ಬಜಾಜ್ ಬೈಕ್ ಇನ್ಶೂರೆನ್ಸ್
ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ಟೂ ವೀಲರ್ ಇನ್ಶೂರೆನ್ಸ್
ವಾರ್ಷಿಕ ಪ್ರೀಮಿಯಂ ಕೇವಲ ₹538 ರಿಂದ ಆರಂಭ*

ವಾರ್ಷಿಕ ಪ್ರೀಮಿಯಂ ಆರಂಭ

ಕೇವಲ ₹538 ಕ್ಕೆ*
7400+ ನಗದುರಹಿತ ನೆಟ್ವರ್ಕ್ ಗ್ಯಾರೇಜ್‌ಗಳು ^

2000+ ನಗದು ರಹಿತ

ನೆಟ್ವರ್ಕ್ ಗ್ಯಾರೇಜ್‌ಗಳು**
ತುರ್ತು ರಸ್ತೆಬದಿಯ ನೆರವು

ತುರ್ತು ರಸ್ತೆಬದಿ

ಸಹಾಯ
4.4 ಗ್ರಾಹಕ ರೇಟಿಂಗ್‌‌ಗಳು ^

4.4

ಗ್ರಾಹಕ ರೇಟಿಂಗ್‌‌ಗಳು
ಹೋಮ್ / ಟೂ ವೀಲರ್ ಇನ್ಶೂರೆನ್ಸ್ / ಬಜಾಜ್ ಟೂ ವೀಲರ್ ಇನ್ಶೂರೆನ್ಸ್

ಬಜಾಜ್ ಬೈಕ್ ಇನ್ಶೂರೆನ್ಸ್ ಆನ್ಲೈನ್

ಬಜಾಜ್ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನಿನಲ್ಲಿ ಖರೀದಿಸಿ

ಪ್ರತಿ ಬಜಾಜ್ ವಾಹನ ಮಾಲೀಕರು ಬಜಾಜ್ ಬೈಕ್ ಇನ್ಶೂರೆನ್ಸ್ ಹೊಂದಿರಬೇಕು, ಏಕೆಂದರೆ ಇದು ಕಳ್ಳತನ, ಬೆಂಕಿ, ವಿಧ್ವಂಸಕತೆ, ದರೋಡೆ, ಪ್ರವಾಹ, ಭೂಕಂಪ ಮತ್ತು ಇತರ ಅನಿರೀಕ್ಷಿತ ಘಟನೆಗಳಿಂದಾಗಿ ವಾಹನದ ಹಾನಿಗೆ ಕವರೇಜನ್ನು ಒದಗಿಸುತ್ತದೆ. ಈ ಘಟನೆಗಳಿಂದಾಗಿ ಹಾನಿಗಳು ಭಾರಿ ದುರಸ್ತಿ ಬಿಲ್‌ಗಳಿಗೆ ಕಾರಣವಾಗಬಹುದು, ಆದ್ದರಿಂದ ಬಜಾಜ್ ಬೈಕ್ ಮಾಲೀಕರು ಬಜಾಜ್ ಟೂ ವೀಲರ್ ಇನ್ಶೂರೆನ್ಸ್ ಹೊಂದುವುದು ಅಗತ್ಯವಾಗಿದೆ. ಬಜಾಜ್ ಗ್ರೂಪ್ ವಿವಿಧ ಕೈಗಾರಿಕೆಗಳಲ್ಲಿ ಗಮನಾರ್ಹ ಉಪಸ್ಥಿತಿಯೊಂದಿಗೆ ಭಾರತದಲ್ಲಿ ಹೆಚ್ಚು ಗೌರವಾನ್ವಿತ ಬಿಸಿನೆಸ್ ಸಂಘಟನೆಯಾಗಿದೆ. 1926 ರಲ್ಲಿ ಸ್ಥಾಪಿಸಲಾದ ಬಜಾಜ್ ಆಟೋ ಜಾಗತಿಕವಾಗಿ ಟೂ ವೀಲರ್ ಮತ್ತು ತ್ರಿ ವೀಲರ್‌ಗಳ ನಾಲ್ಕನೇ ಅತಿದೊಡ್ಡ ಉತ್ಪಾದಕರಾಗಿದೆ, ಇದು ಸುಮಾರು 70 ದೇಶಗಳಿಗೆ ರಫ್ತು ಮಾಡುತ್ತದೆ ಮತ್ತು ₹ 120 ಬಿಲಿಯನ್ ಆದಾಯವನ್ನು ಗಳಿಸುತ್ತದೆ.

ಅದರ ತ್ರಿ-ವೀಲರ್ ಆಟೋ ರಿಕ್ಷಾಗಳು ಮಾರುಕಟ್ಟೆಯನ್ನು ಆಳುತ್ತಿರುವಾಗ, ಬಜಾಜ್ ಆಟೋ ಭಾರತೀಯ ಟೂ ವೀಲರ್ ವಲಯದಲ್ಲಿ ತನ್ನ ಪಲ್ಸರ್ ಶ್ರೇಣಿಯ ಬೈಕ್‌ಗಳೊಂದಿಗೆ ಕ್ರಾಂತಿಕಾರಕವಾಗಿದೆ. ಹೆಚ್ಚುವರಿಯಾಗಿ, ಬಜಾಜ್ ವಿಶೇಷವಾಗಿ KTM ಬೈಕ್‌ಗಳ ಡ್ಯೂಕ್ ಶ್ರೇಣಿಯನ್ನು ತಯಾರಿಸುತ್ತದೆ, ಇದು ಮೋಟಾರ್‌ಸೈಕಲ್ ರೇಸಿಂಗ್‌ನಲ್ಲಿ ದೇಶದ ಬೆಳವಣಿಗೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ. ಬಜಾಜ್ ಇನ್ಶೂರೆನ್ಸ್ ಮತ್ತು ಬಜಾಜ್ ಟೂ ವೀಲರ್ ಇನ್ಶೂರೆನ್ಸ್ ಸೇರಿದಂತೆ ಸಮಗ್ರ ವಾಹನ ಕವರೇಜ್ ಬಯಸುವವರಿಗೆ ಬಜಾಜ್ ಬೈಕ್ ಇನ್ಶೂರೆನ್ಸ್ ವಿಶ್ವಾಸಾರ್ಹ ಆಯ್ಕೆಗಳನ್ನು ಒದಗಿಸುತ್ತದೆ. ಇದಲ್ಲದೆ, ಬಜಾಜ್ ಬೈಕ್ ಇನ್ಶೂರೆನ್ಸ್ ಆನ್ಲೈನ್ ಸೇವೆಗಳು ನಿಮ್ಮ ರೈಡ್ ಅನ್ನು ಸುರಕ್ಷಿತವಾಗಿರಿಸಲು ಅನುಕೂಲಕರ ಮಾರ್ಗವನ್ನು ಒದಗಿಸುತ್ತವೆ.

ಬಜಾಜ್ ಟೂ ವೀಲರ್ ಇನ್ಶೂರೆನ್ಸ್ ಎಚ್‌ಡಿಎಫ್‌ಸಿ ಎರ್ಗೋ ಆಫರ್‌ಗಳ ವಿಧಗಳು

ನಿಮ್ಮ ಬಜಾಜ್ ಮೋಟಾರ್‌ಸೈಕಲ್ ಸವಾರಿ ಮಾಡಲು ಸಿದ್ಧವಾಗಿದ್ದರೂ, ಸವಾರಿ ಮಾಡುವ ಮೊದಲು ಅದಕ್ಕೆ ಇನ್ಶೂರೆನ್ಸ್ ಬೇಕು. ಹೌದು, ಇದು ಕಾನೂನುಬದ್ಧ ಅವಶ್ಯಕತೆಯಾಗಿದೆ, ಆದರೆ ಸಂಭಾವ್ಯ ದುರದೃಷ್ಟಕರ ಘಟನೆಗಳಿಂದ ಉಂಟಾಗುವ ನಷ್ಟಗಳಿಂದ ನಿಮ್ಮನ್ನು ರಕ್ಷಿಸುವುದರಿಂದ ಬೈಕ್ ಇನ್ಶೂರೆನ್ಸ್ ಪಡೆಯುವುದು ಕೂಡ ಬುದ್ಧಿವಂತಿಕೆಯ ಹಣಕಾಸಿನ ನಿರ್ಧಾರವಾಗಿದೆ. ಬೇಸಿಕ್ ಥರ್ಡ್ ಪಾರ್ಟಿ ಹೊಣೆಗಾರಿಕೆಯ ಇನ್ಶೂರೆನ್ಸ್ ಅಥವಾ ಮಲ್ಟಿ ಇಯರ್ ಕಾಂಪ್ರಹೆನ್ಸಿವ್ ಪ್ಯಾಕೇಜ್ ಇನ್ಶೂರೆನ್ಸ್ ಆರಿಸಿಕೊಳ್ಳಿ. ನಿಮ್ಮ ಬಜಾಜ್ ಮೋಟಾರ್ ಸೈಕಲ್ ಸವಾರಿ ಮಾಡುವುದನ್ನು ಇನ್ನಷ್ಟು ಆನಂದದಾಯಕವಾಗಿಸುವ ಹಣಕಾಸಿನ ಸುರಕ್ಷತಾ ಕವಚ ಪಡೆದುಕೊಳ್ಳಿ.

ಇದು ಥರ್ಡ್ ಪಾರ್ಟಿ ಹೊಣೆಗಾರಿಕೆ, ಪರ್ಸನಲ್ ಆಕ್ಸಿಡೆಂಟ್ ಕವರ್ ಮತ್ತು ನಿರ್ಣಾಯಕವಾಗಿ ಸ್ಟ್ಯಾಂಡ್ಅಲೋನ್ ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ಕವರ್ ಅನ್ನು ಒಳಗೊಂಡಿರುವುದರಿಂದ ಇದು ಅತ್ಯಂತ ಶಿಫಾರಸು ಮಾಡಲಾದ ಆಯ್ಕೆಯಾಗಿದೆ. ನೀವು ಯಾರಿಗಾದರೂ ಆಕ್ಸಿಡೆಂಟ್‌ ಮಾಡಿದಾಗ, ಇದು ನಿಮಗೆ, ನಿಮ್ಮ ಬೈಕ್‌ಗೆ ಮತ್ತು ನಿಮ್ಮ ಹೊಣೆಗಾರಿಕೆಗಳಿಗೆ ಸಂಪೂರ್ಣ ಹಣಕಾಸು ರಕ್ಷಣೆ ಒದಗಿಸುತ್ತದೆ. ಆಯ್ದ ಆ್ಯಡ್-ಆನ್‌ಗಳೊಂದಿಗೆ ನೀವು ನಿಮ್ಮ ಕವರೇಜ್ ಅನ್ನು ವಿಸ್ತರಿಸಬಹುದು.

X
ಎಲ್ಲ ರೀತಿಯ ರಕ್ಷಣೆ ಬಯಸುವ ಬೈಕ್ ಪ್ರೇಮಿಗಳಿಗೆ ಇದು ಸೂಕ್ತವಾಗಿದೆ. ಈ ಪ್ಲಾನ್ ಕೆಳಗಿನ ಕವರೇಜ್‌ ನೀಡುತ್ತದೆ:
ಬೈಕ್ ಆಕ್ಸಿಡೆಂಟ್

ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ.

ವೈಯಕ್ತಿಕ ಅಪಘಾತ

ನೈಸರ್ಗಿಕ ವಿಕೋಪಗಳು

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

ಇನ್ನಷ್ಟು ಹುಡುಕಿ

ಇದು ಮೋಟಾರ್ ವಾಹನ ಕಾಯ್ದೆ, 1988 ಅಡಿಯಲ್ಲಿ ಕಡ್ಡಾಯವಾಗಿರುವ ಇನ್ಶೂರೆನ್ಸ್ ವಿಧವಾಗಿದೆ. ಥರ್ಡ್ ಪಾರ್ಟಿ ವ್ಯಕ್ತಿಗೆ ಸಂಭವಿಸುವ ಗಾಯ, ಮರಣ ಅಥವಾ ಅಂಗವಿಕಲತೆ ಅಥವಾ ಅವರ ಆಸ್ತಿಗೆ ಆದ ಹಾನಿ, ಇತ್ಯಾದಿಗಳಿಂದ ಉಂಟಾಗುವ ಯಾವುದೇ ನಷ್ಟಗಳ ವಿರುದ್ಧ ಇದು ನಿಮಗೆ ಆರ್ಥಿಕ ರಕ್ಷಣೆ ನೀಡುತ್ತದೆ. ಇದು ಆಕ್ಸಿಡೆಂಟ್ ಕಾರಣದಿಂದ ನೀವು ಎದುರಿಸಬಹುದಾದ ಯಾವುದೇ ಕಾನೂನು ಹೊಣೆಗಾರಿಕೆಗಳನ್ನೂ ಕವರ್ ಮಾಡುತ್ತದೆ.

