ವಿಶ್ವದ ಅತಿದೊಡ್ಡ ಕಾರ್ ತಯಾರಕರು ತಮ್ಮ ಜೆಟ್ಟಾ ಸೆಡಾನ್ ಪರಿಚಯಿಸುವುದರೊಂದಿಗೆ 2008 ವರ್ಷದಲ್ಲಿ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದರು. ಫೋಕ್ಸ್‌ವ್ಯಾಗನ್ ಈಗ ಪೋಲೋ ಹ್ಯಾಚ್‌ಬ್ಯಾಕ್‌ನಿಂದ ಹಿಡಿದು ಪ್ರೀಮಿಯಂ SUV ಟಿಗುವಾನ್‌ವರೆಗಿನ ಮಾದರಿಗಳನ್ನು ಮಾರಾಟ ಮಾಡುತ್ತದೆ. ಜರ್ಮನ್ ಉತ್ಪಾದಕರ ಮಾದರಿಗಳು ತಮ್ಮ ಪ್ರೀಮಿಯಂ ನಿರ್ಮಿತ ಗುಣಮಟ್ಟ, ಡ್ರೈವಿಂಗ್ ಡೈನಾಮಿಕ್ಸ್ ಮತ್ತು ಸುರಕ್ಷತಾ ಸಲಕರಣೆಗಳಿಗೆ ಹೆಸರುವಾಸಿಯಾಗಿವೆ.
ಫೋಕ್ಸ್‌ವ್ಯಾಗನ್ ನಮೂದಿಸಿದ ವಿಭಾಗಗಳಲ್ಲಿ ಈ ಕೆಳಗಿನ ಕೊಡುಗೆಗಳನ್ನು ಹೊಂದಿದೆ - ಪ್ರೀಮಿಯಂ ಹ್ಯಾಚ್‌ಬ್ಯಾಕ್/ಕ್ರಾಸ್‌ಓವರ್ (ಪೋಲೋ ಮತ್ತು ಕ್ರಾಸ್ ಪೋಲೋ), ಸಬ್-ಕಾಂಪ್ಯಾಕ್ಟ್ (ಅಮಿಯೋ), ಕಾಂಪ್ಯಾಕ್ಟ್ (ವೆಂಟೋ) ಮತ್ತು ಎಗ್ಸಿಕ್ಯುಟಿವ್ ಸೆಡಾನ್ (ಜೆಟ್ಟಾ) ವಿಭಾಗಗಳು. ಇತ್ತೀಚೆಗೆ, VW ಇದು ಟಿಗುವಾನ್‌ನೊಂದಿಗೆ SUV ವಿಭಾಗವನ್ನು ಮರು-ಪ್ರವೇಶಿಸಿದೆ. ಅಲ್ಲದೆ ಫೋಕ್ಸ್‌ವ್ಯಾಗನ್ ಕಾರ್ ಮಾಡೆಲ್‌ಗಳಿಗೆ ಉತ್ತಮ ಕಾರ್ ಇನ್ಶೂರೆನ್ಸ್ ಪ್ಲಾನ್, ಅಪಘಾತದ ಸಂದರ್ಭದಲ್ಲಿ ಹೆಚ್ಚು ಅಗತ್ಯವಿರುವ ಹಣಕಾಸಿನ ರಕ್ಷಣೆಯನ್ನು ಒದಗಿಸಬಹುದು.
