ರಿಸ್ಕ್ ಕನ್ಸಲ್ಟಿಂಗ್ ಸೇವೆಗಳುರಿಸ್ಕ್ ಕನ್ಸಲ್ಟಿಂಗ್ ಸೇವೆಗಳು

ವಾಪಸ್ ಕರೆ ಮಾಡಬೇಕೇ?

ಶೀಘ್ರದಲ್ಲೇ ನಮ್ಮ ತಂಡವು ನಿಮ್ಮನ್ನು ಸಂಪರ್ಕಿಸುತ್ತದೆ
  • Business Suraksha Classic
  • Marine Insurance
  • Employee Compensation
  • Burglary and Housebreaking Insurance Policy
  • Standard Fire and Special Perils
  • Other Insurance
  • Bharat Griha Raksha Plus-Long Term
  • Public Liability
  • Business Secure (Sookshma)
  • Marine Insurance
  • Livestock (Cattle) Insurance
  • Pet insurance
  • Cyber Sachet
  • Motor Insurance

ಇನ್ಶೂರೆನ್ಸ್ ಪ್ರಾಡಕ್ಟ್‌ಗಳು ಮತ್ತು ಪರಿಹಾರಗಳ ಜೊತೆಗೆ ನೀಡಲಾಗುವ ರಿಸ್ಕ್ ಮ್ಯಾನೇಜ್ಮೆಂಟ್ ಸೇವೆಗಳು, ಭಾರತೀಯ ಜನರಲ್ ಇನ್ಶೂರೆನ್ಸ್ ಉದ್ಯಮಕ್ಕೆ ಹೊಸದೆಂದೇ ಹೇಳಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಖಾಸಗಿ ಜನರಲ್ ಇನ್ಶೂರೆನ್ಸ್ ಕಂಪನಿಗಳ ಪ್ರವೇಶದೊಂದಿಗೆ ರಿಸ್ಕ್ ಮ್ಯಾನೇಜ್ಮೆಂಟ್‌ಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ. ಭಾರತೀಯ ಇನ್ಶೂರೆನ್ಸ್ ಮಾರುಕಟ್ಟೆಯಲ್ಲಿ ನಮ್ಮ ಕಾರ್ಪೊರೇಟ್ ಕ್ಲೈಂಟ್‌ಗಳಿಗೆ ಈ ಸೇವೆಯನ್ನು ಒದಗಿಸುವಲ್ಲಿ ನಮ್ಮ ಕಂಪನಿಯು ಮುಂಚೂಣಿಯಲ್ಲಿದೆ.

'ನಿರ್ವಹಣೆ' ಎಂಬ ಪದವನ್ನು ನಿರ್ದಿಷ್ಟ ಗುರಿಗಳನ್ನು ಸಾಧಿಸುವ ಉದ್ದೇಶದಿಂದ ಚಟುವಟಿಕೆಗಳನ್ನು ಆಯೋಜಿಸುವ ಮತ್ತು ಸಂಪನ್ಮೂಲಗಳ ಬಳಕೆಯನ್ನು ನಿಯಂತ್ರಿಸುವ ವಿಧಾನ ಎಂದು ವ್ಯಾಖ್ಯಾನಿಸಬಹುದು. ಒಂದು ಕೈಗಾರಿಕಾ ಅಥವಾ ವಾಣಿಜ್ಯ ಸಂಸ್ಥೆಗೆ ಲಾಭ ಹೆಚ್ಚಳ, ಆದಾಯ ವರ್ಧನೆ, ನಿವ್ವಳ ಮೌಲ್ಯದ ಹೆಚ್ಚಳ ಅಥವಾ ಅಂತಹ ಹಲವಾರು ಉದ್ದೇಶಗಳ ಸಂಯೋಜನೆಯೇ ಗುರಿಯಾಗಿರಬಹುದು.

ರಿಸ್ಕ್ ಮ್ಯಾನೇಜ್ಮೆಂಟ್ ಎಂಬುದು ಅನಿರೀಕ್ಷಿತ ಘಟನೆಗಳ ಪರಿಣಾಮವನ್ನು ಕಡಿಮೆ ಮಾಡಲು ಚಟುವಟಿಕೆಗಳು ಮತ್ತು ಸಂಪನ್ಮೂಲಗಳ ಯೋಜನೆ, ವ್ಯವಸ್ಥೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯವಾಗಿದೆ. ಅನಿರೀಕ್ಷಿತ ಅಪಾಯಗಳನ್ನು ಉತ್ಪಾದನಾ ಅಪಾಯಗಳು, ಮಾರ್ಕೆಟಿಂಗ್ ಮತ್ತು ವಿತರಣೆ ಅಪಾಯಗಳು, ಹಣಕಾಸು ಅಪಾಯಗಳು, ಸಿಬ್ಬಂದಿ ಅಪಾಯಗಳು ಮತ್ತು ಪರಿಸರ-ಸಂಬಂಧಿತ ಅಪಾಯಗಳಾಗಿ ವರ್ಗೀಕರಿಸಬಹುದು.

ಅಪಾಯಗಳನ್ನು ನಿರ್ವಹಿಸಲು ಹಲವಾರು ವಿಧಾನಗಳನ್ನು ಬಳಸಲಾಗುತ್ತದೆ.

ತಪ್ಪಿಸುವಿಕೆ – ಇದು ಅಪಾಯಗಳನ್ನು ನಿರ್ವಹಿಸುವ ಅತ್ಯಂತ ತೀವ್ರ ಕ್ರಮ. ಈ ವಿಧಾನದಲ್ಲಿ 'ಅಪಾಯಕಾರಿ' ಎಂದು ಪರಿಗಣಿಸಲಾಗುವ ಕೆಲವು ಚಟುವಟಿಕೆಗಳನ್ನು ಸಂಪೂರ್ಣವಾಗಿ ಕೈಬಿಡಲಾಗುತ್ತದೆ. ಉದಾಹರಣೆಗೆ, ಒಂದು ಫ್ಯಾಕ್ಟರಿಯು ಪ್ರಾಡಕ್ಟ್ ತಯಾರಿಕೆಗೆ ಯಾವುದಾದರೂ ದಹನಕಾರಿ ಪದಾರ್ಥವನ್ನು ಬಳಸಲೇಬೇಕಾದರೆ, ಆ ಪ್ರಾಡಕ್ಟ್‌ನ ಉತ್ಪಾದನೆಯನ್ನು ಕೈಬಿಟ್ಟು, ಬೆಂಕಿಯ ಅಪಾಯವನ್ನು ತಪ್ಪಿಸಲಾಗುತ್ತದೆ.

ಅಪಾಯ ಕಡಿತ – ನಷ್ಟಕ್ಕೆ ಕಾರಣವಾಗುವ ಕಾರ್ಯಗಳ ಸಂಭಾವ್ಯತೆಯನ್ನು ತಗ್ಗಿಸಲು ಅಥವಾ ಸಂಭವನೀಯ ನಷ್ಟಗಳ ಪ್ರಮಾಣವನ್ನು ಕಡಿಮೆ ಮಾಡಲು ಕೈಗೊಳ್ಳಲಾದ ಕ್ರಮಗಳು ಇದರಲ್ಲಿ ಸೇರಿವೆ. ಇದು ಅಪಾಯಗಳ ಕುರಿತಾದ ಅತ್ಯಂತ ಸಕಾರಾತ್ಮಕ ವಿಧಾನವಾಗಿದೆ. ಉದಾಹರಣೆಗೆ, ಒಂದು ಫ್ಯಾಕ್ಟರಿಯು ದಹನಕಾರಿ ಪೇಂಟ್‌ಗಳು ಮತ್ತು ಥಿನ್ನರ್‌ಗಳನ್ನು ಬಳಸುವ ಸ್ಪ್ರೇ ಪೇಂಟಿಂಗ್ ವಿಭಾಗವನ್ನು ಹೊಂದಿದ್ದರೆ, ಅದು ಪೇಂಟಿಂಗ್ ಬದಲು ಪೌಡರ್ ಕೋಟಿಂಗ್‌ ಮಾಡುವತ್ತ ಗಮನ ಹರಿಸಬಹುದು.