X
ಹೆಚ್ಚಾಗಿ ಬೈಕ್ ಬಳಸದವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಕವರ್ ಮಾಡುವ ಅಂಶಗಳೆಂದರೆ,:

ವೈಯಕ್ತಿಕ ಅಪಘಾತ

ಥರ್ಡ್-ಪಾರ್ಟಿ ಆಸ್ತಿ ಹಾನಿ

ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ

ಈಗಾಗಲೇ ಥರ್ಡ್ ಪಾರ್ಟಿ ಹೊಣೆಗಾರಿಕೆ ಇನ್ಶೂರೆನ್ಸ್ ಪಾಲಿಸಿ ಹೊಂದಿದ್ದು, ಕವರೇಜ್ ವ್ಯಾಪ್ತಿ ಹೆಚ್ಚಿಸಲು ಬಯಸುವವರಿಗೆ ಈ ಪಾಲಿಸಿಯು ಸೂಕ್ತವಾಗಿದೆ. ಆಕ್ಸಿಡೆಂಟ್‌ನಿಂದ ನಿಮ್ಮ ಸ್ವಂತ ವಾಹನಕ್ಕೆ ಉಂಟಾಗುವ ಹಾನಿಯಿಂದ ಆಗುವ ನಷ್ಟಗಳ ವಿರುದ್ಧ ಇದು ನಿಮಗೆ ರಕ್ಷಣೆ ನೀಡುತ್ತದೆ. ಇದಲ್ಲದೆ, ನಿಮ್ಮ ಕವರೇಜ್ ಹೆಚ್ಚಿಸಲು ನೀವು ಆ್ಯಡ್-ಆನ್‌ಗಳ ಆಯ್ಕೆಯನ್ನು ಅನ್ಲಾಕ್ ಮಾಡಬಹುದು.

X
ಮಾನ್ಯವಾದ ಥರ್ಡ್ ಪಾರ್ಟಿ ಕವರ್ ಹೊಂದಿರುವವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:
ಬೈಕ್ ಆಕ್ಸಿಡೆಂಟ್

ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ

ನೈಸರ್ಗಿಕ ವಿಕೋಪಗಳು

ಆ್ಯಡ್-ಆನ್‌ಗಳ ಆಯ್ಕೆ

ನಿಮ್ಮ ಬೈಕ್ ಮಾಲೀಕತ್ವದ ಅನುಭವಕ್ಕೆ ಅನುಕೂಲತೆ ಮತ್ತು ಸರ್ವತೋಮುಖ ರಕ್ಷಣೆಯನ್ನು ನೀಡಲು ವಿನ್ಯಾಸಗೊಳಿಸಲಾದ ಪ್ಲಾನ್, ಮಲ್ಟಿ ಇಯರ್ ಬೈಕ್ ಇನ್ಶೂರೆನ್ಸ್ ಪಾಲಿಸಿ ಐದು ವರ್ಷದ ಥರ್ಡ್ ಪಾರ್ಟಿ ಹೊಣೆಗಾರಿಕೆ ಅಂಶ ಮತ್ತು ವಾರ್ಷಿಕವಾಗಿ ನವೀಕರಿಸಬಹುದಾದ ಸ್ವಂತ ಹಾನಿ ಇನ್ಶೂರೆನ್ಸ್ ಘಟಕವನ್ನು ಒಳಗೊಂಡಿದೆ. ಓನ್ ಡ್ಯಾಮೇಜ್ ಅಂಶವನ್ನು ಸಮಯಕ್ಕೆ ಸರಿಯಾಗಿ ನವೀಕರಿಸಲು ಮರೆತರೂ ನಿಮಗೆ ಆರ್ಥಿಕ ರಕ್ಷಣೆ ನೀಡಲಾಗುತ್ತದೆ.

X
ಹೊಚ್ಚ ಹೊಸ ಟೂ ವೀಲರ್ ಖರೀದಿಸಿದವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಒಳಗೊಳ್ಳುವುದೇನೆಂದರೆ:
ಬೈಕ್ ಆಕ್ಸಿಡೆಂಟ್

ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ

ನೈಸರ್ಗಿಕ ವಿಕೋಪಗಳು

ವೈಯಕ್ತಿಕ ಆಕ್ಸಿಡೆಂಟ್

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

ಒಳಗೊಳ್ಳುವ ಮತ್ತು ಒಳಗೊಳ್ಳದ ಅಂಶಗಳು ಬಜಾಜ್ ಟೂ ವೀಲರ್ ಇನ್ಶೂರೆನ್ಸ್

ನಿಮ್ಮ ಬಜಾಜ್ ಆಟೋ ಬೈಕ್ ಇನ್ಶೂರೆನ್ಸ್ ಪಾಲಿಸಿ ನಿಮ್ಮ ಪಾಲಿಸಿ ಪ್ರಕಾರವನ್ನು ಅವಲಂಬಿಸಿ ಕವರೇಜ್ ಒದಗಿಸುತ್ತದೆ. ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಆದ ಹಾನಿಯ ವಿರುದ್ಧ ಮಾತ್ರ ಕವರೇಜ್ ಒದಗಿಸಿದರೆ, ಸಮಗ್ರ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಈ ಕೆಳಗಿನವುಗಳನ್ನು ಕವರ್ ಮಾಡುತ್ತದೆ:

ಅಪಘಾತಗಳು

ಅಪಘಾತಗಳು

ಆಕ್ಸಿಡೆಂಟ್‌ನಿಂದ ನಿಮ್ಮ ಸ್ವಂತ ಬೈಕ್‌ಗೆ ಹಾನಿಯಾಗುವುದರಿಂದ ಉಂಟಾಗುವ ಹಣಕಾಸು ನಷ್ಟಗಳು ಕವರ್ ಆಗುತ್ತವೆ.

ಬೆಂಕಿ ಮತ್ತು ಸ್ಫೋಟ

ಬೆಂಕಿ ಮತ್ತು ಸ್ಫೋಟ

ಬೆಂಕಿ ಅಥವಾ ಸ್ಫೋಟದಿಂದ ನಿಮ್ಮ ಬೈಕ್‌ಗೆ ಉಂಟಾದ ಹಾನಿಯು ಕವರ್ ಆಗುತ್ತದೆ.

ಕಳ್ಳತನ

ಕಳ್ಳತನ

ನಿಮ್ಮ ಬೈಕ್ ಕಳ್ಳತನವಾದರೆ, ನೀವು ಬೈಕಿನ IDV ಗೆ ಪರಿಹಾರ ಪಡೆಯುತ್ತೀರಿ.

ವಿಪತ್ತುಗಳು

ನೈಸರ್ಗಿಕ/ಮಾನವನಿರ್ಮಿತ ವಿಕೋಪಗಳು

ಭೂಕಂಪ, ಬಿರುಗಾಳಿ, ಪ್ರವಾಹ, ಗಲಭೆ, ವಿಧ್ವಂಸಕ ಕೃತ್ಯ, ಮುಂತಾದ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳನ್ನು ಕವರ್ ಮಾಡಲಾಗುತ್ತದೆ.

ವೈಯಕ್ತಿಕ ಆಕ್ಸಿಡೆಂಟ್

ವೈಯಕ್ತಿಕ ಆಕ್ಸಿಡೆಂಟ್

₹15 ಲಕ್ಷದೊಳಗಿನ ನಿಮ್ಮ ಚಿಕಿತ್ಸೆ ಶುಲ್ಕಗಳನ್ನು ಭರಿಸಲಾಗುತ್ತದೆ.

ಥರ್ಡ್ ಪಾರ್ಟಿ ಹೊಣೆಗಾರಿಕೆ

ಥರ್ಡ್ ಪಾರ್ಟಿ ಹೊಣೆಗಾರಿಕೆ

ಥರ್ಡ್ ಪಾರ್ಟಿ ವ್ಯಕ್ತಿಗೆ ಸಂಭವಿಸುವ ಗಾಯ, ಅಂಗವೈಕಲ್ಯ ಅಥವಾ ಸಾವು ಮತ್ತು ಅವರ ಆಸ್ತಿಗೆ ಆದ ಹಾನಿಯನ್ನು ಕೂಡ ಕವರ್ ಮಾಡಲಾಗುತ್ತದೆ.

ಬಜಾಜ್ ಟೂ ವೀಲರ್ ಇನ್ಶೂರೆನ್ಸ್ ಆ್ಯಡ್-ಆನ್‌ಗಳು

ನಿಮ್ಮ ಟೂ ವೀಲರ್‌ಗೆ ಸಮಗ್ರ ರಕ್ಷಣೆಯನ್ನು ಒದಗಿಸಲು ವಿವಿಧ ಆ್ಯಡ್-ಆನ್‌ಗಳೊಂದಿಗೆ ನಿಮ್ಮ ಬಜಾಜ್ ಬೈಕ್ ಇನ್ಶೂರೆನ್ಸ್‌ನ ಕವರೇಜನ್ನು ವಿಸ್ತರಿಸಿ. ಬಜಾಜ್ ಇನ್ಶೂರೆನ್ಸ್‌ನೊಂದಿಗೆ ಲಭ್ಯವಿರುವ ಕೆಲವು ಮೌಲ್ಯಯುತ ಆ್ಯಡ್-ಆನ್‌ಗಳು ಇಲ್ಲಿವೆ :

1

ಶೂನ್ಯ ಸವಕಳಿ ಅಥವಾ ಸವಕಳಿ ಇಲ್ಲದಿರುವಿಕೆ

ಶೂನ್ಯ ಸವಕಳಿ ಆ್ಯಡ್-ಆನ್ ಅನ್ನು ಸವಕಳಿ ಇಲ್ಲದಿರುವಿಕೆ ಎಂದು ಕೂಡ ಕರೆಯಲಾಗುತ್ತದೆ, ಪಾರ್ಟ್‌ಗಳಲ್ಲಿನ ಸವಕಳಿಗಾಗಿ ಯಾವುದೇ ಕಡಿತವಿಲ್ಲದೆ ನೀವು ಪೂರ್ಣ ಕ್ಲೈಮ್ ಮೊತ್ತವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ. ಇದರರ್ಥ ನಿಮ್ಮ ಬಜಾಜ್ ಬೈಕ್‌ಗಾಗಿ ಎಚ್‌ಡಿಎಫ್‌ಸಿ ಎರ್ಗೋದ ಟೂ ವೀಲರ್ ಇನ್ಶೂರೆನ್ಸ್ ಪ್ಲಾನ್ ರಿಪೇರಿ ಅಥವಾ ಬದಲಿಸುವಿಕೆಗಳ ಸಂಪೂರ್ಣ ವೆಚ್ಚವನ್ನು ಕವರ್ ಮಾಡುತ್ತದೆ, ಹಾನಿಯ ಸಂದರ್ಭದಲ್ಲಿ ಗಮನಾರ್ಹ ಹಣಕಾಸಿನ ಪರಿಹಾರವನ್ನು ಒದಗಿಸುತ್ತದೆ.
2

NCB ಪ್ರೊಟೆಕ್ಷನ್

ನೋ ಕ್ಲೈಮ್ ಬೋನಸ್ (NCB) ಪ್ರೊಟೆಕ್ಷನ್ ಆ್ಯಡ್-ಆನ್, ಕ್ಲೈಮ್ ಮಾಡಿದ ನಂತರವೂ ನಿಮ್ಮ NCB ಯನ್ನು ಉಳಿಸಿಕೊಳ್ಳಲು ನಿಮಗೆ ಅನುಮತಿ ನೀಡುತ್ತದೆ. ಸಾಮಾನ್ಯವಾಗಿ, ಕ್ಲೈಮ್ ಮಾಡುವುದರಿಂದ ನಿಮ್ಮ NCB ಕಡಿಮೆಯಾಗುತ್ತದೆ, ಆದರೆ ಈ ಆ್ಯಡ್-ಆನ್‌ನೊಂದಿಗೆ, ಭವಿಷ್ಯದಲ್ಲಿ ಕಡಿಮೆ ಪ್ರೀಮಿಯಂಗಳನ್ನು ಖಚಿತಪಡಿಸುವ ಮೂಲಕ ನೀವು ನಿಮ್ಮ ಸಂಗ್ರಹಿಸಿದ ಬೋನಸ್ ಅನ್ನು ರಕ್ಷಿಸಬಹುದು. ಉತ್ತಮ ಕ್ಲೈಮ್ ಇತಿಹಾಸದ ಪ್ರಯೋಜನಗಳನ್ನು ನಿರ್ವಹಿಸಲು ಇದು ಅತ್ಯುತ್ತಮ ಆಯ್ಕೆಯಾಗಿದೆ.
3

ಕನ್ಸೂಮೆಬಲ್ಸ್ ಕವರ್ ವೆಚ್ಚ

ಕನ್ಸೂಮೆಬಲ್ಸ್ ಕವರ್ ಆ್ಯಡ್ ಆನ್ ವೆಚ್ಚವು ಎಚ್‌ಡಿಎಫ್‌ಸಿ ಎರ್ಗೋದ ನಿಮ್ಮ ಬಜಾಜ್ ಬೈಕ್ ಇನ್ಶೂರೆನ್ಸ್ ಪ್ಲಾನ್ ಇದು ಎಂಜಿನ್ ಆಯಿಲ್, ನಟ್‌ಗಳು ಮತ್ತು ಬೋಲ್ಟ್‌ಗಳು, ಲೂಬ್ರಿಕೆಂಟ್‌ಗಳು ಮತ್ತು ರಿಪೇರಿಗಳಲ್ಲಿ ಬಳಸಲಾಗುವ ಇತರ ವಸ್ತುಗಳ ವೆಚ್ಚವನ್ನು ಕವರ್ ಮಾಡುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ಈ ಆ್ಯಡ್-ಆನ್ ಬಳಕೆ ಮಾಡಬಹುದಾದ ಗೃಹೋಪಯೋಗಿ ವಸ್ತುಗಳ ವೆಚ್ಚಗಳನ್ನು ಕವರ್ ಮಾಡಲು ಸಹಾಯ ಮಾಡುತ್ತದೆ, ದುರಸ್ತಿ ಸಮಯದಲ್ಲಿ ಜೇಬಿನಿಂದ ಹೊರ ಹೋಗಬಹುದಾದ ವೆಚ್ಚಗಳನ್ನು ಕಡಿಮೆ ಮಾಡುತ್ತದೆ.
4