ಅತ್ಯುತ್ತಮ ಐದು ವೋಕ್ಸ್‌ವ್ಯಾಗನ್ ಮಾಡೆಲ್‌ಗಳು
ವೋಕ್ಸ್‌ವ್ಯಾಗನ್ ಪೋಲೋಡ್ರೈವ್ ಮಾಡಲು ಮೋಜೆನಿಸುವ ಪ್ರೀಮಿಯಂ ಸಿಟಿ ಹ್ಯಾಚ್ ತನ್ನ ವಿಭಾಗದಲ್ಲಿ ಸಾಕಷ್ಟು ಆಸಕ್ತರನ್ನು ಹೊಂದಿದೆ. ಆಕರ್ಷಕ ಡ್ರೈವಿಂಗ್ ಡೈನಾಮಿಕ್ಸ್, ಉತ್ತಮವಾಗಿ ನಿರ್ಮಿಸಲಾದ ಇಂಟೀರಿಯರ್ಸ್ ಹಾಗೂ ಅತ್ಯುತ್ತಮ ಸಲಕರಣೆಗಳಿಂದಾಗಿ ಎಲ್ಲರೂ ಬಯಸುವ ಕಾರ್ ಎನಿಸಿದೆ
ವೋಕ್ಸ್‌ವ್ಯಾಗನ್ ಅಮಿಯೋಜರ್ಮನ್ ಕಾರು ತಯಾರಕ ವೋಕ್ಸ್‌ವ್ಯಾಗನ್‌ನ ಮೊದಲ ಉಪ-ಕಾಂಪ್ಯಾಕ್ಟ್ ಸೆಡಾನ್, ಅಮಿಯೋ, ವಿಶಾಲ ಕ್ಯಾಬಿನ್, ತನ್ನ ವಿಭಾಗದಲ್ಲೇ ಮೊಟ್ಟಮೊದಲ ಬಾರಿಗೆ ಪರಿಚಯಿಸಲಾದ ವೈಶಿಷ್ಟ್ಯಗಳು ಹಾಗೂ ಉತ್ಕೃಷ್ಟ ಡ್ರೈವಿಂಗ್ ಡೈನಾಮಿಕ್ಸ್ ಹೊಂದಿದೆ.
ವೋಕ್ಸ್‌ವ್ಯಾಗನ್ ವೆಂಟೋಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಜನಪ್ರಿಯ ಆಯ್ಕೆಯಾದ ವೆಂಟೋ, ಆರಾಮ, ಡ್ರೈವ್ ಮಾಡುವ ರೋಮಾಂಚನ ಮತ್ತು ಅನೇಕ ವೈಶಿಷ್ಟ್ಯಗಳನ್ನು ಒದಗಿಸುವ ಆಲ್-ರೌಂಡ್ ಪ್ಯಾಕೇಜ್ ಎನಿಸಿದೆ.
ವೋಕ್ಸ್‌ವ್ಯಾಗನ್ ಜೆಟ್ಟಾವೋಕ್ಸ್‌ವ್ಯಾಗನ್ ಜೆಟ್ಟಾ ಎಕ್ಸಿಕ್ಯುಟಿವ್ ಸೆಡಾನ್ ಎನಿಸಿದೆ. ಪ್ರೀಮಿಯಂ ಕ್ಯಾಬಿನ್, ಉತ್ಕೃಷ್ಟ ಎಂಜಿನ್‌ಗಳು ಹಾಗೂ ಆರಾಮದಾಯಕ ಸವಾರಿ - ಇವು ಜೆಟ್ಟಾದ ಯುಎಸ್‌ಪಿ.
ವೋಕ್ಸ್‌ವ್ಯಾಗನ್ ಟಿಗ್ವಾನ್ಟಿಗ್ವಾನ್ ಮೂಲಕ ವೋಕ್ಸ್‌ವ್ಯಾಗನ್ SUV ವಿಭಾಗಕ್ಕೆ ಮರು-ಪ್ರವೇಶಿಸಿದೆ. ಇದಕ್ಕೆ ಸೆಡಾನ್‌ನಂತಹ ಡ್ರೈವಿಂಗ್ ಡೈನಮಿಕ್ಸ್ ಇದ್ದರೂ "SUV"ಯ ಎಲ್ಲ ವೈಶಿಷ್ಟ್ಯಗಳನ್ನೂ ಹೊಂದಿದೆ.
ಅಪಘಾತಗಳು ಅನಿಶ್ಚಿತವಾಗಿವೆ. ಅಪಘಾತದಿಂದಾಗಿ ನಿಮ್ಮ ವೋಲ್ಕ್‌ಸ್ವಾಗನ್ ಕಾರು ಹಾನಿಗೊಳಗಾಗಿದೆಯೇ? ಭಯಭೀತರಾಗಬೇಡಿ! ನಾವು ಅದನ್ನು ಕವರ್ ಮಾಡುತ್ತೇವೆ!
