ಯಮಹಾ ಮೋಟಾರ್ಸ್ ಜಪಾನಿನ ಶಿಜುಕಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಜಪಾನಿನ ಬಹುರಾಷ್ಟ್ರೀಯ ನಿಗಮವಾಗಿದೆ. ಗೌರವಾನ್ವಿತ ಕಂಪನಿಯನ್ನು 1887 ರಲ್ಲಿ ತೊರಕುಸು ಯಮಹಾ ಅವರು ನಿಪ್ಪಾನ್ ಗಕ್ಕಿ ಕಂಪನಿ ಲಿಮಿಟೆಡ್ ಆಗಿ ಸ್ಥಾಪಿಸಿದರು ಮತ್ತು 1955 ರಲ್ಲಿ ಅದನ್ನು ಯಮಹಾ ಮೋಟಾರ್ಸ್ ಆಗಿ ಸಂಯೋಜಿಸಲಾಯಿತು. ಇದು ವಿಶ್ವಾದ್ಯಂತ ಮಾರಾಟವಾಗುವ ಮೋಟಾರ್‌ಸೈಕಲ್‌ಗಳು, ಸ್ನೋಮೊಬೈಲ್‌ಗಳು, ಔಟ್‌ಬೋರ್ಡ್ ಮೋಟಾರ್‌ಗಳು, ವೈಯಕ್ತಿಕ ವಾಟರ್‌ಕ್ರಾಫ್ಟ್ ಮತ್ತು ಇತರ ಸಣ್ಣ ಎಂಜಿನ್ ಪ್ರಾಡಕ್ಟ್‌ಗಳ ತಯಾರಿಕೆಯಲ್ಲಿ ವಿಶೇಷತೆಯನ್ನು ಹೊಂದಿದೆ. 1985 ರಲ್ಲಿ ಭಾರತೀಯ ಮಾರುಕಟ್ಟೆಗೆ ಬ್ರ್ಯಾಂಡ್ ಪ್ರವೇಶಿಸಿದ ನಂತರ ಯಮಹಾ ಮೋಟಾರ್‌ಬೈಕ್‌ಗಳು ಭಾರತದ ಅತ್ಯಂತ ಜನಪ್ರಿಯ ಟೂ ವೀಲರ್‌ಗಳಲ್ಲಿ ಒಂದಾಗಿವೆ. ಕಂಪನಿಯು ದೀರ್ಘಕಾಲದಿಂದ ಅಸ್ತಿತ್ವದಲ್ಲಿದೆ ಮತ್ತು ದೇಶದ ಪ್ರಮುಖ ಮೋಟಾರ್‌ಬೈಕ್ ಉತ್ಪಾದಕರಲ್ಲಿ ಒಂದಾಗಿದೆ. ಯಮಹಾ ಬೈಕಿಗೆ ಇತ್ತೀಚಿನ ಸೇರ್ಪಡೆ YZF-R3 ಆಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಅದರ ಕೈಗೆಟಕುವ ಬೆಲೆ ಮತ್ತು ಶಕ್ತಿಶಾಲಿ ಎಂಜಿನ್ ಕಾರ್ಯಕ್ಷಮತೆಯೊಂದಿಗೆ ಅಲೆಗಳನ್ನು ಸೃಷ್ಟಿಸುತ್ತಿದೆ.
ಸರಿಯಾದ ಬೈಕ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನೀವು ನೆಮ್ಮದಿಯಿಂದ ಬೈಕ್ ಸವಾರಿ ಮಾಡಬಹುದು. ಯಮಹಾ ಟೂ ವೀಲರ್ ಇನ್ಶೂರೆನ್ಸ್ ಬೈಕ್ ಮಾಲೀಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ಯಮಹಾ ಇನ್ಶೂರೆನ್ಸ್ ಅನ್ನು ಅತ್ಯುತ್ತಮವಾಗಿಸುವ ಕೆಲವು ಪ್ರಮುಖ ಪ್ರಯೋಜನಗಳು ಇಲ್ಲಿವೆ:
ಪ್ರಯೋಜನಗಳು | ವಿವರಣೆ |
AI-ಆಧಾರಿತ ಕ್ಲೈಮ್ ಸಹಾಯ | ನಿಮ್ಮ ಯಮಹಾ ಬೈಕ್ ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆಗೊಳಿಸಲು AI-ಸಕ್ರಿಯಗೊಳಿಸಿದ ಟೂಲ್ ಐಡಿಯಾಗಳು ನಗದುರಹಿತ ಕ್ಲೈಮ್ ಸೆಟಲ್ಮೆಂಟ್‌ನ ಸಂಪೂರ್ಣ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತವೆ. |
