ಆಗಾಗ ಕೇಳುವ ಪ್ರಶ್ನೆಗಳು

ನಿಮಗೆ ಸೂಕ್ತವಾದ ಪ್ಲಾನ್ ಅನ್ನು ಪಡೆದುಕೊಳ್ಳಿ. ಅಂದರೆ, ನೀವು ಒಂಟಿಯಾಗಿ ಪ್ರಯಾಣಿಸುತ್ತಿದ್ದರೆ, ವೈಯಕ್ತಿಕ ಪ್ಲಾನ್ ಆಯ್ಕೆ ಮಾಡಿ. ಒಂದು ವೇಳೆ ನೀವು ನಿಮ್ಮ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದರೆ, ಒಂದೇ ಪಾಲಿಸಿಯಲ್ಲಿ ನಿಮ್ಮ ಪೂರ್ತಿ ಕುಟುಂಬವನ್ನು ಕವರ್ ಮಾಡಲು ಫ್ಯಾಮಿಲಿ ಫ್ಲೋಟರ್ ಪ್ಲಾನ್ ಆಯ್ಕೆ ಮಾಡಿ. ನೀವು ಆಗಾಗ್ಗೆ ಪ್ರಯಾಣಿಸುವವರಾಗಿದ್ದರೆ, ವಾರ್ಷಿಕ ಮಲ್ಟಿ-ಟ್ರಿಪ್ ಪ್ಲಾನ್ ಆಯ್ಕೆ ಮಾಡುವ ಮೂಲಕ ಪ್ರತಿ ಪ್ರಯಾಣಕ್ಕೆ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವ ತೊಂದರೆಯನ್ನು ತಪ್ಪಿಸಬಹುದು. ನೀವು ಹೆಚ್ಚಿನ ಓದಿಗೆ ವಿದೇಶಕ್ಕೆ ಪ್ರಯಾಣಿಸುತ್ತಿದ್ದರೆ, ನೀವು ಓದಿನಲ್ಲಿ ತೊಡಗಿರುವ ಅವಧಿವರೆಗೆ ಸ್ಟೂಡೆಂಟ್ ಪ್ಲಾನ್ ನಿಮಗೆ ಪರಿಪೂರ್ಣ ಕವರ್ ನೀಡುತ್ತದೆ.
ಪಾಲಿಸಿ ಗಡುವು ಮುಗಿಯುವ ದಿನಾಂಕದ ಮೊದಲು ನೀವು ಸುಲಭವಾಗಿ ಪಾಲಿಸಿಯ ವಿಸ್ತರಣೆ ಮಾಡಬಹುದು ಮತ್ತು ವಿಸ್ತರಿತ ಅವಧಿ ವರೆಗೆ ಕವರ್ ಹೊಂದಬಹುದು.
ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳೊಂದಿಗೆ, ಪಾಲಿಸಿ ಆರಂಭದ ದಿನಾಂಕದಿಂದ ಗರಿಷ್ಠ 360 ದಿನಗಳವರೆಗೆ ನೀವು ಪಾಲಿಸಿಯನ್ನು ಅನೇಕ ಬಾರಿ ವಿಸ್ತರಣೆ ಮಾಡಬಹುದು.
ದುರದೃಷ್ಟವಶಾತ್ ಇಲ್ಲ. ನಿಮ್ಮ ಪಾಲಿಸಿ ಆರಂಭದ ದಿನಾಂಕ ಮತ್ತು ಖರೀದಿ ದಿನಾಂಕ ನಿಮ್ಮ ಪ್ರಯಾಣ ಪ್ರಾರಂಭದ ದಿನಾಂಕದ ನಂತರದ್ದು ಆಗಿರಬಾರದು.
ಇಲ್ಲ. ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಭಾರತಕ್ಕೆ ಮರಳಿ ಬರಲು ಯೋಚಿಸುತ್ತಿರುವವರಿಗೆ ಮತ್ತು ರಜಾದಿನ, ಬಿಸಿನೆಸ್ ಮತ್ತು ಅಧ್ಯಯನಗಳಂತಹ ಪ್ರಯಾಣದ ಉದ್ದೇಶ ಹೊಂದಿರುವವರಿಗಾಗಿದೆ.
