ಅಲ್ಜೈಮರ್ ರೋಗಕ್ಕಾಗಿ ಗಂಭೀರ ಅನಾರೋಗ್ಯ ಇನ್ಶೂರೆನ್ಸ್
ಭಾರತದಲ್ಲಿ, 4 ಮಿಲಿಯನ್‌ಗಿಂತ ಹೆಚ್ಚು ಜನರು ಒಂದಲ್ಲಾ ಒಂದು ವಿಧದ ಅಲ್‍ಜೈಮರ್ ರೋಗವನ್ನು ಹೊಂದಿದ್ದಾರೆ. ಆದಾಗ್ಯೂ, ಹೆಚ್ಚಿನ ಜನ ಕಲ್ಪಿಸಿದಂತೆ, ಈ ರೋಗವು ಕೇವಲ ವಯಸ್ಸಾದವರಿಗೆ ಮಾತ್ರ ಬರುವುದಲ್ಲ, ಏಕೆಂದರೆ 65 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಕೂಡ ರೋಗದಿಂದ ಬಳಲುತ್ತಿದ್ದಾರೆ (ಅಲ್‍ಜೈಮರ್ಸ್ ಆರ್ಗನೈಸೇಶನ್ ಆಫ್ ಇಂಡಿಯಾ). ಇದು ಮರೆವಿನ ಕಾಯಿಲೆಗೆ ಕಾರಣವಾಗುವ ಸಾಮಾನ್ಯ ರೀತಿಯ ಡಿಮೆನ್ಶಿಯಾ ಅಂದರೆ ಬುದ್ದಿಮಾಂದ್ಯತೆಯಾಗಿದೆ. ಇದು ಹಂತ ಹಂತವಾಗಿ ಬೆಳೆಯುತ್ತದೆ ಮತ್ತು ಡಿಮೆನ್ಶಿಯಾದ ಲಕ್ಷಣಗಳು ಸಮಯದೊಂದಿಗೆ ಉಲ್ಬಣಗೊಳ್ಳಬಹುದು. ಆರಂಭಿಕ ಹಂತಗಳಲ್ಲಿ, ರೋಗಿಯು ಮಾತನಾಡುವ ತೊಂದರೆಗಳನ್ನು ಎದುರಿಸಬಹುದು ಅಥವಾ ಪರಿಸರಕ್ಕೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಬಹುದು; ಆದಾಗ್ಯೂ ಮುಂದಿನ ಹಂತದಲ್ಲಿ ಅದು ಸಾವಿಗೆ ಕಾರಣವಾಗಬಹುದು. ಅಲ್‍ಜೈಮರ್ ರೋಗಕ್ಕೆ ಚಿಕಿತ್ಸೆ ನೀಡಲು ನಿರ್ದಿಷ್ಟ ಚಿಕಿತ್ಸೆ ಇರದಿದ್ದರೂ, ಇಂದು ವೈದ್ಯಕೀಯ ವಿಜ್ಞಾನದ ಪ್ರಗತಿಯಿಂದಾಗಿ ಡಿಮೆನ್ಶಿಯಾಗೆ ಚಿಕಿತ್ಸೆ ನೀಡಲು ಹಲವಾರು ಪ್ರಯತ್ನಗಳನ್ನು ಮಾಡಿ ಉತ್ತಮ ಮಾರ್ಗಗಳನ್ನು ಕಂಡುಹಿಡಿಯಬಹುದು. ಈ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗೆ ಉತ್ತಮ ಜೀವನವನ್ನು ನೀಡುವ ಏಕೈಕ ಮಾರ್ಗವೆಂದರೆ, ವೃತ್ತಿಪರವಾಗಿ ತರಬೇತಿ ಪಡೆದ ಆರೈಕೆದಾರರು ಮತ್ತು ವೈದ್ಯರ ನೆರವಿನಿಂದ ಸಾಕಷ್ಟು ಕಾಳಜಿ ವಹಿಸುವುದು.
ಅಲ್‍ಜೈಮರ್ ಕ್ರಮೇಣ ಬೆಳೆಯುವ, ದೀರ್ಘಕಾಲದ ಮತ್ತು ಶಕ್ತಿ ಉದುಗಿಸುವ ರೋಗವಾಗಿದ್ದು, ಅದು ರೋಗಿಯ ಮೇಲೆ ಮಾತ್ರವಲ್ಲದೆ ಆರ್ಥಿಕ ಮತ್ತು ಭಾವನಾತ್ಮಕವಾಗಿ ಕುಟುಂಬದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಮೆದುಳಿನ ರೋಗದೊಂದಿಗೆ ಹೋರಾಡುವುದು ಸುಲಭವಲ್ಲ. ಹಾಗೂ, ಹಣಕಾಸು ನಿರ್ವಹಣೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಬದಲು ಅಂತಹ ಸಮಯದಲ್ಲಿ ನಿಮ್ಮ ಕುಟುಂಬವು ನಿಮಗಾಗಿ ಒಟ್ಟಿಗೆ ನಿಲ್ಲಬೇಕೆಂದು ನೀವು ಬಯಸುತ್ತೀರಿ. ಆದ್ದರಿಂದ, ಅಲ್‍ಜೈಮರ್ ರೋಗಕ್ಕೆ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುವ ಗಂಭೀರ ಅನಾರೋಗ್ಯ ಹೆಲ್ತ್ ಪ್ಲಾನ್ ಆಯ್ಕೆ ಮಾಡುವಂತೆ ಸಲಹೆ ನೀಡಲಾಗುತ್ತದೆ.
