ಹೋಮ್ / ಹೆಲ್ತ್ ಇನ್ಶೂರೆನ್ಸ್ / ಕ್ರಿಟಿಕಲ್ ಇಲ್‌ನೆಸ್ ಇನ್ಶೂರೆನ್ಸ್ / ಹಾರ್ಟ್ ಅಟ್ಯಾಕ್ (ಮೈಯೋಕಾರ್ಡಿಯಲ್ ಇನ್ಫಾರ್ಕ್ಷನ್)

 

ಹಾರ್ಟ್ ಅಟ್ಯಾಕ್ (ಮೈಯೋಕಾರ್ಡಿಯಲ್ ಇನ್ಫಾರ್ಕ್ಷನ್) - ಕ್ರಿಟಿಕಲ್ ಇಲ್ನೆಸ್ ಇನ್ಶೂರೆನ್ಸ್

ಹೃದಯವು ಇಡೀ ದೇಹಕ್ಕೆ ರಕ್ತವನ್ನು ಪಂಪ್ ಮಾಡುವುದರಿಂದ, ಅದು ರಕ್ತಪರಿಚಲನೆ ವ್ಯವಸ್ಥೆಯ ಅತ್ಯಂತ ಪ್ರಮುಖ ಅಂಗ. ಇದೊಂದು ಸ್ನಾಯುಗಳಿಂದ ಆದ ಅಂಗವಾಗಿದ್ದು, ಇದಕ್ಕೆ ಆಕ್ಸಿಜನ್-ಸಮೃದ್ಧ ರಕ್ತದ ಅಗತ್ಯವಿದೆ. ಕರೋನರಿ ಆರ್ಟರಿಗಳು ಹೃದಯಕ್ಕೆ ರಕ್ತವನ್ನು ಪೂರೈಸುವ ನಾಳಗಳು. ಆರೋಗ್ಯಕರ ಹೃದಯವನ್ನು ಖಚಿತಪಡಿಸಿಕೊಳ್ಳಲು ಈ ಆರ್ಟರಿಗಳ ಕಾರ್ಯನಿರ್ವಹಣೆ ತುಂಬಾ ಮುಖ್ಯವಾಗಿದೆ. ಈ ಆರ್ಟರಿಗಳು ಮತ್ತು ಅದರ ಉಪ ಅಂಗಗಳು ಯಾವುದೇ ಕಾರಣದಿಂದ ಬ್ಲಾಕ್ ಆದರೆ, ಅದು ಮೈಯೋಕಾರ್ಡಿಯಲ್ ಇನ್ಫಾರ್ಕ್ಷನ್ ಅಥವಾ ಹಾರ್ಟ್ ಅಟ್ಯಾಕ್‌ಗೆ ಕಾರಣವಾಗಬಹುದು.

ಮೈಯೋಕಾರ್ಡಿಯಲ್ ಇನ್ಫಾರ್ಕ್ಷನ್ ಎಂದರೆ ಹೃದಯದ ಸ್ನಾಯುಗಳ ಸಾವು ಎಂದರ್ಥ. ಇದರ ಲಕ್ಷಣಗಳೆಂದರೆ ಹಠಾತ್ ಚಡಪಡಿಕೆ, ಬೆವರುವುದು, ಉಸಿರಾಡಲು ಕಷ್ಟವಾಗುವುದು, ತೀವ್ರ ಎದೆಬಡಿತ, ದವಡೆಗಳಲ್ಲಿ ನೋವು, ಎಡಗೈ ನೋವು, ಎದೆ ನೋವು, ಇತ್ಯಾದಿ. ಹೃದಯಕ್ಕೆ ಸ್ವಲ್ಪವೂ ಹಾನಿಯಾಗದಂತೆ ಕಾಪಾಡಿಕೊಳ್ಳಲು ತಕ್ಷಣದ ಆರೈಕೆ ಅತ್ಯಗತ್ಯ. ಯಾವ ಹಂತದ ಹಾನಿಯಾಗಿದೆ ಎಂಬುದನ್ನು ಆಧರಿಸಿ, ಹೃದ್ರೋಗ ತಜ್ಞರು ಬೇಕಾದ ಚಿಕಿತ್ಸೆ ಸೂಚಿಸುತ್ತಾರೆ (ಉದಾಹರಣೆಗೆ ರಕ್ತವನ್ನು ತೆಳುವಾಗಿಸುವ ಮಾತ್ರೆಗಳು), ಕೊರೋನರಿ ಆರ್ಟರಿ ಆ್ಯಂಜಿಯೋಪ್ಲಾಸ್ಟಿ ಅಥವಾ ಓಪನ್ ಹಾರ್ಟ್ ಸರ್ಜರಿ, ಸಾಮಾನ್ಯವಾಗಿ CABG (ಕೊರೋನರಿ ಆರ್ಟರಿ ಬೈಪಾಸ್ ಗ್ರಾಫ್ಟ್) ಎನ್ನುತ್ತಾರೆ. ಚಿಕಿತ್ಸೆ ಯಾವುದೇ ಆಗಿರಲಿ, ಹಾರ್ಟ್ ಅಟ್ಯಾಕ್ ಆದಾಗ ಕನಿಷ್ಠ 1-2 ತಿಂಗಳು ಸಂಪೂರ್ಣ ವಿಶ್ರಾಂತಿ ಅತ್ಯಗತ್ಯ. ಇದರರ್ಥ ರೋಗಿಯು ತನ್ನ ದೈನಂದಿನ ಚಟುವಟಿಕೆಯನ್ನು ನಿರ್ವಹಿಸಲು ಮತ್ತು ಕೆಲಸಕ್ಕೆ ಹೋಗಲು ಸಾಧ್ಯವಾಗುವುದಿಲ್ಲ.