ಬೂಮ್! ಬೆಂಕಿ ಅವಘಡ ನಿಮ್ಮ ವೋಲ್ಕ್‌ಸ್ವಾಗನ್ ಕಾರನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಹಾನಿ ಮಾಡಬಹುದು, ಬೆಂಕಿ ಅಥವಾ ಸ್ಫೋಟದ ಘಟನೆಗಳಿಂದಾಗಿ ಆಗುವ ಯಾವುದೇ ಹಾನಿಯಾದರೂ ಚಿಂತಿಸಬೇಡಿ, ಅದನ್ನು ನಾವು ನಿಭಾಯಿಸುತ್ತೇವೆ.
ನಿಮ್ಮ ವೋಕ್ಸ್‌ವ್ಯಾಗನ್ ಕಾರು ಕಳುವಾಗಿದೆಯೇ? ನಿಜಕ್ಕೂ ತುಂಬಾ ದುಃಖದ ಸುದ್ಧಿ ಇದು! ಆದರೆ ದುಃಖ ಪಡುವ ಮೊದಲು, ನಿಮ್ಮ ವಾಹನದ ರಕ್ಷಣೆ ನಮ್ಮ ಹೊಣೆ ಎಂಬುದನ್ನು ನೆನಪಿಡಿ!
ಭೂಕಂಪ, ಭೂಸ್ಖಲನ, ಪ್ರವಾಹ, ಗಲಭೆಗಳು, ಭಯೋತ್ಪಾದನೆ ಇತ್ಯಾದಿಗಳಿಂದಾಗಿ ಅಡ್ಡಿ ಉಂಟಾಗಬಹುದು. ನಿಮ್ಮ ಮೆಚ್ಚಿನ ವೋಕ್ಸ್‌ವ್ಯಾಗನ್ ಕಾರಿನ ಮೇಲೆ ಹಾನಿ ಮಾಡಬಹುದು. ಇನ್ನಷ್ಟು ಓದಿ...
ನೀವು ₹ 15 ಲಕ್ಷಗಳ ಪರ್ಯಾಯ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿಯನ್ನು ಹೊಂದಿದ್ದರೆ, ನೀವು ಈ ಕವರ್ ಅನ್ನು ಬಿಟ್ಟುಬಿಡಬಹುದುಇನ್ನಷ್ಟು ಓದಿ...
ಒಂದು ವೇಳೆ ನಿಮ್ಮ ವೋಕ್ಸ್‌ವ್ಯಾಗನ್ ಕಾರು ಆಕಸ್ಮಿಕವಾಗಿ ಮೂರನೇ ವ್ಯಕ್ತಿಗೆ ಅಥವಾ ಅವರ ಆಸ್ತಿಗೆ ಹಾನಿ ಉಂಟು ಮಾಡಿದಲ್ಲಿ, ನಾವು ಸಂಪೂರ್ಣ ಕವರೇಜ್ ಒದಗಿಸುತ್ತೇವೆ ಇನ್ನಷ್ಟು ಓದಿ...
ಕಾಲಕ್ರಮೇಣ ನಿಮ್ಮ ವೋಲ್ಕ್‌ಸ್ವಾಗನ್ ಕಾರ್ ಮೌಲ್ಯದಲ್ಲಿ ಆಗುವ ಇಳಿಕೆಯನ್ನು ನಾವು ಕವರ್ ಮಾಡುವುದಿಲ್ಲ.
ನಿಮ್ಮ ವೋಕ್ಸ್‌ವ್ಯಾಗನ್ ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಯಾವುದೇ ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕಲ್ ಬ್ರೇಕ್‌ಡೌನ್‌ಗಳು ಕವರ್ ಆಗುವುದಿಲ್ಲ.
ನೀವು ಸಕ್ರಮ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲದಿದ್ದರೆ ನಿಮ್ಮ ವೋಕ್ಸ್‌ವ್ಯಾಗನ್ ಕಾರ್ ಇನ್ಶೂರೆನ್ಸ್‌ಗೆ ಯಾವುದೇ ಮಾನ್ಯತೆ ಇರುವುದಿಲ್ಲ. ಮದ್ಯ/ಮಾದಕದ್ರವ್ಯಗಳ ಪ್ರಭಾವದಲ್ಲಿ ಚಾಲನೆ ಮಾಡುವುದು ಕಾರ್ ಇನ್ಶೂರೆನ್ಸ್ ಕವರೇಜ್ ವ್ಯಾಪ್ತಿಯಿಂದ ಹೊರಗುಳಿಯುತ್ತದೆ.