ರಿಸ್ಕ್ ರಿಟೆನ್ಶನ್ – ಅಪಾಯಗಳನ್ನು ಗುರುತಿಸಿದ ನಂತರ ಮತ್ತು ಸಂಭಾವ್ಯ ಘಟನೆಗಳ ವೆಚ್ಚಗಳನ್ನು ಖಚಿತಪಡಿಸಿದ ನಂತರ, ಅಂತಹ ಅಪಾಯಗಳನ್ನು ಹೇಗೆ ಎದುರಿಸಬೇಕು ಎಂಬುದು ಮುಂದಿನ ಹಂತವಾಗಿದೆ. ಅದಕ್ಕಿರುವ ಒಂದು ಆಯ್ಕೆಯೆಂದರೆ, ಅಪಾಯವನ್ನು ತಾವೇ ಹಿಡಿದಿಟ್ಟುಕೊಳ್ಳುವುದು. ಅಂದರೆ ಅಪಾಯ ಸಂಭವಿಸಿದಾಗ ಅದನ್ನು ಸ್ವಂತ ಸಂಪನ್ಮೂಲಗಳಿಂದ ನಿವಾರಿಸುವುದು. ಸಣ್ಣದಾದ, ನಿಖರವಾಗಿ ಅಳೆಯಬಹುದಾದ ಹಾಗೂ ಬಿಸಿನೆಸ್‌ಗೆ ಯಾವುದೇ ಗಣನೀಯ ಅಡೆತಡೆಯೊಡ್ಡದ ಅಪಾಯಗಳ ವಿಷಯದಲ್ಲಿ ಈ ಕ್ರಮವನ್ನು ಅನುಸರಿಸಬಹುದು.

ವರ್ಗಾವಣೆ – ಅಪಾಯವನ್ನು ಕಡಿಮೆ ಮಾಡುವ ಒಂದು ಪರ್ಯಾಯ ಮಾರ್ಗವೆಂದರೆ, ಅಪಾಯಕಾರಿ ಚಟುವಟಿಕೆಗಳನ್ನು ತಾವೇ ಮಾಡುವ ಬದಲು ಬೇರೊಬ್ಬರಿಗೆ ವರ್ಗಾವಣೆ ಮಾಡುವುದು. ಉದಾಹರಣೆಗೆ, ದಹನಕಾರಿ ವಸ್ತುಗಳ ಬಳಕೆಯನ್ನು ಒಳಗೊಂಡಿರುವ ಚಟುವಟಿಕೆಗಳನ್ನು ಥರ್ಡ್ ಪಾರ್ಟಿಗಳಿಗೆ ಗುತ್ತಿಗೆ ನೀಡುವುದು. ಆದರೆ, ಅಪಾಯದ ವರ್ಗಾವಣೆಯ ಅತ್ಯಂತ ಪ್ರಮುಖ ಮತ್ತು ಪ್ರಾಯೋಗಿಕ ಕ್ರಮವೆಂದರೆ 'ಇನ್ಶೂರೆನ್ಸ್'. ಈ ಕ್ರಮದಲ್ಲಿ, ನಾನ್-ಲೈಫ್‌ ಇನ್ಶೂರರ್‌ನಂತಹ ವೃತ್ತಿಪರ ಅಪಾಯ ನಿರ್ವಾಹಕರಿಗೆ ಪ್ರೀಮಿಯಂ ಎಂಬ ಪ್ರತಿಫಲ ನೀಡುವ ಮೂಲಕ ರೆಸಿಡ್ಯುಯಲ್ ರಿಸ್ಕ್ ಅನ್ನು ನಿರ್ವಹಿಸುವಂತೆ ಕೋರಲಾಗುತ್ತದೆ

ಎಚ್‌ಡಿಎಫ್‌ಸಿ ಎರ್ಗೋದಲ್ಲಿ, ನಮ್ಮ ಅಂಡರ್‌ರೈಟರ್‌ಗಳು ಪ್ರಾಥಮಿಕವಾಗಿ "ರಿಸ್ಕ್ ಟ್ರಾನ್ಸ್‌ಫರ್" ಮೇಲೆ ಗಮನ ಹರಿಸಿದರೆ, ನಮ್ಮ ಇಂಜಿನಿಯರ್‌ಗಳು ರಿಸ್ಕ್ ಕನ್ಸಲ್ಟಿಂಗ್ ಸೇವೆಗಳೊಂದಿಗೆ "ರಿಸ್ಕ್ ರಿಡಕ್ಷನ್" ಮೂಲಕ ನಮ್ಮ ರಿಸ್ಕ್ ಟ್ರಾನ್ಸ್‌ಫರ್ ಸೇವೆಗಳನ್ನು ಒದಗಿಸುತ್ತಾರೆ - ಅಂದರೆ, ರಿಸ್ಕ್ ಟ್ರಾನ್ಸ್‌ಫರ್ ಅಥವಾ ಇನ್ಶೂರೆನ್ಸ್ ಪ್ರೀಮಿಯಂನ ವೆಚ್ಚಗಳನ್ನು ಗುರುತಿಸಲು, ಪ್ರಮಾಣೀಕರಿಸಲು ಮತ್ತು ಕಡಿಮೆ ಮಾಡಲು ಸಲಹಾ ಸೇವೆಗಳನ್ನು ಒದಗಿಸುತ್ತಾರೆ.