ನಷ್ಟ ಪರಿಹಾರಕ್ಕೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಹೊಂದಿದ್ದರೂ ಸಹ, ಎಚ್‌ಡಿಎಫ್‌ಸಿ ಎರ್ಗೋ ಗಂಭೀರ ಅನಾರೋಗ್ಯ ಇನ್ಶೂರೆನ್ಸ್ ಪಾಲಿಸಿ ಆಯ್ಕೆ ಮಾಡುವುದು ಏಕೆ ಮುಖ್ಯವಾಗಿದೆ?

ಕ್ರಿಟಿಕಲ್ ಇಲ್ನೆಸ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಇದು ಸಾಂಪ್ರದಾಯಿಕ, ನಷ್ಟ ಪರಿಹಾರದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ ಆಗಿರದೆ ಇದು ಹೆಚ್ಚಿನ ಪ್ರಯೋಜನಗಳಿರುವ ಪ್ಲಾನ್. ಪಾಲಿಸಿ ಕವರ್ ಮಾಡುವ ಗಂಭೀರ ಕಾಯಿಲೆಗಳಲ್ಲಿ ಯಾವುದಾದಾರೂ ಇರುವುದು ಖಚಿತವಾದರೆ, ತಕ್ಷಣವೇ ಒಟ್ಟು ಮೊತ್ತವನ್ನು (ವಿಮಾ ಮೊತ್ತ) ಪಾವತಿಸಲಾಗುತ್ತದೆ. ನಿಮ್ಮ ಡಾಕ್ಟರ್ ನಿರ್ದಿಷ್ಟ ಚಿಕಿತ್ಸಾ ವಿಧಾನವನ್ನು ಶಿಫಾರಸು ಮಾಡಿದಲ್ಲಿ, ಎಚ್‌ಡಿಎಫ್‌ಸಿ ಎರ್ಗೋದ ಕ್ರಿಟಿಕಲ್ ಇಲ್‌ನೆಸ್‌ ಪ್ಲಾನ್, ಚಿಕಿತ್ಸೆ, ಆರೈಕೆ ಮತ್ತು ಆರೋಗ್ಯ ಸುಧಾರಣೆಯ ವೆಚ್ಚವನ್ನು ಪಾವತಿಸಲು ಬೇಕಾದ ಒಟ್ಟು ಮೊತ್ತವನ್ನು ನಿಮಗೆ ಒಂದೇ ಬಾರಿಗೆ ನೀಡುತ್ತದೆ. ಈ ಹಣವನ್ನು ಸಾಲ ತೀರಿಸಲು, ನಿಂತಿರುವ ಆದಾಯಕ್ಕೆ ಪರ್ಯಾಯವಾಗಿ ಅಥವಾ ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳಲು ಬೇಕಾದ ಖರ್ಚುಗಳಿಗೂ ಉಪಯೋಗಕ್ಕೆ ಬರುತ್ತದೆ. ಗಂಭೀರ ಕಾಯಿಲೆಗೆ ಚಿಕಿತ್ಸೆ ಪಡೆಯುವುದರಿಂದ, ನಿಮ್ಮ ಉಳಿತಾಯ ಮಾಡಿಟ್ಟ ಹಣ ಖಾಲಿಯಾಗಬಹುದು, ನೀವು ಕೆಲಸ ಮಾಡಿ ಹಣ ಗಳಿಸುವ ಸಾಮರ್ಥ್ಯ ಕುಗ್ಗಬಹುದು ಹಾಗೂ ನಿಮ್ಮ ಎಂದಿನ ದಿನಚರಿಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ಈ ಕಠಿಣ ಸಮಯದಲ್ಲಿ, ನೀವು ಆಯ್ಕೆ ಮಾಡಿದ ಕವರ್ ಮೊತ್ತದಷ್ಟು ಒಟ್ಟು ಮೊತ್ತವನ್ನು ಒಂದೇ ಬಾರಿಗೆ ಪಡೆಯುವುದು ಸೂಕ್ತ. ನಿಮ್ಮ ಈಗಿನ ಹೆಲ್ತ್ ಕವರ್ ಅಥವಾ ಎಂಪ್ಲಾಯೀ ಹೆಲ್ತ್ ಇನ್ಶೂರೆನ್ಸ್ ನಿಮ್ಮ ವೈದ್ಯಕೀಯ ವೆಚ್ಚವನ್ನು ನಿರ್ದಿಷ್ಟ ಮೊತ್ತದವರೆಗೆ ಮಾತ್ರ ಕವರ್ ಮಾಡಬಹುದು. ಆದರೆ, ಮೊದಲ ಡಯಾಗ್ನಸಿಸ್ ಅಥವಾ ವೈದ್ಯರ ಸಲಹೆಯ ನಂತರ, ಕ್ರಿಟಿಕಲ್ ಇಲ್‌ನೆಸ್ ಕವರ್, ನಿಮಗೆ ಒಮ್ಮೆಗೇ ಒಟ್ಟು ಮೊತ್ತದ ಪ್ರಯೋಜನವನ್ನು ನೀಡುತ್ತದೆ.