ಆನ್ಲೈನ್ ಖರೀದಿ ಮತ್ತು ನವೀಕರಣ | ಎಚ್‌ಡಿಎಫ್‌ಸಿ ಎರ್ಗೋ ನೀಡುವ ಯಮಹಾ ಬೈಕ್ ಇನ್ಶೂರೆನ್ಸ್ ಆನ್ಲೈನ್ ಸೇವೆಗಳು ಆನ್ಲೈನ್‌ನಲ್ಲಿ ಲಭ್ಯವಿವೆ ಹಾಗೂ ಇದು ತಡೆರಹಿತ ಪ್ರಕ್ರಿಯೆಯಾಗಿದೆ. |
ದೀರ್ಘಾವಧಿಯ ಕವರ್ | ಯಮಹಾ ಟೂ ವೀಲರ್ ಇನ್ಶೂರೆನ್ಸ್ ದೀರ್ಘಾವಧಿಯ ಕವರೇಜ್ ಒದಗಿಸುತ್ತದೆ. ವಾರ್ಷಿಕ ನವೀಕರಣಗಳ ಅಗತ್ಯವಿಲ್ಲದೆ ವಿಸ್ತರಿತ ಅವಧಿಗಳಿಗೆ ನಿಮ್ಮ ಬೈಕನ್ನು ಸುರಕ್ಷಿತಗೊಳಿಸಲು ನಿಮಗೆ ಅನುಮತಿ ನೀಡುತ್ತದೆ. |
ತಪಾಸಣೆ ಇಲ್ಲದೆ ನವೀಕರಿಸಿ | ನಿಮ್ಮ ಕವರೇಜ್ ತಡೆರಹಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ವಾಹನ ತಪಾಸಣೆಯ ಅಗತ್ಯವಿಲ್ಲದೆ ನೀವು ಯಮಹಾ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ನವೀಕರಿಸಬಹುದು. |
24x7 ರಸ್ತೆಬದಿಯ ನೆರವು | ಯಮಹಾ ಟೂ ವೀಲರ್ ಇನ್ಶೂರೆನ್ಸ್ ಅಗತ್ಯವಿದ್ದಾಗ ಸಹಾಯವನ್ನು ಒದಗಿಸಲು 24x7 ತುರ್ತು ರಸ್ತೆಬದಿಯ ಸಹಾಯವನ್ನು ಹೊಂದಿದೆ. |
ಕ್ಯಾಶ್‌ಲೆಸ್ ಕ್ಲೇಮ್ಗಳು | ಎಚ್‌ಡಿಎಫ್‌ಸಿ ಎರ್ಗೋದ 2000+ ಅಧಿಕೃತ ಗ್ಯಾರೇಜ್‌ಗಳ ವ್ಯಾಪಕ ನೆಟ್ವರ್ಕ್‌ನೊಂದಿಗೆ, ನೀವು ಮುಂಗಡ ಪಾವತಿ ಮಾಡದೆ ನಿಮ್ಮ ಯಮಹಾವನ್ನು ರಿಪೇರಿ ಮಾಡಬಹುದು. |
ಇದು ಅತ್ಯುತ್ತಮ ಕವರೇಜನ್ನು ಒದಗಿಸುವುದರಿಂದ ಇದು ಹೆಚ್ಚು ಶಿಫಾರಸು ಮಾಡಲಾದ ಪ್ಲಾನ್ ಆಗಿದೆ. ಕಳ್ಳತನದ ಕವರ್ ಜೊತೆಗೆ ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಕೋಪಗಳಿಂದಾಗಿ ಉಂಟಾದ ಹಾನಿಗಳ ವಿರುದ್ಧ ಇದು ಸಂಪೂರ್ಣ ಭದ್ರತೆಯನ್ನು ಒದಗಿಸುತ್ತದೆ, ಜೊತೆಗೆ ಇನ್ನೊಂದು ವ್ಯಕ್ತಿಯು ಗಾಯಗೊಂಡರೆ ಪರಿಹಾರವನ್ನು ಖಚಿತಪಡಿಸುವ ಥರ್ಡ್ ಪಾರ್ಟಿ ಹೊಣೆಗಾರಿಕೆ ಕವರೇಜ್ ಅನ್ನು ಒದಗಿಸುತ್ತದೆ. ಇನ್ನೇನು ಬೇಕು, ನೀವು ಆ್ಯಡ್ ಆನ್‌ಗಳೊಂದಿಗೆ ನಿಮ್ಮ ಭದ್ರತೆಯನ್ನು ಬಲಪಡಿಸಲು ಕೂಡ ಆಯ್ಕೆ ಮಾಡಬಹುದು.
ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ.