ಮುನ್ನೆಚ್ಚರಿಕೆ ಕ್ರಮಗಳನ್ನು ಶಿಫಾರಸು ಮಾಡುವಾಗ, ನಾವು ಗ್ರಾಹಕರ ಪ್ರಾಯೋಗಿಕ ಮತ್ತು ಹಣಕಾಸು ಮಿತಿಗಳನ್ನು ಗಮನದಲ್ಲಿ ಇಟ್ಟುಕೊಳ್ಳುತ್ತೇವೆ. ನಮ್ಮ ಶಿಫಾರಸುಗಳು ಒಣ ಸಿದ್ಧಾಂತಕ್ಕೇ ಸೀಮಿತವಾಗಿ ಇರುವುದಿಲ್ಲ. ಶಿಫಾರಸುಗಳನ್ನು ಜಾರಿಗೊಳಿಸುವುದರ ಬಗ್ಗೆ ಜಾಣ್ಮೆಯ ನಿರ್ಧಾರ ತೆಗೆದುಕೊಳ್ಳಲು, ನಾವು ಗ್ರಾಹಕರಿಗೆ ಆ ಶಿಫಾರಸುಗಳ ಕಾಸ್ಟ್-ಬೆನೆಫಿಟ್ ವಿಶ್ಲೇಷಣೆಯನ್ನು ತಪ್ಪದೇ ಒದಗಿಸುತ್ತೇವೆ.



ರಿಸ್ಕ್ ಕನ್ಸಲ್ಟಿಂಗ್ ಸೇವೆಗಳು

ನಾವು ಭಾರತದ ಹಲವಾರು ಸ್ಥಳಗಳಲ್ಲಿ ವಿವಿಧ ಎಂಜಿನಿಯರಿಂಗ್ ವಿಭಾಗಗಳಲ್ಲಿ ಪರಿಣಿತರಾದ ಸಮರ್ಪಿತ ರಿಸ್ಕ್ ಎಂಜಿನಿಯರ್‌ಗಳನ್ನು ಹೊಂದಿದ್ದೇವೆ. ನಮ್ಮ ರಿಸ್ಕ್ ಎಂಜಿನಿಯರ್‌ಗಳು ಹಲವಾರು ಬಿಸಿನೆಸ್‌ಗಳಲ್ಲಿ ವ್ಯಾಪಕ ಅನುಭವ ಹೊಂದಿದ್ದಾರೆ ಹಾಗೂ ಭಾರತೀಯ ಮತ್ತು ವಿದೇಶಿ ಸಂಸ್ಥೆಗಳಿಂದ ಅತ್ಯಾಧುನಿಕ ರಿಸ್ಕ್ ಮ್ಯಾನೇಜ್ಮೆಂಟ್ ತಂತ್ರಗಳಲ್ಲಿ ತರಬೇತಿ ಪಡೆದಿದ್ದಾರೆ

ಭಾರತದಲ್ಲಿ ಉಪಸ್ಥಿತಿ ಇಲ್ಲದ ಕೆಲವು ಜಾಗತಿಕ ಜನರಲ್ ಇನ್ಶೂರೆನ್ಸ್ ಕಂಪನಿಗಳು ತಮ್ಮ ಭಾರತೀಯ ಕ್ಲೈಂಟ್‌ಗಳಿಗೆ ರಿಸ್ಕ್ ಇಂಜಿನಿಯರಿಂಗ್ ಸೇವೆಗಳನ್ನು ಒದಗಿಸಲು ನಮ್ಮೊಂದಿಗೆ ಕೈಜೋಡಿಸಿದ್ದಾರೆ