ಎಂಜಿನ್ ಮತ್ತು ಗೇರ್-ಬಾಕ್ಸ್ ಪ್ರೊಟೆಕ್ಟರ್

ಎಂಜಿನ್ ಮತ್ತು ಗೇರ್-ಬಾಕ್ಸ್ ಪ್ರೊಟೆಕ್ಟರ್ ಆ್ಯಡ್-ಆನ್ ಸಾಮಾನ್ಯವಾಗಿ ಸ್ಟ್ಯಾಂಡರ್ಡ್ ಪಾಲಿಸಿಗಳ ಅಡಿಯಲ್ಲಿ ಕವರ್ ಆಗದ ಎಂಜಿನ್-ಸಂಬಂಧಿತ ಹಾನಿಗಳಿಗೆ ಕವರೇಜನ್ನು ಒದಗಿಸುತ್ತದೆ. ನೀರು ಒಳ ಹೋಗುವಿಕೆ, ತೈಲ ಸೋರಿಕೆ ಅಥವಾ ಇತರ ಯಾಂತ್ರಿಕ ವೈಫಲ್ಯಗಳಿಂದಾಗಿ ಉಂಟಾದ ಹಾನಿಯನ್ನು ಇದು ಒಳಗೊಂಡಿದೆ. ಈ ಆ್ಯಡ್-ಆನ್‌ನೊಂದಿಗೆ, ನಿಮ್ಮ ಬಜಾಜ್ ಬೈಕ್ ಇನ್ಶೂರೆನ್ಸ್ ಅನಿರೀಕ್ಷಿತ ಘಟನೆಗಳ ವಿರುದ್ಧ ನಿಮ್ಮ ಎಂಜಿನ್ ರಕ್ಷಿಸಲ್ಪಡುವುದನ್ನು ಖಚಿತಪಡಿಸುತ್ತದೆ.
5

ತುರ್ತು ಸಹಾಯ ಕವರ್

ನಿಮ್ಮ ಟೂ ವೀಲರ್ ಕೆಟ್ಟು ನಿಂತರೆ ಮತ್ತು ಟೋ ಅಥವಾ ರಿಪೇರಿ ಮಾಡುವ ಅಗತ್ಯವಿದ್ದರೆ ತುರ್ತು ಸಹಾಯ ಆ್ಯಡ್-ಆನ್ ಕವರ್ 24/7 ಬೆಂಬಲವನ್ನು ಖಚಿತಪಡಿಸುತ್ತದೆ.
6

ರಿಟರ್ನ್ ಟು ಇನ್ವಾಯ್ಸ್ ಕವರ್

ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಕವರ್ ನಿಮ್ಮ ಬೈಕ್ ಕಳ್ಳತನವಾದರೆ ಅಥವಾ ರಿಪೇರಿ ಮಾಡಲಾಗದಷ್ಟು ಹಾನಿಗೊಳಗಾದರೆ ನಿಮ್ಮ ಟೂ ವೀಲರ್ ವಾಹನದ ಮೂಲ ಖರೀದಿ ಮೌಲ್ಯಕ್ಕೆ ಸಮನಾದ ಕ್ಲೈಮ್ ಮೊತ್ತವನ್ನು ಒದಗಿಸುತ್ತದೆ.
7

ನಗದು ಭತ್ಯೆ

ನಿಮ್ಮ ಇನ್ಶೂರ್ಡ್ ವಾಹನವನ್ನು ದುರಸ್ತಿ ಕೆಲಸಕ್ಕಾಗಿ ಗ್ಯಾರೇಜಿನಲ್ಲಿ ಇಡಬೇಕಾದರೆ ಈ ಆ್ಯಡ್-ಆನ್ ಕವರ್ ₹ 200 ದೈನಂದಿನ ನಗದು ಭತ್ಯೆಯನ್ನು ಒದಗಿಸುತ್ತದೆ. ಭಾಗಶಃ ನಷ್ಟದ ರಿಪೇರಿಗಳಿಗೆ 10 ದಿನಗಳವರೆಗೆ ಭತ್ಯೆ ಲಭ್ಯವಿದೆ.
8

EMI ಪ್ರೊಟೆಕ್ಟರ್ ಆ್ಯಡ್-ಆನ್

ರಿಪೇರಿ ಕೆಲಸಕ್ಕಾಗಿ ನಿಮ್ಮ ಬೈಕನ್ನು 30 ದಿನಗಳಿಗಿಂತ ಹೆಚ್ಚು ಸಮಯದವರೆಗೆ ಗ್ಯಾರೇಜಿನಲ್ಲಿ ಇಡಬೇಕಾದರೆ, ಮೂಲ ಪಾಲಿಸಿ ಡಾಕ್ಯುಮೆಂಟ್‌ನಲ್ಲಿ ನಿರ್ದಿಷ್ಟಪಡಿಸಿದಂತೆ ಈ ಆ್ಯಡ್-ಆನ್ ಅಡಿಯಲ್ಲಿ ಬೈಕಿಗೆ ಮಾಸಿಕ EMI ಪಾವತಿಸಲು ಎಚ್‌ಡಿಎಫ್‌ಸಿ ಎರ್ಗೋ ಭರವಸೆ ನೀಡುತ್ತದೆ.

ಜನಪ್ರಿಯ ಬಜಾಜ್ ಟೂ ವೀಲರ್ ಮಾಡೆಲ್‌ಗಳು

1
ಬಜಾಜ್ ಪಲ್ಸರ್ 150
ಈ ವಿಭಾಗದ ಕ್ರಾಂತಿಕಾರಿ ಬೈಕ್, ಪಲ್ಸರ್ 150 ಖರೀದಿಸಲು ಬೇಕಾದ ಎಲ್ಲ ಕಾರಣಗಳನ್ನೂ ಹೊಂದಿದೆ - ಸ್ಟೈಲ್, ಪವರ್ ಮತ್ತು ಮೈಲೇಜ್. ಬಜಾಜ್ ಅತ್ಯುತ್ತಮ ಸೇವೆಯೊಂದಿಗೆ ಸಂಯೋಜನೆಗೊಂಡಿರುವ ಪಲ್ಸರ್ 150 ತನ್ನ ವರ್ಗದಲ್ಲಿ ಅತಿ ಹೆಚ್ಚು ಮಾರಾಟವಾಗುವ ಬೈಕ್ ಆಗಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಹೊಸ ನಿಯಾನ್ ಆವೃತ್ತಿಯು ನಿಯಾನ್ ಟ್ರೇಲ್‌ಗಳೊಂದಿಗೆ ಹಾಗೂ ಹೊಸ ಮ್ಯಾಟ್ ಪೇಂಟ್ ಫಿನಿಶ್‌ನೊಂದಿಗೆ ಈ ಶ್ರೇಣಿಗೆ ಇನ್ನಷ್ಟು ಮೆರುಗು ಸೇರಿಸುತ್ತದೆ ಹಾಗೂ ಗುಂಪಿನಲ್ಲಿ ಇದನ್ನು ಎದ್ದು ಕಾಣುವಂತೆ ಮಾಡುತ್ತದೆ.
2
ಬಜಾಜ್ ಪಲ್ಸರ್ NS200
ಅತ್ಯಂತ ಜನಪ್ರಿಯ 200 cc ಬೈಕ್‌ಗಳಲ್ಲಿ ಒಂದಾದ ಬಜಾಜ್ ಪಲ್ಸರ್ NS200 220F ಗಿಂತ ಸ್ವಲ್ಪ ಮೇಲಿದ್ದು, 24.13 PS ಪವರ್ ಹೊಂದಿದೆ. ಇದು ಒಂದೇ ಚಾನೆಲ್ ABS ನೊಂದಿಗೆ ಅತ್ಯುತ್ತಮ ಟ್ವಿನ್ ಡಿಸ್ಕ್ ಬ್ರೇಕ್‌ಗಳೊಂದಿಗೆ ಬರುತ್ತದೆ. ಅದರ ಆಕ್ರಮಣಕಾರಿ ಸ್ಟೈಲಿಂಗ್, ಸ್ಟ್ರೈಕಿಂಗ್ ಪೇಂಟ್ ಸ್ಕೀಮ್ ಆಯ್ಕೆಗಳೊಂದಿಗೆ, ಅದನ್ನು ಬೀದಿಗಳಲ್ಲಿ ಇತರ ಬೈಕ್‌ಗಳಿಂದ ಪ್ರತ್ಯೇಕಿಸುತ್ತದೆ.
3
ಬಜಾಜ್ ಪಲ್ಸರ್ 220F
2007 ರಲ್ಲಿ ಪರಿಚಯಿಸಿದ್ದ ಶರವೇಗದ ಈ ಹಳೆಯ ಬೈಕ್ ಆ ಕಾಲದಲ್ಲಿ ಅದರ ಸಹಜ ಪವರ್ ಮತ್ತು ಆಕ್ರಮಣಕಾರಿ ನಿಲುವಿಗೆ ಹೆಸರುವಾಸಿಯಾಗಿತ್ತು. ಬೈಕ್‌ನ BS VI ಆವೃತ್ತಿಯು ಅದರ ಸಿಂಗಲ್-ಸಿಲಿಂಡರ್, 220 cc ಎಂಜಿನ್‌ನಿಂದ 20.4 PS ನೀಡುತ್ತವೆ. ಇದು ಏರೋಡೈನಮಿಕ್ ವಿನ್ಯಾಸದೊಂದಿಗೆ ಮುಂದುವರೆಯುತ್ತದೆ ಮತ್ತು ಒಂದೇ ABS ಚಾನೆಲ್‌ನೊಂದಿಗೆ ಜೋಡಿಸಲಾದ ಟ್ವಿನ್ ಡಿಸ್ಕ್ ಬ್ರೇಕ್‌ಗಳೊಂದಿಗೆ ಬರುತ್ತದೆ.
4
ಬಜಾಜ್ ಅವೆಂಜರ್ ಕ್ರೂಸ್ 220
ಕ್ರೋಮ್ ಹೈಲೈಟ್‌ಗಳು ಮತ್ತು ನಯವಾದ ಕರ್ವ್‌ಗಳೊಂದಿಗೆ ಟೈಮ್‌ಲೆಸ್ ಕ್ರೂಸರ್ ವಿನ್ಯಾಸವು ಎಲ್ಲರೂ ಒಮ್ಮೆ ತಿರುಗಿ ನೋಡುವಂತೆ ಮಾಡುತ್ತದೆ. ಆರಾಮದಾಯಕವಾಗಿ ಕುಳಿತು ಚಾಲನೆ ಮಾಡುವ ಸೌಕರ್ಯವು ದೂರದ ಪ್ರಯಾಣಗಳನ್ನು ಅನುಕೂಲಕರವಾಗಿಸುತ್ತದೆ. ಇದರ ಪೇಟೆಂಟ್ ಪಡೆದ DTS-i ತಂತ್ರಜ್ಞಾನದ 220 cc ಎಂಜಿನ್ ಹೆದ್ದಾರಿಗಳಲ್ಲಿ ಸವಾರಿ ಮಾಡಲು 18.4 PS ಶಕ್ತಿಯನ್ನು ಉತ್ಪಾದಿಸುತ್ತದೆ. ಸಿಂಗಲ್-ಚಾನೆಲ್ ABS ತನ್ನ ವರ್ಗದಲ್ಲಿ ಪ್ರಮಾಣಿತ ಸುರಕ್ಷತಾ ಫೀಚರ್ ಆಗಿದೆ ಮತ್ತು ಇದು ಅವೆಂಜರ್ ಅನ್ನು ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟಕುವ ಕ್ರೂಜರ್‌ಗಳಲ್ಲಿ ಒಂದಾಗಿಸಿದೆ.
5
ಬಜಾಜ್ ಡಾಮಿನಾರ್ 400
ಬಜಾಜ್ ಪಾಳಯದ ಅತ್ಯಂತ ಪವರ್‌ಫುಲ್ ಬೈಕ್ ಡಾಮಿನಾರ್ 400 373 cc ಡೈರೆಕ್ಟ್ ಓವರ್‌ಹೆಡ್ ಕ್ಯಾಮ್‌ಶಾಫ್ಟ್ (DOHC), ಲಿಕ್ವಿಡ್ ಕೂಲ್ಡ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್‌ನೊಂದಿಗೆ ಬರುತ್ತದೆ, 40 PS ಶಕ್ತಿಯನ್ನು ಉತ್ಪಾದಿಸುತ್ತದೆ. ಇದರ ಪ್ರಬಲ ನೋಟ ಹಾಗೂ ಸಮರ್ಥ ಎಕ್ಸಾಸ್ಟ್ ಗಮನ ಸೆಳೆಯುವಂತೆ ಮಾಡುತ್ತವೆ. ಅಲ್ಲದೆ ಇದರ ನೇರ ಸ್ಪೋರ್ಟ್ಸ್ ಟೂರರ್ ವಿನ್ಯಾಸವು ಇಡೀ ದಿನದ ಸವಾರಿಯ ನಂತರವೂ ಆರಾಮದಿಂದ ಇರುವಂತೆ ಮಾಡುತ್ತದೆ. ಸುರಕ್ಷತೆಗಾಗಿ ಇದು ಅತ್ಯುತ್ತಮ ದರ್ಜೆಯ USD ಫೋರ್ಕ್‌ಗಳು ಮತ್ತು ಟ್ವಿನ್-ಚಾನೆಲ್ ABS ನೊಂದಿಗೆ ಬರುತ್ತದೆ.
6
ಬಜಾಜ್ ಚೇತಕ್
ಬಜಾಜ್ ಚೇತಕ್ ತನ್ನ ಐಕಾನಿಕ್ ಸ್ಕೂಟರ್ ವಿನ್ಯಾಸದೊಂದಿಗೆ ಬ್ರ್ಯಾಂಡ್‌ನ ಪಾಳಯದ ಇನ್ನೊಂದು ಅಪರೂಪದ ಬೈಕ್ ಆಗಿದೆ. ಈಗ ಎಲೆಕ್ಟ್ರಿಕ್ ಅವತಾರದಲ್ಲಿ ಲಭ್ಯವಿದ್ದು, ಕಾಲಕ್ಕೆ ತಕ್ಕಂತೆ ಆಧುನಿಕವಾಗಿದೆ. ಇದು 12-ಇಂಚ್ ಅಲಾಯ್ ವೀಲ್‌ಗಳೊಂದಿಗೆ ಬರುತ್ತದೆ. ಇಬ್ಬರು ಆರಾಮಾಗಿ ಕುಳಿತುಕೊಳ್ಳಬಹುದಾದ ನಯವಾದ ವಿನ್ಯಾಸದೊಂದಿಗೆ ಬರುತ್ತದೆ ಮತ್ತು ಪೂರ್ತಿ ಚಾರ್ಜ್ ಮಾಡಿದರೆ 95 ಕಿಲೋಮೀಟರ್‌ಗಳವರೆಗೆ ಸವಾರಿ ಮಾಡಬಹುದು. 4080 W ಮೋಟಾರ್ ಸ್ಕೂಟರನ್ನು 70 kmph ಟಾಪ್ ಸ್ಪೀಡ್ ತಲುಪಲು ಅವಕಾಶ ನೀಡುತ್ತದೆ. ಬ್ಯಾಟರಿ ಬೇಗ ಚಾರ್ಜ್ ಆಗುತ್ತದೆ ಹೀಗಾಗಿ ದೂರದ ಸವಾರಿಗಳಿಗೆ ಯಾವ ಸಮಸ್ಯೆಯೂ ಆಗುವುದಿಲ್ಲ.