ಹೃದಯಾಘಾತ (ಮೈಯೋಕಾರ್ಡಿಯಲ್ ಇನ್ಫಾರ್ಕ್ಷನ್)ಕ್ಕೆ ಎಚ್‌ಡಿಎಫ್‌ಸಿ ಎರ್ಗೋದ ಕ್ರಿಟಿಕಲ್ ಇಲ್‌ನೆಸ್ ಪ್ಲಾನ್ ಏಕೆ ಆಯ್ಕೆ ಮಾಡಬೇಕು?

ನೀವು ನಿಮ್ಮ ಆರೋಗ್ಯದ ಮೇಲೆ ಗಮನಹರಿಸಿ, ಎಚ್‌ಡಿಎಫ್‌ಸಿ ಎರ್ಗೋದ ಗಂಭೀರ ಅನಾರೋಗ್ಯ ಕವರ್ ಹಣ ಒದಗಿಸುತ್ತದೆ. ಇದಲ್ಲದೆ, ನೀವು ಚಿಕಿತ್ಸೆಯನ್ನು ಪಡೆಯುವಲ್ಲಿ ಮಗ್ನರಾಗಿ, ಆದಾಯದ ನಷ್ಟವನ್ನು ಹೊಂದಿದ್ದರೆ, ವಿಮಾದಾತರು ನಿಮ್ಮ ಕುಟುಂಬಕ್ಕೆ ಹಣಕಾಸಿನ ಬೆಂಬಲವನ್ನು ಒದಗಿಸುತ್ತಾರೆ. 30 ದಿನಗಳ ಅಸ್ತಿತ್ವದಲ್ಲಿರುವ ಅವಧಿಯ ನಂತರ ಮೊದಲ ಡಯಾಗ್ನಸಿಸ್‌ಗೆ ಒಂದೇ ವಹಿವಾಟಿನಲ್ಲಿ ಒಟ್ಟು ಮೊತ್ತವನ್ನು ಪಾವತಿಸಲಾಗುತ್ತದೆ. ಆರೈಕೆ ಮತ್ತು ಚಿಕಿತ್ಸೆ, ಚೇತರಿಕೆಯ ನೆರವು, ಸಾಲಗಳನ್ನು ಪಾವತಿಸುವುದು ಅಥವಾ ಗಳಿಸುವ ಸಾಮರ್ಥ್ಯ ಕಡಿಮೆಯಾಗುವುದರಿಂದ ಯಾವುದೇ ಕ್ಷೀಣಿಸುತ್ತಿರುವ ಆದಾಯ ತುಂಬಲು ಈ ಒಟ್ಟು ಮೊತ್ತವನ್ನು ಬಳಸಬಹುದು. ಇದಲ್ಲದೆ, ಗಂಭೀರ ಅನಾರೋಗ್ಯದ ಹೆಲ್ತ್ ಕವರ್‌ ಆಯ್ಕೆ ಮಾಡುವ ಮೂಲಕ, ನೀವು ಸೆಕ್ಷನ್ 80D ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಕೂಡ ಆನಂದಿಸಬಹುದು.