ಸಾಮಾನ್ಯವಾಗಿ, ಡಿಪ್ರಿಶಿಯೇಶನ್ ಮೊತ್ತವನ್ನು ಕಳೆದ ನಂತರ ಉಳಿಯುವ ಕ್ಲೈಮ್ ಮೊತ್ತವನ್ನು ಮಾತ್ರ ನಿಮ್ಮ ವೋಕ್ಸ್‌ವ್ಯಾಗನ್ ಕಾರ್ ಇನ್ಶೂರೆನ್ಸ್ ಪಾಲಿಸಿ ಪಾವತಿಸುತ್ತದೆ. ನಿಮ್ಮ ಪಾಲಿಸಿ ವಿವರಗಳು ಸವಕಳಿಯ ವಿವರಗಳನ್ನು ಒಳಗೊಂಡಿರುತ್ತವೆ.. ಆದ್ದರಿಂದ, ಸಂಪೂರ್ಣ ಮೊತ್ತವನ್ನು ಪಡೆಯಲು ನೀವು ಏನು ಮಾಡಬಹುದು? ಒಂದು ಮಾರ್ಗ ಇದೆ.! ಜೀರೋ-ಡಿಪ್ರಿಸಿಯೇಶನ್ ಕವರ್! ಜೀರೋ ಡಿಪ್ರಿಸಿಯೇಶನ್‌ನಲ್ಲಿ, ಯಾವುದೇ ಸವಕಳಿ ಕಡಿತಗಳಿಲ್ಲ ಮತ್ತು ಸಂಪೂರ್ಣ ಮೊತ್ತ ನಿಮ್ಮ ಕೈಸೇರುತ್ತದೆ. !
ಪಾರ್ಕ್ ಮಾಡಲಾದ ನಿಮ್ಮ ವೋಕ್ಸ್‌ವ್ಯಾಗನ್ ಕಾರಿಗೆ ಅಥವಾ ವಿಂಡ್‌ಶೀಲ್ಡ್ ಗ್ಲಾಸ್‌ಗೆ ಬಾಹ್ಯ ಆಘಾತ, ಪ್ರವಾಹ, ಬೆಂಕಿ ಇತ್ಯಾದಿಗಳಿಂದ ಆದ ಹಾನಿಯನ್ನು ಕ್ಲೈಮ್ ಮಾಡಿದ ಸಂದರ್ಭದಲ್ಲಿ, ಈ ಆ್ಯಡ್ ಆನ್ ಕವರ್, ನೀವು ಇಲ್ಲಿಯವರೆಗೆ ಗಳಿಸಿದ ನೋ ಕ್ಲೈಮ್ ಬೋನಸ್ ಅನ್ನು ರಕ್ಷಿಸುವುದರ ಜೊತೆಗೆ ಅದನ್ನು ಮುಂದಿನ NCB ಸ್ಲ್ಯಾಬ್‌ಗೆ ವರ್ಗಾಯಿಸುತ್ತದೆ.
ನಿಮ್ಮ ಕಾರಿನ ಯಾವುದೇ ತಾಂತ್ರಿಕ ಅಥವಾ ಯಾಂತ್ರಿಕ ಬ್ರೇಕ್‌ಡೌನ್ ಸಮಸ್ಯೆಗಳನ್ನು ನಿರ್ವಹಿಸಲು ನಾವು ನಿಮಗೆ ಸದಾಕಾಲ ಸಹಾಯ ಒದಗಿಸುತ್ತೇವೆ! ಹಾನಿಯಾದ ಸ್ಥಳದಲ್ಲಿ ಸಣ್ಣ ರಿಪೇರಿ, ಕೀ ಕಳೆದುಹೋದಾಗ ಸಹಾಯ, ನಕಲಿ ಕೀ ಸಮಸ್ಯೆ, ಟೈರ್ ಬದಲಾವಣೆ, ಬ್ಯಾಟರಿ ಜಂಪ್ ಸ್ಟಾರ್ಟ್, ಇಂಧನ ಟ್ಯಾಂಕ್ ಖಾಲಿಯಾಗುವುದು ಮತ್ತು ಟೋವಿಂಗ್ ಶುಲ್ಕಗಳು ಈ ತುರ್ತು ಸಹಾಯ ಕವರ್‌ನಲ್ಲಿ ಸೇರಿವೆ!
