ತದೆ!
Maruti Suzuki – ಹೆಚ್ಚು ಮಾರಾಟವಾಗುವ ಮಾಡೆಲ್‌ಗಳು
1
ಮಾರುತಿ ಸುಜುಕಿ ಸ್ವಿಫ್ಟ್
ಸ್ವಿಫ್ಟ್ ₹5.99 ಲಕ್ಷದಿಂದ ₹9.03 ಲಕ್ಷಗಳ ನಡುವಿನ (ಎಕ್ಸ್-ಶೋರೂಮ್ ದೆಹಲಿ) ಬೆಲೆ ಶ್ರೇಣಿಯಲ್ಲಿ ಲಭ್ಯವಿರುವ 5-ಸೀಟರ್ ಹ್ಯಾಚ್‌ಬ್ಯಾಕ್ ಆಗಿದೆ. ಸ್ವಿಫ್ಟ್ ಅನ್ನು ನಾಲ್ಕು ವಿಶಾಲ ರೂಪಾಂತರಗಳಲ್ಲಿ ನೀಡಲಾಗುತ್ತದೆ: LXi, VXi, ZXi, ಮತ್ತು ZXi+. VXi ಮತ್ತು ZXi ಟ್ರಿಮ್‌ಗಳನ್ನು CNG ಯೊಂದಿಗೆ ಆಯ್ಕೆ ಮಾಡಬಹುದು. ಈಗ ಅದರ ಮೂರನೇ ತಲೆಮಾರಿನಲ್ಲಿ, ಸ್ವಿಫ್ಟ್ ಕಾರು ಪುಶ್-ಬಟನ್ ಸ್ಟಾರ್ಟ್, HID ಪ್ರೊಜೆಕ್ಟರ್‌ಗಳು, AMT ಗೇರ್‌ಬಾಕ್ಸ್ ಮತ್ತು ಇನ್ನೂ ಅನೇಕ ಉತ್ತಮ ಫೀಚರ್‌ಗಳೊಂದಿಗೆ ಬರುತ್ತದೆ. ಈ ಎಲ್ಲಾ ಕಾರಣಗಳು ಇದನ್ನು ಬಲವಾದ ಖರೀದಿಯನ್ನಾಗಿ ಮಾಡುತ್ತವೆ.
2
ಮಾರುತಿ ಸುಜುಕಿ ವ್ಯಾಗನಾರ್
ವ್ಯಾಗನ್ R ಎಂಬುದು ₹ 5.54 - 7.42 ಲಕ್ಷ (ಎಕ್ಸ್-ಶೋರೂಮ್ ದೆಹಲಿ) ಬೆಲೆ ಶ್ರೇಣಿಯಲ್ಲಿ ಲಭ್ಯವಿರುವ 5-ಸೀಟರ್ ಹ್ಯಾಚ್‌ಬ್ಯಾಕ್ ಆಗಿದೆ. ಹಲವು ವರ್ಷಗಳಲ್ಲಿ, ಈ ಮಾರುತಿ ಕಾರು ತನ್ನನ್ನು ತಾನು ಒಂದು ಸದೃಢ ಫೌಂಡೇಶನ್ ಆಗಿ ರೂಪಿಸಿಕೊಂಡಿದೆ. ಮೂರನೇ ತಲೆಮಾರಿನ ವ್ಯಾಗನ್ R ನಲ್ಲಿ ಇದನ್ನು ಇನ್ನೂ ಹೆಚ್ಚಿಸಲಾಯಿತು, ಇದರಲ್ಲಿ ಹೆಚ್ಚುವರಿ ಮನರಂಜನೆ ಮತ್ತು ಸುರಕ್ಷತಾ ಫೀಚರ್‌ಗಳನ್ನು ನೀಡಲಾಗಿದೆ. 1.0 ಲೀಟರ್, ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಜೋಡಿಸಲಾದ ಹೆಚ್ಚುವರಿ ವಿಶಾಲ ಇಂಟೀರಿಯರ್‌ಗಳು ವ್ಯಾಗನ್ R ಅನ್ನು ಆರಾಮದಾಯಕವಾಗಿಸುತ್ತವೆ ಮತ್ತು ಶಕ್ತಿಶಾಲಿಯಾಗಿಸುತ್ತವೆ.
3
ಮಾರುತಿ ಸುಜುಕಿ ಆಲ್ಟೋ
ಆಲ್ಟೋ ಎಂಟ್ರಿ-ಲೆವೆಲ್ 5-ಸೀಟರ್ ಹ್ಯಾಚ್‌ಬ್ಯಾಕ್ ಆಗಿದ್ದು, ಇದು ₹3.25 ಲಕ್ಷದ ಬೆಲೆಯಲ್ಲಿ ಆರಂಭವಾಗುತ್ತದೆ ಮತ್ತು ₹5.12 ಲಕ್ಷದವರೆಗೆ (ಎಕ್ಸ್-ಶೋರೂಮ್ ದೆಹಲಿ) ಹೋಗುತ್ತದೆ. ಕೈಗೆಟುಕುವಿಕೆ ಮತ್ತು ಪ್ರಾಯೋಗಿಕತೆಯನ್ನು ಅವರ ಉನ್ನತ ಆದ್ಯತೆಯಾಗಿ ಪರಿಗಣಿಸುವ ಕುಟುಂಬಗಳಿಗೆ ಆಲ್ಟೋ ಒಂದು ಉತ್ತಮ ಆಯ್ಕೆಯಾಗಿದೆ. ಹಲವು ವರ್ಷಗಳಲ್ಲಿ, ಆಲ್ಟೋ ಕಾರು ಯಶಸ್ವಿ ಅಪ್ಗ್ರೇಡ್‌ಗಳನ್ನು ಪಡೆದಿದೆ ಮತ್ತು ತನ್ನನ್ನು ತಾನು ಪ್ರತಿದಿನದ ಭರವಸೆಯ ವಾಹನವಾಗಿ ಚಿತ್ರಿಸಿಕೊಂಡು ಉಳಿದುಕೊಂಡಿದೆ.
4
ಮಾರುತಿ ಸುಜುಕಿ ಬಲೆನೋ
ಬಲೆನೋ ಪ್ರೀಮಿಯಂ 5-ಸೀಟರ್ ಹ್ಯಾಚ್‌ಬ್ಯಾಕ್ ಆಗಿದೆ. ಇದು ₹ 6.61 ಲಕ್ಷದಿಂದ ₹ 9.88 ಲಕ್ಷದ ನಡುವಿನ ಬೆಲೆ ಶ್ರೇಣಿಯಲ್ಲಿ ಲಭ್ಯವಿದೆ. ಬಲೆನೋ CNG ಬೆಲೆ ₹ 8.35 ಲಕ್ಷದಿಂದ ₹ 9.28 ಲಕ್ಷದವರೆಗೆ ಇರುತ್ತದೆ. ಬಲೆನೋ ಮಾನ್ಯುಯಲ್ ಬೆಲೆ ₹ 6.61 ಲಕ್ಷದಿಂದ ₹ 9.33 ಲಕ್ಷದವರೆಗೆ ಇರುತ್ತದೆ. ಮಾರುತಿಯ ಪ್ರೀಮಿಯಂ ರಿಟೇಲ್ ನೆಕ್ಸಾ ಔಟ್ಲೆಟ್‌ಗಳಲ್ಲಿ ಈ ಮಾಡೆಲ್ ಅನ್ನು ಮಾರಾಟ ಮಾಡಲಾಗಿದೆ. ಪೆಟ್ರೋಲ್-CVT ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು ಹವಾಮಾನ ನಿಯಂತ್ರಣವನ್ನು ಒಳಗೊಂಡಂತೆ ಹಲವಾರು ಅಪ್‍ಗ್ರೇಡ್‍ಗಳನ್ನು ಈ ಕಾರು ಪಡೆಯುತ್ತದೆ. ಒಳ ಮತ್ತು ಬಾಹ್ಯ ಅಪ್ಗ್ರೇಡ್‌ಗಳ ಜೊತೆಗೆ, ಈ ಮಾರುತಿ ಕಾರ್ ಮಾಡೆಲ್ ಅಪ್ಗ್ರೇಡ್ ಆದ BS-6 ಎಂಜಿನ್ ಅನ್ನು ಹೊಂದಿದೆ.
5
ಮಾರುತಿ ಸುಜುಕಿ ಡಿಜೈರ್
ಡಿಜೈರ್ ಎಂಬುದು ₹ 6.52 ಲಕ್ಷದಿಂದ ₹ 9.39 ಲಕ್ಷದ ಬೆಲೆ ಶ್ರೇಣಿಯಲ್ಲಿ ಲಭ್ಯವಿರುವ ಎಂಟ್ರಿ-ಲೆವೆಲ್ ಸೆಡಾನ್ ಆಗಿದೆ. ಡಿಜೈರ್ CNG ಬೆಲೆ ₹ 8.39 ಲಕ್ಷದಿಂದ ₹ 9.07 ಲಕ್ಷದವರೆಗೆ ಇರುತ್ತದೆ. ಡಿಜೈರ್ ಮಾನ್ಯುಯಲ್ ಬೆಲೆ ₹ 6.52 ಲಕ್ಷದಿಂದ ₹ 9.07 ಲಕ್ಷದವರೆಗೆ ಇರುತ್ತದೆ. ವರ್ಗ-ಪ್ರಮುಖ ಫೀಚರ್‌ಗಳು ಮತ್ತು ಅರ್ಗೋನಾಮಿಕ್ ವಿನ್ಯಾಸ ಹೊಂದಿರುವ ಒಳಾಂಗಣದಿಂದ, ಇಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಸೆಡಾನ್‌ಗಳಲ್ಲಿ ಒಂದಾಗಿದೆ. ಈ ಮಾರುತಿ ಕಾರು ಟಾಪ್-ಸ್ಪೆಕ್ ಮಾಡೆಲ್‌ನಲ್ಲಿ AMT ನೊಂದಿಗೆ ಕೇವಲ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ.
ಇತರ ಮಾರುತಿ ಸುಜುಕಿ ಮಾದರಿಗಳು
ಮಾರುತಿ ಸುಜುಕಿ ಮಾಡೆಲ್‌ಗಳು
ಕಾರ್ ಸೆಗ್ಮೆಂಟ್
ಬೆಲೆ ಶ್ರೇಣಿ
ಮಾರುತಿ ಸುಜುಕಿ ಸೆಲೆರಿಯೋ
ಹ್ಯಾಚ್‌ಬ್ಯಾಕ್
₹ 5.97 ರಿಂದ ₹ 7.95 ಲಕ್ಷ
ಮಾರುತಿ ಸುಜುಕಿ ಸೆಲೆರಿಯೋ X
ಹ್ಯಾಚ್‌ಬ್ಯಾಕ್
₹5.64 ರಿಂದ ₹6.92 ಲಕ್ಷ
ಮಾರುತಿ ಸುಜುಕಿ ಎಸ್-ಪ್ರೆಸ್ಸೋ
ಕಾಂಪ್ಯಾಕ್ಟ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (C-SUV)
₹4.26 ಲಕ್ಷದಿಂದ ₹ 6.11 ಲಕ್ಷ
ಮಾರುತಿ ಸುಜುಕಿ ಇಗ್ನಿಸ್
ಕಾಂಪ್ಯಾಕ್ಟ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (C-SUV)
₹ 5,82,000 ರಿಂದ ₹ 8,14,000
ಮಾರುತಿ ಸುಜುಕಿ ಎರ್ಟಿಗಾ
ಮಲ್ಟಿ-ಪರ್ಪಸ್ ವೆಹಿಕಲ್ (MPV)
₹8.64 ರಿಂದ ₹ 13.08
ಮಾರುತಿ ಸುಜುಕಿ ಈಕೋ
ಮಲ್ಟಿ-ಪರ್ಪಸ್ ವೆಹಿಕಲ್ (MPV)
₹5.27 ಲಕ್ಷದಿಂದ ₹ 6.53 ಲಕ್ಷ
ಮಾರುತಿ ಸುಜುಕಿ XL6
ಮಲ್ಟಿ-ಪರ್ಪಸ್ ವೆಹಿಕಲ್ (MPV)
₹ 13.08 ರಿಂದ 16.63 ಲಕ್ಷ
ಮಾರುತಿ ಸುಜುಕಿ ವಿಟಾರ ಬ್ರೀಜ್ಜಾ
ಸ್ಪೋರ್ಟ್ಸ್ ಯುಟಿಲಿಟಿ ವಾಹನ (SUV)
₹ 8.29 ಲಕ್ಷದಿಂದ ₹14.14 ಲಕ್ಷ
ಮಾರುತಿ ಸುಜುಕಿ ಎಸ್-ಕ್ರಾಸ್
ಸ್ಪೋರ್ಟ್ಸ್ ಯುಟಿಲಿಟಿ ವಾಹನ (SUV)
₹ 8.95 ರಿಂದ ₹ 12.92 ಲಕ್ಷ
ಮಾರುತಿ ಸುಜುಕಿ ಸಿಯಾಜ್
ಸೆಡಾನ್
₹ 9.30 ಲಕ್ಷ - ₹ 12.45 ಲಕ್ಷ
ಗಮನಿಸಿ: ನಿಮ್ಮ ಭೌಗೋಳಿಕ ಸ್ಥಳಗಳ ಆಧಾರದ ಮೇಲೆ ಮಾಡೆಲ್ಗಳ ಬೆಲೆಯು ಬದಲಾಗಬಹುದು. ಮೇಲೆ ತಿಳಿಸಲಾದ ಬೆಲೆಗಳು ಈ ಮಾರುತಿ ಕಾರ್ ಮಾಡೆಲ್ಗಳಿಗೆ ತಾತ್ಕಾಲಿಕ ಬೆಲೆಗಳಾಗಿವೆ
Maruti Suzuki – ವಿಶಿಷ್ಟ ಸೇಲ್ ಪಾಯಿಂಟ್‌ಗಳು
1
ಹಣಕ್ಕೆ ತಕ್ಕ ಮೌಲ್ಯ
ಯಾವುದೇ ಭಾರತೀಯ ಖರೀದಿದಾರರು ಹಣವನ್ನು ಖರ್ಚು ಮಾಡುವಾಗ ಚಿಂತಿಸಬಾರದೆಂಬ ರೀತಿಯಲ್ಲಿ ಮಾರುತಿ ಸುಜುಕಿ ಕಾರುಗಳ ಬೆಲೆಯನ್ನು ನಿಗದಿಪಡಿಸಲಾಗಿದೆ. ಮಾರುತಿ ಸುಜುಕಿ ಆಲ್ಟೋ ಮತ್ತು ವ್ಯಾಗನ್ R ನಂತಹ ಕಾರುಗಳು ವಾಹನವನ್ನು ಹೊಂದುವ ಪ್ರತಿಯೊಂದು ಕುಟುಂಬದ ಕನಸನ್ನು ನನಸಾಗಿಸಿವೆ.