ವೈಯಕ್ತಿಕ ಅಪಘಾತ
ನೈಸರ್ಗಿಕ ವಿಕೋಪಗಳು
ಥರ್ಡ್-ಪಾರ್ಟಿ ಹೊಣೆಗಾರಿಕೆ
ಆ್ಯಡ್-ಆನ್‌ಗಳ ಆಯ್ಕೆ
ಈ ಪಾಲಿಸಿಯು ವೈಯಕ್ತಿಕ ಅಪಘಾತ ಕವರ್ ಹೊಂದಿದೆ, ಇದು ನೀವು ಅಪಘಾತದಲ್ಲಿ ಒಳಗೊಂಡಿದ್ದರೆ ಹಣಕಾಸಿನ ನೆರವನ್ನು ಒದಗಿಸುತ್ತದೆ. ಥರ್ಡ್ ಪಾರ್ಟಿಗೆ ಉಂಟಾದ ಗಾಯಗಳು, ಆಸ್ತಿ ಹಾನಿ, ಸಾವು, ಅಂಗವಿಕಲತೆಯಿಂದಾಗಿ ಉಂಟಾದ ವೆಚ್ಚಗಳನ್ನು ಈ ಪ್ಲಾನ್ ಕವರ್ ಮಾಡುತ್ತದೆ. ಇದಲ್ಲದೆ, ಮೋಟಾರ್ ವಾಹನ ಕಾಯ್ದೆ 1988 ಪ್ರಕಾರ ಇದು ಕಡ್ಡಾಯ ಕವರ್ ಪ್ಲಾನ್ ಆಗಿದೆ.
ವೈಯಕ್ತಿಕ ಅಪಘಾತ
ಥರ್ಡ್-ಪಾರ್ಟಿ ಆಸ್ತಿ ಹಾನಿ
ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ
ಈ ಸ್ಟ್ಯಾಂಡ್‌ಅಲೋನ್ ಓನ್ ಡ್ಯಾಮೇಜ್ ಇನ್ಶೂರೆನ್ಸ್ ಪ್ಲಾನಿನ ಪ್ರಮುಖ ಫೀಚರ್ ಎಂದರೆ ಅದನ್ನು ಥರ್ಡ್ ಪಾರ್ಟಿ ಹೊಣೆಗಾರಿಕೆ ಕವರೇಜ್ ಪ್ಲಾನಿಗೆ ಹೆಚ್ಚುವರಿಯಾಗಿ ಬಳಸಬಹುದು. ಇದು ಅಪಘಾತಗಳಿಂದಾಗಿ ಉಂಟಾಗುವ ವೈಯಕ್ತಿಕ ಹಾನಿಗಳಿಂದ ಪ್ರಮುಖವಾಗಿ ರಕ್ಷಿಸುತ್ತದೆ. ಇದಲ್ಲದೆ, ಆ್ಯಡ್ ಆನ್‌ಗಳನ್ನು ಆಯ್ಕೆ ಮಾಡುವ ಮೂಲಕ ನೀವು ಪ್ಲಾನನ್ನು ಕಸ್ಟಮೈಜ್ ಮಾಡಬಹುದು.
ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ
ನೈಸರ್ಗಿಕ ವಿಕೋಪಗಳು
ಆ್ಯಡ್-ಆನ್‌ಗಳ ಆಯ್ಕೆ
ಈಗಷ್ಟೇ ಹೊಸ ಬೈಕನ್ನು ಖರೀದಿಸಿದವರಿಗೆ ಈ ಪ್ಲಾನ್ ಆಗಿದೆ. ಇದು ನಿಮ್ಮ ಬೈಕಿಗೆ ಉಂಟಾದ ಯಾವುದೇ ಹಾನಿಗಳಿಗೆ ಒಂದು ವರ್ಷದ ಕವರೇಜನ್ನು ಮತ್ತು ಥರ್ಡ್ ಪಾರ್ಟಿ ವ್ಯಕ್ತಿ/ಆಸ್ತಿಗೆ ಉಂಟಾದ ಹಾನಿಗಳಿಗೆ ಐದು ವರ್ಷದ ರಕ್ಷಣೆಯನ್ನು ಒದಗಿಸುತ್ತದೆ.
ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ
ನೈಸರ್ಗಿಕ ವಿಕೋಪಗಳು
ವೈಯಕ್ತಿಕ ಆಕ್ಸಿಡೆಂಟ್
ಥರ್ಡ್-ಪಾರ್ಟಿ ಹೊಣೆಗಾರಿಕೆ
ಆ್ಯಡ್-ಆನ್‌ಗಳ ಆಯ್ಕೆ
ಅತ್ಯಂತ ಜಾಗರೂಕ ಚಾಲಕರು ಕೂಡ ಅಪಘಾತಗಳು ಮತ್ತು ಆಸ್ತಿಗೆ ಹಾನಿಯಂತಹ ದುರದೃಷ್ಟಕರ ಘಟನೆಗಳನ್ನು ಎದುರಿಸಬಹುದು. ಯಮಹಾ ಬೈಕ್ ಇನ್ಶೂರೆನ್ಸ್ ಪಾಲಿಸಿ ಅಂತಹ ಎಲ್ಲಾ ಘಟನೆಗಳನ್ನು ಕವರ್ ಮಾಡುತ್ತದೆ, ಆದಾಗ್ಯೂ, ನಿಮ್ಮ ಪಾಲಿಸಿ ಪ್ರಕಾರವನ್ನು ಅವಲಂಬಿಸಿ ನೀವು ಕವರೇಜ್ ಪಡೆಯುತ್ತೀರಿ. ಉದಾಹರಣೆಗೆ, ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ಲಾನ್ ಥರ್ಡ್ ಪಾರ್ಟಿ ವ್ಯಕ್ತಿ/ಆಸ್ತಿಗೆ ಉಂಟಾದ ಹಾನಿಗಳ ವಿರುದ್ಧ ಮಾತ್ರ ರಕ್ಷಣೆ ನೀಡುತ್ತದೆ. ಆದರೆ, ಸಮಗ್ರ ಬೈಕ್ ಇನ್ಶೂರೆನ್ಸ್ ಪ್ಲಾನ್ ಈ ಕೆಳಗಿನವುಗಳನ್ನು ಕವರ್ ಮಾಡುತ್ತದೆ:
ನಿಮ್ಮ ಬೈಕಿಗಾದ ಹಾನಿಯಿಂದಾಗಿ ಅಪಘಾತದಲ್ಲಿ ಸಂಭವಿಸಿದ ಹಣಕಾಸಿನ ನಷ್ಟಗಳನ್ನು ಕವರ್ ಮಾಡುತ್ತದೆ.
ಬೆಂಕಿ ಮತ್ತು ಸ್ಫೋಟದಂತಹ ಘಟನೆಗಳಿಂದಾಗಿ ನಿಮ್ಮ ಬೈಕಿಗೆ ಉಂಟಾದ ಹಾನಿಯ ವಿರುದ್ಧ ಕವರ್ ಮಾಡುತ್ತದೆ.
ಕಳ್ಳತನದ ಪರಿಸ್ಥಿತಿಯಲ್ಲಿ, ನೀವು ಬೈಕಿನ IDV ಯೊಂದಿಗೆ ಪರಿಹಾರ ಪಡೆಯುತ್ತೀರಿ.
ಭೂಕಂಪಗಳು, ಪ್ರವಾಹಗಳು, ಗಲಭೆಗಳು ಮತ್ತು ಇನ್ನೂ ಹೆಚ್ಚಿನವುಗಳಂತಹ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳ ವಿರುದ್ಧ ಕವರ್ ಮಾಡುತ್ತದೆ.
ರೂ. 15 ಲಕ್ಷಗಳವರೆಗಿನ ನಿಮ್ಮ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ
ಥರ್ಡ್ ಪಾರ್ಟಿಗೆ ಉಂಟಾದ ಗಾಯ, ಸಾವು, ಅಂಗವಿಕಲತೆ ಮತ್ತು ಆಸ್ತಿ ಹಾನಿಯನ್ನು ಕವರ್ ಮಾಡುತ್ತದೆ.
ಹೊಸ ಯಮಹಾ ಬೈಕನ್ನು ಖರೀದಿಸುವುದು ದುಬಾರಿ ವ್ಯವಹಾರವಾಗಿದೆ ಎಂಬ ವಿಷಯ ರಹಸ್ಯವಾಗಿಲ್ಲ. ಭಾರತದಲ್ಲಿ ಟಾಪ್-ಎಂಡ್ ಮಾಡೆಲ್‌ಗಳಿಗೆ ₹ 30 ಲಕ್ಷದವರೆಗೆ ವೆಚ್ಚವಾಗಬಹುದು. ನೀವು ಇವುಗಳಲ್ಲಿ ಒಂದನ್ನು ಖರೀದಿಸಲು ಯೋಜಿಸುತ್ತಿದ್ದರೆ, ಅದನ್ನು ಸರಿಯಾದ ಇನ್ಶೂರೆನ್ಸ್‌ನೊಂದಿಗೆ ಏಕೆ ರಕ್ಷಿಸುವುದಿಲ್ಲ? ಎಚ್‌ಡಿಎಫ್‌ಸಿ ಎರ್ಗೋ ಯಮಹಾ ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸಲು ಕೆಲವು ಕಾರಣಗಳು ಇಲ್ಲಿವೆ:
ಸಮಗ್ರ ಇನ್ಶೂರೆನ್ಸ್ ಕಳ್ಳತನ, ಬೆಂಕಿ, ಅಪಘಾತಗಳು, ಥರ್ಡ್ ಪಾರ್ಟಿ ಹೊಣೆಗಾರಿಕೆ ಮತ್ತು ಭೂಕಂಪ ಮತ್ತು ಪ್ರವಾಹದಂತಹ ನೈಸರ್ಗಿಕ ವಿಕೋಪಗಳನ್ನು ಕವರ್ ಮಾಡುತ್ತದೆ. ಈ ರೀತಿಯಲ್ಲಿ ನೀವು ನಿಮ್ಮ ಯಮಹಾವನ್ನು ಆನಂದಿಸಬಹುದು ಮತ್ತು ಅದಕ್ಕೆ ಯಾವುದೇ ತೊಂದರೆಯಾಗುವುದರ ಬಗ್ಗೆ ಚಿಂತಿಸಬೇಕಾಗಿಲ್ಲ. ಅದು ಎಚ್‌ಡಿಎಫ್‌ಸಿ ಎರ್ಗೋ ಪಾಲಿಸಿಯ ಸೊಬಗಾಗಿದೆ. ಇದು ಅನಿರೀಕ್ಷಿತ ಸಂದರ್ಭಗಳ ವಿರುದ್ಧ ಸಂಪೂರ್ಣ ರಕ್ಷಣೆಯನ್ನು ಒದಗಿಸುತ್ತದೆ.