ಎಚ್‌ಡಿಎಫ್‌ಸಿ ಎರ್ಗೋ ಏಕೆ ನಿಮ್ಮ ಮೊದಲ ಆಯ್ಕೆಯಾಗಿರಬೇಕು?

ಬಜಾಜ್ ಬೈಕ್ ಇನ್ಶೂರೆನ್ಸ್ ಮೋಟಾರ್ ಸೈಕಲ್ ಸವಾರಿ ಮಾಡಲು ಪ್ರಮುಖವಾಗಿದೆ. ನಿಮಗೆ ಆಕ್ಸಿಡೆಂಟ್ ಆದರೆ, ಅಥವಾ ನಿಮ್ಮ ಬೈಕ್ ಕಳುವಾದರೆ, ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಹಣಕಾಸಿನ ನಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಪ್ರವಾಹ, ತುಫಾನು, ಭೂಕಂಪ, ಗಲಭೆ ಅಥವಾ ವಿಧ್ವಂಸಕ ರೀತಿಯ ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳ ಕಾರಣದಿಂದ ನಿಮ್ಮ ಬೈಕ್‌ಗೆ ಆಗುವ ಯಾವುದೇ ಹಾನಿಯನ್ನು ಬಜಾಜ್ ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುತ್ತದೆ. ಇದಕ್ಕಾಗಿ ನೀವು ಕೈಯಾರೆ ಖರ್ಚು ಮಾಡದಂತೆ ಪಾಲಿಸಿಯು ನೋಡಿಕೊಳ್ಳುತ್ತದೆ. ಈ ಕೆಳಗಿನ ಕಾರಣಗಳಿಗಾಗಿ ನಿಮ್ಮ ಬಜಾಜ್ ಬೈಕ್ ಇನ್ಶೂರೆನ್ಸ್ ಪಾಲಿಸಿ ಗಾಗಿ ಎಚ್‌ಡಿಎಫ್‌ಸಿ ಎರ್ಗೋ ಆಯ್ಕೆಮಾಡಿ:

ವ್ಯಾಪಕ ಸೇವೆ

ವ್ಯಾಪಕ ಸೇವೆ

ನಿಮ್ಮ ನೆರೆಹೊರೆಯಲ್ಲಿ ಮತ್ತು ದೇಶದಾದ್ಯಂತ ಗಣನೀಯ ಉಪಸ್ಥಿತಿ ಹೊಂದಿರುವ ವಿಮಾದಾತರನ್ನು ನೀವು ಆಯ್ದುಕೊಳ್ಳಬೇಕು. ಭಾರತದಾದ್ಯಂತ 7100 ಕ್ಕೂ ಹೆಚ್ಚು ನಗದುರಹಿತ ಗ್ಯಾರೇಜ್‌ಗಳನ್ನು ಹೊಂದಿರುವ ಎಚ್‌ಡಿಎಫ್‌ಸಿ ಎರ್ಗೋ, ಸದಾ ನಿಮ್ಮ ಸಹಾಯಕ್ಕೆ ನಿಲ್ಲುತ್ತದೆ.

24x7 ರಸ್ತೆಬದಿಯ ನೆರವು

24x7 ರಸ್ತೆಬದಿಯ ನೆರವು

24x7 ರಸ್ತೆಬದಿಯ ನೆರವು ಸೌಲಭ್ಯದಿಂದಾಗಿ, ವಾಹನದ ಬ್ರೇಕ್‌ಡೌನ್ ಸಂದರ್ಭದಲ್ಲಿ ನೀವು ಎಂದಿಗೂ ಕೈಚೆಲ್ಲಿ ಕೂರಬೇಕಾಗಿಲ್ಲ.

ಒಂದು ಕೋಟಿಗಿಂತ ಹೆಚ್ಚು ಗ್ರಾಹಕರು

ಒಂದು ಕೋಟಿಗಿಂತ ಹೆಚ್ಚು ಗ್ರಾಹಕರು

ಎಚ್‌ಡಿಎಫ್‌ಸಿ ಎರ್ಗೋ 1.6 ಕೋಟಿಗೂ ಹೆಚ್ಚು ಸಂತೃಪ್ತ ಗ್ರಾಹಕರನ್ನು ಹೊಂದಿದೆ. ಹಾಗಾಗಿ, ನಿಮ್ಮ ಅಗತ್ಯಗಳ ಪೂರೈಕೆಯ ಬಗ್ಗೆ ಯಾವ ಚಿಂತೆಯೂ ಬೇಡ.

ಓವರ್‌ನೈಟ್ ಸೇವೆ

ಓವರ್‌ನೈಟ್ ಸೇವೆ

ನಿಮ್ಮ ಕಾರನ್ನು ಸರ್ವಿಸ್‌ಗೆ ಕೊಟ್ಟಾಗ, ನಿಮ್ಮ ದಿನಚರಿ ಏರುಪೇರಾಗಬಹುದು. ಆದರೆ, ನಾವು ಸಣ್ಣಪುಟ್ಟ ಹಾನಿಗಳಿಗೆ ಓವರ್‌ನೈಟ್ ಸೇವೆ ಒದಗಿಸುವುದರಿಂದ, ನೀವು ರಾತ್ರಿಯಿಡೀ ನೆಮ್ಮದಿಯಿಂದ ನಿದ್ದೆ ಮಾಡಿ. ನಿಮ್ಮ ಬೆಳಗಿನ ಪ್ರಯಾಣದ ವೇಳೆಗೆಲ್ಲಾ ಕಾರು ನಿಮ್ಮ ಮನೆಬಾಗಿಲಿಗೆ ಬಂದಿರುತ್ತದೆ.

ಟೂ ವೀಲರ್ ಇನ್ಶೂರೆನ್ಸ್ ಕ್ಲೈಮ್‌ಗಳು

ಸುಲಭ ಕ್ಲೈಮ್‌ಗಳು

ಉತ್ತಮ ವಿಮಾದಾತರು ಕ್ಲೈಮ್‌ಗಳನ್ನು ತ್ವರಿತವಾಗಿ ಮತ್ತು ಸರಾಗವಾಗಿ ಪ್ರಕ್ರಿಯೆಗೊಳಿಸಬೇಕು. ಎಚ್‌ಡಿಎಫ್‌ಸಿ ಎರ್ಗೋ ಮಾಡುವುದು ಅದನ್ನೇ. ನಾವು ಮೊದಲನೇ ದಿನವೇ ಸುಮಾರು 50% ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸುವ ಮೂಲಕ, ನಿಮ್ಮ ಚಿಂತೆಗಳನ್ನು ಕಡಿಮೆ ಮಾಡುತ್ತೇವೆ.

ಬಜಾಜ್ ಇನ್ಶೂರೆನ್ಸ್ ಬೆಲೆಯ ಮೇಲೆ ಪರಿಣಾಮ ಬೀರುವ ಅಂಶಗಳು

ಬಜಾಜ್ ಬೈಕ್ ಇನ್ಶೂರೆನ್ಸ್ ಬೆಲೆಯು ಒಟ್ಟಾರೆ ಪ್ರೀಮಿಯಂ ನಿರ್ಧರಿಸುವ ಹಲವಾರು ಪ್ರಮುಖ ಅಂಶಗಳಿಂದ ಪ್ರಭಾವಿತವಾಗಿದೆ. ಬಜಾಜ್ ಇನ್ಶೂರೆನ್ಸ್ ವೆಚ್ಚದ ಮೇಲೆ ಪರಿಣಾಮ ಬೀರುವ ಮುಖ್ಯ ಅಂಶಗಳು ಇಲ್ಲಿವೆ:

1

ಎಂಜಿನ್ ಸಾಮರ್ಥ್ಯ

ನಿಮ್ಮ ಬೈಕ್‌ನ ಎಂಜಿನ್ ಸಾಮರ್ಥ್ಯವು ನಿಮ್ಮ ಬಜಾಜ್ ಟೂ ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಹೆಚ್ಚಿನ ಎಂಜಿನ್ ಸಾಮರ್ಥ್ಯ ಹೊಂದಿರುವ ಬೈಕ್‌ಗಳು ಸಾಮಾನ್ಯವಾಗಿ ಶಕ್ತಿಶಾಲಿ ಎಂಜಿನ್‌ಗಳೊಂದಿಗೆ ಸಂಬಂಧಿಸಿದ ಹೆಚ್ಚಿನ ಅಪಾಯದಿಂದಾಗಿ ಹೆಚ್ಚಿನ ಪ್ರೀಮಿಯಂಗಳನ್ನು ಆಕರ್ಷಿಸುತ್ತವೆ.
2

ವಿಮಾ ಘೋಷಿತ ಮೌಲ್ಯ (ಐಡಿವಿ)

ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ನಿಮ್ಮ ಬೈಕಿನ ಪ್ರಸ್ತುತ ಮಾರುಕಟ್ಟೆ ಮೌಲ್ಯವಾಗಿದೆ. ಬಜಾಜ್ ಬೈಕ್ ಇನ್ಶೂರೆನ್ಸ್‌ನ ಪ್ರೀಮಿಯಂ ಲೆಕ್ಕ ಹಾಕುವಲ್ಲಿ IDV ನಿರ್ಣಾಯಕವಾಗಿದೆ. ಹೆಚ್ಚಿನ IDV ಹೆಚ್ಚಿನ ಪ್ರೀಮಿಯಂಗಳಿಗೆ ಕಾರಣವಾಗುತ್ತದೆ ಏಕೆಂದರೆ ಇದು ಒಟ್ಟು ನಷ್ಟ ಅಥವಾ ಕಳ್ಳತನವಾದ ಸಂದರ್ಭದಲ್ಲಿ ನೀವು ಸ್ವೀಕರಿಸಬಹುದಾದ ಗರಿಷ್ಠ ಕ್ಲೈಮ್ ಮೊತ್ತವನ್ನು ಪ್ರತಿನಿಧಿಸುತ್ತದೆ. ಎಚ್‌ಡಿಎಫ್‌ಸಿ ಎರ್ಗೋದಲ್ಲಿ, ನಿಮ್ಮ ಬೈಕ್‌ನ ಸ್ಥಿತಿಯನ್ನು ಆಧರಿಸಿ ನಿಮ್ಮ IDV ಅನ್ನು ನೀವು ಕಸ್ಟಮೈಸ್ ಮಾಡಬಹುದು ಅಥವಾ ಬದಲಾಯಿಸಬಹುದು. ಅದಕ್ಕೆ ಅನುಗುಣವಾಗಿ ಪ್ರೀಮಿಯಂ ಬದಲಾಗುತ್ತದೆ.
3

ಬಳಸಲಾದ ಇಂಧನದ ಪ್ರಕಾರ

ನಿಮ್ಮ ಬೈಕ್ ಬಳಸುವ ಇಂಧನದ ಪ್ರಕಾರವು ಅದರ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕೂಡ ನಿರ್ಧರಿಸುತ್ತದೆ. ಉದಾಹರಣೆಗೆ, ವಿವಿಧ ನಿರ್ವಹಣಾ ವೆಚ್ಚಗಳು ಮತ್ತು ಅಪಾಯಗಳಿಂದಾಗಿ ಡೀಸೆಲ್ ಬೈಕ್‌ಗಳು ಪೆಟ್ರೋಲ್ ಬೈಕ್‌ಗಳಿಗಿಂತ ವಿವಿಧ ಪ್ರೀಮಿಯಂಗಳನ್ನು ಹೊಂದಿರಬಹುದು. ಎಚ್‌ಡಿಎಫ್‌ಸಿ ಎರ್ಗೋದಿಂದ ಬೈಕ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡುವಾಗ ನಿಮ್ಮ ಬಜಾಜ್ ಬೈಕ್‌ನ ನಿಖರವಾದ ಮೇಕ್ ಮತ್ತು ಮಾಡೆಲ್ ಅನ್ನು ನೀವು ಆಯ್ಕೆ ಮಾಡಬೇಕು.
4

