ಗಂಭೀರ ಅನಾರೋಗ್ಯದ ಇನ್ಶೂರೆನ್ಸ್ ಪಾಲಿಸಿ FAQ

ಪಾಲಿಸಿ ಅಡಿಯಲ್ಲಿ ಕವರ್ ಆಗುವ ಗಂಭೀರ ರೋಗ ಪತ್ತೆಯಾದ ಸಂದರ್ಭದಲ್ಲಿ, ವಿಮಾ ಮೊತ್ತದ ಮಿತಿಯವರೆಗೆ ಒಂದು ದೊಡ್ಡ ಮೊತ್ತದ ಹಣವನ್ನು ಒದಗಿಸುವ ಪಾಲಿಸಿಯೇ ಕ್ರಿಟಿಕಲ್ ಇಲ್‌ನೆಸ್ ಪಾಲಿಸಿ.
ಗಂಭೀರ ಅನಾರೋಗ್ಯ ಪತ್ತೆಯಾದ ಸಂದರ್ಭದಲ್ಲಿ, ಕ್ರಿಟಿಕಲ್ ಇಲ್ನೆಸ್ ಇನ್ಶೂರೆನ್ಸ್, ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೆಚ್ಚುವರಿ ಹಣಕಾಸು ಭದ್ರತೆ ಒದಗಿಸುತ್ತದೆ. ಪಾಲಿಸಿಯು ಇದಕ್ಕಾಗಿ ಬಳಸಬಹುದಾದ ಒಟ್ಟು ಮೊತ್ತವನ್ನು ಒದಗಿಸುತ್ತದೆ:
ಆರೈಕೆ ಮತ್ತು ಚಿಕಿತ್ಸೆಯ ವೆಚ್ಚಗಳು
ಚೇತರಿಕೆಗೆ ನೆರವು
ಸಾಲ ಮರುಪಾವತಿ
ಗಳಿಸುವ ಸಾಮರ್ಥ್ಯ ಕಡಿಮೆಯಾದ ಕಾರಣದಿಂದ ಕಳೆದುಕೊಂಡ ಯಾವುದೇ ಆದಾಯ
ಜೀವನಶೈಲಿಯ ಬದಲಾವಣೆಗಾಗಿ ಫಂಡ್.
ಬೆನಿಫಿಟ್ ಪಾಲಿಸಿ ಅಡಿಯಲ್ಲಿ ಇನ್ಶೂರ್ಡ್ ಘಟನೆ ನಡೆದ ಸಂದರ್ಭದಲ್ಲಿ, ಇನ್ಶೂರೆನ್ಸ್ ಕಂಪನಿಯು ಪಾಲಿಸಿ ಹೊಂದಿರುವವರಿಗೆ ಒಂದು ದೊಡ್ಡ ಮೊತ್ತದ ಹಣ ನೀಡುತ್ತದೆ.
ಈ ಕೆಳಗೆ ಕೊಡಲಾದ ಯಾವುದೇ ಗಂಭೀರ ಕಾಯಿಲೆ ಮೊದಲ ಬಾರಿಗೆ ಪತ್ತೆಯಾದ ಸಂದರ್ಭದಲ್ಲಿ, ಇನ್ಶೂರೆನ್ಸ್ ಕಂಪನಿಯು ಒಂದು ದೊಡ್ಡ ವಿಮಾ ಮೊತ್ತವನ್ನು ಪಾವತಿಸುತ್ತದೆ. ಇದಕ್ಕಾಗಿ ಇನ್ಶೂರ್ಡ್ ವ್ಯಕ್ತಿಯು ಮೊದಲ ಬಾರಿ ರೋಗಪತ್ತೆ ಆದ ದಿನಾಂಕದಿಂದ 30 ದಿನಗಳವರೆಗೆ ಬದುಕಿರಬೇಕು.

ನಮ್ಮ ಪ್ಲಾನ್ ಅಡಿಯಲ್ಲಿ ಈ ಕೆಳಗಿನ ಗಂಭೀರ ಕಾಯಿಲೆಗಳು ಕವರ್ ಆಗುತ್ತವೆ:-

1. ಹೃದಯಾಘಾತ (ಹೃದಯ ಸ್ಥಂಭನ)