2
ಅತ್ಯುತ್ತಮ ಇಂಧನ ದಕ್ಷತೆ
ಮಾರುತಿ ಕಾರುಗಳು ತುಂಬಾ ಇಂಧನ ದಕ್ಷತೆಗೆ ಹೆಸರುವಾಸಿಯಾಗಿವೆ. ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ಸಿಸ್ಟಮ್‌ನಂತಹ ತಂತ್ರಜ್ಞಾನಗಳೊಂದಿಗೆ, ಇದು ಹೆಚ್ಚು ಇಂಧನ-ದಕ್ಷ ಕಾರುಗಳನ್ನು ಮಾಡುವುದನ್ನು ಮುಂದುವರೆಸುತ್ತದೆ. ಸಿಯಾಜ್ ಮತ್ತು ಬ್ರೀಜಾದಂತಹ ದೊಡ್ಡ ಕಾರುಗಳು ಕೂಡ ಈ ವಿಭಾಗದ ಇತರ ಕಾರುಗಳಿಗೆ ಹೋಲಿಸಿದರೆ ಉತ್ತಮ ಇಂಧನ ದಕ್ಷತೆಯನ್ನು ಒದಗಿಸುತ್ತವೆ.
3
ವಿಶ್ವಾಸಾರ್ಹತೆ
ಮಾರುತಿ ಸುಜುಕಿ ಕಾರುಗಳನ್ನು ನಿರ್ವಹಿಸುವುದು ಸುಲಭ, ಮತ್ತು ನಿರ್ವಹಣಾ ವೆಚ್ಚವು ತುಂಬಾ ಕಡಿಮೆ ಇರುತ್ತದೆ. ಅದರ ನಿರ್ವಹಣೆಯ ಬಗ್ಗೆ ಹೆಚ್ಚು ಚಿಂತಿಸದೆ ನೀವು ವರ್ಷಗಳವರೆಗೆ ಮಾರುತಿ ಸುಜುಕಿ ಕಾರನ್ನು ನಡೆಸಬಹುದು. ಅಲ್ಲದೆ, ಭಾರತೀಯ ರಸ್ತೆಗಳಲ್ಲಿ, ನೀವು 10 ವರ್ಷಗಳವರೆಗೆ ಅಥವಾ ಅದಕ್ಕಿಂತ ಹೆಚ್ಚು ಕಾಲದಿಂದ ಓಡುತ್ತಿರುವ ಮಾರುತಿ ಕಾರನ್ನು ನೋಡಬಹುದು.
4
ಗ್ರಾಹಕ-ಕೇಂದ್ರಿತ ಸ್ವರೂಪ
ಮಾರುತಿ ಸುಜುಕಿ ಮಾರುಕಟ್ಟೆಯ ಅತ್ಯಂತ ಗ್ರಾಹಕ-ಕೇಂದ್ರಿತ ಕಾರ್ ತಯಾರಕರಲ್ಲಿ ಒಂದಾಗಿದೆ. ನಿಮ್ಮ ಕಾರು ಖರೀದಿಸುವ ಪ್ರಯಾಣದಿಂದ ಕೊನೆಯವರೆಗೆ, ನೀವು ಸುಗಮ, ತೊಂದರೆ ರಹಿತ ಅನುಭವವನ್ನು ಹೊಂದಿರುವುದನ್ನು ಮಾರುತಿ ಖಚಿತಪಡಿಸುತ್ತದೆ.
5
ಅತ್ಯುತ್ತಮ ಮರುಮಾರಾಟ ಮೌಲ್ಯ
ಮಾರುತಿ ಕಾರುಗಳು ಸೆಕೆಂಡ್-ಹ್ಯಾಂಡ್ ಕಾರ್-ಮಾರಾಟ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯವಾಗಿವೆ. ಮಾರುತಿ ಸುಜುಕಿ ಕಾರುಗಳು ತಮ್ಮ ಮೌಲ್ಯವನ್ನು ಉಳಿಸಿಕೊಳ್ಳಲು ವಿಶ್ವಾಸಾರ್ಹತೆ ಮತ್ತು ಇಂಧನ ಆರ್ಥಿಕತೆಯು ಪ್ರಾಥಮಿಕ ಕಾರಣಗಳಾಗಿವೆ.
ನಿಮಗೆ ಮಾರುತಿ ಕಾರ್ ಇನ್ಶೂರೆನ್ಸ್ ಏಕೆ ಬೇಕು?
ಕಾರ್ ಇನ್ಶೂರೆನ್ಸ್ ನಿಮ್ಮ ಮಾರುತಿ ಕಾರಿಗೆ ಪ್ರಮುಖ ಸುರಕ್ಷತಾ ಫೀಚರ್ ಮಾತ್ರವಲ್ಲದೆ ರಸ್ತೆಗಳಲ್ಲಿ ಚಾಲನೆ ಮಾಡಲು ಕಾನೂನು ಅವಶ್ಯಕತೆ (ಥರ್ಡ್ ಪಾರ್ಟಿ ಇನ್ಶೂರೆನ್ಸ್) ಕೂಡ ಆಗಿದೆ. ಮೋಟಾರ್ ವಾಹನ ಕಾಯ್ದೆಯು ಭಾರತೀಯ ರಸ್ತೆಗಳಲ್ಲಿ ಚಾಲನೆ ಮಾಡುವ ಎಲ್ಲಾ ವಾಹನಗಳಿಗೆ ಕನಿಷ್ಠ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಕವರ್ ಅನ್ನು ಕಡ್ಡಾಯಗೊಳಿಸುತ್ತದೆ. ನಿಮ್ಮ ಮಾರುತಿ ಕಾರನ್ನು ಇನ್ಶೂರೆನ್ಸ್ ಮಾಡಿಸಿಕೊಳ್ಳುವುದು ಕಾರು ಮಾಲೀಕತ್ವದ ಅನುಭವದ ಕಡ್ಡಾಯ ಭಾಗವಾಗಿದೆ. ಮಾರುತಿ ಕಾರ್ ಇನ್ಶೂರೆನ್ಸ್ ಏಕೆ ಮುಖ್ಯವಾಗಿದೆ ಎಂಬುದಕ್ಕೆ ಕೆಲವು ಕಾರಣಗಳು ಇಲ್ಲಿವೆ:
ಇದು ಮಾಲೀಕರ ಹೊಣೆಗಾರಿಕೆಯನ್ನು ಕಡಿಮೆ ಮಾಡುತ್ತದೆ
ಕಾನೂನು ಅಗತ್ಯತೆಯ ಜೊತೆಗೆ, ನಿಮ್ಮ ಥರ್ಡ್ ಪಾರ್ಟಿ ಹೊಣೆಗಾರಿಕೆ ಇನ್ಶೂರೆನ್ಸ್ ಪಾಲಿಸಿಯು ನೀವು ಮೂರನೇ ವ್ಯಕ್ತಿಯ ವಾಹನ, ವ್ಯಕ್ತಿ ಅಥವಾ ಆಸ್ತಿಗೆ ಮಾಡಬಹುದಾದ ಹಾನಿಗಳು ಮತ್ತು ನಷ್ಟಗಳಿಂದ ನಿಮ್ಮನ್ನು ರಕ್ಶಿಸುತ್ತದೆ. ಅಪಘಾತದ ಸಂದರ್ಭದಲ್ಲಿ, ಇತರ ವ್ಯಕ್ತಿಯು ಹಾಕುವ ಕ್ಲೇಮ್‌ಗಳನ್ನು ಈ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಬಹುದು, ಇದರಿಂದ ನಿಮ್ಮ ಹಣಕಾಸಿನ ಮತ್ತು ಕಾನೂನು ಹೊರೆಗಳು ಕಡಿಮೆಯಾಗುತ್ತವೆ.
ಇದು ಹಾನಿಯ ವೆಚ್ಚವನ್ನು ಕವರ್ ಮಾಡುತ್ತದೆ
ಒಂದು ವೇಳೆ ನೀವು ನಿಮ್ಮ ಮಾರುತಿ ಕಾರಿಗೆ ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಲು ಆಯ್ಕೆ ಮಾಡಿದರೆ, ಅಪಘಾತ, ನೈಸರ್ಗಿಕ ವಿಪತ್ತುಗಳು ಅಥವಾ ಕಳ್ಳತನದ ಸಂದರ್ಭದಲ್ಲಿ, ನಿಮ್ಮ ಮಾರುತಿ ಸುಜುಕಿ ಕಾರು ಸಮಗ್ರ ಕವರ್ ಪಡೆಯುತ್ತದೆ. ಇದು, ದೋಷಯುಕ್ತ ಪಾರ್ಟ್‌ಗಳ ರಿಪೇರಿ ಅಥವಾ ಬದಲಿಸುವ ವೆಚ್ಚ, ಕಾರ್ ಕೆಟ್ಟು ನಿಂತಾಗ ತುರ್ತು ಸಹಾಯ, ಮತ್ತು ನಿಮ್ಮ ಮಾರುತಿ ಕಾರು ರಿಪೇರಿಗೆ ಹೋದರೆ ಪರ್ಯಾಯ ಪ್ರಯಾಣದ ವೆಚ್ಚವನ್ನು ಕೂಡ ಒಳಗೊಂಡಿದೆ.
ಇದು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ
ಹೊಸ ಚಾಲಕರಿಗೆ, ನೀವು ಕನಿಷ್ಠ ಥರ್ಡ್ ಪಾರ್ಟಿ ಕವರ್‌ನೊಂದಿಗೆ ಇನ್ಶೂರೆನ್ಸ್ ಪಡೆದಿದ್ದೀರಿ ಎಂಬುದು ಗೊತ್ತಿದ್ದರೆ, ರಸ್ತೆಗಳ ಮೇಲೆ ದಂಡ ಕಟ್ಟದೇ ಚಾಲನೆ ಮಾಡುವ ವಿಶ್ವಾಸವು ನಿಮಗೆ ಸಿಗುತ್ತದೆ. ಅನುಭವಿ ಚಾಲಕರಿಗೆ, ಹೆಚ್ಚಿನ ರಸ್ತೆ ಅಪಘಾತಗಳು ನಿಮ್ಮ ದೋಷವನ್ನು ಹೊಂದಿರುವುದಿಲ್ಲ. ಯಾವುದೇ ಸಂಭವನೀಯತೆಯಿಂದ ನಿಮ್ಮನ್ನು ರಕ್ಷಿಸಲಾಗಿದೆ ಎಂದು ತಿಳಿದುಕೊಳ್ಳುವುದರಿಂದ ಒತ್ತಡ-ಮುಕ್ತವಾಗಿ ಉಳಿಯಲು ನಿಮಗೆ ಸಹಾಯವಾಗುತ್ತದೆ.
ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ವಿಧಗಳು ಪ್ಲಾನ್
ಆಲ್-ರೌಂಡ್ ಪ್ರೊಟೆಕ್ಷನ್ ಬಯಸುತ್ತಿದ್ದೀರ, ಆದರೆ ಎಲ್ಲಿ ಆರಂಭಿಸಬೇಕೆಂದು ತಿಳಿದುಬರುತ್ತಿಲ್ಲವೇ?? ಎಚ್‌ಡಿಎಫ್‌ಸಿ ಎರ್ಗೋದ ಒಂದೇ ಒಂದು ವರ್ಷದ ಸಮಗ್ರ ಕವರ್ ನಿಮ್ಮ ಗೊಂದಲಗಳನ್ನು ಪರಿಹರಿಸುತ್ತದೆ. ಈ ಪ್ಲಾನ್ ನಿಮ್ಮ ಮಾರುತಿ ಕಾರಿಗೆ ಹಾನಿ ಮತ್ತು ಥರ್ಡ್ ಪಾರ್ಟಿ ವ್ಯಕ್ತಿ/ಆಸ್ತಿಗೆ ಆದ ಹಾನಿಗಳ ವಿರುದ್ಧ ಕವರ್ ಒದಗಿಸುತ್ತದೆ. ನಿಮ್ಮ ಆಯ್ಕೆಯ ಆ್ಯಡ್-ಆನ್‌ಗಳೊಂದಿಗೆ ನೀವು ನಿಮ್ಮ ಮಾರುತಿ ಇನ್ಶೂರೆನ್ಸ್ ಕವರನ್ನು ಇನ್ನಷ್ಟು ಕಸ್ಟಮೈಜ್ ಮಾಡಬಹುದು.
X
ಸಮಗ್ರ ರಕ್ಷಣೆಯನ್ನು ಬಯಸುವ ಕಾರು ಪ್ರೇಮಿಗಳಿಗೆ ಸೂಕ್ತವಾಗಿದೆ. ಈ ಪ್ಲಾನ್, ಇವುಗಳನ್ನು ಕವರ್ ಮಾಡುತ್ತದೆ:
ಥರ್ಡ್ ಪಾರ್ಟಿ ಕವರ್ ಮೋಟಾರ್ ವಾಹನ ಕಾಯ್ದೆ, 1988 ರಿಂದ ವಿಧಿಸಲಾದ ಕಡ್ಡಾಯ ಕವರ್ ಆಗಿದೆ. ನೀವು ನಿಮ್ಮ ಮಾರುತಿ ಸುಜುಕಿ ಕಾರನ್ನು ಆಗಾಗ್ಗೆ ಬಳಸದಿದ್ದರೆ, ಈ ಮೂಲಭೂತ ಕವರ್-ನೊಂದಿಗೆ ಶುರುಮಾಡಿ ದಂಡ ಕಟ್ಟುವ ತೊಂದರೆಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಉತ್ತಮವಾದ ಉಪಾಯವಾಗಿದೆ. ಥರ್ಡ್ ಪಾರ್ಟಿ ಕವರ್ ಅಡಿಯಲ್ಲಿ, ಥರ್ಡ್ ಪಾರ್ಟಿಗೆ ಹಾನಿ, ಗಾಯ ಅಥವಾ ನಷ್ಟದಿಂದ ಉಂಟಾಗುವ ಹೊಣೆಗಾರಿಕೆಗಳ ವಿರುದ್ಧ ರಕ್ಷಣೆಯೊಂದಿಗೆ ವೈಯಕ್ತಿಕ ಅಪಘಾತದ ಕವರ್ ಅನ್ನು ನಾವು ನಿಮಗೆ ಒದಗಿಸುತ್ತೇವೆ.
X
ಅಪರೂಪಕ್ಕೊಮ್ಮೆ ಕಾರು ಬಳಸುವವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:
ಥರ್ಡ್ ಪಾರ್ಟಿ ಕವರ್ ಒಂದು ವಿಷಯ, ಆದರೆ ಹಣಕಾಸಿನ ನಷ್ಟಗಳ ವಿರುದ್ಧ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ?? ನಮ್ಮ ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕವರ್ ಅಪಘಾತಗಳು, ನೈಸರ್ಗಿಕ ವಿಕೋಪಗಳು, ಬೆಂಕಿ ಮತ್ತು ಕಳ್ಳತನದಿಂದ ನಿಮ್ಮ ಕಾರಿಗೆ ಉಂಟಾಗುವ ಹಾನಿಗಳನ್ನು ಕವರ್ ಮಾಡುವುದರಿಂದ ಅದರ ಬಗ್ಗೆ ಕಾಳಜಿ ವಹಿಸುತ್ತದೆ. ನೀವು ಹೆಚ್ಚುವರಿ ರಕ್ಷಣೆಯನ್ನು ಆನಂದಿಸಲು ಬಯಸಿದರೆ, ಕಡ್ಡಾಯ ಥರ್ಡ್ ಪಾರ್ಟಿ ಕವರ್ ಜೊತೆಗೆ ಹೆಚ್ಚಿನ ಆ್ಯಡ್-ಆನ್‌ಗಳೊಂದಿಗೆ ಈ ಐಚ್ಛಿಕ ಕವರ್ ಅನ್ನು ನೀವು ಆಯ್ಕೆ ಮಾಡಬಹುದು.
X
ಮಾನ್ಯವಾದ ಥರ್ಡ್ ಪಾರ್ಟಿ ಕವರ್ ಹೊಂದಿರುವವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:
ನೀವು ಹೊಸ ಮಾರುತಿ ಸುಜುಕಿ ಕಾರಿನ ಹೆಮ್ಮೆಯ ಮಾಲೀಕರಾಗಿದ್ದರೆ, ಹೊಸ ಕಾರುಗಳಿಗಾಗಿ ಇರುವ ನಮ್ಮ ಕವರ್‌ನಿಂದ ನಿಮ್ಮ ಹೊಸ ಆಸ್ತಿಯನ್ನು ಸುರಕ್ಷಿತವಾಗಿರಿಸಿ. ಅಪಘಾತಗಳು, ಪ್ರಕೃತಿ ವಿಕೋಪಗಳು ಮತ್ತು ಕಳ್ಳತನದಿಂದಾಗುವ ಹಾನಿಯನ್ನು ಭರಿಸಲು ಈ ಪ್ಲಾನ್ 1 ವರ್ಷದ ಕವರೇಜ್ ನೀಡುತ್ತದೆ. ಥರ್ಡ್ ಪಾರ್ಟಿ ವ್ಯಕ್ತಿ/ಆಸ್ತಿಗಾಗುವ ಹಾನಿಯನ್ನು ಭರಿಸಲು ಕೂಡ 3 ವರ್ಷದ ಕವರ್ ನೀಡುತ್ತದೆ.
X
ಹೊಸ ಕಾರನ್ನು ಖರೀದಿಸಿದವರಿಗೆ ಸೂಕ್ತವಾಗಿದೆ, ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:
ಕಾರು ಅಪಘಾತಗಳಿಂದ ನಿಮ್ಮ ಕಾರಿನ ಹೊರಗಿನ ಅಥವಾ ಒಳಗಿನ ಭಾಗಗಳು ಹಾನಿಯಾಗಬಹುದು. ಹಾನಿ ಎಷ್ಟಾಗಿದೆ ಎನ್ನುವುದನ್ನು ಆಧರಿಸಿ, ಕಾರಿನ ದುರಸ್ತಿಗೆ ತಗಲುವ ವೆಚ್ಚ ಕಡಿಮೆ ಅಥವಾ ಜಾಸ್ತಿ ಆಗಬಹುದು. ಅದು ಎಷ್ಟೇ ಇರಲಿ, ಅಪಘಾತಗಳಿಂದ ನಿಮ್ಮ ಕಾರಿಗೆ ಉಂಟಾಗುವ ಹಾನಿಯನ್ನು ನಮ್ಮ ಕಾರ್ ಇನ್ಶೂರೆನ್ಸ್ ಕವರ್ ಮಾಡುತ್ತದೆ.
ಬೆಂಕಿ ಮತ್ತು ಸ್ಫೋಟ
ಬೆಂಕಿ ಅಥವಾ ಸ್ಫೋಟದಿಂದ ನಿಮ್ಮ ಮಾರುತಿ ಸುಜುಕಿ ಕಾರು ಮತ್ತು ಅದರ ಭಾಗಗಳು ಸುಟ್ಟು ಹಾನಿಯಾಗಬಹುದು, ಆದರೆ ಅದರಿಂದ ನಿಮ್ಮ ಹಣಕಾಸಿಗೆ ಹಾನಿಯಾಗದಂತೆ ನಾವು ನೋಡಿಕೊಳ್ಳುತ್ತೇವೆ. ಅಂತಹ ಸಂದರ್ಭದಲ್ಲಿ ಆಗುವ ಹಾನಿಯನ್ನು ನಮ್ಮ ಕಾರ್ ಇನ್ಶೂರೆನ್ಸ್ ಕವರ್ ಮಾಡುತ್ತದೆ.
ಕಳ್ಳತನ
ಕಾರು ಕಳುವಾಗುವುದು ಅತಿದೊಡ್ಡ ಆರ್ಥಿಕ ನಷ್ಟ. ಅದೃಷ್ಟವಶಾತ್, ಅಂತಹ ದುರಂತ ಎದುರಾದರೂ, ನಮ್ಮ ಕಾರ್ ಇನ್ಶೂರೆನ್ಸ್ ಕವರೇಜ್ ನಿಮ್ಮೊಂದಿಗಿದೆ. ಕಾರಿನ ಕಳ್ಳತನದಿಂದಾಗಿ ನಿಮ್ಮ ಹಣಕಾಸಿಗೆ ಹೊರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ.
ನೈಸರ್ಗಿಕ ವಿಕೋಪಗಳು
ಪ್ರವಾಹ ಮತ್ತು ಭೂಕಂಪಗಳಂತಹ ಪ್ರಕೃತಿ ವಿಕೋಪಗಳಿಂದ ನಿಮ್ಮ ಕಾರಿಗೆ ಅನಿರೀಕ್ಷಿತ ಮತ್ತು ಅಭೂತಪೂರ್ವ ಹಾನಿ ಉಂಟಾಗಬಹುದು. ಆದರೆ ನಮ್ಮ ಕಾರ್ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ, ಅಂತಹ ಘಟನೆಯಿಂದ ನಿಮ್ಮ ಹಣಕಾಸಿಗೆ ಯಾವುದೇ ತೊಂದರೆಯಾಗುವುದಿಲ್ಲ, ನಿಶ್ಚಿಂತರಾಗಿರಿ.
ವೈಯಕ್ತಿಕ ಆಕ್ಸಿಡೆಂಟ್
ಅಪಘಾತದ ಸಂದರ್ಭದಲ್ಲಿ, ನಾವು ಕೇವಲ ನಿಮ್ಮ ಕಾರನ್ನಷ್ಟೇ ನೋಡಿಕೊಳ್ಳುವುದಿಲ್ಲ. ನಾವು ನಿಮ್ಮ ಬಗ್ಗೆಯೂ ಕಾಳಜಿ ವಹಿಸುತ್ತೇವೆ. ಅಪಘಾತದಲ್ಲಿ ನಿಮಗೆ ಗಾಯವಾದರೆ, ನಮ್ಮ ಕಾರ್ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಚಿಕಿತ್ಸೆಯ ವೆಚ್ಚವನ್ನೂ ಕವರ್ ಮಾಡುತ್ತದೆ.
ಥರ್ಡ್ ಪಾರ್ಟಿ ಹೊಣೆಗಾರಿಕೆ
ನಿಮ್ಮ ಕಾರನ್ನು ಒಳಗೊಂಡಿರುವ ಅಪಘಾತವು ಥರ್ಡ್ ಪಾರ್ಟಿಗೆ ಹಾನಿಯನ್ನು ಉಂಟುಮಾಡಬಹುದು, ಅದು ವ್ಯಕ್ತಿ ಅಥವಾ ಆಸ್ತಿಯಾಗಿರಬಹುದು. ಅಂತಹ ಸಂದರ್ಭಗಳಲ್ಲಿ, ಆ ಹೊಣೆಗಾರಿಕೆಗಳನ್ನು ಪೂರೈಸಲು ಪಾಕೆಟ್‌ನಿಂದ ಪಾವತಿಸುವ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ನಮ್ಮ ಕಾರ್ ಇನ್ಶೂರೆನ್ಸ್ ಅದನ್ನು ಕವರ್ ಮಾಡುತ್ತದೆ.