ಬ್ರ್ಯಾಂಡ್, ಮೇಕ್ ಮತ್ತು ವೇರಿಯಂಟ್

ನಿಮ್ಮ ಬೈಕ್‌ನ ಬ್ರ್ಯಾಂಡ್, ಮೇಕ್ ಮತ್ತು ವೇರಿಯಂಟ್ ಕೂಡ ಬಜಾಜ್ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪ್ರಭಾವ ಬೀರುತ್ತದೆ. ಪ್ರತಿಷ್ಠಿತ ಬ್ರ್ಯಾಂಡ್‌ಗಳು ಅಥವಾ ಉನ್ನತ ಮಟ್ಟದ ರೂಪಾಂತರಗಳಿಂದ ಪ್ರೀಮಿಯಂ ಬೈಕ್‌ಗಳು ಸಾಮಾನ್ಯವಾಗಿ ದುರಸ್ತಿಗಳು ಮತ್ತು ಪಾರ್ಟ್‌ಗಳ ಹೆಚ್ಚಿನ ವೆಚ್ಚದಿಂದಾಗಿ ಹೆಚ್ಚಿನ ಪ್ರೀಮಿಯಂಗಳನ್ನು ಹೊಂದಿರುತ್ತವೆ.
5

ಉತ್ಪಾದನೆಯ ವರ್ಷ

ನಿಮ್ಮ ಬೈಕ್‌ನ ವರ್ಷ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ. ಹೊಸ ಬೈಕ್‌ಗಳು ಸಾಮಾನ್ಯವಾಗಿ ತಮ್ಮ ಹೆಚ್ಚಿನ ಮಾರುಕಟ್ಟೆ ಮೌಲ್ಯದಿಂದಾಗಿ ಹೆಚ್ಚಿನ ಪ್ರೀಮಿಯಂಗಳನ್ನು ಹೊಂದಿರುತ್ತವೆ, ಆದರೆ ಹಳೆಯ ಬೈಕ್‌ಗಳು ಕಡಿಮೆ ಪ್ರೀಮಿಯಂಗಳನ್ನು ಹೊಂದಿರಬಹುದು ಆದರೆ ಹೆಚ್ಚಿನ ನಿರ್ವಹಣಾ ವೆಚ್ಚಗಳನ್ನು ಬೇಡಬಹುದು.
6

ಆ್ಯಡ್-ಆನ್ ಕವರ್‌ಗಳು

ಶೂನ್ಯ ಸವಕಳಿ, ರಸ್ತೆಬದಿಯ ನೆರವು, ಎಂಜಿನ್ ರಕ್ಷಣೆ ಮತ್ತು ವೈಯಕ್ತಿಕ ಅಪಘಾತ ಕವರ್‌ನಂತಹ ಹೆಚ್ಚುವರಿ ಕವರ್‌ಗಳನ್ನು ಆಯ್ಕೆ ಮಾಡುವುದರಿಂದ ನಿಮ್ಮ ಬಜಾಜ್ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ವಿಸ್ತರಿಸಬಹುದು. ಈ ಆ್ಯಡ್-ಆನ್‌ಗಳು ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತವೆ ಜೊತೆಗೆ ಒಟ್ಟಾರೆ ಪ್ರೀಮಿಯಂ ಅನ್ನು ಕೂಡ ಹೆಚ್ಚಿಸುತ್ತವೆ. ಬಜಾಜ್ ಬೈಕ್ ಇನ್ಶೂರೆನ್ಸ್ ಆನ್ಲೈನ್ ಕ್ಯಾಲ್ಕುಲೇಟರ್‌ಗಳು ಪ್ರೀಮಿಯಂ ಅಂದಾಜಿನಲ್ಲಿ ಈ ಆ್ಯಡ್-ಆನ್‌ಗಳನ್ನು ಒಳಗೊಂಡಿವೆ, ಇದು ನಿಮಗೆ ಒಟ್ಟು ವೆಚ್ಚದ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ.

ಬಜಾಜ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕುವುದು ಹೇಗೆ?

ಬಜಾಜ್ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕುವುದು ಸರಳವಾದ ಪ್ರಕ್ರಿಯೆಯಾಗಿದ್ದು, ಇದನ್ನು ಆನ್ಲೈನಿನಲ್ಲಿ ಸುಲಭವಾಗಿ ಮಾಡಬಹುದು. ಬಜಾಜ್ ಬೈಕ್ ಇನ್ಶೂರೆನ್ಸ್ ಆನ್ಲೈನ್ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಬಜಾಜ್ ಟೂ ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕುವುದು ಎಂಬುದರ ಬಗ್ಗೆ ಹಂತವಾರು ಮಾರ್ಗದರ್ಶಿ ಇಲ್ಲಿದೆ:

1. ನಿಮ್ಮ ಬಜಾಜ್ ಇನ್ಶೂರೆನ್ಸ್ ಪ್ಲಾನ್ ಆನ್ಲೈನಿನ ಪ್ರೀಮಿಯಂ ಅನ್ನು ಹುಡುಕಲು ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ನಲ್ಲಿ ಟೂ ವೀಲರ್ ಇನ್ಶೂರೆನ್ಸ್ ಪುಟಕ್ಕೆ ನ್ಯಾವಿಗೇಟ್ ಮಾಡಿ. ನೀವು ನಿಮ್ಮ ಬೈಕ್ ನಂಬರನ್ನು ಹಂಚಿಕೊಳ್ಳಲು ಆಯ್ಕೆ ಮಾಡಬಹುದು ಅಥವಾ ಅದು ಇಲ್ಲದೆ ಮುಂದುವರಿಯಬಹುದು.

2. ಕೋಟ್ ಪಡೆಯಲು, ನಿಮ್ಮ ಬೈಕ್ ಬಗ್ಗೆ ಈ ಕೆಳಗಿನ ವಿವರಗಳನ್ನು ನಮೂದಿಸಿ:

ಎ. ಬ್ರ್ಯಾಂಡ್

ಬಿ. ಮಾಡೆಲ್ ಮತ್ತು ವೇರಿಯಂಟ್

ಸಿ. ನೋಂದಣಿ ನಗರ ಮತ್ತು RTO

ಡಿ. ನೋಂದಣಿಯ ವರ್ಷ (ಇದು ಬ್ರ್ಯಾಂಡ್ ನ್ಯೂ ಬಜಾಜ್ ಬೈಕ್‌ನೊಂದಿಗೆ ಮೊದಲ ಇನ್ಶೂರೆನ್ಸ್ ಪ್ಲಾನ್ ಆಗಿದ್ದರೆ "ಬ್ರ್ಯಾಂಡ್ ನ್ಯೂ" ಕ್ಲಿಕ್ ಮಾಡಿ).

3. ಈ ವಿವರಗಳನ್ನು ನಮೂದಿಸಿದ ನಂತರ, "ಕೋಟ್ ಪಡೆಯಿರಿ" ಕ್ಲಿಕ್ ಮಾಡಿ. ಬೈಕ್‌ನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV) ನೋಂದಣಿಯಾದ ವರ್ಷದ ಆಧಾರದ ಮೇಲೆ ಇರುತ್ತದೆ ಮತ್ತು ನಿಮ್ಮ ಬೈಕ್‌ನ ಸ್ಥಿತಿ ಮತ್ತು ಮೌಲ್ಯಮಾಪನದ ಪ್ರಕಾರ ಅದನ್ನು ಸರಿಹೊಂದಿಸಬಹುದು.

4. ಹಳೆಯ ಬೈಕ್‌ಗಳಿಗಾಗಿ, ನೀವು ಒದಗಿಸಬೇಕಾಗಿರುವುದು:

ಎ. ಆರಂಭದಿಂದಲೂ ಕ್ಲೈಮ್ ಸ್ಟೇಟಸ್

B. ಹಿಂದಿನ ಪಾಲಿಸಿಯಲ್ಲಿ ತೋರಿಸಲಾದಂತೆ ನೋ ಕ್ಲೈಮ್ ಬೋನಸ್ (NCB).

ಸಿ. ಹಿಂದಿನ ಪಾಲಿಸಿಯ ಗಡುವು ದಿನಾಂಕ.

5. ಇನ್ಶೂರೆನ್ಸ್ ಪ್ಲಾನ್ ಪ್ರಕಾರವನ್ನು ಆಯ್ಕೆಮಾಡಿ:

ಎ. ಸಮಗ್ರ ಬೈಕ್ ಇನ್ಶೂರೆನ್ಸ್

ಬಿ. ಥರ್ಡ್-ಪಾರ್ಟಿ-ಮಾತ್ರದ ಬೈಕ್ ಇನ್ಶೂರೆನ್ಸ್

ಸಿ. ಸ್ಟ್ಯಾಂಡ್‌ಅಲೋನ್ ಓನ್-ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ (ನೀವು ಮಾನ್ಯ ಥರ್ಡ್-ಪಾರ್ಟಿ-ಮಾತ್ರದ ಕವರೇಜ್ ಹೊಂದಿದ್ದರೆ)

ಗಮನಿಸಿ: ಹೊಸ ಬೈಕ್‌ಗಳಿಗೆ ಕಡ್ಡಾಯ 5-ವರ್ಷದ ಥರ್ಡ್ ಪಾರ್ಟಿ ಕವರೇಜ್ ಅಗತ್ಯವಿದೆ. ಮುಂದಿನ ನಾಲ್ಕು ನವೀಕರಣಗಳಿಗಾಗಿ, ನೀವು ಸ್ವಂತ-ಹಾನಿ-ಮಾತ್ರದ ಪ್ಲಾನ್‌ಗಳನ್ನು ಆಯ್ಕೆ ಮಾಡಬಹುದು.

6. ನಿಮ್ಮ ಬಜಾಜ್ ಬೈಕ್ ಇನ್ಶೂರೆನ್ಸ್ ಪ್ಲಾನಿನ ಅವಧಿಯನ್ನು ಆಯ್ಕೆಮಾಡಿ: ಒಂದು ವರ್ಷ, ಎರಡು ವರ್ಷಗಳು ಅಥವಾ ಮೂರು ವರ್ಷಗಳು.

7. ಪ್ರೀಮಿಯಂ ನೋಡಲು ಲಭ್ಯವಿರುವ ಆಯ್ಕೆಗಳಿಂದ ನೀವು ಹೆಚ್ಚುವರಿ ಕವರ್‌ಗಳನ್ನು ಕೂಡ ಆಯ್ಕೆ ಮಾಡಬಹುದು.

ಖರೀದಿಯ ಪ್ರಯೋಜನಗಳು ಬಜಾಜ್ ಬೈಕ್ ಇನ್ಶೂರೆನ್ಸ್ ಆನ್ಲೈನ್

1
ಅನುಕೂಲಕರ
ಬಜಾಜ್ ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸುವುದು ಮತ್ತು ನವೀಕರಿಸುವುದರಿಂದ ನಿಮ್ಮ ಮನೆಯಿಂದಲೇ ಆರಾಮದಿಂದ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮಗೆ ಅನುಮತಿ ನೀಡುತ್ತದೆ, ಪ್ರತ್ಯಕ್ಷ ಭೇಟಿಗಳ ಅಗತ್ಯವನ್ನು ನಿವಾರಿಸುತ್ತದೆ.
2
ವೆಚ್ಚ-ಪರಿಣಾಮಕಾರಿ
ಆನ್ಲೈನ್ ವೇದಿಕೆಯು ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ಬಜಾಜ್ ಟೂ ವೀಲರ್ ಇನ್ಶೂರೆನ್ಸ್ ಪ್ಲಾನ್‌ಗಳ ಎಲ್ಲಾ ರೀತಿಯ ಬೆಲೆಗಳನ್ನು ಪರಿಶೀಲಿಸಲು ನಿಮಗೆ ಅವಕಾಶ ನೀಡುತ್ತದೆ, ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಅತ್ಯಂತ ವೆಚ್ಚ-ಪರಿಣಾಮಕಾರಿ ಆಯ್ಕೆಯನ್ನು ನೀವು ಕಂಡುಕೊಳ್ಳುವುದನ್ನು ಖಚಿತಪಡಿಸುತ್ತದೆ.
3
ಸಮಯ-ಉಳಿತಾಯ
ಬಜಾಜ್ ಬೈಕ್ ಇನ್ಶೂರೆನ್ಸ್ ಆನ್ಲೈನಿನಲ್ಲಿ, ನೀವು ತ್ವರಿತ ಪಾಲಿಸಿ ವಿತರಣೆ ಮತ್ತು ನವೀಕರಣವನ್ನು ಪಡೆಯಬಹುದು, ದೀರ್ಘವಾದ ಕಾಗದಪತ್ರ ಮತ್ತು ಕಾಯುವ ಸಮಯಗಳನ್ನು ತಪ್ಪಿಸಬಹುದು.
4
ಪಾರದರ್ಶಕತೆ
ಪಾಲಿಸಿಯ ನಿಯಮಗಳು, ಕವರೇಜ್ ಆಯ್ಕೆಗಳು ಮತ್ತು ಹೊರಗಿಡುವಿಕೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀವು ಸುಲಭವಾಗಿ ಅಕ್ಸೆಸ್ ಮಾಡಬಹುದು, ನೀವು ಸಮರ್ಪಕ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸುತ್ತದೆ.
5
ಸುರಕ್ಷಿತ ಟ್ರಾನ್ಸಾಕ್ಷನ್‌ಗಳು
ಆನ್ಲೈನ್ ಖರೀದಿಗಳು ಮತ್ತು ನವೀಕರಣಗಳನ್ನು ಸುರಕ್ಷಿತ ಪಾವತಿ ಗೇಟ್‌ವೇಗಳ ಮೂಲಕ ಪ್ರಕ್ರಿಯೆಗೊಳಿಸಲಾಗುತ್ತದೆ, ಇದು ನಿಮ್ಮ ಹಣಕಾಸಿನ ಮಾಹಿತಿಯ ಸುರಕ್ಷತೆಯನ್ನು ಖಚಿತಪಡಿಸುತ್ತದೆ.
6
24/7 ಲಭ್ಯತೆ
ಆನ್ಲೈನ್ ಸೇವೆಯು ಇಪ್ಪತ್ತನಾಲ್ಕು ಗಂಟೆಗಳ ಕಾಲ ಲಭ್ಯವಿದ್ದು ನಿಮಗೆ ಸೂಕ್ತವೆಂದಾದಾಗ ಬಜಾಜ್ ಬೈಕ್ ಇನ್ಶೂರೆನ್ಸ್ ಖರೀದಿಸಲು ಅಥವಾ ನವೀಕರಿಸಲು ಅನುವು ಮಾಡಿಕೊಡುತ್ತದೆ.
7
ಡಾಕ್ಯುಮೆಂಟ್‌ಗಳಿಗೆ ಸುಲಭ ಅಕ್ಸೆಸ್
ನಿಮ್ಮ ಇನ್ಶೂರೆನ್ಸ್ ಡಾಕ್ಯುಮೆಂಟ್‌ಗಳನ್ನು ಡಿಜಿಟಲ್ ಆಗಿ ಸ್ಟೋರ್ ಮಾಡಿ ಮತ್ತು ಮರುಪಡೆಯಿರಿ, ಪ್ರಮುಖ ಪೇಪರ್‌ವರ್ಕ್ ಕಳೆದುಕೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಆನ್ಲೈನಿನಲ್ಲಿ ಬಜಾಜ್ ಬೈಕ್ ಇನ್ಶೂರೆನ್ಸ್ ಖರೀದಿಸುವುದು ಹೇಗೆ?