ಗಂಭೀರ ಅನಾರೋಗ್ಯ ಇನ್ಶೂರೆನ್ಸ್ ಏನನ್ನು ಕವರ್ ಮಾಡುವುದಿಲ್ಲ?

ಸಾಹಸ ಕ್ರೀಡೆಯ ಹಾನಿಗಳು
ಸಾಹಸ ಕ್ರೀಡೆಯ ಹಾನಿಗಳು

ಸಾಹಸ ಕ್ರೀಡೆಗಳು ನಿಮ್ಮ ಮನಸ್ಸನ್ನು ಉತ್ತೇಜಿಸಿದರೂ ಕೂಡ, ಆಕ್ಸಿಡೆಂಟ್‌ಗಳು ಆಗುವ ಸಂಭವ ಇರುವುದರಿಂದ, ಅವು ಅಪಾಯಕಾರಿಯಾಗಬಹುದು. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವಾಗ ಉಂಟಾಗುವ ಆಕ್ಸಿಡೆಂಟ್‌ಗಳನ್ನು ನಮ್ಮ ಪಾಲಿಸಿಯು ಕವರ್ ಮಾಡುವುದಿಲ್ಲ.

ಸ್ವಯಂ-ಕಾರಣದಿಂದ ಆದ ಗಾಯಗಳು
ಸ್ವಯಂ-ಕಾರಣದಿಂದ ಆದ ಗಾಯಗಳು

ನೀವು ನಿಮ್ಮ ದೇಹಕ್ಕೆ ಹಾನಿಯಾಗಬಹುದು ಎಂದು ಅಂದಾಜಿಸಿರಬಹುದು, ಆದರೆ ನಾವು ನಿಮಗೆ ನೀವೇ ಹಾನಿ ಮಾಡಿಕೊಳ್ಳುವುದನ್ನು ಬಯಸುವುದಿಲ್ಲ. ನಮ್ಮ ಪಾಲಿಸಿಯು ನೀವೇ ಮಾಡಿಕೊಂಡ ಗಾಯಗಳನ್ನು ಕವರ್ ಮಾಡುವುದಿಲ್ಲ.

ಯುದ್ಧ
ಯುದ್ಧ

ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ಯುದ್ಧಗಳಿಂದ ಉಂಟಾಗುವ ಯಾವುದೇ ಕ್ಲೈಮ್ ಅನ್ನು ನಮ್ಮ ಪಾಲಿಸಿ ಕವರ್ ಮಾಡುವುದಿಲ್ಲ.

ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದು
ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದು

ನೀವು ರಕ್ಷಣೆ ಕಾರ್ಯಾಚರಣೆಗಳಲ್ಲಿ (ಸೇನಾಪಡೆ/ನೌಕಾಪಡೆ/ವಾಯುಪಡೆ) ಭಾಗವಹಿಸುತ್ತಿರುವಾಗ ನಮ್ಮ ಪಾಲಿಸಿಯು ಆಕ್ಸಿಡೆಂಟ್‌ಗಳನ್ನು ಕವರ್ ಮಾಡುವುದಿಲ್ಲ.

ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ರೋಗಗಳು
ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ರೋಗಗಳು

ನಿಮ್ಮ ಗಂಭೀರ ಕಾಯಿಲೆಯ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದಾಗ್ಯೂ, ನಮ್ಮ ಪಾಲಿಸಿಯು ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ಕವರ್ ಮಾಡುವುದಿಲ್ಲ.

ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆ
ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆ

ನಿಮ್ಮ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಬೊಜ್ಜಿನ ಸಮಸ್ಯೆಯ ಚಿಕಿತ್ಸೆ ಅಥವಾ ಕಾಸ್ಮೆಟಿಕ್ ಸರ್ಜರಿ ಕವರೇಜ್‌ಗೆ ಅರ್ಹವಾಗಿರುವುದಿಲ್ಲ.

ಒಳಗೊಂಡ ಮತ್ತು ಒಳಗೊಳ್ಳದ ವಿವರಗಳಿಗಾಗಿ ದಯವಿಟ್ಟು ಸೇಲ್ಸ್‌ ಬ್ರೋಶರ್‌/ಪಾಲಿಸಿ ವಾಕ್ಯಗಳನ್ನು ನೋಡಿ

ಕಾಯುವಿಕೆ ಅವಧಿಗಳು

ಅಸ್ತಿತ್ವದ ಅವಧಿ
ಅಸ್ತಿತ್ವದ ಅವಧಿ

ಇನ್ಶೂರೆನ್ಸ್ ಕವರ್‌ನಲ್ಲಿ ಪಟ್ಟಿ ಮಾಡಲಾದ ಗಂಭೀರ ಅನಾರೋಗ್ಯವನ್ನು ಗುರುತಿಸಿದರೂ ಸಹ ರೋಗಿಯು ಕನಿಷ್ಠ 30 ದಿನಗಳವರೆಗೆ ಬದುಕಬೇಕು.

ಪಾಲಿಸಿ ಆರಂಭದಿಂದ ಮೊದಲ 90 ದಿನಗಳು
ಪಾಲಿಸಿ ಆರಂಭದಿಂದ ಮೊದಲ 90 ದಿನಗಳು

90 ದಿನಗಳ ಕಾಯುವ ಅವಧಿಯ ನಂತರ ನಾವು ಎಲ್ಲಾ ಕ್ಲೈಮ್‌ಗಳನ್ನು ಅಂಗೀಕರಿಸುತ್ತೇವೆ.

 

1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಏಕೆ ಆಯ್ಕೆ ಮಾಡಿಕೊಳ್ಳಬೇಕು?

1.6 ಕೋಟಿಗೂ ಹೆಚ್ಚಿನ ನಗುಮುಖಗಳನ್ನು ಸುರಕ್ಷಿತವಾಗಿಸಿದ್ದೇವೆ!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ನಮ್ಮ 24x7 ಗ್ರಾಹಕ ಸಹಾಯವಾಣಿ ಮತ್ತು ಕ್ಲೈಮ್‌ಗಳ ಅನುಮೋದನೆಗೆ ಮೀಸಲಾದ ತಂಡದೊಂದಿಗೆ, ಅಗತ್ಯ ಸಂದರ್ಭಗಳಲ್ಲಿ ನಾವು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ.
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಕ್ಲೈಮ್‌ಗಳು ಇನ್ಶೂರೆನ್ಸ್ ಪಾಲಿಸಿಯ ಅತ್ಯಂತ ಪ್ರಮುಖ ಭಾಗವಾಗಿವೆ ಮತ್ತು ನಾವು ತಡೆರಹಿತ ಕ್ಲೈಮ್‌ಗಳ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ.
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ವೆಲ್ನೆಸ್ ಆ್ಯಪ್‌.

ನಾವು ಹೆಲ್ತ್ ಇನ್ಶೂರೆನ್ಸ್ ಅನ್ನು ಮೀರಿ, ನಿಮ್ಮ ದೇಹ ಮತ್ತು ಮನಸ್ಸಿನ ಕಾಳಜಿ ವಹಿಸುತ್ತೇವೆ. ಮೈ:ಹೆಲ್ತ್ ಸರ್ವಿಸಸ್‌ ಅಪ್ಲಿಕೇಶನ್ ನಿಮಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೆಲ್ತ್ ಕಾರ್ಡ್ ಪಡೆದು, ನಿಮ್ಮ ಕ್ಯಾಲೋರಿಯನ್ನು ಟ್ರ್ಯಾಕ್ ಮಾಡಿ, ನಿಮ್ಮ ದೈಹಿಕ ಚಟುವಟಿಕೆಯನ್ನು ಸರಿಯಾಗಿ ಗಮನಿಸಿ ಮತ್ತು ಅದರ ಮೂಲಕ ಚಂದದ ಬದುಕನ್ನು ಆನಂದಿಸಿ.
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.
ಕಾಗದರಹಿತ!
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಕಾಗದರಹಿತ!

ನಮಗೆ ಪೇಪರ್‌ವರ್ಕ್ ಕೂಡಾ ಇಷ್ಟವಿಲ್ಲ. ಈ ವೇಗದ ಜಗತ್ತಿನಲ್ಲಿ, ಕನಿಷ್ಠ ಡಾಕ್ಯುಮೆಂಟೇಶನ್‌ ಮತ್ತು ಸುಲಭ ಪಾವತಿ ವಿಧಾನಗಳೊಂದಿಗೆ ನಿಮ್ಮ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಪಡೆಯಿರಿ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು

24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ನಮ್ಮ 24x7 ಗ್ರಾಹಕ ಸಹಾಯವಾಣಿ ಮತ್ತು ಕ್ಲೈಮ್‌ಗಳ ಅನುಮೋದನೆಗೆ ಮೀಸಲಾದ ತಂಡದೊಂದಿಗೆ, ಅಗತ್ಯ ಸಂದರ್ಭಗಳಲ್ಲಿ ನಾವು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ.
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಕ್ಲೈಮ್‌ಗಳು ಇನ್ಶೂರೆನ್ಸ್ ಪಾಲಿಸಿಯ ಅತ್ಯಂತ ಪ್ರಮುಖ ಭಾಗವಾಗಿವೆ ಮತ್ತು ನಾವು ತಡೆರಹಿತ ಕ್ಲೈಮ್‌ಗಳ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ.
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.

ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.

ನಾವು ಹೆಲ್ತ್ ಇನ್ಶೂರೆನ್ಸ್ ಅನ್ನು ಮೀರಿ, ನಿಮ್ಮ ದೇಹ ಮತ್ತು ಮನಸ್ಸಿನ ಕಾಳಜಿ ವಹಿಸುತ್ತೇವೆ. ಮೈ:ಹೆಲ್ತ್ ಸರ್ವಿಸಸ್‌ ಅಪ್ಲಿಕೇಶನ್ ನಿಮಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೆಲ್ತ್ ಕಾರ್ಡ್ ಪಡೆದು, ನಿಮ್ಮ ಕ್ಯಾಲೋರಿಯನ್ನು ಟ್ರ್ಯಾಕ್ ಮಾಡಿ, ನಿಮ್ಮ ದೈಹಿಕ ಚಟುವಟಿಕೆಯನ್ನು ಸರಿಯಾಗಿ ಗಮನಿಸಿ ಮತ್ತು ಅದರ ಮೂಲಕ ಚಂದದ ಬದುಕನ್ನು ಆನಂದಿಸಿ.
ಕಾಗದರಹಿತ!

ಕಾಗದರಹಿತ!

ನಮಗೆ ಪೇಪರ್‌ವರ್ಕ್ ಕೂಡಾ ಇಷ್ಟವಿಲ್ಲ. ಈ ವೇಗದ ಜಗತ್ತಿನಲ್ಲಿ, ಕನಿಷ್ಠ ಡಾಕ್ಯುಮೆಂಟೇಶನ್‌ ಮತ್ತು ಸುಲಭ ಪಾವತಿ ವಿಧಾನಗಳೊಂದಿಗೆ ನಿಮ್ಮ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಪಡೆಯಿರಿ. ನಿಮ್ಮ ಪಾಲಿಸಿಯು ನೇರವಾಗಿ ನಿಮ್ಮ ಇನ್‌ಬಾಕ್ಸ್‌ಗೆ ಬಂದು ಸೇರುತ್ತದೆ.

ಇತರ ಸಂಬಂಧಪಟ್ಟ ಲೇಖನಗಳು

 

ಇತರ ಸಂಬಂಧಪಟ್ಟ ಲೇಖನಗಳು

 