ಸವಕಳಿ
ಕಾರಿನ ದೀರ್ಘ ಬಳಕೆಯಿಂದ ಅದರ ಮೌಲ್ಯದಲ್ಲಿ ಆಗುವ ಇಳಿಕೆಯನ್ನು ನಾವು ಕವರ್ ಮಾಡುವುದಿಲ್ಲ.
ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಬ್ರೇಕ್ಡೌನ್ಗಳು
ನಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯು ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕಲ್ ಬ್ರೇಕ್ಡೌನ್ಗಳಿಂದಾಗಿ ಬರುವ ಯಾವುದೇ ಹಣಕಾಸಿನ ಹೊಣೆಗಾರಿಕೆಗಳನ್ನೂ ಕವರ್ ಮಾಡುವುದಿಲ್ಲ.
ಅಕ್ರಮ ಚಾಲನೆ
ಕಾನೂನುಬಾಹಿರ ಚಾಲನೆ ಅಂದರೆ ಮಾನ್ಯ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಅಥವಾ ನಶೆಕಾರಕಗಳು, ಆಲ್ಕೋಹಾಲ್ ಸೇವಿಸಿ ವಾಹನ ಚಾಲನೆ ಮಾಡುವುದರಿಂದ ಆಗುವ ಹಾನಿಗಳನ್ನು ಕಾರ್ ಇನ್ಶೂರೆನ್ಸ್ನಲ್ಲಿ ಕವರ್ ಆಗುವುದಿಲ್ಲ.
ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ಪಾಲಿಸಿ ಆ್ಯಡ್-ಆನ್‌ಗಳು
ನಿಮ್ಮ ಮಾರುತಿ ಕಾರು ಸುಲಭವಾಗಿ ಬೆಲೆ ಕಡಿಮೆಯಾಗುವ ಆಸ್ತಿಯಾಗಿದೆ. ಆದ್ದರಿಂದ, ನಿಮ್ಮ ಕಾರಿಗೆ ಹಾನಿಗಳಿಂದ ಉಂಟಾಗುವ ಮಾರುತಿ ಇನ್ಶೂರೆನ್ಸ್ ಕ್ಲೈಮ್ ಸಂದರ್ಭದಲ್ಲಿ, ಪಾವತಿಯು ಸವಕಳಿ ಕಡಿತಗಳಿಗೆ ಒಳಪಟ್ಟಿರಬಹುದು. ನಮ್ಮ ಜೀರೋ ಡಿಪ್ರಿಸಿಯೇಷನ್ ಕವರ್‌ನೊಂದಿಗೆ, ನೀವಿದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಏಕೆಂದರೆ ಇಂತಹ ಸಂದರ್ಭಗಳಲ್ಲಿ ಅದು ನಿಮಗೆ ರಕ್ಷಣೆ ಒದಗಿಸುತ್ತದೆ. ಮೌಲ್ಯ.
ಯಾವುದೇ ತಪ್ಪುಗಳ ಹಿನ್ನೆಲೆಯಿರದ ಉತ್ತಮ ಚಾಲಕರು ನೀವಾಗಿದ್ದಲ್ಲಿ, ನಿಮಗೆ ಪುರಸ್ಕಾರ ನೀಡಲೇಬೇಕು. ನಮ್ಮ ನೋ ಕ್ಲೈಮ್ ಬೋನಸ್ ಪ್ರೊಟೆಕ್ಷನ್ ಆ್ಯಡ್-ಆನ್ ಹಲವು ವರ್ಷಗಳಲ್ಲಿ ನೀವು ಸಂಗ್ರಹಿಸಿದ ನೋ ಕ್ಲೈಮ್ ಬೋನಸ್ (NCB) ಹಾಗೆಯೇ ಉಳಿಯುವಂತೆ ಮತ್ತು ಅದನ್ನು ಮುಂದಿನ ಸ್ಲ್ಯಾಬ್‌ಗೆ ಕೊಂಡೊಯ್ಯುವಂತೆ ನೋಡಿಕೊಳ್ಳುತ್ತದೆ.
ತುರ್ತು ಪರಿಸ್ಥಿತಿ ಬಂದಾಗ, ತುರ್ತು ಸಹಾಯದ ಆ್ಯಡ್-ಆನ್ ನಿಮ್ಮ ಆಪತ್ಬಾಂಧವನಂತೆ ಕೆಲಸ ಮಾಡುತ್ತದೆ. ಈ ಕವರ್ 24x7 ತುರ್ತು ಸಹಾಯ ಸೇವೆಗಳಾದ ಇಂಧನ ಮರುಭರ್ತಿ, ಟೈರ್ ಬದಲಾವಣೆಗಳು, ಟೋಯಿಂಗ್ ಸಹಾಯ, ಕೀ ಕಳೆದುಹೋದಾಗ ಸಹಾಯ ಮತ್ತು ಮೆಕ್ಯಾನಿಕ್ ವ್ಯವಸ್ಥೆಗಳನ್ನು ಒದಗಿಸುತ್ತದೆ.
ಒಂದು ವೇಳೆ ನಿಮ್ಮ ಮಾರುತಿ ಕಾರು ಕಳ್ಳತನವಾದರೆ ಅಥವಾ ರಿಪೇರಿ ಮಾಡಲಾಗದಷ್ಟು ಹಾನಿಗೊಳಗಾದರೆ ಈ ಐಚ್ಛಿಕ ಆ್ಯಡ್-ಆನ್ ನಿಮಗೆ ಬೇಕಾಗುತ್ತದೆ. ಒಟ್ಟು ನಷ್ಟದ ಸಂದರ್ಭದಲ್ಲಿ ಇದು ಖಚಿತಪಡಿಸುತ್ತದೆ ; ಮಾರುತಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ನೀವು ಪಾವತಿಸಿದ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕಗಳನ್ನು ಒಳಗೊಂಡಂತೆ ನಿಮ್ಮ ಕಾರಿನ ಮೂಲ ಇನ್ವಾಯ್ಸ್ ಮೌಲ್ಯವನ್ನು ನೀವು ಪಡೆಯುತ್ತೀರಿ.
ಎಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಟರ್
ನಿಮ್ಮ ಕಾರಿನ ಎಂಜಿನ್ ಅನ್ನು ನೋಡಿಕೊಳ್ಳುವುದೆಂದರೆ ಕೇವಲ ನಿಯತಕಾಲಿಕವಾಗಿ ಆಯಿಲ್ ಬದಲಾಯಿಸುವುದು ಅಥವಾ ಇಂಧನ ಫಿಲ್ಟರ್ ಬದಲಾಯಿಸುವುದು ಮಾತ್ರವಲ್ಲ. ನೀವು ಅದನ್ನು ಆರ್ಥಿಕವಾಗಿ ಸುರಕ್ಷಿತಗೊಳಿಸಬೇಕು, ಅದನ್ನೇ ಮಾಡಲು ಈ ಆಡ್‍ಆನ್ ನಿಮಗೆ ಸಹಾಯ ಮಾಡುತ್ತದೆ. ಇಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಟರ್ ಆಡ್‍ಆನ್ ಈ ಪ್ರಮುಖ ಕಾರ್ ಭಾಗಗಳಿಗೆ ಹಾನಿಯಾದ ಸಂದರ್ಭದಲ್ಲಿ ಉಂಟಾಗುವ ಹಣಕಾಸಿನ ಹೊರೆಯ ವಿರುದ್ಧ ನಿಮ್ಮನ್ನು ರಕ್ಷಿಸುತ್ತದೆ.
ನಿಮ್ಮ ಕಾರಿಗೆ ಅಪಘಾತ ಅಥವಾ ಹಾನಿಯಾದಾಗ, ಕೆಲವೊಮ್ಮೆ ಕಾರನ್ನು ಬಳಸಲಾಗದೆ ಸಾರ್ವಜನಿಕ ಸಾರಿಗೆಯ ಮೊರೆ ಹೋಗಬೇಕಾಗುತ್ತದೆ. ನಿಮ್ಮ ಸಾರಿಗೆ ಅವಶ್ಯಕತೆಗಳ ಆಧಾರದ ಮೇಲೆ, ಇದು ದುಬಾರಿಯಾಗಬಹುದು. ನಿಮ್ಮ ಕಾರು ಬಳಸಲು ಸಿದ್ಧವಾಗುವವರೆಗೆ, ಡೌನ್‌ಟೈಮ್ ಪ್ರೊಟೆಕ್ಷನ್ ಆ್ಯಡ್-ಆನ್ ನಿಮಗೆ ಪರ್ಯಾಯ ಸಾರಿಗೆ ವ್ಯವಸ್ಥೆ ಅಥವಾ ಪ್ರತಿದಿನದ ಸಾರಿಗೆ ವೆಚ್ಚಗಳನ್ನು ಭರಿಸಲು ಹಣ ನೀಡುತ್ತದೆ.
ಎಚ್‌ಡಿಎಫ್‌ಸಿ ಎರ್ಗೋದ ಮಾರುತಿ ಕಾರ್ ಇನ್ಶೂರೆನ್ಸ್ ನಿಮ್ಮ ಮೊದಲ ಆಯ್ಕೆಯಾಗಿರಬೇಕು!
8000+ ನಗದುರಹಿತ ಗ್ಯಾರೇಜ್‌ಗಳು**
ನಮ್ಮ ನಗದುರಹಿತ ಗ್ಯಾರೇಜ್‌ಗಳ ವಿಶಾಲ ನೆಟ್ವರ್ಕ್ ನಿಮಗೆ ಅಗತ್ಯವಿರುವಲ್ಲಿ ನಾವು ಅಲ್ಲಿದ್ದೇವೆ ಎಂಬುದನ್ನು ಖಚಿತಪಡಿಸುತ್ತದೆ
ತಡರಾತ್ರಿಯ ರಿಪೇರಿ ಸೇವೆ¯
ನಾವು 24x7ಯೂ ಇದ್ದೇವೆ, ಸದಾ ನಿಮ್ಮ ಸೇವೆಯಲ್ಲಿ, ಯಾವಾಗಲೂ ಲಭ್ಯವಿರುತ್ತೇವೆ!
₹2094 ರಿಂದ ಪ್ರೀಮಿಯಂಗಳು*
ಪ್ರೀಮಿಯಂಗಳು ತುಂಬಾ ಕಡಿಮೆ ಇರುವಾಗ, ನೀವು ಇನ್ಶುರೆನ್ಸ್ ಮಾಡಿಸಿಕೊಳ್ಳದೇ ಇರಲು ಯಾವುದೇ ಕಾರಣಗಳಿಲ್ಲ.
ತ್ವರಿತ ಪಾಲಿಸಿ ಮತ್ತು ಶೂನ್ಯ ಡಾಕ್ಯುಮೆಂಟೇಶನ್
3 ಅಂಕಿ ಏಣಿಸುವಷ್ಟು ವೇಗವಾಗಿ ನಿಮ್ಮ ಕಾರನ್ನು ಸುರಕ್ಷಿತಗೊಳಿಸಬಹುದು
ಮಿತಿಯಿಲ್ಲದಷ್ಟು ಕ್ಲೈಮ್‌ಗಳು°
ಎಚ್‌ಡಿಎಫ್‌ಸಿ ಎರ್ಗೋ ಕಾರ್ ಇನ್ಶೂರೆನ್ಸ್ ಖರೀದಿಸಲು ಎರಡನೇ ಉತ್ತಮ ಕಾರಣ? ಮಿತಿಯಿಲ್ಲದಷ್ಟು ಕ್ಲೈಮ್‌ಗಳು.