ನೀವು ಎಚ್‌ಡಿಎಫ್‌ಸಿ ಎರ್ಗೋ ಯಮಹಾ ಬೈಕ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಬೇಕಾದ ಇನ್ನೊಂದು ಕಾರಣವೆಂದರೆ ಆಕಸ್ಮಿಕ ಹಾನಿಗೆ ನಮ್ಮ ಕವರೇಜ್. ಒಂದು ವೇಳೆ ನಿಮ್ಮ ವಾಹನವು ಅಪಘಾತದಲ್ಲಿ ಯಾವುದೇ ಹಾನಿಯನ್ನು ಹೊಂದಿದ್ದರೆ, ಅಥವಾ ಸಾಗಣೆಯ ಸಮಯದಲ್ಲಿ ಟಯರ್ ಒಡೆದು ಹೋಗುವುದು, ವಿಧ್ವಂಸದ ಕ್ರಿಯೆ ಇತ್ಯಾದಿ ಸಂದರ್ಭಗಳಲ್ಲಿ ಇದು ತುಂಬಾ ಮುಖ್ಯವಾಗಿದೆ.
ಎಚ್‌ಡಿಎಫ್‌ಸಿ ಎರ್ಗೋ ಬಗ್ಗೆ ಅತ್ಯುತ್ತಮ ವಿಷಯಗಳಲ್ಲಿ ಒಂದು ಎಂದರೆ ನಾವು ಭರವಸೆ ನೀಡುವುದನ್ನು ಮಾಡುತ್ತೇವೆ. ನಮ್ಮ ವೇಗವಾದ ಟರ್ನ್‌ಅರೌಂಡ್ ಸಮಯ ಮತ್ತು ತ್ವರಿತ ಸೆಟಲ್ಮೆಂಟ್ ನಮ್ಮನ್ನು ಭಾರತದ ಅತಿದೊಡ್ಡ ಟೂ ವೀಲರ್ ಇನ್ಶೂರರ್ ಆಗಲು ಪ್ರೇರೇಪಿಸಿದೆ. ಮೊದಲ ದಿನದಂದು ಸುಮಾರು 50% ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.
ನಿಮ್ಮ ಬೈಕಿನಂತೆ, ಯಮಹಾ ಬೈಕ್ ಇನ್ಶೂರೆನ್ಸ್ ಪಾಲಿಸಿಗಳನ್ನು ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ರೂಪಿಸಬಹುದು.
ಇನ್ಶೂರೆನ್ಸ್ ಕ್ಲೈಮ್‌ಗಳ ನಗದುರಹಿತ ಸೆಟಲ್ಮೆಂಟ್ ನಮ್ಮ ಪಾಲಿಸಿದಾರರಿಗೆ ಸಂಪೂರ್ಣ ಕಾರ್ಯವಿಧಾನವನ್ನು ಸುಲಭವಾಗಿಸಿದೆ ಮತ್ತು ತೊಂದರೆ ರಹಿತವನ್ನಾಗಿಸಿದೆ. ಈ ರೀತಿಯಲ್ಲಿ ನೀವು ನಿಮ್ಮ ಕ್ಲೈಮ್ ಮೊತ್ತವನ್ನು ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟಿಗೆ ಟ್ರಾನ್ಸ್‌ಫರ್ ಮಾಡಬಹುದು, ಹಣಕಾಸು ಸಂಪನ್ಮೂಲಗಳಲ್ಲಿ ಕನಿಷ್ಠ ನಷ್ಟದೊಂದಿಗೆ ಟ್ರ್ಯಾಕ್ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.
