ಹೆಲ್ತ್ ಇನ್ಶೂರೆನ್ಸ್ - FAQ

ಹೌದು. ನಿಮ್ಮ ಉದ್ಯೋಗಿ ಹೆಲ್ತ್ ಇನ್ಶೂರೆನ್ಸ್, ನೀವು ಆ ಉದ್ಯೋಗದಲ್ಲಿ ಇರುವವರೆಗೆ ಮಾತ್ರವೇ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ. ನೀವು ಉದ್ಯೋಗ ತೊರೆದ ತಕ್ಷಣ ಆ ಪಾಲಿಸಿ ಕೊನೆಗೊಳ್ಳುತ್ತದೆ. ಹಾಗಾಗಿ, ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಹೊಂದಿದ್ದರೆ ಒಳ್ಳೆಯದು. ಆಸ್ಪತ್ರೆ ಖರ್ಚುಗಳು ಮುಗಿಲು ಮುಟ್ಟುತ್ತಿರುವುದನ್ನು ಗಮನಿಸಿದರೆ, ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅತ್ಯಗತ್ಯ ಎನಿಸುತ್ತದೆ. ಎಲ್ಲಾ ಉದ್ಯೋಗಿಗಳಿಗೂ ಒಂದೇ ತರಹದ ಪ್ರಯೋಜನ ಒದಗಿಸುವ ಕಾರ್ಪೊರೇಟ್ ಹೆಲ್ತ್ ಪ್ಲಾನ್‌ಗೆ ವ್ಯತಿರಿಕ್ತವಾಗಿ, ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ನಿಮ್ಮ ವೈದ್ಯಕೀಯ ಅಗತ್ಯಗಳಿಗೆ ಅನುಗುಣವಾಗಿ ಆಯ್ಕೆ ಮಾಡಬಹುದು.

ಒಂದು ವೇಳೆ ನಿಮ್ಮ ಸದ್ಯದ ಇನ್ಶೂರೆನ್ಸ್ ಪ್ಲಾನ್‌ನಿಂದ ದಿನೇದಿನೇ ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲು ಸಾಧ್ಯವಾಗದಿದ್ದರೆ, ಪೋರ್ಟೆಬಿಲಿಟಿಯ ಮೂಲಕ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಯಾವುದೇ ಕಾಯುವ ಅವಧಿ ಇಲ್ಲದೆ ಇನ್ನೊಂದು ಪ್ಲಾನ್‌ಗೆ ಸುಲಭವಾಗಿ ಬದಲಾಯಿಸಬಹುದು.

ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವ ಸಮಯಕ್ಕೆ ಮುಂಚೆಯೇ ಅಸ್ತಿತ್ವದಲ್ಲಿದ್ದ ದೇಹ ಪರಿಸ್ಥಿತಿ, ಕಾಯಿಲೆ ಅಥವಾ ಗಾಯವನ್ನು ಮುಂಚೆಯೇ ಇದ್ದ ಕಾಯಿಲೆ (PED) ಎನ್ನುತ್ತಾರೆ. ಸಾಮಾನ್ಯವಾಗಿ, ಈ PEDಗಳನ್ನು ಆರಂಭಿಕ ಕಾಯುವ ಅವಧಿಯವರೆಗೆ ಪಾಲಿಸಿ ಕವರೇಜ್‌ನಿಂದ ಹೊರಗಿಡಲಾಗುತ್ತದೆ. ಇದು ಡಯಾಬಿಟಿಸ್, ಹೈಪರ್‌ಟೆನ್ಶನ್, ಥೈರಾಯ್ಡ್, ಅಸ್ತಮಾ, ಇತ್ಯಾದಿ ಆಗಿರಬಹುದು

ನಗದುರಹಿತ ಆಸ್ಪತ್ರೆ ದಾಖಲಾತಿ ಎಂದರೆ, ಇನ್ಶೂರ್ಡ್ ವ್ಯಕ್ತಿಯು ಆಸ್ಪತ್ರೆ ದಾಖಲಾತಿ ಅಥವಾ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ತನ್ನ ಕೈಯಾರೆ ವೈದ್ಯಕೀಯ ವೆಚ್ಚಗಳನ್ನು ಪಾವತಿಸದೆ ಆರೋಗ್ಯಸೇವೆ ಪಡೆಯುವ ಪ್ರಕ್ರಿಯೆ. ಆದಾಗ್ಯೂ, ನೀವು ಡಿಸ್ಚಾರ್ಜ್ ಸಮಯದಲ್ಲಿ ಒಂದಿಷ್ಟು ಕಡಿತ ಅಥವಾ ವೈದ್ಯಕೀಯ ವೆಚ್ಚಗಳನ್ನು ಪಾವತಿಸಬೇಕಾಗಬಹುದು.