ನಿಮ್ಮ ಮಾರುತಿ ಸುಜುಕಿ ಪ್ರೀಮಿಯಂ ಬಗ್ಗೆ ತಿಳಿಯಿರಿ: ಥರ್ಡ್ ಪಾರ್ಟಿ ವರ್ಸಸ್ ಸ್ವಂತ ಹಾನಿ
ನೀವು ಮಾರುತಿ ಇನ್ಶೂರೆನ್ಸ್ ಖರೀದಿಸಲು ಬಯಸಿದರೆ, ತೊಂದರೆ ರಹಿತ ಕ್ಲೈಮ್‌ಗಳಿಗಾಗಿ ನೀವು ಎಚ್‌ಡಿಎಫ್‌ಸಿ ಎರ್ಗೋವನ್ನು ಆಯ್ಕೆ ಮಾಡಬಹುದು. ಇದರ ಜೊತೆಗೆ, ನಾವು 8000+ ನಗದುರಹಿತ ನೆಟ್ವರ್ಕ್ ಗ್ಯಾರೇಜ್‌ಗಳ ನೆಟ್ವರ್ಕ್ ಹೊಂದಿದ್ದೇವೆ. ನಿಮ್ಮ ಮಾರುತಿ ಇನ್ಶೂರೆನ್ಸ್ ನವೀಕರಣ ಗಡುವು ಮುಗಿದರೆ, ನೀವು ಈಗಲೇ ನಿಮ್ಮ ಪಾಲಿಸಿಯನ್ನು ಖರೀದಿಸಬೇಕು. ನೀವು ಅದನ್ನು ಹೇಗೆ ಮಾಡಬಹುದು ಎಂಬುದು ಇಲ್ಲಿದೆ:
ಅಪಘಾತದ ಸಂದರ್ಭದಲ್ಲಿ ಹಣಕಾಸಿನ ಮತ್ತು ಕಾನೂನು ಬಾಧ್ಯತೆಗಳನ್ನು ಎದುರಿಸಲು ಥರ್ಡ್ ಪಾರ್ಟಿ (TP) ಪ್ಲಾನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ದಂಡಗಳನ್ನು ತಪ್ಪಿಸಲು ಮತ್ತು ಥರ್ಡ್ ಪಾರ್ಟಿ ಕ್ಲೈಮ್‌ಗಳಿಗೆ ಕವರೇಜ್ ಒದಗಿಸಲು ನಿಮ್ಮ ಮಾರುತಿ ಕಾರಿಗೆ ಥರ್ಡ್ ಪಾರ್ಟಿ ಪ್ಲಾನ್ ಅತ್ಯಗತ್ಯ. ಜೊತೆಗೆ, ಇದು ಎಲ್ಲರ ಕೈಗೆಟುಕುವ ಪಾಲಿಸಿಯಾಗಿದೆ. ಹೇಗೆ ಎಂದು ಯೋಚಿಸುತ್ತಿದ್ದೀರಾ? ಎಲ್ಲಾ ಮಾರುತಿ ಸುಜುಕಿ ಕಾರು ಮಾಲೀಕರಿಗೆ ಸುಲಭವಾಗಿ, ಕೈಗೆಟುಕುವ ಬೆಲೆಯಲ್ಲಿ ಸಿಗುವಂತೆ, ಪ್ರತಿ ವಾಹನದ ಕ್ಯುಬಿಕ್ ಸಾಮರ್ಥ್ಯವನ್ನು ಆಧರಿಸಿ, IRDAI ಥರ್ಡ್ ಪಾರ್ಟಿ ಪ್ರೀಮಿಯಂ ಅನ್ನು ಮುಂಚಿತವಾಗಿ ನಿರ್ಧರಿಸುತ್ತದೆ.
ಮತ್ತೊಂದೆಡೆ, ನಿಮ್ಮ ಮಾರುತಿ ಕಾರಿಗೆ ಓನ್ ಡ್ಯಾಮೇಜ್ (OD) ಇನ್ಶೂರೆನ್ಸ್ಪಡೆಯುವುದು ಐಚ್ಛಿಕವಾದರೂ ಹೆಚ್ಚು ಲಾಭದಾಯಕ. ಅಪಘಾತ ಅಥವಾ ಭೂಕಂಪ, ಬೆಂಕಿ, ಬಿರುಗಾಳಿ ಮುಂತಾದ ಪ್ರಕೃತಿ ವಿಕೋಪಗಳಾದಾಗ ದುರಸ್ತಿ ಮತ್ತು ಬದಲಿ ವೆಚ್ಚವನ್ನು ಭರಿಸಲು ಈ ಕವರ್‌ನಿಂದ ಸಾಧ್ಯ. ಆದರೆ, ಥರ್ಡ್ ಪಾರ್ಟಿ ಪ್ರೀಮಿಯಂನಂತಲ್ಲದೆ, ನಿಮ್ಮ ಮಾರುತಿ ಸುಜುಕಿಯ ಓನ್ ಡ್ಯಾಮೇಜ್ ಪ್ರೀಮಿಯಂ ಬದಲಾಗುತ್ತದೆ. ಏಕೆಂದರೆ, ನಿಮ್ಮ ಮಾರುತಿ ಸುಜುಕಿ ಕಾರಿನ OD ಪ್ರೀಮಿಯಂ ಅನ್ನು ಸಾಮಾನ್ಯವಾಗಿ IDV, ಜೋನ್ ಮತ್ತು ಕ್ಯುಬಿಕ್ ಸಾಮರ್ಥ್ಯದ ಮೇಲೆ ಲೆಕ್ಕ ಹಾಕಲಾಗುತ್ತದೆ. ಹೀಗಾಗಿ, ನಿಮ್ಮ ಕಾರಿನ ವಿವರಗಳ ಆಧಾರದ ಮೇಲೆ ಅಥವಾ ನಿಮ್ಮ ಕಾರು ಯಾವ ನಗರದಲ್ಲಿ ನೋಂದಣಿಯಾಗಿದೆ ಎಂಬುದರ ಆಧಾರದ ಮೇಲೆ, ನಿಮ್ಮ ಪ್ರೀಮಿಯಂ ಬದಲಾಗುತ್ತದೆ. ಸ್ಟಾಂಡ್ ಅಲೋನ್ ಓನ್ ಡ್ಯಾಮೇಜ್ ಕವರ್ ಅಥವಾ ಬಂಡಲ್ಡ್ ಕವರ್‌ನೊಂದಿಗೆ ನೀವು ಆಯ್ಕೆ ಮಾಡುವ ಆ್ಯಡ್-ಆನ್‌ಗಳಿಂದಲೂ ಪ್ರೀಮಿಯಂ ಬದಲಾಗುತ್ತದೆ. ಅಲ್ಲದೆ, ನಿಮ್ಮ ಮಾರುತಿ ಸುಜುಕಿ ಕಾರಿಗೆ ಯಾವುದೇ ಬದಲಾವಣೆಗಳನ್ನು ಮಾಡಿದಲ್ಲಿ ಪ್ರೀಮಿಯಂ ಹೆಚ್ಚಾಗುತ್ತದೆ ಎಂದು ನೆನಪಿಡಿ.
ನಿಮ್ಮ ಮಾರುತಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕಿ
ಹಂತ 1
ನಿಮ್ಮ ಮಾರುತಿ ಸುಜುಕಿ ಕಾರಿನ ನೋಂದಣಿ ಸಂಖ್ಯೆ ನಮೂದಿಸಿ
ಹಂತ 2
ನಿಮ್ಮ ಪಾಲಿಸಿ ಕವರ್ ಆಯ್ಕೆಮಾಡಿ* (ಒಂದು ವೇಳೆ ನಾವು ನಿಮ್ಮ ಮಾರುತಿ ಸುಜುಕಿಯನ್ನು ಸ್ವತಃ ಪಡೆಯಲು ಸಾಧ್ಯವಾಗದಿದ್ದರೆ ಕಾರ್ ವಿವರಗಳು, ನಮಗೆ ಕಾರಿನ ಕೆಲವು ವಿವರಗಳು ಬೇಕಾಗುತ್ತವೆ, ಉದಾಹರಣೆಗೆ ಕಾರಿನ ನಮೂನೆ, ಮಾಡೆಲ್, ವೇರಿಯಂಟ್, ನೋಂದಣಿ ವರ್ಷ, ನಗರ, ಇತ್ಯಾದಿ ವಿವರಗಳನ್ನು ನೀಡಬೇಕಾಗುತ್ತದೆ)
ಹಂತ 3
ನಿಮ್ಮ ಈ ಹಿಂದಿನ ಪಾಲಿಸಿ ಮತ್ತು ನೋ ಕ್ಲೇಮ್ಸ್ ಬೋನಸ್ (NCB) ಸ್ಟೇಟಸ್ ಅನ್ನು ಒದಗಿಸಿ
ಹಂತ 4
ನಿಮ್ಮ ಮಾರುತಿ ಸುಜುಕಿ ಕಾರಿಗೆ ತ್ವರಿತ ಕೋಟ್ ಪಡೆಯಿರಿ
ಮಾರುತಿ ಕಾರ್ ಇನ್ಶೂರೆನ್ಸ್‌ಗಾಗಿ ಕ್ಲೈಮ್ ಮಾಡುವುದು ಹೇಗೆ?
ನೀವು ಮಾರುತಿ ಇನ್ಶೂರೆನ್ಸ್ ಖರೀದಿಸಲು ಬಯಸಿದರೆ, ತೊಂದರೆ ರಹಿತ ಕ್ಲೈಮ್‌ಗಳಿಗಾಗಿ ನೀವು ಎಚ್‌ಡಿಎಫ್‌ಸಿ ಎರ್ಗೋವನ್ನು ಆಯ್ಕೆ ಮಾಡಬಹುದು. ಇದರ ಜೊತೆಗೆ, ನಾವು 8000+ ನಗದುರಹಿತ ನೆಟ್ವರ್ಕ್ ಗ್ಯಾರೇಜ್‌ಗಳ ನೆಟ್ವರ್ಕ್ ಹೊಂದಿದ್ದೇವೆ. ನಿಮ್ಮ ಮಾರುತಿ ಇನ್ಶೂರೆನ್ಸ್ ನವೀಕರಣ ಗಡುವು ಮುಗಿದರೆ, ನೀವು ಈಗಲೇ ನಿಮ್ಮ ಪಾಲಿಸಿಯನ್ನು ಖರೀದಿಸಬೇಕು. ನೀವು ಅದನ್ನು ಹೇಗೆ ಮಾಡಬಹುದು ಎಂಬುದು ಇಲ್ಲಿದೆ:
ಹಂತ 1: ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಮಾರುತಿ ಸುಜುಕಿ ಕಾರ್ ನೋಂದಣಿ ನಂಬರ್, ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸವನ್ನು ಒಳಗೊಂಡಂತೆ ಎಲ್ಲಾ ವಿವರಗಳನ್ನು ಭರ್ತಿ ಮಾಡಿ. ನೀವು ನಿಮ್ಮ ಅಸ್ತಿತ್ವದಲ್ಲಿರುವ ಮಾರುತಿ ಕಾರ್ ಇನ್ಶೂರೆನ್ಸ್ ಅನ್ನು ನವೀಕರಿಸಲು ಬಯಸಿದರೆ ಪಾಲಿಸಿಯನ್ನು ನವೀಕರಿಸಿ ಮೇಲೆ ಕೂಡ ಕ್ಲಿಕ್ ಮಾಡಬಹುದು.
ಹಂತ 2: ಮುಂದುವರೆದ ನಂತರ, ನೀವು ಹಿಂದಿನ ಪಾಲಿಸಿ ವಿವರಗಳನ್ನು ಒದಗಿಸಬೇಕು ಮತ್ತು ಸಮಗ್ರ ಅಥವಾ ಥರ್ಡ್ ಪಾರ್ಟಿ ಕವರ್ ಆಯ್ಕೆಮಾಡಬೇಕು.
ಹಂತ 3: ನೀವು ಸಮಗ್ರ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡಿದ್ದರೆ, ಆ್ಯಡ್ ಆನ್ ಕವರ್‌ಗಳನ್ನು ಸೇರಿಸಿ/ಸೇರಿಸಬೇಡಿ. ಆನ್ಲೈನಿನಲ್ಲಿ ಪ್ರೀಮಿಯಂ ಪಾವತಿಸುವ ಮೂಲಕ ಪ್ರಯಾಣವನ್ನು ಪೂರ್ಣಗೊಳಿಸಿ.
ಹಂತ 4: ಮಾರುತಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ನಿಮ್ಮ ನೋಂದಾಯಿತ ಇಮೇಲ್ ಐಡಿಗೆ ಇಮೇಲ್ ಮಾಡಲಾಗುತ್ತದೆ.