1. https://www.hdfcergo.com/two-wheeler-insurance ಮೇಲೆ ಕ್ಲಿಕ್ ಮಾಡಿ

2. ನಿಮ್ಮ ಬೈಕ್ ನಂಬರನ್ನು ಹಂಚಿಕೊಳ್ಳುವ ಮೂಲಕ ಅಥವಾ ಅದನ್ನು ನೀಡದೆಯೇ ಬಜಾಜ್ ಇನ್ಶೂರೆನ್ಸ್ ಪ್ಲಾನನ್ನು ಆಯ್ಕೆ ಮಾಡುವ ಮೂಲಕ ನೀವು ಪ್ರೀಮಿಯಂ ಅನ್ನು ಆನ್ಲೈನಿನಲ್ಲಿ ಕಂಡುಕೊಳ್ಳಬಹುದು.

3. ನೀವು ಬೈಕ್‌ನ ವಿವರಗಳನ್ನು ನಮೂದಿಸಬೇಕು, ಅವುಗಳೆಂದರೆ:

ಎ. ಬಜಾಜ್ ಬೈಕಿನ ಬ್ರ್ಯಾಂಡ್

B. ಮಾಡೆಲ್ ಮತ್ತು ಅದರ ವೇರಿಯಂಟ್

ಸಿ. ನೋಂದಣಿ ನಗರ ಮತ್ತು RTO

ಡಿ. ನೋಂದಣಿಯ ವರ್ಷ.

4. ಒಮ್ಮೆ ಈ ವಿವರಗಳನ್ನು ನಮೂದಿಸಿದ ನಂತರ, ನೀವು "ಕೋಟ್ ಪಡೆಯಿರಿ" ಮೇಲೆ ಕ್ಲಿಕ್ ಮಾಡಬೇಕು

5. ನೋಂದಣಿ ವರ್ಷದ ಪ್ರಕಾರ ಬೈಕಿನ IDV (ಘೋಷಿತ ವಿಮಾ ಮೌಲ್ಯ) ಅನ್ನು ನೀಡಲಾಗುತ್ತದೆ, ಇದನ್ನು ನಿಮ್ಮ ಬೈಕಿನ ಸ್ಥಿತಿ ಮತ್ತು ಮೌಲ್ಯಮಾಪನದ ಪ್ರಕಾರ ಬದಲಾಯಿಸಬಹುದು.

6. ಹಳೆಯ ಬೈಕ್‌ಗಳಿಗೆ ಕೆಲವು ವಿವರಗಳನ್ನು ನಮೂದಿಸಬೇಕು, ಅವುಗಳೆಂದರೆ:

ಎ. ಆರಂಭದಿಂದಲೂ ಕ್ಲೈಮ್ ಸ್ಟೇಟಸ್

B. ಬೈಕ್‌ನ ನೋ ಕ್ಲೈಮ್ ಬೋನಸ್ (ಹಿಂದಿನ ಪಾಲಿಸಿಯಲ್ಲಿ ಒದಗಿಸಿದಂತೆ)

ಸಿ. ಹಿಂದಿನ ಪಾಲಿಸಿಯ ಗಡುವು ದಿನಾಂಕ

ಡಿ. ನೀವು ಆಯ್ಕೆ ಮಾಡುವ ಪ್ಲಾನ್ ವಿಧ, ಅವುಗಳೆಂದರೆ:

i. ಸಮಗ್ರ ಬೈಕ್ ಇನ್ಶೂರೆನ್ಸ್ ಪ್ಲಾನ್

ii. ಥರ್ಡ್-ಪಾರ್ಟಿ-ಮಾತ್ರದ ಬೈಕ್ ಇನ್ಶೂರೆನ್ಸ್ ಪ್ಲಾನ್

iii. ನೀವು ಮಾನ್ಯ ಥರ್ಡ್-ಪಾರ್ಟಿ-ಮಾತ್ರದ ಪ್ಲಾನ್ ಹೊಂದಿದ್ದರೆ, ಸ್ಟ್ಯಾಂಡ್‌ಅಲೋನ್ ಸ್ವಂತ-ಹಾನಿಯ ಬೈಕ್ ಇನ್ಶೂರೆನ್ಸ್ ಪ್ಲಾನ್ ಒದಗಿಸಲಾಗುತ್ತದೆ.

ಗಮನಿಸಿ: ನಿಮ್ಮ ಹೊಸ ಬೈಕ್‌ನೊಂದಿಗೆ ನೀವು 5-ವರ್ಷದ ಥರ್ಡ್ ಪಾರ್ಟಿ ಕವರೇಜ್ ಖರೀದಿಸಬೇಕಾಗಿರುವುದರಿಂದ, ಮುಂದಿನ ನಾಲ್ಕು ನವೀಕರಣಗಳಿಗಾಗಿ ನೀವು ಸ್ವಂತ-ಹಾನಿ-ಮಾತ್ರದ ಪ್ಲಾನ್ ಆಯ್ಕೆ ಮಾಡಬಹುದು.

7. ನಂತರ ನೀವು 1 ವರ್ಷ, 2 ವರ್ಷ ಅಥವಾ 3 ವರ್ಷಗಳ ನಿಮ್ಮ ಬಜಾಜ್ ಬೈಕ್ ಇನ್ಶೂರೆನ್ಸ್ ಪ್ಲಾನ್‌ನ ಅವಧಿಯನ್ನು ಆಯ್ಕೆ ಮಾಡಬೇಕು.

8. ಅಲ್ಲದೆ, ನೀವು ಈ ರೀತಿಯ ಹೆಚ್ಚುವರಿ ಕವರ್‌ಗಳನ್ನು ಆಯ್ಕೆ ಮಾಡಬಹುದು:

ಎ. ಸರಿಯಾದ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಬೈಕ್ ಮಾಲೀಕರಿಗೆ ಪರ್ಸನಲ್ ಆಕ್ಸಿಡೆಂಟ್ ಕವರೇಜ್ ಕಡ್ಡಾಯವಾಗಿದೆ.

ಬಿ. ಕಾನೂನು ಹೊಣೆಗಾರಿಕೆ ಕವರ್ ಇತ್ಯಾದಿ.

9. ಎಲ್ಲಾ ವಿವರಗಳನ್ನು ನಿಖರವಾಗಿ ಒದಗಿಸಿ, ಪರಿಶೀಲಿಸಿದ ನಂತರ, ನೀವು ಖಚಿತಪಡಿಸಬೇಕು ಮತ್ತು ನಂತರ ಆನ್ಲೈನ್ ಪಾವತಿ ಮಾಡಲು ಮುಂದುವರಿಯಬೇಕು.

10. ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೀವು ನಿಮ್ಮ ಹೆಸರು, ವಿಳಾಸ ಮತ್ತು ಇತರ ವಿವರಗಳನ್ನು ನಮೂದಿಸಬೇಕು.

11. ಒಮ್ಮೆ ಪಾವತಿ ಮಾಡಿದ ನಂತರ, ನಿಮ್ಮ ನೋಂದಾಯಿತ ಇಮೇಲ್ ವಿಳಾಸದಲ್ಲಿ ನೀವು ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುತ್ತೀರಿ.

ಆನ್ಲೈನ್‌ನಲ್ಲಿ ಬಜಾಜ್ ಟೂ ವೀಲರ್ ಇನ್ಶೂರೆನ್ಸ್ ಅನ್ನು ನವೀಕರಿಸುವುದು ಹೇಗೆ?

ನಿಮ್ಮ ಬಜಾಜ್ ಟೂ ವೀಲರ್ ಇನ್ಶೂರೆನ್ಸ್ ನವೀಕರಣ ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದನ್ನು ನೀವು ಮನೆಯಿಂದಲೇ ಆರಾಮವಾಗಿ ಕೆಲವೇ ಕ್ಲಿಕ್‌ಗಳೊಂದಿಗೆ ಮಾಡಬಹುದು. ಈ ಕೆಳಗೆ ತಿಳಿಸಿದ ನಾಲ್ಕು ಹಂತದ ಪ್ರಕ್ರಿಯೆಯನ್ನು ಅನುಸರಿಸಿ ಮತ್ತು ತ್ವರಿತವಾಗಿ ಕವರ್ ಪಡೆದುಕೊಳ್ಳಿ!

  • ಹಂತ #1
    ಹಂತ #1
    ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಮ್ಮ ಪಾಲಿಸಿಯನ್ನು ಖರೀದಿಸಲು ಅಥವಾ ನವೀಕರಿಸಲು ಆಯ್ಕೆ ಮಾಡಿ
  • ಹಂತ #2
    ಹಂತ #2
    ನಿಮ್ಮ ಬೈಕ್ ವಿವರಗಳು, ನೋಂದಣಿ, ನಗರ ಮತ್ತು ಯಾವುದಾದರೂ ಹಿಂದಿನ ಪಾಲಿಸಿಗಳಿದ್ದಲ್ಲಿ, ಅದರ ವಿವರಗಳನ್ನೂ ನಮೂದಿಸಿ
  • ಹಂತ #3
    ಹಂತ #3
    ಕೋಟ್ ಸ್ವೀಕರಿಸಲು, ನಿಮ್ಮ ಇಮೇಲ್ ID, ಮತ್ತು ಫೋನ್ ನಂಬರ್ ಒದಗಿಸಿ
  • ಹಂತ #4
    ಹಂತ #4
    ಆನ್ಲೈನ್ ಪಾವತಿ ಮಾಡಿ, ತಕ್ಷಣ ಕವರ್ ಪಡೆಯಿರಿ!

ಬಜಾಜ್ ಬೈಕ್ ಇನ್ಶೂರೆನ್ಸ್ ಕ್ಲೈಮ್ ಫೈಲ್ ಮಾಡುವುದು ಹೇಗೆ?

ಎಚ್‌ಡಿಎಫ್‌ಸಿ ಎರ್ಗೋ ಟೂ ವೀಲರ್ ಕ್ಲೈಮ್ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಇಲ್ಲಿ ಆನ್ಲೈನಿನಲ್ಲಿ ಕ್ಲೈಮ್ ಸಲ್ಲಿಸಲು ಅಕ್ಸೆಸ್ ಒದಗಿಸುವ ಮೂಲಕ ತುಂಬಾ ಸರಳಗೊಳಿಸಿದೆ:
https://selfhelp.hdfcergo.com/SelfHelp/Authentication/ClaimRegistration. ನೀವು ನಿಮ್ಮ ಪಾಲಿಸಿ ನಂಬರ್, ಮೊಬೈಲ್ ನಂಬರ್ ಅಥವಾ ನೋಂದಾಯಿತ ಇಮೇಲ್ ವಿಳಾಸದೊಂದಿಗೆ ಕ್ಲೈಮ್ ನೋಂದಣಿ ಮಾಡಬಹುದು.
ನಂತರ, ಇದನ್ನು ಒಟಿಪಿಯೊಂದಿಗೆ ಪರಿಶೀಲಿಸಬೇಕು, ಮತ್ತು ನೀವು ಕ್ಲೈಮ್ ನೋಂದಣಿ ಮಾಡಬಹುದು.

1. ಘಟನೆ ನಡೆದ ತಕ್ಷಣ, ನೀವು ನಿಮ್ಮ ವಾಹನವನ್ನು ತೆಗೆದುಕೊಳ್ಳಬೇಕು, ಗ್ರಾಹಕ ಸೇವೆಗೆ ತಿಳಿಸಬೇಕು ಅಥವಾ ಹತ್ತಿರದ ನಗದುರಹಿತ ಗ್ಯಾರೇಜಿಗೆ ಬೈಕನ್ನು ಟೋ ಮಾಡಲು ತುರ್ತು ರಸ್ತೆಬದಿಯ ಸಹಾಯವನ್ನು ಆಯ್ಕೆ ಮಾಡಬೇಕು.