ಆಗಾಗ ಕೇಳುವ ಪ್ರಶ್ನೆಗಳು

ಹೃದಯಾಘಾತಕ್ಕೆ ಕ್ರಿಟಿಕಲ್ ಇಲ್ನೆಸ್ ಇನ್ಶೂರೆನ್ಸ್ ಎಂಬುದು ಒಂದು ಫಿಕ್ಸೆಡ್ ಪ್ರಯೋಜನದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಗಿದ್ದು, ಇದು ಹೃದಯಾಘಾತದಂತಹ ಗಂಭೀರ ಆರೋಗ್ಯ ತುರ್ತುಸ್ಥಿತಿಗಳಲ್ಲಿ ದೊಡ್ಡ ವಿಮಾ ಮೊತ್ತವನ್ನು ಪಾವತಿಸುತ್ತದೆ. ಗಂಭೀರ ಅನಾರೋಗ್ಯ ಪರಿಸ್ಥಿತಿಯ ರೋಗನಿರ್ಣಯದ ಮೇಲೆ ಕ್ರಿಟಿಕಲ್ ಇಲ್ನೆಸ್ ಇನ್ಶೂರೆನ್ಸ್ ಪಾವತಿಸಿದ ಒಟ್ಟು ಮೊತ್ತವು, ಹೃದಯಾಘಾತದಂತಹ ಮಾರಣಾಂತಿಕ ರೋಗ ಚಿಕಿತ್ಸೆಗೆ ಅಗತ್ಯವಾದ ದೊಡ್ಡ ಮೊತ್ತದ ವೆಚ್ಚವನ್ನು ಪಾವತಿಸಲು ಸಹಾಯ ಮಾಡುತ್ತದೆ. ಹೃದಯಾಘಾತಕ್ಕೆ ತಕ್ಷಣದ ಮತ್ತು ತ್ವರಿತ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಮತ್ತು ಅಂತಹ ವೈದ್ಯಕೀಯ ತುರ್ತುಸ್ಥಿತಿಗಳಲ್ಲಿ ಹಣಕಾಸಿನ ಭದ್ರತೆಯನ್ನು ಹೊಂದುವುದು ಪ್ರಮುಖವಾಗಿದೆ. ಹೃದಯಾಘಾತಕ್ಕಾಗಿ ಕ್ರಿಟಿಕಲ್ ಇಲ್ನೆಸ್ ಇನ್ಶೂರೆನ್ಸ್, ಸರಿಯಾದ ಸಮಯದಲ್ಲಿ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಪಡೆಯಲು ಹೆಚ್ಚಿನ ಅಗತ್ಯವಿರುವ ಹಣಕಾಸಿನ ನೆರವನ್ನು ಒದಗಿಸುತ್ತದೆ.
ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಅಥವಾ ಹೃದಯಾಘಾತಕ್ಕೆ ತಕ್ಷಣವೇ ಚಿಕಿತ್ಸೆ ನೀಡಬೇಕು ಮತ್ತು ಅದರ ಚಿಕಿತ್ಸೆಯ ವೆಚ್ಚವು ಹೆಚ್ಚಾಗಿದೆ. ಔಷಧಿಯೊಂದಿಗೆ, ಹೃದಯತಜ್ಞರು ಕೊರೋನರಿ ಆಂಜಿಯೋಪ್ಲಾಸ್ಟಿ ಮತ್ತು ಸ್ಟೆಂಟಿಂಗ್, ಅಥವಾ ಕೊರೋನರಿ ಆರ್ಟರಿ ಬೈಪಾಸ್ ಶಸ್ತ್ರಚಿಕಿತ್ಸೆಯಂತಹ ಕಾರ್ಯವಿಧಾನಗಳೊಂದಿಗೆ ಚಿಕಿತ್ಸೆ ನೀಡಬೇಕಾಗಬಹುದು. ಅಂತಹ ದೊಡ್ಡ ವೈದ್ಯಕೀಯ ತುರ್ತುಸ್ಥಿತಿಗಳಲ್ಲಿ, ಹೃದಯಾಘಾತಕ್ಕಾಗಿ ಗಂಭೀರ ಅನಾರೋಗ್ಯ ಇನ್ಶೂರೆನ್ಸ್ ಮೂಲಕ ಹಣಕಾಸಿನ ರಕ್ಷಣೆಯನ್ನು ಹೊಂದಿರುವುದರಿಂದ ನಿಮಗೆ ಈ ಕೆಳಗಿನ ವಿಧಾನಗಳು ಪ್ರಯೋಜನ ನೀಡಬಹುದು:
