FAQ

ಕಾರ್ ಇನ್ಶೂರೆನ್ಸ್ ಎಂಬುದು ಹಣಕಾಸು ನಷ್ಟಕ್ಕೆ ಕಾರಣವಾಗುವ ಯಾವುದೇ ಹಾನಿಯ ವಿರುದ್ಧ ನಿಮ್ಮ ವಾಹನಕ್ಕೆ ರಕ್ಷಣೆ ನೀಡಲು ಅಗತ್ಯವಿರುವ ಒಂದು ರೀತಿಯ ಇನ್ಶೂರೆನ್ಸ್ ಪಾಲಿಸಿಯಾಗಿದೆ. ಜೊತೆಗೆ, ವಾಹನದ ಬಳಕೆಯಿಂದ ಉದ್ಭವವಾಗುವ ಯಾವುದೇ ಥರ್ಡ್ ಪಾರ್ಟಿ ಹೊಣೆಗಾರಿಕೆಯು ಕಾರ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗುತ್ತದೆ. ಮೋಟಾರ್ ವಾಹನ ಕಾಯ್ದೆಯ ಪ್ರಕಾರ, ಹೊಣೆಗಾರಿಕೆ ಮಾತ್ರದ ಪಾಲಿಸಿ ಖರೀದಿಸುವುದು ಕಡ್ಡಾಯವಾಗಿದ್ದು, ಇದರ ಹೊರತು ವಾಹನವನ್ನು ರಸ್ತೆಗಿಳಿಸಲು ಸಾಧ್ಯವಿಲ್ಲ.
ಸಮಗ್ರ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ವಾಹನಕ್ಕೆ ಬೆಂಕಿ ಹತ್ತುವುದು, ಕಳ್ಳತನ, ಭೂಕಂಪ ಇತ್ಯಾದಿಗಳಿಂದಾಗುವ ಹಾನಿಯ ವಿರುದ್ಧ ರಕ್ಷಣೆ ಒದಗಿಸುತ್ತದೆ. ಜೊತೆಗೆ, ಸಾವು, ದೈಹಿಕ ಗಾಯ ಹಾಗೂ ಥರ್ಡ್ ಪಾರ್ಟಿ ಆಸ್ತಿ ಹಾನಿಯ ವಿಷಯದಲ್ಲಿ ಯಾವುದೇ ಥರ್ಡ್ ಪಾರ್ಟಿ ಹೊಣೆಗಾರಿಕೆಯ ವಿರುದ್ಧ ಕವರ್ ಒದಗಿಸುತ್ತದೆ.
ಕಾನೂನಿನ ಪ್ರಕಾರ, ಥರ್ಡ್ ಪಾರ್ಟಿ ಹೊಣೆಗಾರಿಕೆ ಮಾತ್ರದ ಪಾಲಿಸಿ ಅತ್ಯಗತ್ಯ, ಇದಿಲ್ಲದೆ ವಾಹನವನ್ನು ರಸ್ತೆಯಲ್ಲಿ ಬಳಸಲು ಸಾಧ್ಯವಿಲ್ಲ. ಆದರೆ, ಥರ್ಡ್ ಪಾರ್ಟಿ ಹೊಣೆಗಾರಿಕೆ ಮಾತ್ರದ ಪಾಲಿಸಿಯ ಅಡಿಯಲ್ಲಿ, ಬೆಂಕಿ, ಕಳ್ಳತನ, ಭೂಕಂಪ, ಭಯೋತ್ಪಾದನೆ ಇತ್ಯಾದಿಗಳಿಂದ ನಿಮ್ಮ ವಾಹನಕ್ಕೆ ಆಗುವ ಯಾವುದೇ ಹಾನಿ ಕವರ್ ಆಗುವುದಿಲ್ಲ, ಇದು ದೊಡ್ಡ ಹಣಕಾಸಿನ ನಷ್ಟಕ್ಕೆ ಕಾರಣವಾಗಬಹುದು. ಆದ್ದರಿಂದ, ಥರ್ಡ್ ಪಾರ್ಟಿ ಹೊಣೆಗಾರಿಕೆಯ ಮೇಲೆ ರಕ್ಷಣೆ ಒದಗಿಸುವ ಜೊತೆಗೆ ಹಣಕಾಸಿನ ರಕ್ಷಣೆಯನ್ನೂ ನೀಡುವ ಸಮಗ್ರ ಕವರ್ ಖರೀದಿಸುವುದು ಉತ್ತಮ.
ಎರಡು ರೀತಿಯ ಕಾರ್ ಇನ್ಶೂರೆನ್ಸ್ ಪಾಲಿಸಿಗಳಿವೆ - ಸಮಗ್ರ ಮತ್ತು ಹೊಣೆಗಾರಿಕೆ ಮಾತ್ರದ ಪಾಲಿಸಿ
ಸುಪ್ರೀಮ್ ಕೋರ್ಟ್ ನಿರ್ದೇಶನದ ಪ್ರಕಾರ, 1ನೇ ಸೆಪ್ಟೆಂಬರ್, 2018 ರಿಂದ ಅನ್ವಯವಾಗುವಂತೆ, ಎಲ್ಲಾ ಹೊಸ ಕಾರು ಮಾಲೀಕರು ದೀರ್ಘಾವಧಿ ಪಾಲಿಸಿ ಖರೀದಿಸಬೇಕು. ನಿಮ್ಮ ಅಮೂಲ್ಯ ಸ್ವತ್ತಿಗೆ ಈ ಕೆಳಗಿನ ದೀರ್ಘಾವಧಿ ಪಾಲಿಸಿಗಳಿಂದ ಆಯ್ಕೆ ಮಾಡಬಹುದು:
  1. 3 ವರ್ಷಗಳ ಅವಧಿಗೆ ಹೊಣೆಗಾರಿಕೆ ಮಾತ್ರದ ಪಾಲಿಸಿ
  2. 3 ವರ್ಷಗಳ ಪಾಲಿಸಿ ಅವಧಿಗೆ ಪ್ಯಾಕೇಜ್ ಪಾಲಿಸಿ
  3. 3 ವರ್ಷಗಳ ಹೊಣೆಗಾರಿಕೆ ಕವರ್ ಮತ್ತು ಸ್ವಂತ ಹಾನಿಗಾಗಿ 1 ವರ್ಷದ ಕವರ್‌ನೊಂದಿಗೆ ಬಂಡಲ್ಡ್ ಪಾಲಿಸಿ
ಹೌದು, ಮೋಟಾರ್ ವಾಹನ ಕಾಯ್ದೆಯು ರಸ್ತೆಯಲ್ಲಿ ಚಲಿಸುವ ಪ್ರತಿಯೊಂದು ವಾಹನವು ಹೊಣೆಗಾರಿಕೆ ಮಾತ್ರದ ಪಾಲಿಸಿಯೊಂದಿಗೆ ಇನ್ಶೂರ್ ಆಗಿರಬೇಕು ಎಂದು ಹೇಳುತ್ತದೆ.
ಜೀರೋ ಡಿಪ್ರಿಸಿಯೇಷನ್ ಒಂದು ಆ್ಯಡ್-ಆನ್ ಕವರ್ ಆಗಿದ್ದು ಇದನ್ನು ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಖರೀದಿಸಬೇಕಾಗುತ್ತದೆ. ಇದು ನಿಮ್ಮ ವಾಹನಕ್ಕೆ ಆದ ಸವಕಳಿಯನ್ನು ಲೆಕ್ಕಿಸದೆ ಪೂರ್ಣ ಕವರೇಜ್ ಒದಗಿಸುತ್ತದೆ. ಉದಾಹರಣೆಗೆ, ವಾಹನವು ತೀರಾ ಹಾನಿಗೊಳಗಾಗಿದ್ದರೆ, ಯಾವುದೇ ಸವಕಳಿ ಶುಲ್ಕಗಳನ್ನು ಪಾವತಿಸದೇ, ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ಕ್ಲೇಮ್ ಮೊತ್ತ ಪಡೆಯಲು ನೀವು ಅರ್ಹರಾಗುತ್ತೀರಿ.