ಬೈಕಿನಲ್ಲಿ ನಮಗೆದುರಾಗಬಹುದಾದ ತೊಂದರೆಯ ಒಂದು ವಿಷಯವೆಂದರೆ ಇದ್ದಕ್ಕಿದ್ದಂತೆ ಪ್ರತ್ಯೇಕ ಸ್ಥಳದಲ್ಲಿ ಸಿಕ್ಕಿಹಾಕಿಕೊಳ್ಳುವುದು. ನಮ್ಮ ಮೋಟಾರ್‌ಸೈಕಲ್ ಇನ್ಶೂರೆನ್ಸ್‌ನೊಂದಿಗೆ, ನೀವು 24x7 ರಸ್ತೆಬದಿಯ ನೆರವು ಪಡೆಯುತ್ತೀರಿ, ಅಲ್ಲಿ ನಿಮ್ಮ ಸಮಸ್ಯೆಯನ್ನು ಸರಿಪಡಿಸಲು ಅಥವಾ ನಿಮ್ಮ ಬೈಕನ್ನು ಸುರಕ್ಷಿತವಾಗಿಸಲು ನಮ್ಮಿಂದ ತಜ್ಞರನ್ನು ಕಳುಹಿಸುತ್ತೇವೆ.
ಕಾನೂನು ಅನುಸರಣೆಯನ್ನು ನಿರ್ವಹಿಸಲು ಮತ್ತು ನಿಮ್ಮ ಸವಾರಿಯನ್ನು ಸುರಕ್ಷಿತವಾಗಿರಿಸಲು ಯಮಹಾ ಇನ್ಶೂರೆನ್ಸ್ ಖರೀದಿಸುವುದು ಅಗತ್ಯವಾಗಿದೆ.
ಯಮಹಾ ಇನ್ಶೂರೆನ್ಸ್ ಕ್ಲೈಮ್ ಫೈಲ್ ಮಾಡುವ ಪ್ರಕ್ರಿಯೆಯನ್ನು ಎಚ್‌ಡಿಎಫ್‌ಸಿ ಎರ್ಗೋ ಸರಳಗೊಳಿಸಿದೆ. ನಿಮ್ಮ ಪಾಲಿಸಿ ನಂಬರ್, ಮೊಬೈಲ್ ನಂಬರ್ ಅಥವಾ ನೋಂದಾಯಿತ ಇಮೇಲ್ ವಿಳಾಸದೊಂದಿಗೆ ಕ್ಲೈಮ್ ನೋಂದಣಿ ಮಾಡಲು ನೀವು https://selfhelp.hdfcergo.com/SelfHelp/Authentication/ClaimRegistration ಮೇಲೆ ಕ್ಲಿಕ್ ಮಾಡಿದರೆ ಸಾಕು. ನಂತರ, ಇದನ್ನು OTP ಯೊಂದಿಗೆ ಪರಿಶೀಲಿಸಬೇಕು, ನಂತರ ನೀವು ಕ್ಲೈಮ್ ನೋಂದಣಿ ಮಾಡಬಹುದು.
1. ನಿಮ್ಮ ಯಮಹಾ ಬೈಕ್‌ನಲ್ಲಿ ನೀವು ಅಪಘಾತಕ್ಕೀಡಾದ ತಕ್ಷಣ, ನೀವು ನಿಮ್ಮ ವಾಹನವನ್ನು ತೆಗೆದುಕೊಂಡು ಹೋಗಬೇಕು, ಗ್ರಾಹಕ ಸೇವೆಗೆ ತಿಳಿಸಬೇಕು ಅಥವಾ ಹತ್ತಿರದ ನಗದುರಹಿತ ಗ್ಯಾರೇಜ್‌ಗೆ ಬೈಕ್ ಅನ್ನು ಟೋ ಮಾಡಲು ತುರ್ತು ರಸ್ತೆಬದಿಯ ಸಹಾಯವನ್ನು ಆಯ್ಕೆ ಮಾಡಬೇಕು.
2. ವಾಹನವು ಯಾವುದೇ ನೆಟ್ವರ್ಕ್ ಗ್ಯಾರೇಜ್‌ಗಳನ್ನು ತಲುಪಿದ ನಂತರ, ಎಲ್ಲಾ ಹಾನಿಗಳಿಗಾಗಿ ಸರ್ವೇಯರ್ ನಿಮ್ಮ ಬೈಕನ್ನು ಮೌಲ್ಯಮಾಪನ ಮಾಡುತ್ತಾರೆ.