ಖರೀದಿಯ ಪ್ರಯೋಜನಗಳು ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ಆನ್ಲೈನ್
ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಲು ನೀವು ಇನ್ಶೂರೆನ್ಸ್ ಪೂರೈಕೆದಾರರ ಕಚೇರಿಗೆ ಭೇಟಿ ನೀಡಬೇಕಾದ ದಿನಗಳು ಅಥವಾ ಇನ್ಶೂರೆನ್ಸ್ ಏಜೆಂಟನ್ನು ಸಂಪರ್ಕಿಸಬೇಕಾದ ಆ ದಿನಗಳು ಮುಗಿದಿವೆ. ಈಗ ನೀವು ಯಾವುದೇ ಚಿಂತೆಯಿಲ್ಲದೆ ನಿಮ್ಮ ಮಾರುತಿ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸಬಹುದು. ಕೆಳಗಿನ ಕೆಲವು ಪ್ರಯೋಜನಗಳನ್ನು ನಾವು ನೋಡೋಣ
1
ತ್ವರಿತ ಕೋಟ್ಸ್ ಅನ್ನು ಪಡೆಯಿರಿ
ನಮ್ಮ ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್‌ನೊಂದಿಗೆ, ನೀವು ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ಪಾಲಿಸಿಗೆ ತ್ವರಿತ ಕೋಟ್ ಪಡೆಯುತ್ತೀರಿ. ನಿಮ್ಮ ಕಾರಿನ ವಿವರಗಳನ್ನು ನಮೂದಿಸಿ ; ತೆರಿಗೆಗಳನ್ನು ಒಳಗೊಂಡ ಮತ್ತು ಒಳಗೊಳ್ಳದ ಪ್ರೀಮಿಯಂ ಅನ್ನು ತೋರಿಸಲಾಗುತ್ತದೆ. ನಿಮ್ಮ ಸಮಗ್ರ ಪಾಲಿಸಿಯೊಂದಿಗೆ ನೀವು ಆ್ಯಡ್-ಆನ್‌ಗಳನ್ನು ಕೂಡ ಆಯ್ಕೆ ಮಾಡಬಹುದು ಮತ್ತು ತ್ವರಿತವಾಗಿ ಅಪ್ಡೇಟ್ ಆದ ಪ್ರೀಮಿಯಂ ಪಡೆಯಬಹುದು.
2
ತ್ವರಿತ ವಿತರಣೆ
ನೀವು ನಿಮಿಷಗಳಲ್ಲಿ ಮಾರುತಿ ಇನ್ಶೂರೆನ್ಸ್ ಪ್ಲಾನ್ ಅನ್ನು ಆನ್ಲೈನಿನಲ್ಲಿ ಪಡೆಯಬಹುದು. ಮಾರುತಿ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸುವಾಗ, ನೀವು ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಪೂರ್ಣಗೊಳಿಸಬೇಕು. ಇದರಲ್ಲಿ, ನೀವು ಕಾರಿನ ವಿವರಗಳನ್ನು ಒದಗಿಸಬೇಕು ಮತ್ತು ಸಮಗ್ರ ಇನ್ಶೂರೆನ್ಸ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ನಡುವೆ ಆಯ್ಕೆ ಮಾಡಬೇಕು. ನಂತರ, ಅಂತಿಮವಾಗಿ, ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಪಾವತಿಸಬೇಕು. ಪಾಲಿಸಿಯು ಕೇವಲ ಕೆಲವು ಕ್ಲಿಕ್‌ಗಳ ದೂರದಲ್ಲಿರುವುದರಿಂದ ಗಂಟೆಗಳು, ದಿನಗಳು ಅಥವಾ ವಾರಗಳವರೆಗೆ ಕಾಯಬೇಕಾಗಿಲ್ಲ.
3
ತಡೆರಹಿತತೆ ಮತ್ತು ಪಾರದರ್ಶಕತೆ
ಎಚ್‌ಡಿಎಫ್‌ಸಿ ಎರ್ಗೋದ ಕಾರು ಖರೀದಿ ಪ್ರಕ್ರಿಯೆಯು ತಡೆರಹಿತ ಮತ್ತು ಪಾರದರ್ಶಕವಾಗಿದೆ. ಮಾರುತಿ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಆನ್ಲೈನಿನಲ್ಲಿ ಖರೀದಿಸಲು ನೀವು ಕೆಲವು ಸರಳ ಹಂತಗಳನ್ನು ಅನುಸರಿಸಬೇಕು, ಮತ್ತು ಯಾವುದೇ ಗುಪ್ತ ಶುಲ್ಕಗಳಿಲ್ಲ. ನೀವು ಏನನ್ನು ನೋಡುತ್ತೀರೋ ಅದನ್ನೇ ಪಾವತಿಸುತ್ತೀರಿ.
4
ಪಾವತಿ ರಿಮೈಂಡರ್‌ಗಳು
ನಾವು ಸಮಯಕ್ಕೆ ಸರಿಯಾಗಿ ಮಾರಾಟ ನಂತರದ ಸೇವೆಗಳನ್ನು ಒದಗಿಸುತ್ತೇವೆ, ಆದ್ದರಿಂದ ನಿಮ್ಮ ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ಪಾಲಿಸಿ ಲ್ಯಾಪ್ಸ್ ಆಗುವುದಿಲ್ಲ. ಅಂತೆಯೇ, ನೀವು ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸಿದ ನಂತರ, ನಮ್ಮ ಕಡೆಯಿಂದ ಆನ್ಲೈನಿನಲ್ಲಿ ಕಾರ್ ಇನ್ಶೂರೆನ್ಸ್ ನವೀಕರಿಸಲು ನೀವು ನಿಯಮಿತ ರಿಮೈಂಡರ್ ಪಡೆಯುತ್ತೀರಿ. ಇದು ನೀವು ತಡೆರಹಿತ ಕವರೇಜನ್ನು ಆನಂದಿಸುತ್ತೀರಿ ಮತ್ತು ಮಾನ್ಯ ಮಾರುತಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವ ಮೂಲಕ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.
5
ಕನಿಷ್ಠ ಕಾಗದ ಪತ್ರಗಳ ಕೆಲಸ
ಆನ್ಲೈನಿನಲ್ಲಿ ಖರೀದಿಸುವುದಕ್ಕೆ ಅನೇಕ ಡಾಕ್ಯುಮೆಂಟ್‌ಗಳ ಅಗತ್ಯವಿಲ್ಲ. ನೀವು ಮೊದಲ ಬಾರಿಗೆ ಪಾಲಿಸಿಯನ್ನು ಖರೀದಿಸಿದಾಗ ನಿಮ್ಮ ಮಾರುತಿ ಸುಜುಕಿ ಕಾರಿನ ನೋಂದಣಿ ಫಾರ್ಮ್‌ಗಳು ಮತ್ತು ನಿಮ್ಮ KYC ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಬೇಕು. ಅದರ ನಂತರ, ನೀವು ಕಾರ್ ಇನ್ಶೂರೆನ್ಸ್ ನವೀಕರಣವನ್ನು ಆಯ್ಕೆ ಮಾಡಬಹುದು ಅಥವಾ ಯಾವುದೇ ಪೇಪರ್‌ವರ್ಕ್ ಇಲ್ಲದೆ ನಿಮ್ಮ ಪ್ಲಾನ್ ಪೋರ್ಟ್ ಮಾಡಬಹುದು.
6
ಅನುಕೂಲಕರ
ಕೊನೆಯದಾಗಿ, ಮಾರುತಿ ಕಾರ್ ಇನ್ಶೂರೆನ್ಸ್ ಖರೀದಿಸುವುದು ಅನುಕೂಲಕರ ಮತ್ತು ಸುಲಭ. ನೀವು ನಮ್ಮ ಶಾಖೆಗಳಿಗೆ ಭೇಟಿ ನೀಡಬೇಕಾಗಿಲ್ಲ ಅಥವಾ ಏಜೆಂಟ್ ನಿಮ್ಮನ್ನು ಸಂಪರ್ಕಿಸುವವರೆಗೆ ಕಾಯಬೇಕಾಗಿಲ್ಲ. ನೀವು ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಮತ್ತು ಸೂಕ್ತವಾದ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಬಹುದು. ಅಲ್ಲದೆ, ದಿನದ ಯಾವುದೇ ಗಂಟೆಯಲ್ಲಿ ಮತ್ತು ಎಲ್ಲಿಂದಲಾದರೂ ಆನ್ಲೈನಿನಲ್ಲಿ ಕಾರ್ ಇನ್ಶೂರೆನ್ಸ್ ಖರೀದಿಸುವ ಫ್ಲೆಕ್ಸಿಬಿಲಿಟಿಯನ್ನು ಆನಂದಿಸಿ.
ಮಾರುತಿ ಇನ್ಶೂರೆನ್ಸ್‌ಗಾಗಿ ಕ್ಲೈಮ್ ಮಾಡುವುದು ಹೇಗೆ?
ಜಗತ್ತು ಡಿಜಿಟಲ್ ಆಗಿದೆ, ಹಾಗೆಯೇ ಈ ನಾಲ್ಕು ತ್ವರಿತ, ಸುಲಭವಾಗಿ ಅನುಸರಿಸಬಹುದಾದ ಕ್ರಮಗಳ ಮೂಲಕ ನಮ್ಮ ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆ ಕೂಡ.
ಹಂತ #1
ಪೇಪರ್‌ವರ್ಕ್ ಮತ್ತು ಉದ್ದದ ಸರತಿ ಸಾಲುಗಳನ್ನು ಬಿಟ್ಟುಬಿಡಿ ಮತ್ತು ನಿಮ್ಮ ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ನೋಂದಾಯಿಸಲು ನಿಮ್ಮ ಡಾಕ್ಯುಮೆಂಟ್‌ಗಳನ್ನು ಆನ್ಲೈನಿನಲ್ಲಿ ಹಂಚಿಕೊಳ್ಳಿ.
ಹಂತ #2
ಸಮೀಕ್ಷಕರು ಅಥವಾ ವರ್ಕ್‌ಶಾಪ್ ಪಾಲುದಾರರಿಂದ ನಿಮ್ಮ ಮಾರುತಿ ಸುಜುಕಿ ಕಾರಿನ ಸ್ವಯಂ-ತಪಾಸಣೆ ಅಥವಾ ಡಿಜಿಟಲ್ ತಪಾಸಣೆಯನ್ನು ಆಯ್ಕೆಮಾಡಿ.
ಹಂತ #3
ನಮ್ಮ ಸ್ಮಾರ್ಟ್ AI-ಸಕ್ರಿಯ ಕ್ಲೈಮ್ ಟ್ರ್ಯಾಕರ್ ಮೂಲಕ ನಿಮ್ಮ ಮಾರುತಿ ಇನ್ಶೂರೆನ್ಸ್ ಕ್ಲೈಮ್ ಸ್ಥಿತಿಯನ್ನು ಟ್ರ್ಯಾಕ್ ಮಾಡಿ.
ಹಂತ #4
ನಿಮ್ಮ ಮಾರುತಿ ಸುಜುಕಿ ಇನ್ಶೂರೆನ್ಸ್ ಕ್ಲೈಮ್ ಅನ್ನು ಅನುಮೋದಿಸುವವರೆಗೆ ಮತ್ತು ನಮ್ಮ ವ್ಯಾಪಕ ನೆಟ್ವರ್ಕ್ ಗ್ಯಾರೇಜ್‌ಗಳೊಂದಿಗೆ ಸೆಟಲ್ ಮಾಡುವವರೆಗೆ ವಿಶ್ರಾಂತಿ ಪಡೆಯಿರಿ!
ನೀವು ಯಾವ ದಾರಿಯಲ್ಲಿ ಸಾಗಿದರೂ, ನಮ್ಮ ಕಾರ್ ಇನ್ಶೂರೆನ್ಸ್ ಕವರೇಜ್‌ನಿಂದ ನಿಮ್ಮ ಕಾರು ಪ್ರತಿಕ್ಷಣವೂ ಸುರಕ್ಷಿತ. ಈಗ ನಿಮ್ಮ ಪ್ರಯಾಣದಲ್ಲಿ ಯಾವುದೇ ಅಡೆತಡೆಗಳ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ, ದೇಶಾದ್ಯಂತ ಇರುವ ನಿಮ್ಮ ಮಾರುತಿ ಸುಜುಕಿ ಕಾರಿಗೆ ನಮ್ಮ 8000+ ವಿಶೇಷ ನಗದುರಹಿತ ಗ್ಯಾರೇಜ್‌ಗಳ ನೆಟ್ವರ್ಕ್‌ಗೆ ಧನ್ಯವಾದಗಳು. ಅನಿರೀಕ್ಷಿತ ತುರ್ತು ಸಹಾಯ ಅಥವಾ ದುರಸ್ತಿಗಾಗಿ ನಗದು ಹಣ ಪಾವತಿಸುವ ಬಗ್ಗೆ ಚಿಂತಿಸದೆ, ಸಕಾಲಿಕ, ಸೂಕ್ತ ಸಹಾಯವನ್ನು ಅವಲಂಬಿಸಬಹುದು.