2. ಕೊರೋನರಿ ಆರ್ಟರಿ ಬೈಪಾಸ್ ಸರ್ಜರಿ

3. ಸ್ಟ್ರೋಕ್

4. ಕ್ಯಾನ್ಸರ್

5. ಕಿಡ್ನಿ ವೈಫಲ್ಯ

6. ಪ್ರಮುಖ ಅಂಗದ ಕಸಿ

7. ಮಲ್ಟಿಪಲ್ ಸ್ಕ್ಲೆರೋಸಿಸ್

8. ಪಾರ್ಶ್ವವಾಯು

ನೀವು ಈ ವಿಮಾ ಮೊತ್ತಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು ₹25 ಲಕ್ಷ, ₹5 ಲಕ್ಷ, ₹75 ಲಕ್ಷ ಮತ್ತು ₹1 ಲಕ್ಷ.
ಕ್ರಿಟಿಕಲ್ ಇಲ್‌ನೆಸ್ ಪಾಲಿಸಿಯು 5 ರಿಂದ 45 ವರ್ಷದೊಳಗಿನ ವ್ಯಕ್ತಿಗಳನ್ನು ಕವರ್ ಮಾಡುತ್ತದೆ. 5 ರಿಂದ 18 ವರ್ಷದೊಳಗಿನ ಮಕ್ಕಳು ಪಾಲಿಸಿ ಅಡಿಯಲ್ಲಿ ಕವರೇಜ್ ಪಡೆಯಬೇಕೆಂದರೆ, ಅವರ ತಂದೆ ತಾಯಿ ಇಬ್ಬರೂ ಇನ್ಶೂರ್ಡ್ ಆಗಿರಬೇಕು.
45 ವರ್ಷದವರೆಗಿನ ವ್ಯಕ್ತಿಗಳಿಗೆ ಪಾಲಿಸಿ ಪಡೆಯುವ ಮುನ್ನ ಯಾವುದೇ ವೈದ್ಯಕೀಯ ತಪಾಸಣೆ ಅಗತ್ಯವಿಲ್ಲ.
ಈ ಪಾಲಿಸಿಯ ವಿಶೇಷವೆಂದರೆ, ಇದರಲ್ಲಿ ನೀವು ಯಾವುದೇ ಡಾಕ್ಯುಮೆಂಟೇಶನ್ ಸಲ್ಲಿಸಬೇಕಾಗಿಲ್ಲ. ನೀವು ಪ್ರಪೋಸಲ್ ಫಾರ್ಮ್‌ನಲ್ಲಿ ಸಂಬಂಧಪಟ್ಟ ವಿವರಗಳನ್ನು ತುಂಬಿ, ಸಹಿ ಮಾಡಿ, ಸಲ್ಲಿಸಿದರೆ ಸಾಕು. ವಿಮಾ ಮೊತ್ತ ಆಯ್ಕೆ ಮಾಡಿ ಮತ್ತು ಚೆಕ್ ಮೂಲಕ ಪಾವತಿಸಿ ಅಥವಾ ಫಾರ್ಮ್‌ನಲ್ಲಿ ಕ್ರೆಡಿಟ್ ಕಾರ್ಡ್ ವಿವರಗಳನ್ನು ನೀಡಿರಿ.
ಹೌದು, 'ಸೆಕ್ಷನ್ 80D' ಅಡಿಯಲ್ಲಿ ₹15,000 ವರೆಗೆ ತೆರಿಗೆ ಪ್ರಯೋಜನ ಪಡೆಯಬಹುದು’. ಹಿರಿಯ ನಾಗರಿಕರು, 'ಸೆಕ್ಷನ್ 80D' ಅಡಿಯಲ್ಲಿ ₹20,000 ವರೆಗೆ ತೆರಿಗೆ ಪ್ರಯೋಜನ ಪಡೆಯಬಹುದು'.
ಇನ್ಶೂರ್ಡ್ ವ್ಯಕ್ತಿಗೆ ಕಂಪನಿಯೊಂದಿಗೆ ಮೊದಲ ಪಾಲಿಸಿ ಹೊಂದುವ 48 ತಿಂಗಳಿಗೆ ಮೊದಲು ಯಾವುದೇ ಆರೋಗ್ಯ ಸಮಸ್ಯೆ, ಕಾಯಿಲೆ ಅಥವಾ ಗಾಯ ಅಥವಾ ಸಂಬಂಧಪಟ್ಟ ತೊಂದರೆಯ(ಗಳ) ರೋಗ ಲಕ್ಷಣಗಳು ಇರುವುದು ಮತ್ತು/ಅಥವಾ ರೋಗಪತ್ತೆಯಾಗಿರುವುದು ಮತ್ತು/ಅಥವಾ ವೈದ್ಯಕೀಯ ಸಲಹೆ/ಚಿಕಿತ್ಸೆ ಪಡೆದಿರುವುದು.
ಸೋಂಕು, ರೋಗಾಣುಗಳು, ವಾತಾವರಣದಲ್ಲಿನ ಒತ್ತಡ, ಮುಂತಾದ ಕಾರಣಗಳಿಂದ ಯಾವುದೇ ಭಾಗ, ಅಂಗ ಅಥವಾ ಜೀವ ವ್ಯವಸ್ಥೆಗೆ ಉಂಟಾಗಬಹುದಾದ ತೊಂದರೆಗೆ ಕಾಯಿಲೆ ಎನ್ನುತ್ತಾರೆ.
ಇಲ್ಲ, ನೀವು ಪಾಲಿಸಿಯ ಸಮಯದುದ್ದಕ್ಕೂ ಕೇವಲ ಒಂದು ಕ್ಲೈಮ್ ಮಾತ್ರ ಸಲ್ಲಿಸಬಹುದು.
ಪಾಲಿಸಿ ಅಡಿಯಲ್ಲಿ ಕ್ಲೈಮ್ ಮಾಡಬೇಕಾದಾಗ, ನೀವು ಕೂಡಲೇ ನಮ್ಮ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು. ಈ ಕುರಿತ ಮಾಹಿತಿ ಸಿಕ್ಕ ತಕ್ಷಣ, ನಾವು ಕ್ಲೈಮ್ ದಾಖಲು ಮಾಡಿಕೊಳ್ಳುತ್ತೇವೆ ಹಾಗೂ ಒಂದು ವಿಶಿಷ್ಟ ಕ್ಲೈಮ್ ರೆಫೆರೆನ್ಸ್ ಸಂಖ್ಯೆ ನೀಡುತ್ತೇವೆ, ಮುಂದಿನ ವ್ಯವಹಾರಗಳಿಗೆ ಬಳಸಬಹುದಾದ ಈ ಸಂಖ್ಯೆಯನ್ನು ಇನ್ಶೂರ್ಡ್ ವ್ಯಕ್ತಿಗೆ ತಿಳಿಸುತ್ತೇವೆ.
ಇನ್ಶೂರ್ಡ್ ವ್ಯಕ್ತಿಯು ಕ್ಲೇಮ್ ಪ್ರಕ್ರಿಯೆಗೊಳಿಸಲು ಬೇಕಾಗುವ ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಅದರ ಬಗ್ಗೆ ಮಾಹಿತಿ ನೀಡಿದ ದಿನಾಂಕದಿಂದ 45 ದಿನಗಳ ಒಳಗೆ ಸಲ್ಲಿಸಬೇಕು.