2. ವಾಹನವು ಯಾವುದೇ ನೆಟ್ವರ್ಕ್ ಗ್ಯಾರೇಜ್‌ಗಳನ್ನು ತಲುಪಿದ ನಂತರ, ಎಲ್ಲಾ ಹಾನಿಗಳಿಗಾಗಿ ಸರ್ವೇಯರ್ ನಿಮ್ಮ ಬೈಕನ್ನು ಮೌಲ್ಯಮಾಪನ ಮಾಡುತ್ತಾರೆ.

3. ನಂತರ, ನೀವು ಬೈಕ್ ಇನ್ಶೂರೆನ್ಸ್ ಕ್ಲೈಮ್ ಫೈಲ್ ಮಾಡಬೇಕು ಮತ್ತು ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕು.

4. ಕ್ಲೈಮ್ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ನೀವು SMS ಮತ್ತು ಇಮೇಲ್ ಮೂಲಕ ಅಪ್ಡೇಟ್‌ಗಳನ್ನು ಪಡೆಯುತ್ತೀರಿ.

5. ವಾಹನವು ಸಿದ್ಧವಾದ ನಂತರ, ಕಡ್ಡಾಯ ಕಡಿತ, ಸವಕಳಿ ಇತ್ಯಾದಿಗಳನ್ನು ಒಳಗೊಂಡಂತೆ ನೀವು ನೇರವಾಗಿ ಗ್ಯಾರೇಜಿಗೆ ಕ್ಲೈಮ್‌ನ ನಿಮ್ಮ ಭಾಗವನ್ನು ಪಾವತಿಸಬೇಕಾಗುತ್ತದೆ. ಕ್ಲೈಮ್‌ನ ಅನುಮೋದಿತ ಮೊತ್ತವನ್ನು ನೇರವಾಗಿ ಗ್ಯಾರೇಜ್‌ಗೆ ಪಾವತಿಸಲಾಗುತ್ತದೆ.

6. ನಿಮ್ಮ ದಾಖಲೆಗಳಿಗಾಗಿ ವಿಭಜಿತ ವಿವರದೊಂದಿಗೆ ನೀವು ಕ್ಲೈಮ್‌ಗಳ ಲೆಕ್ಕಾಚಾರ ಶೀಟ್ ಅನ್ನು ಪಡೆಯುತ್ತೀರಿ.

7. ನೀವು ನಿಮ್ಮ ಕ್ಲೈಮ್‌ಗಳನ್ನು ಆನ್ಲೈನಿನಲ್ಲಿ ಕೂಡ ಟ್ರ್ಯಾಕ್ ಮಾಡಬಹುದು:https://selfhelp.hdfcergo.com/SelfHelp/Authentication/ClaimStatus.

ಬಜಾಜ್ ಟೂ ವೀಲರ್ ಇನ್ಶೂರೆನ್ಸ್ ಕ್ಲೈಮ್ ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಬಜಾಜ್ ಬೈಕ್ ಇನ್ಶೂರೆನ್ಸ್‌ಗಾಗಿ ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ಕ್ಲೈಮ್ ಸಲ್ಲಿಸುವಾಗ, ಸುಗಮ ಮತ್ತು ದಕ್ಷ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಿದ್ಧವಾಗಿರಿಸುವುದು ಅಗತ್ಯವಾಗಿದೆ. ಬಜಾಜ್ ಟೂ ವೀಲರ್ ಇನ್ಶೂರೆನ್ಸ್ ಕ್ಲೈಮ್‌ಗೆ ಅಗತ್ಯವಿರುವ ಪ್ರಮುಖ ಡಾಕ್ಯುಮೆಂಟ್‌ಗಳು ಇಲ್ಲಿವೆ:

1. ಮೂಲ ಬಜಾಜ್ ಬೈಕ್ ಇನ್ಶೂರೆನ್ಸ್ ಪಾಲಿಸಿ ಡಾಕ್ಯುಮೆಂಟ್ ಅಥವಾ ಎಚ್‌ಡಿಎಫ್‌ಸಿ ಎರ್ಗೋ ಪಾಲಿಸಿ ವಿವರಗಳನ್ನು ಒದಗಿಸಿ. ಇದು ಘಟನೆಯ ಸಮಯದಲ್ಲಿ ನಿಮ್ಮ ಬೈಕಿಗೆ ಮಾನ್ಯ ಕವರೇಜ್ ಹೊಂದಿರುವುದನ್ನು ಸಾಬೀತುಪಡಿಸುತ್ತದೆ.

2. ನಿಮ್ಮ ಬೈಕಿಗೆ ಆದ ಹಾನಿಯ ಸ್ಪಷ್ಟ ಫೋಟೋಗಳನ್ನು ಒದಗಿಸಿ. ಈ ಚಿತ್ರಗಳು ಹಾನಿಯ ವ್ಯಾಪ್ತಿಯನ್ನು ಮೌಲ್ಯಮಾಪನ ಮಾಡಲು ಇನ್ಶೂರೆನ್ಸ್ ಸರಿಹೊಂದಿಸುವವರಿಗೆ ಸಹಾಯ ಮಾಡುತ್ತವೆ.

3. ಘಟನೆಯ ಸಮಯದಲ್ಲಿ ಬೈಕ್ ಸವಾರಿ ಮಾಡಲು ನೀವು ಕಾನೂನುಬದ್ಧವಾಗಿ ಅಧಿಕಾರ ಹೊಂದಿದ್ದೀರಿ ಎಂದು ಖಚಿತಪಡಿಸಲು ನಿಮ್ಮ ಮಾನ್ಯ ಡ್ರೈವಿಂಗ್ ಲೈಸೆನ್ಸ್ ಪ್ರತಿಯ ಅಗತ್ಯವಿದೆ.

4. ಗುರುತಿನ ಪರಿಶೀಲನೆಗಾಗಿ ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್‌ನಂತಹ ಸರ್ಕಾರ ನೀಡಿದ ಗುರುತಿನ ಪುರಾವೆಯನ್ನು ಸಲ್ಲಿಸಿ.

5. ನಿಮ್ಮ ಬೈಕ್ ನೋಂದಣಿ ಪ್ರಮಾಣಪತ್ರದ ಪ್ರತಿಯನ್ನು ಸಲ್ಲಿಸಿ. ಈ ಡಾಕ್ಯುಮೆಂಟ್ ನಿಮ್ಮ ವಾಹನದ ಮಾಲೀಕತ್ವ ಮತ್ತು ವಿವರಗಳನ್ನು ಪರಿಶೀಲಿಸುತ್ತದೆ.

6. ಥರ್ಡ್ ಪಾರ್ಟಿಗಳೊಂದಿಗೆ ಕಳ್ಳತನ ಅಥವಾ ಅಪಘಾತಗಳಂತಹ ಗಂಭೀರ ಘಟನೆಗಳಿಗಾಗಿ, ನೀವು ಪೋಲಿಸ್ ಸ್ಟೇಷನ್‌ನಲ್ಲಿ ಫೈಲ್ ಮಾಡಲಾದ FIR ಪ್ರತಿಯನ್ನು ಪ್ರಸ್ತುತಪಡಿಸಬೇಕು. ಘಟನೆಯ ವಿವರಗಳನ್ನು ಪರಿಶೀಲಿಸಲು ಈ ವರದಿಯು ಮುಖ್ಯವಾಗಿದೆ.

7. ಅಧಿಕೃತ ಎಚ್‌ಡಿಎಫ್‌ಸಿ ಎರ್ಗೋ ಸರ್ವೀಸ್ ಸೆಂಟರ್ ಅಥವಾ ರಿಪೇರಿ ಶಾಪ್‌ನಿಂದ ವಿವರವಾದ ದುರಸ್ತಿ ಅಂದಾಜು ಪಡೆಯಿರಿ. ಈ ಅಂದಾಜು, ವಿಶೇಷವಾಗಿ ಮರುಪಾವತಿ ಕ್ಲೈಮ್ ಸಲ್ಲಿಸುವಾಗ, ರಿಪೇರಿಗಳ ವೆಚ್ಚವನ್ನು ನಿರ್ಣಯಿಸಲು ಇನ್ಶೂರೆನ್ಸ್ ಕಂಪನಿಗೆ ಸಹಾಯ ಮಾಡುತ್ತದೆ.

8. ಬಜಾಜ್ ಬೈಕ್ ಇನ್ಶೂರೆನ್ಸ್ ಕ್ಲೈಮ್ ಫಾರ್ಮ್ ಪೂರ್ಣಗೊಳಿಸಿ ಮತ್ತು ಸಲ್ಲಿಸಿ, ಅಥವಾ ನೀವು ಅದನ್ನು ಇಲ್ಲಿ ಆನ್ಲೈನಿನಲ್ಲಿ ಫೈಲ್ ಮಾಡಬಹುದು: https://selfhelp.hdfcergo.com/SelfHelp/Authentication/ClaimRegistration

9. ಮರುಪಾವತಿ ಕ್ಲೈಮ್‌ಗಾಗಿ, ಕ್ಲೈಮ್ ಸೆಟಲ್ಮೆಂಟ್‌ಗಾಗಿ ನೀವು ನಿಮ್ಮ ಬ್ಯಾಂಕ್ ಅಕೌಂಟ್ ವಿವರಗಳನ್ನು ಹಂಚಿಕೊಳ್ಳಬೇಕು. ನಿಮ್ಮ ಕ್ಲೈಮ್ ಅನುಮೋದನೆಯಾದರೆ, ಎಚ್‌ಡಿಎಫ್‌ಸಿ ಎರ್ಗೋ ಈ ಅಕೌಂಟಿನಲ್ಲಿ ಕ್ಲೈಮ್ ಮೊತ್ತವನ್ನು ಡೆಪಾಸಿಟ್ ಮಾಡುತ್ತದೆ.

10. ನಗದುರಹಿತ ಕ್ಲೈಮ್‌ಗಾಗಿ ನೆಟ್ವರ್ಕ್ ಗ್ಯಾರೇಜ್ ಹೆಚ್ಚಿನ ಡಾಕ್ಯುಮೆಂಟೇಶನ್ ಮತ್ತು ಕ್ಲೈಮ್ ಪ್ರಕ್ರಿಯೆಯನ್ನು ಮಾಡುತ್ತದೆ. ನೀವು ಪಾಲಿಸಿ ವಿವರಗಳು, ಡ್ರೈವರ್ಸ್ ಲೈಸೆನ್ಸ್ ಮತ್ತು ಕಾರ್ ಪೇಪರ್‌ಗಳನ್ನು ಮಾತ್ರ ಒದಗಿಸಬೇಕು.

ಬಜಾಜ್ ಕಳ್ಳತನದ ಕ್ಲೈಮ್‌ಗಳಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ನಿಮ್ಮ ಬೈಕ್ ಕಳ್ಳತನವಾದರೆ ಮತ್ತು ನಿಮ್ಮ ಬಜಾಜ್ ಬೈಕ್ ಇನ್ಶೂರೆನ್ಸ್ ಅಡಿಯಲ್ಲಿ ನೀವು ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ಕಳ್ಳತನದ ಕ್ಲೈಮ್ ಫೈಲ್ ಮಾಡಬೇಕಾದರೆ, ನೀವು ಹಲವಾರು ಪ್ರಮುಖ ಡಾಕ್ಯುಮೆಂಟ್‌ಗಳನ್ನು ಸಿದ್ಧಪಡಿಸಬೇಕು. ನಿಮ್ಮ ಬಜಾಜ್ ಟೂ ವೀಲರ್ ಇನ್ಶೂರೆನ್ಸ್‌ಗೆ ಕಳ್ಳತನದ ಕ್ಲೈಮ್ ಮಾಡಲು ಅಗತ್ಯವಿರುವ ಅಗತ್ಯ ಡಾಕ್ಯುಮೆಂಟ್‌ಗಳ ಪಟ್ಟಿ ಇಲ್ಲಿದೆ:

1. ಇ-ಕಾರ್ಡಿನೊಂದಿಗೆ ಬಜಾಜ್ ಬೈಕ್ ಇನ್ಶೂರೆನ್ಸ್ ಪಾಲಿಸಿ ಡಾಕ್ಯುಮೆಂಟ್ ಅಥವಾ ಪಾಲಿಸಿ ವಿವರಗಳನ್ನು ಒದಗಿಸಿ.

2. ಬೈಕ್ ಸವಾರಿ ಮಾಡಲು ನೀವು ಕಾನೂನುಬದ್ಧವಾಗಿ ಅಧಿಕೃತರಾಗಿದ್ದೀರಿ ಎಂಬುದನ್ನು ತೋರಿಸಲು ನಿಮ್ಮ ಮಾನ್ಯ ಡ್ರೈವಿಂಗ್ ಲೈಸೆನ್ಸ್ ಪ್ರತಿಯ ಅಗತ್ಯವಿದೆ.

3. ಬೈಕಿನ ನೋಂದಣಿ ಪ್ರಮಾಣಪತ್ರದ ಪ್ರತಿಯನ್ನು ಸಲ್ಲಿಸಿ. ಈ ಡಾಕ್ಯುಮೆಂಟ್ ಕಳ್ಳತನವಾದ ವಾಹನದ ಮಾಲೀಕತ್ವ ಮತ್ತು ವಿವರಗಳನ್ನು ಸಾಬೀತುಪಡಿಸುತ್ತದೆ.