ಎಚ್‌ಡಿಎಫ್‌ಸಿ ಎರ್ಗೋದ ನಗದುರಹಿತ ಗ್ಯಾರೇಜ್ ಸೌಲಭ್ಯದೊಂದಿಗೆ, ನಿಮ್ಮ ಮಾರುತಿ ಕಾರು ಯಾವಾಗಲೂ ವಿಶ್ವಾಸಾರ್ಹ ಸ್ನೇಹಿತರನ್ನು ಹೊಂದಿದೆ ಎಂದು ನೀವು ಖಚಿತಪಡಿಸಿಕೊಳ್ಳಬಹುದು, ಆದ್ದರಿಂದ ಯಾವುದೇ ತೊಂದರೆ ಅಥವಾ ತುರ್ತುಸ್ಥಿತಿಯನ್ನು ತ್ವರಿತವಾಗಿ, ಎಲ್ಲಿಂದಲಾದರೂ ಮತ್ತು ಯಾವುದೇ ಸಮಯದಲ್ಲಿ ನೋಡಿಕೊಳ್ಳಲಾಗುತ್ತದೆ.
• ಕಾರನ್ನು ನೆರಳಿನಲ್ಲಿ ಪಾರ್ಕ್ ಮಾಡಿ. ನೇರವಾಗಿ ಬಿಸಿಲು ಬಿದ್ದರೆ ಕಾರಿನ ಬಣ್ಣ ಮಾಸುತ್ತದೆ. • ವಾರಕ್ಕೆ ಒಮ್ಮೆ ನಿಮ್ಮ ಕಾರ್ ಸ್ಟಾರ್ಟ್ ಮಾಡಿ. ಇದರಿಂದ ನಿಮ್ಮ ಬ್ಯಾಟರಿ ಹಾಳಾಗುವುದನ್ನು ತಡೆಯಬಹುದು. • ನಿಮ್ಮ ಕಾರಿನ ಎಂಜಿನ್ ಬೇನಲ್ಲಿ ಇಲಿ ಮುಂತಾದ ಪ್ರಾಣಿಗಳು ಮನೆ ಮಾಡಿವೆಯೇ ಎಂದು ಪರಿಶೀಲಿಸಿ.
ಪ್ರವಾಸಗಳಿಗಾಗಿ ಸಲಹೆಗಳು
• ಪ್ರಯಾಣ ಆರಂಭಿಸುವ ಮೊದಲು ಇಂಧನ ತುಂಬಿಸಿ. ರಿಸರ್ವ್‌ನಲ್ಲಿ ಡ್ರೈವಿಂಗ್ ಮಾಡದಿರಿ. • ಸಾಧ್ಯವಾದಾಗಲೆಲ್ಲ ಪಂಕ್ಚರ್ ಆದ ಟೈರ್ ಅನ್ನು ರಿಪೇರಿ ಮಾಡಿಸಿ. ಸ್ಪೇರ್ ಟೈರ್ ಬಳಸಿ ಓಡಿಸುವುದು ಅಪಾಯ. • ಅಗತ್ಯವಿಲ್ಲದಿದ್ದಾಗ ಎಲೆಕ್ಟ್ರಿಕಲ್ ಭಾಗಗಳನ್ನು ಆಫ್ ಮಾಡಿ. ನಿಮ್ಮ ಕಾರಿನ ECU ಬ್ಯಾಟರಿ ಚಾಲಿತ, ಅದನ್ನು ಅನಗತ್ಯವಾಗಿ ಬಳಸಬೇಡಿ.
ಮುನ್ನೆಚ್ಚರಿಕೆಯ ನಿರ್ವಹಣೆ
• ಸರಿಯಾದ ತೈಲ ಮಟ್ಟ ಕಾಪಾಡಿಕೊಳ್ಳಿ. ಎಲ್ಲಾ ಮಾರುತಿ ಕಾರುಗಳು ಡಿಪ್‌ಸ್ಟಿಕ್ ಹೊಂದಿವೆ; ನಿಮ್ಮದನ್ನು ಆಗಾಗ ಪರಿಶೀಲಿಸಿ. • ಅತ್ಯುತ್ತಮ ಮೈಲೇಜ್ ಪಡೆಯಲು ಆಗಾಗ ವೀಲ್ ಬ್ಯಾಲೆನ್ಸಿಂಗ್ ಮತ್ತು ಅಲೈನ್ಮೆಂಟ್ ಮಾಡಿಸಿ. •
ಸ್ಟೀರಿಂಗ್ ಟೈ ರಾಡ್‌ಗಳ ಪ್ಲೇಯನ್ನು ಆಗಾಗ ಪರಿಶೀಲಿಸಿ. ಇದು ಟೈರ್ ಹೆಚ್ಚು ಸವೆದಿರುವ ಸೂಚನೆ ಇರಬಹುದು.
ದೈನಂದಿನ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳು
• ಎಂಜಿನ್ ಸ್ವಿಚ್ ಆಫ್ ಮಾಡುವ ಮೊದಲು ಯಾವಾಗಲೂ AC ಆಫ್ ಮಾಡಿ. • ಎಂಜಿನ್ ಸ್ಟಾರ್ಟ್ ಮಾಡುವ ಮೊದಲು ಇಗ್ನಿಶನ್ ಕ್ಲಿಕ್‌ಗಾಗಿ ಕಾಯಿರಿ. • ವಾಹನ ನಿಂತಿರುವಾಗ ಬ್ಯಾಟರಿ ಖರ್ಚಾಗುವುದನ್ನು ತಪ್ಪಿಸಲು ಹೆಡ್‌ಲೈಟ್ ಮತ್ತು ಫಾಗ್ ಲ್ಯಾಂಪ್‌ಗಳನ್ನು ಆಫ್ ಮಾಡಿ.
ಮಾರುತಿ ಸುಜುಕಿ ಇತ್ತೀಚಿನ ಸುದ್ದಿಗಳು
ಮಾರುತಿ ಸುಜುಕಿ ಹೊಚ್ಚ ಹೊಸ ವಿಟಾರಾ ಎಲೆಕ್ಟ್ರಿಕ್ SUV ಯನ್ನು ಪ್ರಾರಂಭಿಸಲು ಯೋಜಿಸಿದೆ
ಇಟಲಿಯ ಮಿಲಾನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾರಂಭದಲ್ಲಿ ಮಾರುತಿ ಸುಜುಕಿ ಇ ವಿಟಾರವನ್ನು ಬಹಿರಂಗಪಡಿಸಿದೆ. ಮಾರುತಿಯ ಮೊದಲ ಎಲೆಕ್ಟ್ರಿಕ್ SUV ಅನ್ನು ಹಾರ್ಟ್‌ಟೆಕ್-ಇ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಇದು ಎರಡು ಬ್ಯಾಟರಿ ಆಯ್ಕೆಗಳನ್ನು ಒದಗಿಸುತ್ತದೆ, 4WD ಸಿಸ್ಟಮ್ ಮತ್ತು 500 KM ನಿರೀಕ್ಷಿತ ಶ್ರೇಣಿಯನ್ನು ಒದಗಿಸುತ್ತದೆ. ಇ ವಿಟಾರಾ ಆಟೋ ಎಕ್ಸ್‌ಪೋ 2023 ನಲ್ಲಿ ತೋರಿಸಲಾದ EVX ಅನ್ನು ಆಧರಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಗುಜರಾತ್‌ನ ಸುಜುಕಿ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕದಲ್ಲಿ ಕಾರ್‌ನ ಉತ್ಪಾದನೆಯು ಏಪ್ರಿಲ್ ಅಥವಾ ಮೇ 2025 ರಲ್ಲಿ ಪ್ರಾರಂಭವಾಗಲಿದೆ.
ಪ್ರಕಟಣೆ ದಿನಾಂಕ: ನವೆಂಬರ್ 14, 2024
ಮಾರುತಿ ಸುಜುಕಿ ಪ್ರಯಾಣಿಕರ ವಾಹನಗಳ ಬೇಡಿಕೆಯ ನಿಧಾನಗತಿಯ ನಡುವೆ ದಾಸ್ತಾನು ಕಡಿಮೆ ಮಾಡಲು ಯೋಜಿಸಿದೆ
ಡೀಲರ್ಶಿಪ್ನಲ್ಲಿ ಹೆಚ್ಚುತ್ತಿರುವ ದಾಸ್ತಾನುಗಳನ್ನು ಕಡಿಮೆ ಮಾಡಲು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ಉತ್ಪಾದನೆಯನ್ನು ಸರಿಹೊಂದಿಸುತ್ತಿದೆ. ಪ್ರಯಾಣಿಕ ವಾಹನ ಬೇಡಿಕೆಯಲ್ಲಿನ ನಿಧಾನಗತಿಯ ನಡುವೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಆಟೋ ಮೇಕರ್ಸ್ ಜಪಾನೀಸ್ನ ಪೇರೆಂಟ್ ಕಂಪನಿ, ಸುಜುಕಿ ಮೋಟಾರ್ ಕಾರ್ಪ್ ಮ್ಯಾನೇಜ್ಮೆಂಟ್, ಅವರು ಪ್ರಸ್ತುತ ಮಾರುಕಟ್ಟೆಯ ಸ್ಟಾಕ್ ಅನ್ನು ಕಡಿಮೆ ಮಾಡಲು ಉತ್ಪಾದನೆಯನ್ನು ಸರಿಹೊಂದಿಸುತ್ತಿದ್ದಾರೆ ಮತ್ತು ಬೇಡಿಕೆಯ ಪ್ರವೃತ್ತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಹೂಡಿಕೆದಾರರಿಗೆ ತಿಳಿಸಿದೆ. ಮಾರುತಿ ಸುಜುಕಿಯ ದೇಶೀಯ ಪ್ರಯಾಣಿಕ ವಾಹನವು ವಿತರಣೆಯು ಜುಲೈ ಸಮಯದಲ್ಲಿ ವರ್ಷಕ್ಕೆ ಸುಮಾರು 10% ರಷ್ಟು ಕಡಿಮೆಯಾಗಿದೆ. ಏಪ್ರಿಲ್-ಜುಲೈ ಅವಧಿಯಲ್ಲಿ ಅದರ ಪ್ರಮಾಣವು ವರ್ಷದ ಹಿಂದಿನ ಅವಧಿಯಿಂದ ಸುಮಾರು 2% ರಷ್ಟು ಕಡಿಮೆಯಾಗಿರುತ್ತದೆ.
ಪ್ರಕಟಿಸಲಾದ ದಿನಾಂಕ: ಆಗಸ್ಟ್ 22, 2024
ಮಹೀಂದ್ರಾ ಬ್ಲಾಗ್‌ಗಳನ್ನು ಇತ್ತೀಚಿನದು ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ಬ್ಲಾಗ್‌ಗಳು
ಮಾರುತಿ ಸುಜುಕಿ ವ್ಯಾಗನಾರ್ ಜಾಗತಿಕ NCAP ಸುರಕ್ಷತಾ ರೇಟಿಂಗ್
ಹೌದು, ನಿಮ್ಮ ಮಾರುತಿ ಸುಜುಕಿ ಕಾರಿನ ಇನ್ಶೂರೆನ್ಸ್ ಪಾಲಿಸಿಯಲ್ಲಿ ನೀವು ಕ್ಲೈಮ್ ಸಲ್ಲಿಸದಿದ್ದರೆ ನೋ ಕ್ಲೈಮ್ ಬೋನಸ್‌ಗೆ ನೀವು ಅರ್ಹರಾಗುತ್ತೀರಿ. ಹಲವು ವರ್ಷಗಳಲ್ಲಿ ಪ್ರೀಮಿಯಂಗಳ ಮೇಲೆ ರಿಯಾಯಿತಿಯಾಗಿ ನೋ ಕ್ಲೈಮ್ ಬೋನಸ್ ಅನ್ನು ಸಂಗ್ರಹಿಸಬಹುದು. ಸ್ವಂತ ಹಾನಿ ಪ್ರೀಮಿಯಂನಲ್ಲಿ NCB ಯ ರಿಯಾಯಿತಿ 20% - 50% ವರೆಗೆ ಇರುತ್ತದೆ.