3. ನಂತರ, ನೀವು ಬೈಕ್ ಇನ್ಶೂರೆನ್ಸ್ ಕ್ಲೈಮ್ ಫೈಲ್ ಮಾಡಬೇಕು ಮತ್ತು ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕು.
4. ಕ್ಲೈಮ್ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ನಿಮಗೆ SMS ಮತ್ತು ಇಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ.
5. ನಿಮ್ಮ ಯಮಹಾ ವಾಹನವು ಸಿದ್ಧವಾದ ನಂತರ, ಕಡ್ಡಾಯ ಕಡಿತ, ಸವಕಳಿ ಇತ್ಯಾದಿಗಳನ್ನು ಒಳಗೊಂಡಂತೆ ಕ್ಲೈಮ್‌ನ ನಿಮ್ಮ ಭಾಗವನ್ನು ನೀವು ನೇರವಾಗಿ ಗ್ಯಾರೇಜ್‌ಗೆ ಪಾವತಿಸಬೇಕಾಗುತ್ತದೆ. ಕ್ಲೈಮ್‌ನ ಅನುಮೋದಿತ ಮೊತ್ತವನ್ನು ನೇರವಾಗಿ ಗ್ಯಾರೇಜ್‌ಗೆ ಪಾವತಿಸಲಾಗುತ್ತದೆ.
6. ನಿಮ್ಮ ದಾಖಲೆಗಳಿಗಾಗಿ ವಿಭಜಿತ ವಿವರದೊಂದಿಗೆ ನೀವು ಕ್ಲೈಮ್‌ಗಳ ಲೆಕ್ಕಾಚಾರ ಶೀಟ್ ಅನ್ನು ಪಡೆಯುತ್ತೀರಿ.
7. ನೀವು ನಿಮ್ಮ ಕ್ಲೈಮ್‌ಗಳನ್ನು ಆನ್ಲೈನಿನಲ್ಲಿ ಕೂಡ ಟ್ರ್ಯಾಕ್ ಮಾಡಬಹುದು:https://selfhelp.hdfcergo.com/SelfHelp/Authentication/ClaimStatus.
ಯಮಹಾ ಬೈಕ್ ಇನ್ಶೂರೆನ್ಸ್ ಖರೀದಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ:
1. ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್ ಹೋಮ್ ಪೇಜ್‌ಗೆ ಭೇಟಿ ನೀಡಿದ ನಂತರ, ಟೂ ವೀಲರ್ ಇನ್ಶೂರೆನ್ಸ್ ಮೇಲೆ ಕ್ಲಿಕ್ ಮಾಡಿ.
2. ನಿಮ್ಮ ಬೈಕ್ ನಂಬರ್ ಹಂಚಿಕೊಳ್ಳುವ ಮೂಲಕ ಅಥವಾ ಅದನ್ನು ಒದಗಿಸದೆ ಯಮಹಾ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡುವ ಮೂಲಕ ನೀವು ಆನ್ಲೈನ್‌ನಲ್ಲಿ ಪ್ರೀಮಿಯಂ ತಿಳಿಯಬಹುದು.
3. ನೀವು ಬೈಕ್‌ನ ವಿವರಗಳನ್ನು ನಮೂದಿಸಬೇಕು, ಅವುಗಳೆಂದರೆ:
a. ಯಮಹಾ ಬೈಕ್‌ನ ಬ್ರ್ಯಾಂಡ್
B. ಮಾಡೆಲ್ ಮತ್ತು ಅದರ ವೇರಿಯಂಟ್
ಸಿ. ನೋಂದಣಿ ನಗರ ಮತ್ತು RTO
ಡಿ. ನೋಂದಣಿಯ ವರ್ಷ.
4. ಒಮ್ಮೆ ಈ ವಿವರಗಳನ್ನು ನಮೂದಿಸಿದ ನಂತರ, ನೀವು "ಕೋಟ್ ಪಡೆಯಿರಿ" ಮೇಲೆ ಕ್ಲಿಕ್ ಮಾಡಬೇಕು
5. ಬೈಕ್‌ನ IDV (ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ) ಅನ್ನು ನೋಂದಣಿ ವರ್ಷದ ಪ್ರಕಾರ ನಿಗದಿಸಲಾಗುತ್ತದೆ, ಇದನ್ನು ನಿಮ್ಮ ವಾಹನದ ಸ್ಥಿತಿಯ ಪ್ರಕಾರ ಬದಲಾಯಿಸಬಹುದು.