ತುರ್ತು ಸಹಾಯವು ಒಂದು ಆ್ಯಡ್-ಆನ್ ಕವರ್ ಆಗಿದ್ದು, ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಇದನ್ನು ಖರೀದಿಸಬೇಕು. ಇದು ಪಾಲಿಸಿ ಅವಧಿಯಲ್ಲಿ ಬಳಸಿಕೊಳ್ಳಬಹುದಾದ ಅನೇಕ ಪ್ರಯೋಜನಗಳನ್ನು ಹೊಂದಿದೆ. ಉದಾಹರಣೆಗೆ: ವಾಹನ ದುರಸ್ಥಿ, ಟೈರ್ ಬದಲಾವಣೆ, ಟೋವಿಂಗ್ ಅಥವಾ ಇಂಧನ ಬದಲಾವಣೆ ಮಾಡಬೇಕಾದಾಗ ಸಹಾಯ ದೊರಕುತ್ತದೆ. ಈ ಪ್ರಯೋಜನಗಳನ್ನು ಪಡೆಯಲು ಗ್ರಾಹಕರು ಪಾಲಿಸಿಯಲ್ಲಿ ನಮೂದಿಸಿದ ಗ್ರಾಹಕ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕು.

ಸರಳವಾಗಿ, ಕ್ಲೈಮ್-ರಹಿತ ವರ್ಷದ ನಂತರ ನಿಮ್ಮ ಪಾಲಿಸಿಯನ್ನು ನವೀಕರಿಸುವಾಗ ಪಾವತಿಸಬೇಕಾದ ಸ್ವಂತ ಹಾನಿ ಪ್ರೀಮಿಯಂನಲ್ಲಿ ಸಿಗುವ ರಿಯಾಯಿತಿಯಾಗಿದೆ. ಎಚ್ಚರಿಕೆಯಿಂದ ಚಾಲನೆ ಮಾಡಲು ಮತ್ತು ಅಪಘಾತಗಳನ್ನು ತಪ್ಪಿಸಲು ಇದು ಪ್ರೋತ್ಸಾಹಕವಾಗಿದೆ.

ಎಲ್ಲಾ ಬಗೆಯ ವಾಹನಗಳುಸ್ವಂತ ಹಾನಿ ಪ್ರೀಮಿಯಂನಲ್ಲಿನ ರಿಯಾಯಿತಿಯ %
ಇನ್ಶೂರೆನ್ಸ್ ಹಿಂದಿನ ಇಡೀ ವರ್ಷದಲ್ಲಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ20%
ಇನ್ಶೂರೆನ್ಸ್‌‌‌‌ನ 2 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ25%
ಇನ್ಶೂರೆನ್ಸ್‌‌‌‌ನ 3 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ35%
ಇನ್ಶೂರೆನ್ಸ್‌‌‌‌ನ 4 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ45%
ಇನ್ಶೂರೆನ್ಸ್‌‌‌‌ನ 5 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ50%
ಅವಧಿ ಮುಗಿದ ನಿಮ್ಮ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ನವೀಕರಿಸಬಹುದು. ಸೆಲ್ಫ್ ಇನ್ಸ್‌ಪೆಕ್ಷನ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ, ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿರಿ. ಡಾಕ್ಯುಮೆಂಟ್‌ಗಳನ್ನು ಎಚ್‌ಡಿಎಫ್‌ಸಿ ಎರ್ಗೋ ಅನುಮೋದಿಸಿದ ಮೇಲೆ, ಪಾಲಿಸಿ ನವೀಕರಣಕ್ಕೆ ಹಣ ಪಾವತಿಸಲು ಒಂದು ಪೇಮೆಂಟ್ ಲಿಂಕ್ ಕಳುಹಿಸಲಾಗುವುದು. ಪಾವತಿಯನ್ನು ಮಾಡಿದ ನಂತರ, ನೀವು ಪಾಲಿಸಿಯ ಕಾಪಿಯನ್ನು ಸ್ವೀಕರಿಸುತ್ತೀರಿ.