▪ ಒಟ್ಟು ಮೊತ್ತವನ್ನು ವೈದ್ಯಕೀಯ ಬಿಲ್‌ಗಳು, ಆಸ್ಪತ್ರೆಗೆ ದಾಖಲಾಗುವ ವೆಚ್ಚ ಮತ್ತು ಶಸ್ತ್ರಚಿಕಿತ್ಸೆ ವೆಚ್ಚವನ್ನು ಪಾವತಿಸಲು ಬಳಸಬಹುದು
▪ ಪಾಲಿಸಿಯಿಂದ ಪಾವತಿಸಲಾದ ಫಿಕ್ಸೆಡ್ ಮೊತ್ತವನ್ನು ಯಾವುದೇ ತುರ್ತು ಲೋನ್‌ಗಳನ್ನು ಪಾವತಿಸಲು ಬಳಸಬಹುದು..
▪ ಮೈಯೋಕಾರ್ಡಿಯಲ್ ಇನ್ಫಾರ್ಕ್ಷನ್‌ನಿಂದ ಚೇತರಿಸಿಕೊಳ್ಳುವುದು ಮತ್ತು ಸಾಮಾನ್ಯ ಚಟುವಟಿಕೆಗಳಿಗೆ ಮರಳುವುದು ಸಮಯ ತೆಗೆದುಕೊಳ್ಳಬಹುದು. ಆ ಸಮಯದಲ್ಲಿ ಆದ ಆದಾಯ ನಷ್ಟವನ್ನು ಕ್ರಿಟಿಕಲ್ ಇಲ್ನೆಸ್ ಇನ್ಶೂರೆನ್ಸ್ ಮೂಲಕ ಪಡೆದ ಪ್ರಯೋಜನಗಳಿಂದ ಪರಿಹರಿಸಬಹುದು.
45 ವರ್ಷಗಳವರೆಗಿನ ವ್ಯಕ್ತಿಗಳಿಗೆ ಯಾವುದೇ ಪೂರ್ವ-ಪಾಲಿಸಿ ವೈದ್ಯಕೀಯ ತಪಾಸಣೆ ಅಗತ್ಯವಿಲ್ಲ.
ಸೋಂಕು, ರೋಗಾಣುಗಳು, ವಾತಾವರಣದಲ್ಲಿನ ಒತ್ತಡ, ಮುಂತಾದ ಕಾರಣಗಳಿಂದ ಯಾವುದೇ ಭಾಗ, ಅಂಗ ಅಥವಾ ಜೀವ ವ್ಯವಸ್ಥೆಗೆ ಉಂಟಾಗಬಹುದಾದ ತೊಂದರೆಗೆ ಕಾಯಿಲೆ ಎನ್ನುತ್ತಾರೆ.
ಪಾಲಿಸಿ ಅಡಿಯಲ್ಲಿ ಕ್ಲೈಮ್ ಮಾಡಬೇಕಾದಾಗ, ನೀವು ಕೂಡಲೇ ನಮ್ಮ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು. ಈ ಕುರಿತ ಮಾಹಿತಿ ಸಿಕ್ಕ ತಕ್ಷಣ, ನಾವು ಕ್ಲೈಮ್ ದಾಖಲು ಮಾಡಿಕೊಳ್ಳುತ್ತೇವೆ ಹಾಗೂ ಒಂದು ವಿಶಿಷ್ಟ ಕ್ಲೈಮ್ ರೆಫೆರೆನ್ಸ್ ಸಂಖ್ಯೆ ನೀಡುತ್ತೇವೆ, ಮುಂದಿನ ವ್ಯವಹಾರಗಳಿಗೆ ಬಳಸಬಹುದಾದ ಈ ಸಂಖ್ಯೆಯನ್ನು ಇನ್ಶೂರ್ಡ್ ವ್ಯಕ್ತಿಗೆ ತಿಳಿಸುತ್ತೇವೆ.

ಹಕ್ಕುತ್ಯಾಗ: ಪ್ರಕರಣದ ಮೌಲ್ಯಮಾಪನವು ಪಾಲಿಸಿಯ ಸಂಪೂರ್ಣ ನಿಯಮ ಮತ್ತು ಷರತ್ತುಗಳನ್ನು ಅವಲಂಬಿಸಿರುತ್ತದೆ. ಹೆಚ್ಚಿನ ಸ್ಪಷ್ಟತೆಗಾಗಿ ದಯವಿಟ್ಟು ಸಂಪೂರ್ಣ ಪಾಲಿಸಿ ನಿಯಮಗಳನ್ನು ನೋಡಿ.

ಅವಾರ್ಡ್ಸ್ ಮತ್ತು ಗುರುತಿಸುವಿಕೆ
x