1. ಸರಿಯಾಗಿ ಭರ್ತಿಮಾಡಿದ ಕ್ಲೇಮ್ ಫಾರ್ಮ್
2. ಡಿಸ್‌ಚಾರ್ಜ್ ಸಮ್ಮರಿಯ ಮೂಲಪ್ರತಿ.
3. ಸಲಹೆ ಚೀಟಿ/ ಚಿಕಿತ್ಸೆಗೆ ಸಂಬಂಧಪಟ್ಟ ಕಾಗದಗಳು.
4. ಸಂಬಂಧಪಟ್ಟ ಎಲ್ಲ ವೈದ್ಯಕೀಯ ವರದಿಗಳು ಜೊತೆಗೆ ಅದರ ಇನ್ವಾಯ್ಸ್‌ಗಳು ಹಾಗೂ ಅದನ್ನು ಸಲಹೆ ಮಾಡಿದ ವೈದ್ಯರ ಆಜ್ಞಾಪತ್ರ.
5. ಸ್ಪಷ್ಟ ವಿವರಗಳಿರುವ ಆಸ್ಪತ್ರೆ ದಾಖಲಾತಿಯ ಅಂತಿಮ ಬಿಲ್‌ಗಳ ಮೂಲಪ್ರತಿ.
6. ಔಷಧಿ ಚೀಟಿಗಳು ಹಾಗೂ ಔಷಧಿ ಬಿಲ್‌ಗಳು.
7. ಕಂಪನಿಗೆ ಅಗತ್ಯವಿರುವ ಇತರೆ ಯಾವುದೇ ಡಾಕ್ಯುಮೆಂಟ್‌ಗಳು.

ಕ್ಲೇಮ್ ಡಾಕ್ಯುಮೆಂಟ್‌ಗಳನ್ನು ಸ್ವೀಕರಿಸಿದ ನಂತರ ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಅನುಗುಣವಾಗಿ ಕ್ಲೇಮ್ ಪ್ರಕ್ರಿಯೆಗೊಳಿಸಲಾಗುತ್ತದೆ.
ನಿಮ್ಮ ಬ್ಯಾಂಕ್ ನೀಡಿದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ವಾಲೆಟ್/ಕ್ಯಾಶ್ ಕಾರ್ಡ್, EMI, UPI (ಜಿಪೇ, ಫೋನ್‌ಪೇ, ಪೇಟಿಎಂ, ಇತ್ಯಾದಿ), QR ಕೋಡ್ ಮೂಲಕ ನಿಮ್ಮ ಪಾಲಿಸಿ ಪ್ರೀಮಿಯಂ ಅನ್ನು ನೀವು ಪಾವತಿಸಬಹುದು. ದಯವಿಟ್ಟು ಗಮನಿಸಿ, ನಾವು ಯಾವುದೇ ಕ್ಲಬ್ ಕಾರ್ಡ್ ಅಥವಾ ಡೈನರ್ಸ್ ಕಾರ್ಡ್ ಮೂಲಕ ಪಾವತಿಯನ್ನು ಅಂಗೀಕರಿಸುವುದಿಲ್ಲ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
best_bfsi_2011 best_employer_brand best_employer_brand_2012 best_employer_brand_besi_2012 bfsi_2014 cfo_2014 iaaa icai_2013 icai_2014 icai_2015 icai_2016 iir_2012 iir_2016
x