ನಿಮ್ಮ ಮಾರುತಿ ಕಾರ್ ಇನ್ಶೂರೆನ್ಸ್ ಅನ್ನು ಆನ್‍ಲೈನ್‍ನಲ್ಲಿ ನವೀಕರಿಸುವುದು ತ್ವರಿತ ಮತ್ತು ತಡೆರಹಿತ ಅನುಭವವಾಗಿದೆ. ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಮಾರುತಿ ಕಾರ್ ಮಾಡೆಲ್, ಕಾರಿನ ಖರೀದಿ ದಿನಾಂಕ ಮುಂತಾದ ವಿವರಗಳನ್ನು ನಮೂದಿಸಿ ಮತ್ತು ಯಾವುದೇ ಆ್ಯಡ್-ಆನ್‌ಗಳನ್ನು ಆಯ್ಕೆ ಮಾಡಿ. ನೀವು ಹಣ ಪಾವತಿಸಿದ ಕೂಡಲೇ ನಿಮ್ಮ ಪಾಲಿಸಿ ನವೀಕರಣವಾಗುತ್ತದೆ.
ಹೌದು, ಶೂನ್ಯ ಸವಕಳಿ ಕವರ್ ಎಂಬುದು ನೀವು ಸ್ವಂತ ಹಾನಿ (OD) ಇನ್ಶೂರೆನ್ಸ್ ಪ್ಲಾನಿನಲ್ಲಿ ಸೇರಿಸಬಹುದಾದ ಆ್ಯಡ್-ಆನ್ ಆಗಿದೆ. ಶೂನ್ಯ ಸವಕಳಿ ಆ್ಯಡ್-ಆನ್ ಕವರ್ ಎಲ್ಲಾ ಫೈಬರ್, ರಬ್ಬರ್ ಮತ್ತು ಲೋಹದ ಭಾಗಗಳಿಗೆ ಸವಕಳಿಯ ಕಡಿತವಿಲ್ಲದೆ 100% ಕವರೇಜನ್ನು ಒದಗಿಸುತ್ತದೆ.
ರಸ್ತೆಗಳಲ್ಲಿ ವಾಹನ ಚಾಲನೆ ಮಾಡಲು ನಿಮಗೆ ಥರ್ಡ್ ಪಾರ್ಟಿ (TP) ಇನ್ಶೂರೆನ್ಸ್ ಕಾನೂನಿನ ಪ್ರಕಾರ ಅವಶ್ಯಕವಾಗಿದೆ. ನಿಮ್ಮ ಮಾರುತಿ ಕಾರಿನ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯು ಅವಧಿ ಮುಗಿಯುವ ಹಂತದಲ್ಲಿದ್ದರೆ, ವಿಳಂಬ ಮಾಡದೆ TP ಇನ್ಶೂರೆನ್ಸ್ ಅನ್ನು ನವೀಕರಿಸಲು ಸಲಹೆ ನೀಡಲಾಗುತ್ತದೆ. ನಿಮ್ಮ ಮಾರುತಿ ಕಾರಿಗೆ ಹೆಚ್ಚುವರಿಯಾಗಿ OD ಕವರ್ ಅಗತ್ಯವಿದ್ದರೆ, ನೀವು ಸಮಗ್ರ ಇನ್ಶೂರೆನ್ಸ್ ಕವರ್ ಪಡೆಯುವುದನ್ನು ಪರಿಗಣಿಸಬೇಕು.
ನಿಮ್ಮ ಮಾರುತಿ ಕಾರು ಇನ್ಶೂರೆನ್ಸ್ ಕ್ಲೈಮ್ ಮೂಲಕ ಹೋದರೆ ನೀವು ಕಡ್ಡಾಯ ಕಡಿತಗಳನ್ನು ಪಾವತಿಸಬೇಕಾಗುತ್ತದೆ. IRDAI ನಿಗದಿಪಡಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ, 1500cc ಗಿಂತ ಕಡಿಮೆ ಅಥವಾ ಸಮನಾದ ವಾಹನಕ್ಕೆ ಕಡ್ಡಾಯ ಕಡಿತಗೊಳಿಸಬಹುದಾದ ಮೊತ್ತ ₹1000. 1500cc ಗಿಂತ ಹೆಚ್ಚಿನ ವಾಹನಗಳಿಗೆ, ಕಡ್ಡಾಯ ಕಡಿತ ₹1000.
ನಿಮ್ಮ ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಕಡಿಮೆ ಮಾಡುವ ಉತ್ತಮ ಮಾರ್ಗವೆಂದರೆ, ನೋ ಕ್ಲೈಮ್ ಬೋನಸ್ (NCB) ಅನ್ನು ಪಡೆಯುವುದು. ಇನ್ಶೂರೆನ್ಸ್ ಅವಧಿಯಲ್ಲಿ ಯಾವುದೇ ಕ್ಲೈಮ್‌ಗಳನ್ನು ಸಲ್ಲಿಸದೇ ಇದ್ದರೆ ನೀವು ಇದನ್ನು ಮಾಡಬಹುದು. ಬ್ರೋಕನ್ ಟೈಲ್ ಲೈಟ್ ಅಥವಾ ಹಾನಿಗೊಳಗಾದ ಹಿಂಭಾಗದ ಫಂಡರ್‌ನಂತಹ ಸಣ್ಣ ಹಾನಿಗಳ ಸಂದರ್ಭದಲ್ಲಿ ಇದು ವಿಶೇಷವಾಗಿ ನಿಜವಾಗಿದೆ. ಉತ್ತಮ ಆಯ್ಕೆಯನ್ನು ಪರಿಗಣಿಸಿ ಮತ್ತು ತಕ್ಷಣದ ರಿಪೇರಿಗಳನ್ನು ಸ್ವಂತ ಖರ್ಚಿನಿಂದ ಮಾಡಿಕೊಳ್ಳಿ, ಹಾಗು ಕಡಿಮೆ ಪ್ರೀಮಿಯಂಗಳೊಂದಿಗೆ ದೀರ್ಘಾವಧಿಯಲ್ಲಿ ಉಳಿತಾಯ ಮಾಡಿ.
ಸಂಪೂರ್ಣ ಕವರೇಜ್ ಪಡೆಯಲು ನಿಮ್ಮ ಮಾರುತಿ ಕಾರಿಗೆ ಸಮಗ್ರ ಕಾರ್ ಇನ್ಶೂರೆನ್ಸ್ ಖರೀದಿಸುವುದು ಸೂಕ್ತವಾಗಿದೆ. ನಿಮ್ಮ ಮಾರುತಿ ಇನ್ಶೂರೆನ್ಸ್‌ನ ಸಮಗ್ರ ಕವರ್‌ನೊಂದಿಗೆ, ಚಂಡಮಾರುತ, ಕಳ್ಳತನ, ಭೂಕಂಪ, ಪ್ರವಾಹ ಮುಂತಾದ ಯಾವುದೇ ಇನ್ಶೂರೆಬಲ್ ಅಪಾಯದಿಂದಾಗಿ ಉಂಟಾಗುವ ನಷ್ಟಕ್ಕೆ ನೀವು ಕವರೇಜ್ ಪಡೆಯುತ್ತೀರಿ. ಹೆಚ್ಚುವರಿಯಾಗಿ, ಇನ್ಶೂರೆನ್ಸ್ ಮಾಡಿದ ವಾಹನವು ಅಪಘಾತಕ್ಕೆ ತುತ್ತಾದರೆ ಅದರಲ್ಲಿ ಒಳಗೊಂಡಿರುವ ಥರ್ಡ್ ಪಾರ್ಟಿ ಹೊಣೆಗಾರಿಕೆಗಳ ವೆಚ್ಚಗಳನ್ನು ಇನ್ಶೂರರ್ ಕವರ್ ಮಾಡುತ್ತಾರೆ.
ಮಾರುತಿ ಇನ್ಶೂರೆನ್ಸ್ ಕ್ಲೈಮ್ ಫೈಲ್ ಮಾಡಲು ಅಗತ್ಯವಿರುವ ಈ ಕೆಳಗಿನ ಡಾಕ್ಯುಮೆಂಟ್‌ಗಳು ಇಲ್ಲಿವೆ: 1. ನೋಂದಣಿ ಪ್ರಮಾಣಪತ್ರ (RC) ಬುಕ್ ಪ್ರತಿ 2. ಘಟನೆ ನಡೆದ ಸಮಯದಲ್ಲಿ ಇನ್ಶೂರ್ಡ್ ವಾಹನವನ್ನು ಚಲಾಯಿಸುತ್ತಿದ್ದ ವ್ಯಕ್ತಿಯ ಡ್ರೈವಿಂಗ್ ಲೈಸೆನ್ಸ್ ಪ್ರತಿ. 3. ಪೊಲೀಸ್ ಸ್ಟೇಷನ್‌ನಲ್ಲಿ FIR ಫೈಲ್ ಮಾಡಲಾಗಿದೆ 4. ಗ್ಯಾರೇಜ್‌ನಿಂದ ದುರಸ್ತಿ ಅಂದಾಜುಗಳು 5. ನಿಮ್ಮ ಗ್ರಾಹಕರನ್ನು ತಿಳಿಯಿರಿ (KYC) ಡಾಕ್ಯುಮೆಂಟ್‌ಗಳು 6. ಒಂದುವೇಳೆ ಅಪಘಾತವು ದಂಗೆಕೋರ ಕೃತ್ಯ, ಮುಷ್ಕರ ಅಥವಾ ಗಲಭೆಯಿಂದ ಸಂಭವಿಸಿದ್ದರೆ, , FIR ಫೈಲ್ ಮಾಡುವುದು ಕಡ್ಡಾಯವಾಗಿದೆ.
ನೀವು ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ನಿಂದ ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಡೌನ್ಲೋಡ್ ಮಾಡಬಹುದು. ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್ ಹೋಮ್ ಪೇಜಿನಲ್ಲಿ, ನೀವು ಸಹಾಯ ಬಟನ್ ಕ್ಲಿಕ್ ಮಾಡಿ, ಇಮೇಲ್ ಪಾಲಿಸಿ ಕಾಪಿ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಅದರ ನಂತರ, ನಿಮ್ಮ ನೋಂದಾಯಿತ ಇಮೇಲ್ ಅಥವಾ ನೋಂದಾಯಿತ ಮೊಬೈಲ್ ನಂಬರ್ ಅಥವಾ ಪಾಲಿಸಿ ನಂಬರ್ ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. ಪಾಲಿಸಿಯನ್ನು ತಕ್ಷಣ ವಾಟ್ಸಾಪ್‌ನಲ್ಲಿ ಮೇಲ್ ಮಾಡಲಾಗುತ್ತದೆ ಅಥವಾ ನಿಮಗೆ ಕಳುಹಿಸಲಾಗುತ್ತದೆ.
ನಿಮ್ಮ ಮಾರುತಿ ಕಾರು ಕಳ್ಳತನವಾದಾಗ, ನೀವು ತಕ್ಷಣವೇ FIR ಫೈಲ್ ಮಾಡಬೇಕು, ನಂತರ ನಮ್ಮ ಸಹಾಯವಾಣಿ ನಂಬರಿಗೆ ಕರೆ ಮಾಡುವ ಮೂಲಕ ಅಥವಾ ವಾಟ್ಸಾಪ್‌ನಲ್ಲಿ 8169500500 ಗೆ ಮೆಸೇಜ್ ಕಳುಹಿಸುವ ಮೂಲಕ ಎಚ್‌ಡಿಎಫ್‌ಸಿ ಎರ್ಗೋ ಕ್ಲೈಮ್ ತಂಡಕ್ಕೆ ಕ್ಲೈಮ್ ಮಾಡಬೇಕು.
ಹೌದು, ಮಾರುತಿ ಕಾರ್ ಇನ್ಶೂರೆನ್ಸ್ ಅನ್ನು ಟ್ರಾನ್ಸ್‌ಫರ್ ಮಾಡಬಹುದು. ಕಾರ್ ಇನ್ಶೂರೆನ್ಸ್ ಟ್ರಾನ್ಸ್‌ಫರ್ ಇನ್ನೊಂದು ಪಾರ್ಟಿಯ ಅನುಮೋದನೆಯ ನಂತರ ಇನ್ಶೂರೆನ್ಸ್ ಪಾಲಿಸಿ ಒಪ್ಪಂದದಿಂದ ಒಂದು ಪಾರ್ಟಿಯ ವಿತ್‌ಡ್ರಾವಲ್ ಅನ್ನು ಅಧಿಕೃತಗೊಳಿಸುತ್ತದೆ. ಮುಖ್ಯವಾಗಿ, ಮೋಟಾರ್ ವಾಹನ ಕಾಯ್ದೆಯ ಸೆಕ್ಷನ್ 157 ಪ್ರಕಾರ, ಎರಡೂ ಪಾರ್ಟಿಗಳು ಸಂಗ್ರಹಣೆಯ 14 ದಿನಗಳ ಒಳಗೆ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ವರ್ಗಾಯಿಸಬೇಕು.