ಹಿಂದಿನ ಪಾಲಿಸಿಯ ಗಡುವು ದಿನಾಂಕದಿಂದ 90 ದಿನಗಳವರೆಗೆ ನೋ ಕ್ಲೈಮ್ ಬೋನಸ್ ಮಾನ್ಯವಾಗಿರುತ್ತದೆ. ಪಾಲಿಸಿಯನ್ನು 90 ದಿನಗಳ ಒಳಗೆ ನವೀಕರಿಸದಿದ್ದರೆ, ನೋ ಕ್ಲೈಮ್ ಬೋನಸ್ 0% ಆಗುತ್ತದೆ ಮತ್ತು ತಡವಾಗಿ ನವೀಕರಿಸಿದ ಪಾಲಿಸಿಗೆ ಯಾವುದೇ ಪ್ರಯೋಜನವನ್ನು ನೀಡಲಾಗುವುದಿಲ್ಲ.

ವಾಹನದ ಇನ್ಶೂರ್ಡ್‌ ಡಿಕ್ಲೇರ್ಡ್‌ ವ್ಯಾಲ್ಯೂ (IDV) ಅನ್ನು 'ವಿಮಾ ಮೊತ್ತ' ಎಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಪ್ರತಿ ಇನ್ಶೂರ್ಡ್‌ ವಾಹನಕ್ಕೆ ಪ್ರತಿ ಪಾಲಿಸಿ ಅವಧಿಯ ಆರಂಭದಲ್ಲಿ ನಿಗದಿಪಡಿಸಲಾಗುತ್ತದೆ.
ವಾಹನದ IDVಯನ್ನು ಆ ಬ್ರ್ಯಾಂಡ್‌ನ ಉತ್ಪಾದಕರು ಪಟ್ಟಿ ಮಾಡಿದ ಮಾರಾಟ ಬೆಲೆ ಮತ್ತು ಇನ್ಶೂರೆನ್ಸ್/ನವೀಕರಣ ಪ್ರಾರಂಭದಲ್ಲಿ ಇನ್ಶೂರೆನ್ಸ್‌ಗಾಗಿ ಪ್ರಸ್ತಾಪಿಸಲಾದ ವಾಹನದ ಮಾಡೆಲ್ ಆಧಾರದ ಮೇಲೆ ನಿಗದಿಪಡಿಸಬೇಕು ಹಾಗೂ ಅದನ್ನು ಸವಕಳಿಗೆ ಸರಿಹೊಂದಿಸಬೇಕು (ಕೆಳಗೆ ನಿರ್ದಿಷ್ಟಪಡಿಸಿದ ಶೆಡ್ಯೂಲ್ ಪ್ರಕಾರ). ಸೈಡ್ ಕಾರ್ (ಗಳು) ಮತ್ತು/ಅಥವಾ ಅಕ್ಸೆಸರಿಗಳ IDV, ಯಾವುದಾದರೂ ಇದ್ದಲ್ಲಿ, ಅದನ್ನು ವಾಹನದ ಉತ್ಪಾದಕರ ಪಟ್ಟಿ ಮಾಡಿದ ಮಾರಾಟ ಬೆಲೆಯಲ್ಲಿ ಸೇರಿಸಲಾಗಿಲ್ಲ ಎಂದಾದರೆ, ಅದನ್ನೂ ಇದೇ ರೀತಿಯಲ್ಲಿ ನಿಗದಿಪಡಿಸಬೇಕು.