ಪಾಲಿಸಿಯಲ್ಲಿ ನಮೂದಿಸಿದಂತೆ ಪಾಲಿಸಿಯ ಕೊನೆ ದಿನಾಂಕ ಅಥವಾ ನೀವು ವಾಪಸ್ಸಾಗುವ ದಿನಾಂಕದಂದು, ಇವುಗಳಲ್ಲಿ ಯಾವುದು ಮೊದಲೋ ಅಂದು ಟ್ರಾವೆಲ್‌ ಇನ್ಶೂರೆನ್ಸ್‌ ಪಾಲಿಸಿ ಕೊನೆಗೊಳ್ಳುತ್ತದೆ. ಆದ್ದರಿಂದ, ನೀವು ಮುಂಚಿತವಾಗಿ ಹಿಂದಿರುಗಿ ಬಂದರೇ, ಯಾವುದೇ ಪ್ರೀಮಿಯಂ ಮರುಪಾವತಿ ಸಿಗುವುದಿಲ್ಲ.
ನೀವು ಸಕ್ರಿಯವಾದ ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದು ಭಾರತಕ್ಕೆ ಹಿಂದಿರುಗುವ ಇಚ್ಛೆ ಹೊಂದಿದ್ದರೇ, ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದು.
ಪಾಲಿಸಿಯು ಚಾಲ್ತಿಗೆ ಬರುವ ದಿನಾಂಕಕ್ಕೆ ಮುಂಚಿನ ಯಾವುದೇ ಸಂದರ್ಭದಲ್ಲಿ ನೀವು ಟ್ರಾವೆಲ್‌ ಇನ್ಶೂರೆನ್ಸ್‌ ರದ್ದುಪಡಿಸಬಹುದು.. ಪಾಲಿಸಿಯು ಚಾಲ್ತಿಗೆ ಬಂದ ದಿನಾಂಕದ ನಂತರ ನಮಗೆ ಟ್ರಾವೆಲ್ ಇನ್ಶೂರೆನ್ಸ್ ರದ್ದತಿ ಕೋರಿಕೆ ಬಂದಲ್ಲಿ, ನೀವು ಪ್ರಯಾಣ ಮಾಡಿಲ್ಲ ಎಂಬುದಕ್ಕೆ ಪುರಾವೆಯಾಗಿ ನಿಮ್ಮ ಪಾಸ್‌ಪೋರ್ಟ್‌ನ ಎಲ್ಲಾ ಪುಟಗಳ ಕಾಪಿ ಬೇಕಾಗುತ್ತದೆ.. ಎಲ್ಲಾ ರದ್ದತಿ ಕೋರಿಕೆಗಳ ಮೇಲೆ ₹250/- ರದ್ದತಿ ಶುಲ್ಕ ವಿಧಿಸಲಾಗುತ್ತದೆ.
ಹೌದು. OPD ಆಧಾರದಲ್ಲಿ ಆಗುವ ಕಾಯಿಲೆ ಅಥವಾ ಗಾಯಗಳಿಗೆ ಬೇಕಾಗುವ ತುರ್ತು ವೈದ್ಯಕೀಯ ವೆಚ್ಚಗಳಿಗೆ ನಮ್ಮ ಪಾಲಿಸಿ ಮರುಪಾವತಿ ಒದಗಿಸುತ್ತದೆ.
ಅಲಯನ್ಸ್ ವರ್ಲ್ಡ್‌ವೈಡ್‌ ನಮ್ಮ ಟ್ರಾವೆಲ್‌ ಸಹಾಯಕ ಪಾಲುದಾರ ಸಂಸ್ಥೆ. ಅದು 24x7 ಸೇವೆ ನೀಡುವ 8 ಲಕ್ಷ+ ಸೇವಾ ಪೂರೈಕೆದಾರರ ದೊಡ್ಡ ನೆಟ್ವರ್ಕ್ ಹೊಂದಿದೆ.
ನಿಮ್ಮ ಬ್ಯಾಂಕ್ ನೀಡಿದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ವಾಲೆಟ್/ಕ್ಯಾಶ್ ಕಾರ್ಡ್, EMI, UPI (ಜಿಪೇ, ಫೋನ್‌ಪೇ, ಪೇಟಿಎಂ, ಇತ್ಯಾದಿ), QR ಕೋಡ್ ಮೂಲಕ ನಿಮ್ಮ ಪಾಲಿಸಿ ಪ್ರೀಮಿಯಂ ಅನ್ನು ನೀವು ಪಾವತಿಸಬಹುದು. ದಯವಿಟ್ಟು ಗಮನಿಸಿ, ನಾವು ಯಾವುದೇ ಕ್ಲಬ್ ಕಾರ್ಡ್ ಅಥವಾ ಡೈನರ್ಸ್ ಕಾರ್ಡ್ ಮೂಲಕ ಪಾವತಿಯನ್ನು ಅಂಗೀಕರಿಸುವುದಿಲ್ಲ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
best_bfsi_2011 best_employer_brand best_employer_brand_2012 best_employer_brand_besi_2012 bfsi_2014 cfo_2014 iaaa icai_2013 icai_2014 icai_2015 icai_2016 iir_2012 iir_2016
x