ಅರಿವಿನ ನಷ್ಟವನ್ನು ಹೊರತುಪಡಿಸಿ ಅಲ್‍ಜೈಮರ್ ರೋಗದ ಕೆಲವು ಸಾಮಾನ್ಯ ಲಕ್ಷಣಗಳು:
- ಸಮಸ್ಯೆ ಪರಿಹರಿಸುವಲ್ಲಿ ತೊಂದರೆ
- ಕೆಲಸ ಪೂರ್ಣಗೊಳಿಸುವಲ್ಲಿ ತೊಂದರೆ
- ಮನಃಸ್ಥಿತಿ ಮತ್ತು ವ್ಯಕ್ತಿತ್ವದಲ್ಲಿ ಬದಲಾವಣೆ
- ಸ್ನೇಹಿತರು ಮತ್ತು ಕುಟುಂಬದಿಂದ ಹಠಾತ್ ಹಿಂದುಳಿಯುವುದು
- ಬರೆಯಲು ಮತ್ತು ಮಾತನಾಡಲು ಎರಡೂ ಸಂವಹನದಲ್ಲೂ ಸಮಸ್ಯೆಗಳು
ನಷ್ಟ ಪರಿಹಾರಕ್ಕೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಹೊಂದಿದ್ದರೂ ಸಹ, ಎಚ್‌ಡಿಎಫ್‌ಸಿ ಎರ್ಗೋ ಗಂಭೀರ ಅನಾರೋಗ್ಯ ಇನ್ಶೂರೆನ್ಸ್ ಪಾಲಿಸಿ ಆಯ್ಕೆ ಮಾಡುವುದು ಏಕೆ ಮುಖ್ಯವಾಗಿದೆ?
ಸಾಮಾನ್ಯ ನಷ್ಟ ಪರಿಹಾರದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳಂತಲ್ಲದೆ, ಗಂಭೀರ ಅನಾರೋಗ್ಯ ಪಾಲಿಸಿಯು ಪ್ರಯೋಜನಕಾರಿ ಯೋಜನೆಯಾಗಿದೆ. ಪಾಲಿಸಿ ಕವರ್ ಮಾಡುವ ಗಂಭೀರ ಕಾಯಿಲೆಗಳಲ್ಲಿ ಯಾವುದಾದಾರೂ ಇರುವುದು ಖಚಿತವಾದರೆ, ತಕ್ಷಣವೇ ಒಟ್ಟು ಮೊತ್ತವನ್ನು (ವಿಮಾ ಮೊತ್ತ) ಪಾವತಿಸಲಾಗುತ್ತದೆ. ನಿಮ್ಮ ಡಾಕ್ಟರ್ ನಿರ್ದಿಷ್ಟ ಚಿಕಿತ್ಸಾ ವಿಧಾನವನ್ನು ಶಿಫಾರಸು ಮಾಡಿದಲ್ಲಿ, ಎಚ್‌ಡಿಎಫ್‌ಸಿ ಎರ್ಗೋದ ಕ್ರಿಟಿಕಲ್ ಇಲ್‌ನೆಸ್ ಪ್ಲಾನ್, ಚಿಕಿತ್ಸೆ, ಆರೈಕೆ ಮತ್ತು ಆರೋಗ್ಯ ಸುಧಾರಣೆಯ ವೆಚ್ಚವನ್ನು ಪಾವತಿಸಲು ಬೇಕಾದ ಒಟ್ಟು ಮೊತ್ತವನ್ನು ನಿಮಗೆ ಒಂದೇ ಬಾರಿಗೆ ನೀಡುತ್ತದೆ. ಈ ಹಣವನ್ನು ಸಾಲ ತೀರಿಸಲು, ನಿಂತಿರುವ ಆದಾಯಕ್ಕೆ ಪರ್ಯಾಯವಾಗಿ ಅಥವಾ ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳಲು ಬೇಕಾದ ಖರ್ಚುಗಳಿಗೂ ಉಪಯೋಗಕ್ಕೆ ಬರುತ್ತದೆ. ಗಂಭೀರ ಕಾಯಿಲೆಗೆ ಚಿಕಿತ್ಸೆ ಪಡೆಯುವುದರಿಂದ, ನಿಮ್ಮ ಉಳಿತಾಯ ಮಾಡಿಟ್ಟ ಹಣ ಖಾಲಿಯಾಗಬಹುದು, ನೀವು ಕೆಲಸ ಮಾಡಿ ಹಣ ಗಳಿಸುವ ಸಾಮರ್ಥ್ಯ ಕುಗ್ಗಬಹುದು ಹಾಗೂ ನಿಮ್ಮ ಎಂದಿನ ದಿನಚರಿಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ಈ ಕಠಿಣ ಸಮಯದಲ್ಲಿ, ನೀವು ಆಯ್ಕೆ ಮಾಡಿದ ಕವರ್ ಮೊತ್ತದಷ್ಟು ಒಟ್ಟು ಮೊತ್ತವನ್ನು ಒಂದೇ ಬಾರಿಗೆ ಪಡೆಯುವುದು ಸೂಕ್ತ. ನಿಮ್ಮ ಈಗಿನ ಹೆಲ್ತ್ ಕವರ್ ಅಥವಾ ಎಂಪ್ಲಾಯೀ ಹೆಲ್ತ್ ಇನ್ಶೂರೆನ್ಸ್ ನಿಮ್ಮ ವೈದ್ಯಕೀಯ ವೆಚ್ಚವನ್ನು ನಿರ್ದಿಷ್ಟ ಮೊತ್ತದವರೆಗೆ ಮಾತ್ರ ಕವರ್ ಮಾಡಬಹುದು. ಆದರೆ, ಮೊದಲ ಡಯಾಗ್ನಸಿಸ್ ಅಥವಾ ವೈದ್ಯರ ಸಲಹೆಯ ನಂತರ, ಕ್ರಿಟಿಕಲ್ ಇಲ್‌ನೆಸ್ ಕವರ್, ನಿಮಗೆ ಒಮ್ಮೆಗೇ ಒಟ್ಟು ಮೊತ್ತದ ಪ್ರಯೋಜನವನ್ನು ನೀಡುತ್ತದೆ.
ಅಲ್‍ಜೈಮರ್ ರೋಗಕ್ಕಾಗಿ ಎಚ್‌ಡಿಎಫ್‌ಸಿ ಎರ್ಗೋದ ಗಂಭೀರ ಅನಾರೋಗ್ಯ ಪ್ಲಾನ್ ಏಕೆ ಆಯ್ಕೆ ಮಾಡಿಕೊಳ್ಳಬೇಕು?
ನೀವು ನಿಮ್ಮ ಆರೋಗ್ಯದ ಮೇಲೆ ಗಮನಹರಿಸಿ, ಎಚ್‌ಡಿಎಫ್‌ಸಿ ಎರ್ಗೋದ ಗಂಭೀರ ಅನಾರೋಗ್ಯ ಕವರ್ ಹಣ ಒದಗಿಸುತ್ತದೆ. ಇದಲ್ಲದೆ, ನೀವು ಚಿಕಿತ್ಸೆಯನ್ನು ಪಡೆಯುವಲ್ಲಿ ಮಗ್ನರಾಗಿ, ಆದಾಯದ ನಷ್ಟವನ್ನು ಹೊಂದಿದ್ದರೆ, ವಿಮಾದಾತರು ನಿಮ್ಮ ಕುಟುಂಬಕ್ಕೆ ಹಣಕಾಸಿನ ಬೆಂಬಲವನ್ನು ಒದಗಿಸುತ್ತಾರೆ. 30 ದಿನಗಳ ಅಸ್ತಿತ್ವದಲ್ಲಿರುವ ಅವಧಿಯ ನಂತರ ಮೊದಲ ಡಯಾಗ್ನಸಿಸ್‌ಗೆ ಒಂದೇ ವಹಿವಾಟಿನಲ್ಲಿ ಒಟ್ಟು ಮೊತ್ತವನ್ನು ಪಾವತಿಸಲಾಗುತ್ತದೆ. ಆರೈಕೆ ಮತ್ತು ಚಿಕಿತ್ಸೆ, ಚೇತರಿಕೆಯ ನೆರವು, ಸಾಲಗಳನ್ನು ಪಾವತಿಸುವುದು ಅಥವಾ ಗಳಿಸುವ ಸಾಮರ್ಥ್ಯ ಕಡಿಮೆಯಾಗುವುದರಿಂದ ಯಾವುದೇ ಕ್ಷೀಣಿಸುತ್ತಿರುವ ಆದಾಯ ತುಂಬಲು ಈ ಒಟ್ಟು ಮೊತ್ತವನ್ನು ಬಳಸಬಹುದು. ಇದಲ್ಲದೆ, ಗಂಭೀರ ಅನಾರೋಗ್ಯದ ಹೆಲ್ತ್ ಕವರ್ ಆಯ್ಕೆ ಮಾಡುವ ಮೂಲಕ, ನೀವು ಸೆಕ್ಷನ್ 80D ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಕೂಡ ಆನಂದಿಸಬಹುದು.