6. ಹಳೆಯ ಬೈಕ್‌ಗಳಿಗೆ ಕೆಲವು ವಿವರಗಳನ್ನು ನಮೂದಿಸಬೇಕು, ಅವುಗಳೆಂದರೆ:
ಎ. ಆರಂಭದಿಂದಲೂ ಕ್ಲೈಮ್ ಸ್ಟೇಟಸ್
B. ಬೈಕ್‌ನ ನೋ ಕ್ಲೈಮ್ ಬೋನಸ್ (ಹಿಂದಿನ ಪಾಲಿಸಿಯಲ್ಲಿ ಒದಗಿಸಿದಂತೆ)
ಸಿ. ಹಿಂದಿನ ಪಾಲಿಸಿಯ ಗಡುವು ದಿನಾಂಕ
ಡಿ. ನೀವು ಆಯ್ಕೆ ಮಾಡುವ ಪ್ಲಾನ್ ವಿಧ, ಅವುಗಳೆಂದರೆ:
i. ಸಮಗ್ರ ಬೈಕ್ ಇನ್ಶೂರೆನ್ಸ್ ಪ್ಲಾನ್
ii. ಥರ್ಡ್-ಪಾರ್ಟಿ-ಮಾತ್ರದ ಬೈಕ್ ಇನ್ಶೂರೆನ್ಸ್ ಪ್ಲಾನ್
iii. ನೀವು ಮಾನ್ಯ ಥರ್ಡ್-ಪಾರ್ಟಿ-ಮಾತ್ರದ ಪ್ಲಾನ್ ಹೊಂದಿದ್ದರೆ, ಸ್ಟ್ಯಾಂಡ್‌ಅಲೋನ್ ಸ್ವಂತ-ಹಾನಿಯ ಬೈಕ್ ಇನ್ಶೂರೆನ್ಸ್ ಪ್ಲಾನ್ ಒದಗಿಸಲಾಗುತ್ತದೆ.
ಗಮನಿಸಿ: ಹೊಸ ಬೈಕ್ ಮಾಲೀಕರು 5-ವರ್ಷದ ಥರ್ಡ್ ಪಾರ್ಟಿ ಕವರೇಜ್ ಖರೀದಿಸಬೇಕಾಗಿರುವುದರಿಂದ, ಅವರು ಮುಂದಿನ ನಾಲ್ಕು ನವೀಕರಣಗಳಿಗಾಗಿ ಸ್ವಂತ-ಹಾನಿ-ಮಾತ್ರದ ಪ್ಲಾನ್ ಅನ್ನು ಆಯ್ಕೆ ಮಾಡಬಹುದು.
7. ನಂತರ ನೀವು ನಿಮ್ಮ ಯಮಹಾ ಬೈಕ್ ಇನ್ಶೂರೆನ್ಸ್ ಪ್ಲಾನ್‌ನಲ್ಲಿ 1 ವರ್ಷ, 2 ವರ್ಷಗಳು ಅಥವಾ 3 ವರ್ಷಗಳ ಅವಧಿಯನ್ನು ಆಯ್ಕೆ ಮಾಡಬೇಕು.
8. ಅಲ್ಲದೆ, ನೋ ಕ್ಲೈಮ್ ಬೋನಸ್ ಪ್ರೊಟೆಕ್ಷನ್, ಎಂಜಿನ್ ಪ್ರೊಟೆಕ್ಷನ್‌ನಂತಹ ಹೆಚ್ಚುವರಿ ಕವರ್‌ಗಳನ್ನು ನೀವು ಆಯ್ಕೆ ಮಾಡಬಹುದು:
ಎ. ಸರಿಯಾದ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಬೈಕ್ ಮಾಲೀಕರಿಗೆ ಪರ್ಸನಲ್ ಆಕ್ಸಿಡೆಂಟ್ ಕವರೇಜ್ ಕಡ್ಡಾಯವಾಗಿದೆ.
ಬಿ. ಕಾನೂನು ಹೊಣೆಗಾರಿಕೆ ಕವರ್ ಇತ್ಯಾದಿ.
9. ಎಲ್ಲಾ ವಿವರಗಳನ್ನು ನಿಖರವಾಗಿ ಒದಗಿಸಿ, ಪರಿಶೀಲಿಸಿದ ನಂತರ, ನೀವು ಖಚಿತಪಡಿಸಬೇಕು ಮತ್ತು ನಂತರ ಆನ್ಲೈನ್ ಪಾವತಿ ಮಾಡಲು ಮುಂದುವರಿಯಬೇಕು.
10. ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೀವು ನಿಮ್ಮ ಹೆಸರು, ವಿಳಾಸ ಮತ್ತು ಇತರ ವಿವರಗಳನ್ನು ನಮೂದಿಸಬೇಕು.
11. ಪಾವತಿ ಪೂರ್ಣಗೊಂಡ ನಂತರ, ನಿಮ್ಮ ನೋಂದಾಯಿತ ಇಮೇಲ್ ವಿಳಾಸದಲ್ಲಿ ನೀವು ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುತ್ತೀರಿ.