ವಾಹನದ ವಯಸ್ಸುIDV ಫಿಕ್ಸ್ ಮಾಡಲು ಸವಕಳಿ %
6 ತಿಂಗಳು ಮೀರದ5%
6 ತಿಂಗಳಿಗಿಂತ ಹೆಚ್ಚಿನ ಆದರೆ 1 ವರ್ಷ ಮೀರದ15%
1 ವರ್ಷಕ್ಕಿಂತ ಹೆಚ್ಚಿನ ಆದರೆ 2 ವರ್ಷ ಮೀರದ20%
2 ವರ್ಷಕ್ಕಿಂತ ಹೆಚ್ಚಿನ ಆದರೆ 3 ವರ್ಷ ಮೀರದ30%
3 ವರ್ಷಕ್ಕಿಂತ ಹೆಚ್ಚಿನ ಆದರೆ 4 ವರ್ಷ ಮೀರದ40%
4 ವರ್ಷಕ್ಕಿಂತ ಹೆಚ್ಚಿನ ಆದರೆ 5 ವರ್ಷ ಮೀರದ50%
ಯಾವುದೇ ಪೇಪರ್‌ವರ್ಕ್ ಮತ್ತು ಫಿಸಿಕಲ್ ಡಾಕ್ಯುಮೆಂಟೇಶನ್ ಅಗತ್ಯವಿಲ್ಲ. ನೀವು ತಕ್ಷಣವೇ ನಿಮ್ಮ ಪಾಲಿಸಿಯನ್ನು ಪಡೆಯುತ್ತೀರಿ.
ಅಸ್ತಿತ್ವದಲ್ಲಿರುವ ಇನ್ಶೂರೆನ್ಸ್ ಪಾಲಿಸಿಯನ್ನು ಒಂದು ಅನುಮೋದನೆ ಪಾಸ್ ಮಾಡುವ ಮೂಲಕ ಖರೀದಿದಾರರ ಹೆಸರಿಗೆ ವರ್ಗಾಯಿಸಬಹುದು.. ಮಾರಾಟ ಪತ್ರ/ಫಾರ್ಮ್ 29/30/NOC/NCB ಮರುಪಡೆಯುವಿಕೆಯಂತಹ ಬೆಂಬಲಿತ ಡಾಕ್ಯುಮೆಂಟ್‌ಗಳು ಅಸ್ತಿತ್ವದಲ್ಲಿರುವ ಪಾಲಿಸಿಯ ಅಡಿಯಲ್ಲಿ ಅನುಮೋದನೆಯನ್ನು ನೀಡಬೇಕಾಗುತ್ತದೆ.
ಅಥವಾ
ನೀವು ಅಸ್ತಿತ್ವದಲ್ಲಿರುವ ಪಾಲಿಸಿಯನ್ನು ರದ್ದುಗೊಳಿಸಬಹುದು. ಪಾಲಿಸಿಯನ್ನು ರದ್ದುಗೊಳಿಸಲು ಮಾರಾಟ ಪತ್ರ/ಫಾರ್ಮ್ 29/30 ನಂತಹ ಬೆಂಬಲಿತ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ.
ನಿಮ್ಮ ಬಳಿಯಿರುವ ವಾಹನದ ಮಾರಾಟದ ಆಧಾರದ ಮೇಲೆ ಈಗಿನ ವಿಮಾದಾರರು NCB ರಿಸರ್ವಿಂಗ್ ಲೆಟರ್ ನೀಡುತ್ತಾರೆ. NCB ರಿಸರ್ವಿಂಗ್ ಲೆಟರ್ ಆಧಾರದ ಮೇಲೆ, ಈ ಪ್ರಯೋಜನವನ್ನು ಹೊಸ ವಾಹನಕ್ಕೆ ವರ್ಗಾಯಿಸಬಹುದು
ಇನ್ಶೂರೆನ್ಸ್ ವರ್ಗಾವಣೆ ಮಾಡಲು ಪೂರಕ ಡಾಕ್ಯುಮೆಂಟ್‌ಗಳೊಂದಿಗೆ ಇನ್ಶೂರರ್ ಅನ್ನು ಸಂಪರ್ಕಿಸಬೇಕು. ಪೂರಕ ಡಾಕ್ಯುಮೆಂಟ್‌ಗಳೆಂದರೆ ಸೇಲ್ ಡೀಡ್/ಮಾರಾಟಗಾರರ ಫಾರ್ಮ್ 29/30/NOC, ಹಳೆಯ RC ಕಾಪಿ, ವರ್ಗಾಯಿಸಿದ RC ಕಾಪಿ ಮತ್ತು NCB ರಿಕವರಿ ಮೊತ್ತ, ಇತ್ಯಾದಿ.