ಒಂದು ದಿನ ಇದ್ದಕ್ಕಿದ್ದಂತೆ ನಿಮ್ಮ ಕಾರು ಕಳ್ಳತನವಾದ ಅಥವಾ ಸಂಪೂರ್ಣ ಹಾನಿಗೆ ತುತ್ತಾದ ಕಹಿಸುದ್ಧಿ ಕೇಳುವುದಕ್ಕಿಂತ ಕೆಟ್ಟ ವಿಷಯ ಇನ್ನೇನಿದೆ? ನಿಮ್ಮ ಪಾಲಿಸಿಯು ಯಾವಾಗಲೂ ನಿಮ್ಮ ವಾಹನದ IDV (ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ) ಪಾವತಿಸುತ್ತದೆ. ಈ IDV, ವಾಹನದ ಪ್ರಸ್ತುತ ಮಾರುಕಟ್ಟೆ ಬೆಲೆಗೆ ಸಮನಾಗಿರುತ್ತದೆ. ಆದರೆ, ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಮೂಲಕ, ನೀವು ಇನ್ವಾಯ್ಸ್ ಮೌಲ್ಯ ಮತ್ತು IDV ನಡುವಿನ ವ್ಯತ್ಯಾಸವನ್ನು ಕೂಡ ಪಡೆಯುತ್ತೀರಿ! ಇದಕ್ಕಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ FIR ಫೈಲ್ ಮಾಡಲಾಗಿದೆ ಮತ್ತು ಘಟನೆ ನಡೆದ 90 ದಿನಗಳ ಒಳಗೆ ಕಾರನ್ನು ಮರುಪಡೆದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು .
ಮಳೆಯ ರಭಸವಿರಲಿ ಅಥವಾ ಪ್ರವಾಹದ ಅಲೆಗಳಿರಲಿ, ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್ ಕವರ್ ಮೂಲಕ ನಿಮ್ಮ ವೋಕ್ಸ್‌ವ್ಯಾಗನ್ ಕಾರಿನ ಗೇರ್‌ಬಾಕ್ಸ್ ಮತ್ತು ಎಂಜಿನ್ ಸುರಕ್ಷಿತವಾಗಿರುತ್ತದೆ! ಇದು ಎಲ್ಲಾ ಸಣ್ಣ ಭಾಗಗಳು ಅಥವಾ ಆಂತರಿಕ ಭಾಗಗಳ ಬದಲಿ ಅಥವಾ ದುರಸ್ತಿಗೆ ಹಣ ಪಾವತಿಸುತ್ತದೆ.. ಇದಲ್ಲದೆ, ಇದು ಕೆಲಸದ ವೆಚ್ಚಗಳು, ಕಂಪ್ರೆಷನ್ ಟೆಸ್ಟ್‌ಗಳ ವೆಚ್ಚ, ಯಂತ್ರ ಶುಲ್ಕಗಳು ಮತ್ತು ಎಂಜಿನ್ ಸಿಲಿಂಡರ್ ರೀ-ಬೋರಿಂಗ್‌ಗಳನ್ನು ಸಹ ಕವರ್ ಮಾಡುತ್ತದೆ.
ನಿಮ್ಮ ಕಾರಿನ ಕೀಗಳು ಕಳುವಾಗಿವೆಯೇ ಅಥವಾ ಕಳೆದುಹೋಗಿವೆಯೇ? ಈ ಆ್ಯಡ್-ಆನ್, ಆದಷ್ಟು ಬೇಗ ಬದಲಿ ಕೀಗಳನ್ನು ಪಡೆಯಲು ಸಹಾಯ ಮಾಡುತ್ತದೆ.!
