ಪಾರ್ಕಿನ್ಸನ್ ರೋಗಕ್ಕಾಗಿ ಗಂಭೀರ ಅನಾರೋಗ್ಯ ಇನ್ಶೂರೆನ್ಸ್
ಪಾರ್ಕಿನ್ಸನ್ ರೋಗವು ಹಂತ ಹಂತವಾಗಿ ಬೆಳೆಯುವ ನರಮಂಡಲದ ಅಸ್ವಸ್ಥತೆಯಾಗಿದ್ದು, ಅದು ಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಪಾರ್ಕಿನ್ಸನ್ ರೋಗವು ಸಾಮಾನ್ಯವಾಗಿ ಬರುವ ಎರಡನೇ ನ್ಯೂರೋ ಡಿಜನರೇಟಿವ್ ಡಿಸಾರ್ಡರ್ ಆಗಿದ್ದು, ಇದು ಸಬ್‌ಸ್ಟಾಂಟಿಯಾ ನಿಗ್ರಾ ಎಂಬ ಮೆದುಳಿನ ನಿರ್ದಿಷ್ಟ ಜಾಗದಲ್ಲಿ ಡೊಪಾಮೈನ್-ಉತ್ಪಾದನಾ ("ಡೋಪಾಮಿನರ್ಜಿಕ್") ನ್ಯೂರಾನ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಸರಳವಾಗಿ ಹೇಳುವುದಾದರೆ, ಮೆದುಳಿನಲ್ಲಿ ಡೋಪಾಮೈನ್ (ಡೊಪಾಮೈನ್ ಎನ್ನುವುದು ಇತರ ನರ ಕೋಶಗಳಿಗೆ ಸಂಕೇತಗಳನ್ನು ಕಳುಹಿಸಲು ನರ ಕೋಶಗಳಿಂದ ಬಿಡುಗಡೆಯಾಗುವ ನ್ಯೂರೋಟ್ರಾನ್ಸ್‌ಮಿಟರ್ (ರಾಸಾಯನಿಕ)) ಉತ್ಪಾದಿಸುವ ನರ ಕೋಶಗಳ ಅಂದರೆ ನರ್ವ್ ಸೆಲ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಈ ರೋಗವು ಯಾವುದೇ ಕಾರಣವಿಲ್ಲದೆ ಸಂಭವಿಸಬಹುದು, ಅಂದರೆ, ಇಡಿಯೋಪತಿಕ್ (ಯಾವುದೇ ಸ್ಪಷ್ಟ ಕಾರಣವಿಲ್ಲದೆ). ಪಾರ್ಕಿನ್ಸನ್ ರೋಗವು ಸ್ನಾಯು ಕಠಿಣತೆ, ನಡುಕ ಮತ್ತು ಮಾತಿನಲ್ಲಿ ಜೊತೆಗೆ ನಡೆಯುವ ರೀತಿಯಲ್ಲಿ ಬದಲಾವಣೆಗಳು ಇನ್ನೂ ಅನೇಕ ಲಕ್ಷಣಗಳನ್ನು ತೋರಿಸುತ್ತದೆ. ಡಯಾಗ್ನಸಿಸ್ ನಂತರದ ಚಿಕಿತ್ಸೆಗಳು ರೋಗಲಕ್ಷಣಗಳನ್ನು ಪರಿಹರಿಸಬಹುದು, ಆದರೆ ರೋಗವನ್ನು ಸಂಪೂರ್ಣವಾಗಿ ಗುಣಪಡಿಸುವುದಿಲ್ಲ. ಈ ಕ್ರಿಪ್ಲಿಂಗ್ ರೋಗದಿಂದ ಬಳಲುತ್ತಿರುವ ರೋಗಿಗೆ ಉತ್ತಮ ಜೀವನವನ್ನು ನೀಡುವ ಏಕೈಕ ಮಾರ್ಗವೆಂದರೆ, ತರಬೇತಿ ಪಡೆದ ಆರೈಕೆದಾರರು ಮತ್ತು ವೈದ್ಯಕೀಯ ಅಭ್ಯಾಸಗಾರರಿಂದ ಸಾಕಷ್ಟು ಕಾಳಜಿ ಮಾಡುವುದು.