ಅವಧಿ ಮುಗಿದ ನಿಮ್ಮ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ನವೀಕರಿಸಬಹುದು. ನೀವು ಎಚ್‌ಡಿಎಫ್‌ಸಿ ಎರ್ಗೋ ಸ್ವಯಂ ತಪಾಸಣೆ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕು ಮತ್ತು ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಬೇಕು. ಡಾಕ್ಯುಮೆಂಟ್‌ಗಳನ್ನು ಎಚ್‌ಡಿಎಫ್‌ಸಿ ಎರ್ಗೋ ಅನುಮೋದಿಸಿದ ನಂತರ, ಪಾವತಿ ಲಿಂಕ್ ಕಳುಹಿಸಲಾಗುತ್ತದೆ ಮತ್ತು ಪಾಲಿಸಿಯನ್ನು ನವೀಕರಿಸಲು ನೀವು ಈ ಲಿಂಕ್‌ನಲ್ಲಿ ಪಾವತಿ ಮಾಡಬೇಕು. ಪಾವತಿಯನ್ನು ಮಾಡಿದ ನಂತರ, ನೀವು ಪಾಲಿಸಿಯ ಕಾಪಿಯನ್ನು ಸ್ವೀಕರಿಸುತ್ತೀರಿ.
ನೀವು ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ನಲ್ಲಿ ಅಥವಾ ಕರೆಯ ಮೂಲಕ ಕ್ಲೈಮ್ ನೋಂದಣಿ ಮಾಡಬಹುದು ಸೆಂಟರ್ ಅಥವಾ ಎಚ್‌ಡಿಎಫ್‌ಸಿ ಎರ್ಗೋದ ಮೊಬೈಲ್ ಆ್ಯಪ್‌ ಮೂಲಕ ಮಾಡಬಹುದು
ನೀವು ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ನಲ್ಲಿ ಅಥವಾ ಕರೆಯ ಮೂಲಕ ಕ್ಲೈಮ್ ನೋಂದಣಿ ಮಾಡಬಹುದು ಸೆಂಟರ್ ಅಥವಾ ಎಚ್‌ಡಿಎಫ್‌ಸಿ ಎರ್ಗೋದ ಮೊಬೈಲ್ ಆ್ಯಪ್‌ ಮೂಲಕ ಮಾಡಬಹುದು
ಓವರ್‌ನೈಟ್ ರಿಪೇರಿ ಸೌಲಭ್ಯದೊಂದಿಗೆ, ಸಣ್ಣಪುಟ್ಟ ಹಾನಿಗಳನ್ನು ಒಂದು ರಾತ್ರಿಯಲ್ಲಿ ರಿಪೇರಿ ಮಾಡಲಾಗುತ್ತದೆ. ಸೌಲಭ್ಯ ಖಾಸಗಿ ಕಾರುಗಳು ಮತ್ತು ಟ್ಯಾಕ್ಸಿಗಳಿಗೆ ಮಾತ್ರ ಲಭ್ಯವಿದೆ. ಓವರ್‌ನೈಟ್ ರಿಪೇರಿ ಸೌಲಭ್ಯದ ಪ್ರಕ್ರಿಯೆಯನ್ನು ಕೆಳಗೆ ವಿವರಿಸಲಾಗಿದೆ
  1. ಕ್ಲೇಮ್ ಅನ್ನು ಕಾಲ್ ಸೆಂಟರ್ ಅಥವಾ ಎಚ್‌ಡಿ‌ಎಫ್‌ಸಿ ಎರ್ಗೋ ಮೊಬೈಲ್ ಅಪ್ಲಿಕೇಶನ್ ((IPO) ಮೂಲಕ ತಿಳಿಸಬೇಕು.