ನಿಮ್ಮ ಕಾರಿನಲ್ಲಿ ಬಳಸಿದ ಎಲ್ಲಾ ಉಪಭೋಗ್ಯ ವಸ್ತುಗಳನ್ನು ಒಳಗೊಳ್ಳುವ ಉಪಭೋಗ್ಯ ವಸ್ತುಗಳ ಕವರೇಜ್ ಇಲ್ಲಿದೆ! ಹೌದು! ನಿಮಗೆ ಇದೀಗ ಇದು ಅಗತ್ಯವಿದೆ! ನಟ್ಸ್, ಬೋಲ್ಟ್‌ಗಳಂತಹ ಎಲ್ಲಾ ಮರುಬಳಕೆ ಮಾಡಲಾಗದ ಉಪಭೋಗ್ಯ ವಸ್ತುಗಳಿಗೆ ಇದು ಪಾವತಿಸುತ್ತದೆ....
ನಿಮ್ಮ ಕಾರನ್ನು ರಿಪೇರಿಗೆ ಕೊಟ್ಟು ಕ್ಯಾಬ್‌ನಲ್ಲಿ ಪ್ರಯಾಣ ಮಾಡಿದಿರಾ? ನಿಮಗಾಗಿ ನಾವು ಡೌನ್‌ಟೈಮ್ ಪ್ರೊಟೆಕ್ಷನ್ ತಂದಿದ್ದೇವೆ! ಗ್ರಾಹಕರು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಬೇರೆ ಸಾರಿಗೆ ವಿಧಾನಗಳನ್ನು ಬಳಸಿದಾಗ, ಇದು ನಗದು ಭತ್ಯೆಯ ಪ್ರಯೋಜನ ಒದಗಿಸುತ್ತದೆ .
ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಿಮ್ಮ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ನವೀಕರಿಸುವುದು ತ್ವರಿತ ಮತ್ತು ಸರಳವಾಗಿದೆ. ಇದಕ್ಕೆ ಕನಿಷ್ಠ ಪೇಪರ್‌ವರ್ಕ್ ಅಗತ್ಯವಿರುತ್ತದೆ. ನೀವು ಮಾಡಬೇಕಾಗಿರುವುದು ಕೇವಲ ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ಗಡುವು ಮುಗಿಯುವ ಪಾಲಿಸಿಯ ವಿವರಗಳನ್ನು ಆನ್ಲೈನಿನಲ್ಲಿ ನೀಡಿ, ಹೊಸ ಪಾಲಿಸಿಯ ವಿವರಗಳನ್ನು ನೋಡಿ ಮತ್ತು ಅನೇಕ ಸುರಕ್ಷಿತ ಪಾವತಿ ಆಯ್ಕೆಗಳ ಮೂಲಕ ತ್ವರಿತ ಆನ್ಲೈನ್ ಪಾವತಿ ಮಾಡಿ. ಅಷ್ಟೆ!
ನೀವು ಎಚ್‌ಡಿಎಫ್‌ಸಿ ಎರ್ಗೋದಿಂದ ಆನ್ಲೈನ್‌ನಲ್ಲಿ ಫೋಕ್ಸ್‌ವ್ಯಾಗನ್ ಇನ್ಶೂರೆನ್ಸ್ ಖರೀದಿಸಿದಾಗ ಸರಳ ಕಾರ್ಯವಿಧಾನಗಳು, ತ್ವರಿತ ವಿತರಣೆ ಮತ್ತು ವಿಶಿಷ್ಟ ಪ್ರಯೋಜನಗಳನ್ನು ಪಡೆಯುತ್ತೀರಿ. ಆದ್ದರಿಂದ, ಯಾವುದೇ ಅನಿರೀಕ್ಷಿತ ಅಪಘಾತದ ನಂತರ, ನೀವು ಡ್ರೈವಿಂಗ್ ಸೀಟಿಗೆ ಸುರಕ್ಷಿತವಾಗಿ ಮತ್ತು ಶೀಘ್ರದಲ್ಲೇ ಮರಳಿ ಬರಲು ಬಯಸಿದರೆ, ನಿಮ್ಮ ಇನ್ಶೂರೆನ್ಸ್ ಪಾಲುದಾರರಾಗಿ ಎಚ್‌ಡಿಎಫ್‌ಸಿ ಎರ್ಗೋವನ್ನು ಆಯ್ಕೆಮಾಡಿ!