ನೀವು ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಂದರ್ಭದಲ್ಲಿ, ಆಸ್ಪತ್ರೆ ದಾಖಲಾತಿಗೆ ಮುಂಚೆ ಡಯಾಗ್ನಸಿಸ್ ವೆಚ್ಚ, ಸಮಾಲೋಚನೆ, ಮುಂತಾದ ಕೆಲವು ವೆಚ್ಚಗಳು ಇರುತ್ತವೆ. ಹಾಗೆಯೇ, ಡಿಸ್ಚಾರ್ಜ್ ಆದ ನಂತರ ಇನ್ಶೂರ್ಡ್ ವ್ಯಕ್ತಿಯ ಆರೈಕೆಗೆ ಸಂಬಂಧಿಸಿದ ಕೆಲವು ವೆಚ್ಚಗಳು ಇರುತ್ತವೆ. ಅಂತಹ ವೆಚ್ಚಗಳನ್ನು ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ವೆಚ್ಚಗಳು ಎನ್ನುತ್ತಾರೆ.

ಹೌದು, ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ಮೊದಲು ನೀವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಬೇಕಾಗಬಹುದು. ಕೆಲವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು, ನಿಮಗೆ ಈಗಾಗಲೇ ಯಾವುದಾದರೂ ಕಾಯಿಲೆ ಇದ್ದರೆ ಅಥವಾ ನೀವು 40 ವರ್ಷಕ್ಕಿಂತ ಮೇಲ್ಪಟ್ಟವರಾದರೆ ಮಾತ್ರ ಅದನ್ನು ಕೇಳುತ್ತವೆ.

ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ ಅಥವಾ ನವೀಕರಣದ ಸಮಯದಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರನ್ನು ಸೇರಿಸಬಹುದು.

90 ದಿನಗಳಿಂದ ಹಿಡಿದು 21 ವರ್ಷಗಳವರೆಗಿನ ಮಗುವನ್ನು ಸೇರಿಸಬಹುದು.

ನೀವು ಕಡಿಮೆ ಪ್ರೀಮಿಯಂ ಪಾವತಿಸಿ ಮತ್ತು ಹೆಚ್ಚಿನ ಪ್ರಯೋಜನ ಪಡೆಯಬಹುದು. ಪಾಲಿಸಿ-ಪೂರ್ವ ಕಾಯಿಲೆ ಇರುವ ಸಾಧ್ಯತೆ ಕಡಿಮೆ ಇರುತ್ತದೆ. ಹಾಗಾಗಿ, ಕಾಯುವ ಅವಧಿಗಳು ನಿಮ್ಮ ಮೇಲೆ ಪರಿಣಾಮ ಬೀರದೇ ಇರಬಹುದು. ಜೊತೆಗೆ, ಜ್ವರ ಮತ್ತು ಆಕಸ್ಮಿಕ ಗಾಯದಂತಹ ಸಾಮಾನ್ಯ ಕಾಯಿಲೆಗಳು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ಆದ್ದರಿಂದ ಚಿಕ್ಕ ವಯಸ್ಸಿನಲ್ಲೇ ಕವರ್ ಪಡೆದರೆ ಬಹಳ ಒಳ್ಳೆಯದು.

ಹೌದು. ಪ್ರತಿಯೊಂದು ಪ್ಲಾನ್ ಭಿನ್ನವಾಗಿ ಕೆಲಸ ಮಾಡುತ್ತದೆ ಮತ್ತು ವಿವಿಧ ಪ್ರಯೋಜನಗಳನ್ನು ನೀಡುತ್ತದೆ. ಹಾಗಾಗಿ, ಅಗತ್ಯತೆ ಮತ್ತು ಕವರೇಜ್ ಅವಶ್ಯಕತೆಗಳ ಆಧಾರದ ಮೇಲೆ ನೀವು ಒಂದಕ್ಕಿಂತ ಹೆಚ್ಚು ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೊಂದಿರಬಹುದು.

ಕಾಯುವ ಅವಧಿ ಎಂದರೆ ಒಂದು ನಿರ್ದಿಷ್ಟ ಅನಾರೋಗ್ಯಕ್ಕಾಗಿ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಿಂದ ಕೆಲವು ಅಥವಾ ಎಲ್ಲಾ ಪ್ರಯೋಜನಗಳನ್ನು ಪಡೆಯಲು ಕ್ಲೈಮ್ ನೋಂದಾಯಿಸಲು ಅವಕಾಶವಿಲ್ಲದ ಅವಧಿ. ಅಂದರೆ, ನೀವು ಕ್ಲೈಮ್ ಸಲ್ಲಿಸುವುದಕ್ಕಾಗಿ ನಿರ್ದಿಷ್ಟ ಅವಧಿಯವರೆಗೆ ಕಾಯಬೇಕು.

ಈ ಫ್ರೀ ಲುಕ್ ಅವಧಿಯಲ್ಲಿ, ನಿಮಗೆ ನಿಮ್ಮ ಪಾಲಿಸಿಯು ಪ್ರಯೋಜನಕಾರಿ ಎನಿಸದಿದ್ದರೆ, ಯಾವುದೇ ದಂಡ ಪಾವತಿಸದೆ ನಿಮ್ಮ ಪಾಲಿಸಿಯನ್ನು ರದ್ದುಪಡಿಸುವ ಆಯ್ಕೆಯೂ ನಿಮಗೆ ಇರುತ್ತದೆ. ಇನ್ಶೂರೆನ್ಸ್ ಕಂಪನಿ ಮತ್ತು ನೀಡಲಾದ ಪ್ಲಾನ್ ಆಧಾರದ ಮೇಲೆ, ಫ್ರೀ ಲುಕ್ ಅವಧಿಯು 10-15 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಸಮಯದವರೆಗೆ ಇರಬಹುದು.

ಕ್ಯಾಶ್‌ಲೆಸ್ ಆಸ್ಪತ್ರೆಗಳೆಂದೂ ಕರೆಯಲ್ಪಡುವ ನೆಟ್ವರ್ಕ್ ಆಸ್ಪತ್ರೆಗಳನ್ನು ನಿಮ್ಮ ಇನ್ಶೂರೆನ್ಸ್ ಕಂಪನಿಯೊಂದಿಗೆ ಟೈ-ಅಪ್ ಮಾಡಲಾಗಿರುತ್ತದೆ. ಹಾಗಾಗಿ, ಇಲ್ಲಿ ನಗದುರಹಿತ ಆಸ್ಪತ್ರೆ ದಾಖಲಾತಿ ಪ್ರಯೋಜನ ಪಡೆಯಬಹುದು. ಆದರೆ ನೆಟ್ವರ್ಕ್ ಅಲ್ಲದ ಆಸ್ಪತ್ರೆಯಲ್ಲಿ ನೀವು ಮೊದಲೇ ಬಿಲ್‌ಗಳನ್ನು ಪಾವತಿಸಬೇಕು ಮತ್ತು ನಂತರ ಮರುಪಾವತಿಗಾಗಿ ಕ್ಲೈಮ್ ಮಾಡಬೇಕು. ಯಾವಾಗಲೂ, ದೊಡ್ಡ ನೆಟ್ವರ್ಕ್ ಆಸ್ಪತ್ರೆಗಳ ಜಾಲ ಹೊಂದಿರುವ ಹೆಲ್ತ್ ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಿ. ಉದಾಹರಣೆಗೆ ಎಚ್‌ಡಿಎಫ್‌ಸಿ ಎರ್ಗೋ 10,000+ ನಗದುರಹಿತ ಆಸ್ಪತ್ರೆಗಳ ನೆಟ್ವರ್ಕ್ ಹೊಂದಿದೆ.

ಇನ್ಶೂರ್ಡ್ ವ್ಯಕ್ತಿಯು ಆಸ್ಪತ್ರೆಗೆ ವರ್ಗಾಯಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರೆ ಅಥವಾ ಆಸ್ಪತ್ರೆಯಲ್ಲಿ ರೂಮ್ ಲಭ್ಯವಿಲ್ಲದ ಕಾರಣದಿಂದಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರೆ ಅದನ್ನು ಡೊಮಿಸಿಲಿಯರಿ ಹಾಸ್ಪಿಟಲೈಸೇಶನ್ ಎನ್ನುತ್ತಾರೆ.