  2. ನಮ್ಮ ತಂಡವು ಗ್ರಾಹಕರನ್ನು ಸಂಪರ್ಕಿಸಿ ಹಾನಿಗೊಳಗಾದ ವಾಹನದ ಫೋಟೋಗಳನ್ನು ಕಳಿಸುವಂತೆ ಕೇಳುತ್ತದೆ.
  3. ಈ ಸೇವೆಯ ಅಡಿಯಲ್ಲಿ 3 ಪ್ಯಾನೆಲ್‌‌ಗಳಿಗೆ ಸೀಮಿತವಾದ ಹಾನಿಗಳನ್ನು ಅಂಗೀಕರಿಸಲಾಗುವುದು.
  4. ವರ್ಕ್‌ಶಾಪ್ ಅಪಾಯಿಂಟ್‌ಮೆಂಟ್‌ ಮತ್ತು ಪಿಕ್-ಅಪ್‌ಗಳು ವಾಹನದ ಭಾಗಗಳು ಹಾಗೂ ಸ್ಲಾಟ್‌ ಲಭ್ಯತೆಗೆ ಒಳಪಟ್ಟಿರುವ ಕಾರಣ, ವಿಷಯ ಮುಟ್ಟಿಸಿದ ಕೂಡಲೇ ವಾಹನವನ್ನು ರಿಪೇರಿ ಮಾಡಲು ಆಗದೇ ಇರಬಹುದು.
  5. ಗ್ರಾಹಕರು ಗ್ಯಾರೇಜ್‌ಗೆ ಬಂದು, ವಾಪಸ್ ಹೋಗಲು ಬೇಕಾಗುವ ಸಮಯ ಉಳಿಯುತ್ತದೆ.
  6. ಸದ್ಯಕ್ಕೆ ಈ ಸೇವೆಯು ಆಯ್ದ 13 ನಗರಗಳಲ್ಲಿ ಲಭ್ಯವಿದೆ. ಅವುಗಳೆಂದರೆ ದೆಹಲಿ, ಮುಂಬೈ, ಪುಣೆ, ನಾಗ್‌ಪುರ್, ಸೂರತ್, ವಡೋದರಾ, ಅಹಮದಾಬಾದ್, ಗುರ್ಗಾಂವ್, ಜೈಪುರ, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ ಮತ್ತು ಬೆಂಗಳೂರು.
ನಿಮ್ಮ ಬ್ಯಾಂಕ್ ನೀಡಿದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ವಾಲೆಟ್/ಕ್ಯಾಶ್ ಕಾರ್ಡ್, EMI, UPI (ಜಿಪೇ, ಫೋನ್‌ಪೇ, ಪೇಟಿಎಂ, ಇತ್ಯಾದಿ), QR ಕೋಡ್ ಮೂಲಕ ನಿಮ್ಮ ಪಾಲಿಸಿ ಪ್ರೀಮಿಯಂ ಅನ್ನು ನೀವು ಪಾವತಿಸಬಹುದು. ದಯವಿಟ್ಟು ಗಮನಿಸಿ, ನಾವು ಯಾವುದೇ ಕ್ಲಬ್ ಕಾರ್ಡ್ ಅಥವಾ ಡೈನರ್ಸ್ ಕಾರ್ಡ್ ಮೂಲಕ ಪಾವತಿಯನ್ನು ಅಂಗೀಕರಿಸುವುದಿಲ್ಲ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
best_bfsi_2011 best_employer_brand best_employer_brand_2012 best_employer_brand_besi_2012 bfsi_2014 cfo_2014 iaaa icai_2013 icai_2014 icai_2015 icai_2016 iir_2012 iir_2016
x