ಇದು ನಿಮ್ಮಲ್ಲಿ ಹೆಚ್ಚಿನವರಿಗೆ ಅರ್ಥಮಾಡಿಕೊಳ್ಳಲು ಕಷ್ಟಕರವಾಗಿ ಕಾಣಿಸಬಹುದು. ಆದಾಗ್ಯೂ, ಎಚ್‌ಡಿಎಫ್‌ಸಿ ಎರ್ಗೋ ತಪ್ಪು ಕಲ್ಪನೆಯನ್ನು ಚೆನ್ನಾಗಿ ಭೇದಿಸಿದೆ. ಇದು ಕ್ಲೈಮ್ ಪ್ರಕ್ರಿಯೆಯನ್ನು ತ್ವರಿತ, ಸುಗಮ ಮತ್ತು ಸರಳಗೊಳಿಸಿದೆ. ನೀವು ಮಾಡಬೇಕಾಗಿರುವುದು ಅದರ ಮೊಬೈಲ್ ಅಪ್ಲಿಕೇಶನ್, ಎಚ್‌ಡಿಎಫ್‌ಸಿ ಎರ್ಗೋ ಇನ್ಶೂರೆನ್ಸ್ ಪೋರ್ಟ್‌ಫೋಲಿಯೊ ಆರ್ಗನೈಸರ್ (IPO) ಅಥವಾ ಟೋಲ್ ಫ್ರೀ ಸಂಖ್ಯೆಯ ಮೂಲಕ ನಿಮ್ಮ ಕ್ಲೈಮ್ ಅನ್ನು ನೋಂದಾಯಿಸಿ, ಕ್ಲೈಮ್ ಪ್ರಕ್ರಿಯೆಯ ವಿವರಗಳನ್ನು ತಿಳಿಯಲು 022 6234 6234ಇಲ್ಲಿ ಕ್ಲಿಕ್ ಮಾಡಿ.
ಎಲ್ಲಾ ಬಗೆಯ ವಾಹನಗಳು | ಸ್ವಂತ ಹಾನಿ ಪ್ರೀಮಿಯಂನಲ್ಲಿನ ರಿಯಾಯಿತಿಯ % |
---|---|
ಇನ್ಶೂರೆನ್ಸ್ ಹಿಂದಿನ ಇಡೀ ವರ್ಷದಲ್ಲಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 20% |
ಇನ್ಶೂರೆನ್ಸ್‌ನ 2 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 25% |
ಇನ್ಶೂರೆನ್ಸ್‌ನ 3 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 35% |
ಇನ್ಶೂರೆನ್ಸ್‌ನ 4 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 45% |
ಇನ್ಶೂರೆನ್ಸ್‌ನ 5 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 50% |
ವಾಹನದ ವಯಸ್ಸು | IDV ಫಿಕ್ಸ್ ಮಾಡಲು ಸವಕಳಿ % |
---|---|
6 ತಿಂಗಳು ಮೀರದ | 5% |
6 ತಿಂಗಳಿಗಿಂತ ಹೆಚ್ಚಿನ ಆದರೆ 1 ವರ್ಷ ಮೀರದ | 15% |
1 ವರ್ಷಕ್ಕಿಂತ ಹೆಚ್ಚಿನ ಆದರೆ 2 ವರ್ಷ ಮೀರದ | 20% |
2 ವರ್ಷಕ್ಕಿಂತ ಹೆಚ್ಚಿನ ಆದರೆ 3 ವರ್ಷ ಮೀರದ | 30% |
3 ವರ್ಷಕ್ಕಿಂತ ಹೆಚ್ಚಿನ ಆದರೆ 4 ವರ್ಷ ಮೀರದ | 40% |
4 ವರ್ಷಕ್ಕಿಂತ ಹೆಚ್ಚಿನ ಆದರೆ 5 ವರ್ಷ ಮೀರದ | 50% |