ಆಸ್ಪತ್ರೆ ದಾಖಲಾತಿ ಕವರ್‌ನಲ್ಲಿ, ನಿಮ್ಮ ಡಯಾಗ್ನಸ್ಟಿಕ್ ಟೆಸ್ಟ್‌ಗಳು, ಸಮಾಲೋಚನೆಗಳು ಮತ್ತು ಔಷಧಿ ವೆಚ್ಚಗಳು, ಮುಂತಾದ ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ. ನಾವು ICU, ಬೆಡ್ ಶುಲ್ಕಗಳು, ಔಷಧಿ ವೆಚ್ಚ, ನರ್ಸಿಂಗ್ ಶುಲ್ಕಗಳು ಮತ್ತು ಆಪರೇಶನ್ ಥಿಯೇಟರ್ ವೆಚ್ಚಗಳನ್ನೂವ್ಯಾಪಕವಾಗಿ ಕವರ್ ಮಾಡುತ್ತೇವೆ.

18 ವರ್ಷ ತುಂಬಿದ ಮೇಲೆ ನೀವು ನಿಮ್ಮದೇ ಸ್ವಂತ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಬಹುದು. 18 ವರ್ಷಕ್ಕಿಂತ ಕೆಳಗಿನವರು, ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅಡಿಯಲ್ಲಿ ಕವರ್ ಪಡೆಯಬಹುದು.

ಇಲ್ಲ. ಅಪ್ರಾಪ್ತರು ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಖರೀದಿಸಲು ಸಾಧ್ಯವಿಲ್ಲ. ಆದರೆ ಪೋಷಕರು ತಮ್ಮ ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ಮಗುವನ್ನು ಕವರ್ ಮಾಡಬಹುದು.

ನೀವು ನಾನ್-ನೆಟ್ವರ್ಕ್ ಆಸ್ಪತ್ರೆಗೆ ದಾಖಲಾದಾಗ, ಮೊದಲು ಬಿಲ್‌ ಪಾವತಿಸಿ, ನಂತರ ವೆಚ್ಚ ಮರಳಿ ಪಡೆಯಲು ಕ್ಲೈಮ್ ಸಲ್ಲಿಸಬೇಕಾಗುತ್ತದೆ. ಯಾವಾಗಲೂ, ದೊಡ್ಡ ನೆಟ್ವರ್ಕ್ ಆಸ್ಪತ್ರೆಗಳ ಜಾಲ ಹೊಂದಿರುವ ಹೆಲ್ತ್ ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಿ. ಉದಾಹರಣೆಗೆ ಎಚ್‌ಡಿಎಫ್‌ಸಿ ಎರ್ಗೋ 10,000+ ನಗದುರಹಿತ ಆಸ್ಪತ್ರೆಗಳ ನೆಟ್ವರ್ಕ್ ಹೊಂದಿದೆ.

ನಿಮ್ಮ ಬ್ಯಾಂಕ್ ನೀಡಿದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ವಾಲೆಟ್/ಕ್ಯಾಶ್ ಕಾರ್ಡ್, EMI, UPI (ಜಿಪೇ, ಫೋನ್‌ಪೇ, ಪೇಟಿಎಂ, ಇತ್ಯಾದಿ), QR ಕೋಡ್ ಮೂಲಕ ನಿಮ್ಮ ಪಾಲಿಸಿ ಪ್ರೀಮಿಯಂ ಅನ್ನು ನೀವು ಪಾವತಿಸಬಹುದು. ದಯವಿಟ್ಟು ಗಮನಿಸಿ, ನಾವು ಯಾವುದೇ ಕ್ಲಬ್ ಕಾರ್ಡ್ ಅಥವಾ ಡೈನರ್ಸ್ ಕಾರ್ಡ್ ಮೂಲಕ ಪಾವತಿಯನ್ನು ಅಂಗೀಕರಿಸುವುದಿಲ್ಲ.

ಅವಾರ್ಡ್ಸ್ ಮತ್ತು ಗುರುತಿಸುವಿಕೆ
best_bfsi_2011 best_employer_brand best_employer_brand_2012 best_employer_brand_besi_2012 bfsi_2014 cfo_2014 iaaa icai_2013 icai_2014 icai_2015 icai_2016 iir_2012 iir_2016
x