
- ನನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ನಾನು ಶಿಫಾರಸು ಮಾಡುತ್ತೇನೆ, ನಿಮ್ಮ ಸೇವೆಯು ಉತ್ತಮ ಮತ್ತು ನಿಖರವಾಗಿದೆ, ಗ್ರಾಹಕ ಬೆಂಬಲವು ಚೆನ್ನಾಗಿದೆ.
1.3 ಕೋಟಿಗಿಂತ ಹೆಚ್ಚಿನ ಸಂತೃಪ್ತ ಗ್ರಾಹಕರು ಎಚ್‌ಡಿಎಫ್‌ಸಿ ಎರ್ಗೋ ಮೇಲೆ ನಂಬಿಕೆ ಇಟ್ಟಿದ್ದಾರೆ
ಕೊರೋನಾ ಕವಚ್ ಪಾಲಿಸಿ ಅಡಿಯಲ್ಲಿ ನಾವು ಹೋಮ್ ಕೇರ್ ವೆಚ್ಚಗಳನ್ನು ಕವರ್ ಮಾಡುತ್ತೇವೆ. ವಿಮಾದಾರರು COVID-19 ಪಾಸಿಟಿವ್ ಆದ ಸಂದರ್ಭದಲ್ಲಿ ಮನೆಯಲ್ಲಿಯೇ ಚಿಕಿತ್ಸೆ ತೆಗೆದುಕೊಳ್ಳುವಾಗ ಇದನ್ನು ಪಾವತಿಸಲಾಗುತ್ತದೆ.
ಆಸ್ಪತ್ರೆ ದಾಖಲಾತಿಯ ಮೊದಲು ಮತ್ತು ನಂತರದ ವೆಚ್ಚಗಳು, ಅಂದರೆ ಆಸ್ಪತ್ರೆಗೆ ದಾಖಲಾಗುವ 15 ದಿನಗಳ ಮೊದಲು ಮತ್ತು ಡಿಸ್ಚಾರ್ಜ್ ನಂತರದ 30 ದಿನಗಳವರೆಗಿನ ವೆಚ್ಚಗಳನ್ನು ಮರುಪಾವತಿಸಲಾಗುತ್ತದೆ. ಹೋಮ್‌ಕೇರ್ ಚಿಕಿತ್ಸೆಯ ಸಮಯದಲ್ಲಿ ಉಂಟಾದ ವೈದ್ಯಕೀಯ ವೆಚ್ಚಗಳನ್ನು 14 ದಿನಗಳವರೆಗೆ ಕವರ್ ಮಾಡಲಾಗುತ್ತದೆ.
10,000 ಕ್ಕಿಂತ ಹೆಚ್ಚಿನ ನಗದುರಹಿತ ನೆಟ್ವರ್ಕ್ ಆಸ್ಪತ್ರೆಗಳೊಂದಿಗೆ, ನಿಮ್ಮ ಸಮೀಪದಲ್ಲೇ ಅತ್ಯುತ್ತಮ ಚಿಕಿತ್ಸೆಯನ್ನು ಕಂಡುಕೊಳ್ಳುವುದು ಬಹಳ ಸುಲಭವಾಗಿದೆ.
ಪ್ರತಿ ನಿಮಿಷಕ್ಕೆ 1 ಕ್ಲೈಮ್ ಸೆಟಲ್ ಮಾಡಲಾಗಿದೆ.
ಈ ಸಮಯದಲ್ಲಿ ವೈದ್ಯರನ್ನು ಭೇಟಿ ಮಾಡುವುದಕ್ಕಾಗಿಯೂ ಮನೆಯಿಂದ ಹೊರಗೆ ಹೋಗಲು ಆತಂಕವೇ? ಈ ಪ್ಯಾಂಡೆಮಿಕ್ ಸಮಯದಲ್ಲಿ ಎಚ್‌ಡಿಎಫ್‌ಸಿ ಎರ್ಗೋ ಇನ್ಶೂರೆನ್ಸ್ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಂ.ಬಿ.ಬಿ.ಎಸ್ ಸಾಮಾನ್ಯ ವೈದ್ಯರಿಂದ ಉಚಿತವಾಗಿ, ಎಲ್ಲಿಯಾದರೂ, ಯಾವಾಗಲಾದರೂ, ಎಷ್ಟು ಬಾರಿ ಬೇಕಾದರೂ ನಿಮಗೆ ಬೇಕಾದ ವೈದ್ಯಕೀಯ ಸಲಹೆ ಪಡೆಯಿರಿ. ನಮ್ಮ ಟೆಲಿಕ್ಲಿನಿಕ್ ಸೇವೆಗಳು ಎಲ್ಲಾ ರೀತಿಯ ಕಾಯಿಲೆ ಮತ್ತು ದೈಹಿಕ ಅಸ್ವಸ್ಥತೆಗೆ ವೈದ್ಯಕೀಯ ಸಲಹೆಗಳನ್ನು ಒದಗಿಸುತ್ತವೆ. ಅತಿಯಾದ ತಲೆನೋವಿನಿಂದ ಹಿಡಿದು ಯಾತನೆ ಕೊಡುವ ಹಲ್ಲುನೋವಿನವರೆಗೆ , ನಿಮ್ಮ ಎಲ್ಲ ತೊಂದರೆಗಳಿಗೆ ಈ ಕಷ್ಟದ ಸಮಯದಲ್ಲಿ ನಮ್ಮ ವೈದ್ಯರು ಸ್ಪಂದಿಸಿ ಸಲಹೆ ನೀಡುತ್ತಾರೆ. ಈ ಸಮಯದಲ್ಲಿ ನೆರವಾಗಲು, ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಈ ವಿಚಾರವನ್ನು ಮುಕ್ತವಾಗಿ ಹಂಚಿಕೊಳ್ಳಿ! ಈಗಿನ ಪ್ಯಾಂಡೆಮಿಕ್ ಸಮಯದಲ್ಲಿ ಅವರಿಗೆ ಇದು ಅಗತ್ಯವಿರಬಹುದು.
ನೀವು ಈಗಾಗಲೇ ಎಚ್‌ಡಿಎಫ್‌ಸಿ ಎರ್ಗೋದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಹೊಂದಿದ್ದರೆ, ಕೊರೋನಾವೈರಸ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗುವ ವೆಚ್ಚದ ಬಗ್ಗೆ ನಿಶ್ಚಿಂತರಾಗಿರಿ, ಅದನ್ನು ನಾವು ಕವರ್ ಮಾಡುತ್ತೇವೆ.
ಗಮನಿಸಿ: ಅಪಘಾತದ ಹೊರತಾಗಿ ಆಸ್ಪತ್ರೆ ದಾಖಲಾತಿಯ ವೆಚ್ಚವನ್ನು ಕ್ಲೈಮ್ ಮಾಡಲು ಎಚ್‌ಡಿಎಫ್‌ಸಿ ಎರ್ಗೋದ ಪ್ರತಿ ಪಾಲಿಸಿಯಲ್ಲಿ ಒಂದು ತಿಂಗಳ ನಿರೀಕ್ಷಣಾ ಅವಧಿ ಇರುತ್ತದೆ. ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳ ವಿವರವಾದ ಪಟ್ಟಿಗಾಗಿ ದಯವಿಟ್ಟು ನಿಮ್ಮ ಪಾಲಿಸಿ ನಿಯಮಾವಳಿಗಳು, ಕರಪತ್ರವನ್ನು ನೋಡಿ. ಮೇಲಿನ ಮಾಹಿತಿಯು ವಿವರಣೆಗಾಗಿ ಮಾತ್ರ.