ಜನರಲ್ ಇನ್ಶೂರೆನ್ಸ್ ಕಂಪನಿಗಳುಭಾರತದಲ್ಲಿ ಉಪಸ್ಥಿತಿ ಇಲ್ಲದ ಜನರಲ್ ಇನ್ಶೂರೆನ್ಸ್ ಕಂಪನಿಗಳು ತಮ್ಮ ಭಾರತೀಯ ಕ್ಲೈಂಟ್‌ಗಳಿಗೆ ರಿಸ್ಕ್ ಎಂಜಿನಿಯರಿಂಗ್ ಸೇವೆ ಒದಗಿಸಲು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ನಮ್ಮ ರಿಸ್ಕ್ ಎಂಜಿನಿಯರಿಂಗ್ ಸೇವೆಗಳು ನ್ಯಾಷನಲ್ ಫೈರ್ ಪ್ರೊಟೆಕ್ಷನ್ ಅಸೋಸಿಯೇಷನ್ (US), ಫೈರ್ ಪ್ರೊಟೆಕ್ಷನ್ ಅಸೋಸಿಯೇಷನ್ (UK), ಟ್ಯಾರಿಫ್ ಅಡ್ವೈಸರಿ ಕಮಿಟಿ (TAC), ಆಯಿಲ್ ಇಂಡಸ್ಟ್ರಿ ಸೇಫ್ಟಿ ಡೈರೆಕ್ಟರೇಟ್ (OISD), ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (BIS) ಮುಂತಾದ ಮಾನಕ ಸಂಸ್ಥೆಗಳ ಮಾನದಂಡಗಳನ್ನು ಅನುಸರಿಸುತ್ತವೆ.

 

ನಾವು ಈ ಕೆಳಕಂಡ ವ್ಯಾಪಕ ಕೈಗಾರಿಕಾ ವಲಯಗಳಲ್ಲಿ ಕೆಲಸ ಮಾಡುತ್ತಿದ್ದೇವೆ:
  • ಆಟೋಮೊಬೈಲ್ ಮತ್ತು ಪೂರಕಗಳ ಉದ್ಯಮ
  • ಇಂಜಿನಿಯರಿಂಗ್ ಸರಕುಗಳು
  • BPO / IT ಉದ್ಯಮ / ಕಾಲ್ ಸೆಂಟರ್‌ಗಳು
  • ಸಿಮೆಂಟ್
  • ರಾಸಾಯನಿಕ
  • ಪೆಟ್ರೋಕೆಮಿಕಲ್ಸ್
  • ಉಕ್ಕು ಮತ್ತು ಸಂಬಂಧಿತ ಕೈಗಾರಿಕೆಗಳು
  • ಫಾರ್ಮಾಸ್ಯುಟಿಕಲ್ಸ್
  • ಪಾನೀಯಗಳು
  • ಆಹಾರ ಸಂಸ್ಕರಣೆ
  • ಟೆಕ್ಸ್‌ಟೈಲ್‌
  • ಕಾಗದ
  • ಪವರ್ ಪ್ಲಾಂಟ್‌
  • ಸಕ್ಕರೆ ಕಾರ್ಖಾನೆ
ನಮ್ಮ ಸೇವೆಗಳು ಪರಸ್ಪರ ಸಂಪರ್ಕವನ್ನು ಆಧರಿಸಿವೆ - ಸಂಪೂರ್ಣ ವ್ಯಾಪ್ತಿಯ ಕವರೇಜ್‌ಗಾಗಿ ನಾವು ನಮ್ಮ ಕ್ಲೈಂಟ್‌ಗಳ ಎಂಜಿನಿಯರ್‌ಗಳು, ಸುರಕ್ಷತಾ ಅಧಿಕಾರಿಗಳು ಮತ್ತು ಹಣಕಾಸು/ಅಕೌಂಟ್‌ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ:
  • ಸ್ಥಳ ಭೇಟಿ.
  • ಆನ್‌-ಸೈಟ್ ತಂಡದ ಜೊತೆ ಮಾತುಕತೆ
  • ಮಾಹಿತಿ ಸಂಗ್ರಹಣೆ
  • ಆನ್‌-ಫೀಲ್ಡ್ ಶಿಫಾರಸುಗಳು ಮತ್ತು ಚರ್ಚೆಗಳು
  • ಒಂದೇ ಅಭಿಪ್ರಾಯಕ್ಕೆ ಬರುವುದು
  • 'ರಿಸ್ಕ್ ಸರ್ವೇ ರಿಪೋರ್ಟ್' (RSR) ರೂಪದಲ್ಲಿ ಕ್ಲೈಂಟ್‌ಗೆ ಶಿಫಾರಸುಗಳನ್ನು ಸಲ್ಲಿಸುವುದು
  • ಕ್ಲೈಂಟ್‌ ಕಡೆಯಿಂದ ವರದಿಯ ಕುರಿತ ಅನಿಸಿಕೆ
  • ಕ್ಲೈಂಟ್ ಅನಿಸಿಕೆಯ ಆಧಾರದ ಮೇಲೆ ಸ್ವಯಂ ಮೌಲ್ಯಮಾಪನ
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.

ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x