ಪಾರ್ಕಿನ್ಸನ್ ಕಾಯಿಲೆಯು 60 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾದವರಿಗೆ ಡಯಾಗ್ನಸಿಸ್ ಮಾಡಲ್ಪಟ್ಟಿದೆಯಾದರೂ, ಕೆಲವು ಸಂದರ್ಭಗಳಲ್ಲಿ ಆರಂಭಿಕ ಪತ್ತೆ ಕೂಡ ಸಾಧ್ಯ. ಈ ರೋಗದಿಂದ ಬಳಲುತ್ತಿರುವ ರೋಗಿಗೆ ನಡೆಯಲು, ಮಾತನಾಡಲು ಮತ್ತು ಸರಳ ಕೆಲಸಗಳನ್ನು ಪೂರ್ಣಗೊಳಿಸಲು ಕಷ್ಟವಾಗಬಹುದು. ಈ ರೋಗದಿಂದ ಬಳಲುತ್ತಿರುವ ವ್ಯಕ್ತಿಯು ಆತ/ಆಕೆಯ ಸಾಮಾನ್ಯ ದಿನಚರಿಗೆ ಮರಳಲು ಅಥವಾ ಸಾಮಾನ್ಯ ವ್ಯಕ್ತಿಗಳು ಮಾಡುವ ಕೆಲಸಗಳನ್ನು ಮಾಡಲು ಸಾಧ್ಯವಾಗದಿರಬಹುದು. ಪಾರ್ಕಿನ್ಸನ್ ರೋಗವು ರೋಗಿಯ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲದೆ ಆರ್ಥಿಕ ಮತ್ತು ಭಾವನಾತ್ಮಕವಾಗಿ ಕುಟುಂಬದ ಮೇಲೆ ಆಳವಾದ ಪರಿಣಾಮಗಳನ್ನು ಬೀರುತ್ತದೆ.
ನಷ್ಟ ಪರಿಹಾರಕ್ಕೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಹೊಂದಿದ್ದರೂ ಸಹ, ಎಚ್‌ಡಿಎಫ್‌ಸಿ ಎರ್ಗೋ ಗಂಭೀರ ಅನಾರೋಗ್ಯ ಇನ್ಶೂರೆನ್ಸ್ ಪಾಲಿಸಿ ಆಯ್ಕೆ ಮಾಡುವುದು ಏಕೆ ಮುಖ್ಯವಾಗಿದೆ?
ಗಂಭೀರ ಅನಾರೋಗ್ಯ ಪಾಲಿಸಿಯು ಸಾಮಾನ್ಯ ನಷ್ಟ ಪರಿಹಾರದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು . ರೀತಿಯಲ್ಲಿ ಇರದೆ ಪ್ರಯೋಜನಕಾರಿ ಪ್ಲಾನ್ ಆಗಿದೆ. ಪಾಲಿಸಿ ಕವರ್ ಮಾಡುವ ಗಂಭೀರ ಕಾಯಿಲೆಗಳಲ್ಲಿ ಯಾವುದಾದಾರೂ ಇರುವುದು ಖಚಿತವಾದರೆ, ತಕ್ಷಣವೇ ಒಟ್ಟು ಮೊತ್ತವನ್ನು (ವಿಮಾ ಮೊತ್ತ) ಪಾವತಿಸಲಾಗುತ್ತದೆ. ನಿಮ್ಮ ಡಾಕ್ಟರ್ ನಿರ್ದಿಷ್ಟ ಚಿಕಿತ್ಸಾ ವಿಧಾನವನ್ನು ಶಿಫಾರಸು ಮಾಡಿದಲ್ಲಿ, ಎಚ್‌ಡಿಎಫ್‌ಸಿ ಎರ್ಗೋದ ಕ್ರಿಟಿಕಲ್ ಇಲ್‌ನೆಸ್ ಪ್ಲಾನ್, ಚಿಕಿತ್ಸೆ, ಆರೈಕೆ ಮತ್ತು ಆರೋಗ್ಯ ಸುಧಾರಣೆಯ ವೆಚ್ಚವನ್ನು ಪಾವತಿಸಲು ಬೇಕಾದ ಒಟ್ಟು ಮೊತ್ತವನ್ನು ನಿಮಗೆ ಒಂದೇ ಬಾರಿಗೆ ನೀಡುತ್ತದೆ. ಈ ಹಣವನ್ನು ಸಾಲ ತೀರಿಸಲು, ನಿಂತಿರುವ ಆದಾಯಕ್ಕೆ ಪರ್ಯಾಯವಾಗಿ ಅಥವಾ ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳಲು ಬೇಕಾದ ಖರ್ಚುಗಳಿಗೂ ಉಪಯೋಗಕ್ಕೆ ಬರುತ್ತದೆ. ಗಂಭೀರ ಕಾಯಿಲೆಗೆ ಚಿಕಿತ್ಸೆ ಪಡೆಯುವುದರಿಂದ, ನಿಮ್ಮ ಉಳಿತಾಯ ಮಾಡಿಟ್ಟ ಹಣ ಖಾಲಿಯಾಗಬಹುದು, ನೀವು ಕೆಲಸ ಮಾಡಿ ಹಣ ಗಳಿಸುವ ಸಾಮರ್ಥ್ಯ ಕುಗ್ಗಬಹುದು ಹಾಗೂ ನಿಮ್ಮ ಎಂದಿನ ದಿನಚರಿಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ಈ ಕಠಿಣ ಸಮಯದಲ್ಲಿ, ನೀವು ಆಯ್ಕೆ ಮಾಡಿದ ಕವರ್ ಮೊತ್ತದಷ್ಟು ಒಟ್ಟು ಮೊತ್ತವನ್ನು ಒಂದೇ ಬಾರಿಗೆ ಪಡೆಯುವುದು ಸೂಕ್ತ. ನಿಮ್ಮ ಈಗಿನ ಹೆಲ್ತ್ ಕವರ್ ಅಥವಾ ಎಂಪ್ಲಾಯೀ ಹೆಲ್ತ್ ಇನ್ಶೂರೆನ್ಸ್ ನಿಮ್ಮ ವೈದ್ಯಕೀಯ ವೆಚ್ಚವನ್ನು ನಿರ್ದಿಷ್ಟ ಮೊತ್ತದವರೆಗೆ ಮಾತ್ರ ಕವರ್ ಮಾಡಬಹುದು. ಆದರೆ, ಮೊದಲ ಡಯಾಗ್ನಸಿಸ್ ಅಥವಾ ವೈದ್ಯರ ಸಲಹೆಯ ನಂತರ, ಕ್ರಿಟಿಕಲ್ ಇಲ್‌ನೆಸ್ ಕವರ್, ನಿಮಗೆ ಒಮ್ಮೆಗೇ ಒಟ್ಟು ಮೊತ್ತದ ಪ್ರಯೋಜನವನ್ನು ನೀಡುತ್ತದೆ.
ಪಾರ್ಕಿನ್ಸನ್ ರೋಗಕ್ಕಾಗಿ ಎಚ್‌ಡಿಎಫ್‌ಸಿ ಎರ್ಗೋದ ಗಂಭೀರ ಅನಾರೋಗ್ಯ ಪ್ಲಾನ್ ಏಕೆ ಆಯ್ಕೆ ಮಾಡಿಕೊಳ್ಳಬೇಕು?
ನೀವು ನಿಮ್ಮ ಆರೋಗ್ಯದ ಮೇಲೆ ಗಮನಹರಿಸಿ, ಎಚ್‌ಡಿಎಫ್‌ಸಿ ಎರ್ಗೋದ ಗಂಭೀರ ಅನಾರೋಗ್ಯ ಕವರ್ ಹಣ ಒದಗಿಸುತ್ತದೆ. ಇದಲ್ಲದೆ, ನೀವು ಚಿಕಿತ್ಸೆಯನ್ನು ಪಡೆಯುವಲ್ಲಿ ಮಗ್ನರಾಗಿ, ಆದಾಯದ ನಷ್ಟವನ್ನು ಹೊಂದಿದ್ದರೆ, ವಿಮಾದಾತರು ನಿಮ್ಮ ಕುಟುಂಬಕ್ಕೆ ಹಣಕಾಸಿನ ಬೆಂಬಲವನ್ನು ಒದಗಿಸುತ್ತಾರೆ. 30 ದಿನಗಳ ಅಸ್ತಿತ್ವದಲ್ಲಿರುವ ಅವಧಿಯ ನಂತರ ಮೊದಲ ಡಯಾಗ್ನಸಿಸ್‌ಗೆ ಒಂದೇ ವಹಿವಾಟಿನಲ್ಲಿ ಒಟ್ಟು ಮೊತ್ತವನ್ನು ಪಾವತಿಸಲಾಗುತ್ತದೆ. ಆರೈಕೆ ಮತ್ತು ಚಿಕಿತ್ಸೆ, ಚೇತರಿಕೆಯ ನೆರವು, ಸಾಲಗಳನ್ನು ಪಾವತಿಸುವುದು ಅಥವಾ ಗಳಿಸುವ ಸಾಮರ್ಥ್ಯ ಕಡಿಮೆಯಾಗುವುದರಿಂದ ಯಾವುದೇ ಕ್ಷೀಣಿಸುತ್ತಿರುವ ಆದಾಯ ತುಂಬಲು ಈ ಒಟ್ಟು ಮೊತ್ತವನ್ನು ಬಳಸಬಹುದು. ಇದಲ್ಲದೆ, ಗಂಭೀರ ಅನಾರೋಗ್ಯದ ಹೆಲ್ತ್ ಕವರ್ ಆಯ್ಕೆ ಮಾಡುವ ಮೂಲಕ, ನೀವು ಸೆಕ್ಷನ್ 80D ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಕೂಡ ಆನಂದಿಸಬಹುದು.