4. ಸಂಪೂರ್ಣ ತನಿಖೆಯ ನಂತರ, ಪೊಲೀಸ್ ನೋ-ಟ್ರಯಲ್ ವರದಿಯನ್ನು ಪಡೆಯಿರಿ. ಈ ಡಾಕ್ಯುಮೆಂಟ್ ನಿಮ್ಮ ಕಳ್ಳತನವಾದ ಬೈಕನ್ನು ಪೊಲೀಸರಿಗೆ ಮರುಪಡೆಯಲು ಸಾಧ್ಯವಾಗಲಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.

5. ಕಳ್ಳತನವನ್ನು ವರದಿ ಮಾಡುವ ಸ್ಥಳೀಯ ಪೊಲೀಸ್ ಸ್ಟೇಷನ್‌ನಲ್ಲಿ ನೀವು FIR ಫೈಲ್ ಮಾಡಬೇಕು. ಘಟನೆಯನ್ನು ವಿವರಿಸುವ ಈ FIR ಪ್ರತಿ, ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆಗೆ ಮುಖ್ಯವಾಗಿದೆ.

6. ಕಳ್ಳತನದ ಬಗ್ಗೆ ಪೊಲೀಸರಿಗೆ ನಿಮ್ಮ ಲಿಖಿತ ದೂರಿನ ಪ್ರತಿಯನ್ನು ಒದಗಿಸಿ. ಈ ಡಾಕ್ಯುಮೆಂಟ್ FIR ಅನ್ನು ಬೆಂಬಲಿಸುತ್ತದೆ ಮತ್ತು ಕ್ಲೈಮ್ ಡಾಕ್ಯುಮೆಂಟೇಶನ್‌ನ ಭಾಗವಾಗಿದೆ.

7. ಕಳ್ಳತನದ ಕ್ಲೈಮ್‌ಗಳಿಗಾಗಿ ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ಬಜಾಜ್ ಬೈಕ್ ಇನ್ಶೂರೆನ್ಸ್ ಕ್ಲೈಮ್ ಫಾರ್ಮ್ ಭರ್ತಿ ಮಾಡಿ. ಈ ಫಾರ್ಮ್ ಅನ್ನು ಇಲ್ಲಿಂದ ಡೌನ್ಲೋಡ್ ಮಾಡಬಹುದು: https://www.hdfcergo.com/docs/default-source/downloads/claim-forms/motor-insurance-policy-cf.pdf.

8. ಲಭ್ಯವಿದ್ದರೆ, ಅದು ಕಳುವಾಗುವ ಮೊದಲು ಬೈಕಿನ ಯಾವುದೇ ಫೋಟೋಗಳನ್ನು ಸಲ್ಲಿಸಿ. ಈ ಚಿತ್ರಗಳು ಕಳ್ಳತನವಾದ ಬೈಕಿನ ಸ್ಥಿತಿ ಮತ್ತು ಫೀಚರ್‌ಗಳನ್ನು ಪರಿಶೀಲಿಸಲು ಸಹಾಯ ಮಾಡುತ್ತವೆ.

9. ಪರಿಶೀಲನಾ ಉದ್ದೇಶಗಳಿಗಾಗಿ ಸರ್ಕಾರ ನೀಡಿದ ID ಪುರಾವೆಗಳಾದ ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಥವಾ ವೋಟರ್ ID ಯನ್ನು ಒದಗಿಸಿ.

10. ಕ್ಲೈಮ್ ಮೊತ್ತವನ್ನು ಸೆಟಲ್ ಮಾಡಲು ನಿಮ್ಮ ಬ್ಯಾಂಕ್ ಅಕೌಂಟ್ ವಿವರಗಳನ್ನು ಹಂಚಿಕೊಳ್ಳಿ. ಕ್ಲೈಮ್ ಅನುಮೋದನೆಯಾದರೆ ಇನ್ಶೂರೆನ್ಸ್ ಕಂಪನಿಯು ಕ್ಲೈಮ್ ಹಣವನ್ನು ಇಲ್ಲಿ ಡೆಪಾಸಿಟ್ ಮಾಡುತ್ತದೆ.

ಒಮ್ಮೆ ಎಚ್‌ಡಿಎಫ್‌ಸಿ ಎರ್ಗೋ ಈ ಡಾಕ್ಯುಮೆಂಟ್‌ಗಳನ್ನು ಪಡೆದ ನಂತರ, ಕ್ಲೈಮ್ ಅನುಮೋದನೆ ಪಡೆಯುವ ಮತ್ತು ಪಾವತಿಸುವ ಮೊದಲು ತನಿಖೆ ಮಾಡಲಾಗುತ್ತದೆ.

ನಿಮ್ಮ ಬಜಾಜ್ ಬೈಕಿಗೆ ನಿರ್ವಹಣಾ ಸಲಹೆಗಳು

ದೀರ್ಘಾವಧಿ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಬಜಾಜ್ ಬೈಕನ್ನು ನಿರ್ವಹಿಸುವುದು ಅಗತ್ಯವಾಗಿದೆ. ನಿಮ್ಮ ಬೈಕನ್ನು ಉನ್ನತ ಸ್ಥಿತಿಯಲ್ಲಿ ಇರಿಸಲು ಕೆಲವು ಪ್ರಾಕ್ಟಿಕಲ್ ನಿರ್ವಹಣಾ ಸಲಹೆಗಳು ಇಲ್ಲಿವೆ:

1. ಎಂಜಿನ್ ಸುಗಮವಾಗಿ ರನ್ ಆಗಲು ಶಿಫಾರಸು ಮಾಡಲಾದ ಮಧ್ಯಂತರಗಳಲ್ಲಿ ಎಂಜಿನ್ ಆಯಿಲ್ ಬದಲಾಯಿಸಿ. ತೈಲ ಬದಲಾವಣೆಗಳ ವಿಧ ಮತ್ತು ಆವರ್ತನಕ್ಕಾಗಿ, ನಿಮ್ಮ ಬೈಕ್‌ನ ಮಾನ್ಯುಯಲ್‌ನಲ್ಲಿ ಮಾರ್ಗಸೂಚಿಗಳನ್ನು ಅನುಸರಿಸಿ.

2. ನಿಯಮಿತವಾಗಿ ಬ್ರೇಕ್ ಪ್ಯಾಡ್‌ಗಳು ಮತ್ತು ಫ್ಲೂಯಿಡ್ ಮಟ್ಟಗಳನ್ನು ಪರಿಶೀಲಿಸಿ. ಯಾವುದೇ ಸುರಕ್ಷತಾ ಸಮಸ್ಯೆಗಳನ್ನು ತಪ್ಪಿಸಲು ಬ್ರೇಕ್‌ಗಳು ಪ್ರತಿಕ್ರಿಯೆ ನೀಡುತ್ತವೆ ಮತ್ತು ಸವೆದ ಬ್ರೇಕ್ ಪ್ಯಾಡ್‌ಗಳನ್ನು ಬದಲಾಯಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

3. ಉತ್ತಮ ಇಂಧನ ದಕ್ಷತೆ ಮತ್ತು ಸುರಕ್ಷತೆಗಾಗಿ ಸರಿಯಾದ ಟೈರ್ ಒತ್ತಡವನ್ನು ನಿರ್ವಹಿಸಿ. ನಿಯಮಿತವಾಗಿ ಟೈರ್ ಒತ್ತಡವನ್ನು ಪರಿಶೀಲಿಸಿ ಮತ್ತು ನಿಮ್ಮ ಬಜಾಜ್ ಬೈಕ್ ಕೈಪಿಡಿಯಲ್ಲಿನ ನಿರ್ದಿಷ್ಟತೆಗಳ ಪ್ರಕಾರ ಅದನ್ನು ಸರಿಹೊಂದಿಸಿ.

4. ಬ್ರೇಕ್ ಫ್ಲೂಯಿಡ್, ಕೂಲಂಟ್ ಮತ್ತು ಚೈನ್ ಆಯಿಲ್‌ನಂತಹ ಅಗತ್ಯ ಫ್ಲೂಯಿಡ್‌ಗಳನ್ನು ನಿಯಮಿತವಾಗಿ ಪರಿಶೀಲಿಸಿ ಮತ್ತು ಟಾಪ್ ಅಪ್ ಮಾಡಿ. ಈ ಫ್ಲೂಯಿಡ್‌ಗಳನ್ನು ಸರಿಯಾದ ಮಟ್ಟದಲ್ಲಿ ಇರಿಸುವುದರಿಂದ ಸುಗಮ ಕಾರ್ಯಾಚರಣೆ ಮತ್ತು ದೀರ್ಘ ಬಾಳಿಕೆಯನ್ನು ಖಚಿತಪಡಿಸುತ್ತದೆ.

5. ಅತ್ಯುತ್ತಮ ಎಂಜಿನ್ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಏರ್ ಫಿಲ್ಟರ್ ಅನ್ನು ಸ್ವಚ್ಛವಾಗಿ ಇರಿಸಿ. ನಿರ್ವಹಣಾ ಶೆಡ್ಯೂಲ್ ಪ್ರಕಾರ ಏರ್ ಫಿಲ್ಟರ್ ಅನ್ನು ಸ್ವಚ್ಛಗೊಳಿಸಿ ಅಥವಾ ಬದಲಾಯಿಸಿ.

6. ತುಕ್ಕು ತಡೆಗಟ್ಟಲು ಮತ್ತು ಸುಗಮ ಗೇರ್ ಶಿಫ್ಟ್‌ಗಳನ್ನು ಖಚಿತಪಡಿಸಿಕೊಳ್ಳಲು ಬೈಕ್‌ನ ಚೈನ್ ಅನ್ನು ನಿಯಮಿತವಾಗಿ ಲೂಬ್ರಿಕೇಟ್ ಮಾಡಿ. ಚೈನ್ ಲೂಬ್ರಿಕೇಶನ್‌ಗಾಗಿ ಶಿಫಾರಸು ಮಾಡಲಾದ ನಿರ್ವಹಣಾ ಶೆಡ್ಯೂಲ್ ಅನ್ನು ಅನುಸರಿಸಿ.

7. ಸವೆತಕ್ಕಾಗಿ ಬ್ಯಾಟರಿಯನ್ನು ಪರೀಕ್ಷಿಸಿ ಮತ್ತು ಅದು ಸಂಪೂರ್ಣವಾಗಿ ಚಾರ್ಜ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಉತ್ತಮವಾಗಿ ನಿರ್ವಹಿಸಲಾದ ಬ್ಯಾಟರಿಯು ಅನಿರೀಕ್ಷಿತವಾಗಿ ಕೆಟ್ಟು ನಿಲ್ಲುವುದನ್ನು ತಡೆಯುತ್ತದೆ.

8. ಕೊಳೆ ಮತ್ತು ಹೊಲಸನ್ನು ತೆಗೆದುಹಾಕಲು ನಿಯಮಿತವಾಗಿ ನಿಮ್ಮ ಬೈಕನ್ನು ತೊಳೆಯಿರಿ. ಸ್ವಚ್ಛ ಬೈಕ್ ಉತ್ತಮವಾಗಿ ಕಾಣುತ್ತದೆ ಮತ್ತು ಯಾವುದೇ ನಿರ್ವಹಣಾ ಸಮಸ್ಯೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

9. ಅಧಿಕೃತ ಬಜಾಜ್ ಸರ್ವೀಸ್ ಸೆಂಟರ್‌ನಲ್ಲಿ ನಿಯಮಿತ ಚೆಕ್-ಅಪ್‌ಗಳಿಗಾಗಿ ಉತ್ಪಾದಕರ ಸೇವಾ ವೇಳಾಪಟ್ಟಿಯನ್ನು ಅನುಸರಿಸಿ. ಇದು ಸಂಭಾವ್ಯ ಸಮಸ್ಯೆಗಳನ್ನು ಮುಂಚಿತವಾಗಿ ಗುರುತಿಸಲು ಮತ್ತು ಸರಿಪಡಿಸಲು ಸಹಾಯ ಮಾಡುತ್ತದೆ.

10. ನಿಮ್ಮ ಬಜಾಜ್ ಬೈಕ್ ಇನ್ಶೂರೆನ್ಸ್ ಅಪ್ ಟು ಡೇಟ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಎಚ್‌ಡಿಎಫ್‌ಸಿ ಎರ್ಗೋದ ಆನ್ಲೈನ್ ಪೋರ್ಟಲ್‌ನಲ್ಲಿ ನಿಯಮಿತವಾಗಿ ನಿಮ್ಮ ಬಜಾಜ್ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ರಿವ್ಯೂ ಮಾಡಿ ಮತ್ತು ಸಮಗ್ರ ಕವರೇಜ್‌ಗಾಗಿ ಬಜಾಜ್ ಬೈಕ್ ಇನ್ಶೂರೆನ್ಸ್ ಮೂಲಕ ಅದನ್ನು ಆನ್ಲೈನಿನಲ್ಲಿ ನವೀಕರಿಸುವುದು ಅಥವಾ ಅಪ್ಗ್ರೇಡ್ ಮಾಡುವುದನ್ನು ಪರಿಗಣಿಸಿ.

ಈ ನಿರ್ವಹಣಾ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ನಿಮ್ಮ ಬಜಾಜ್ ಬೈಕನ್ನು ಅತ್ಯುತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು ಮತ್ತು ಅದು ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಬಹುದು. ಎಚ್‌ಡಿಎಫ್‌ಸಿ ಎರ್ಗೋದಿಂದ ನಿಮ್ಮ ಬಜಾಜ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ದುಬಾರಿ ಬೈಕ್ ದುರಸ್ತಿಯನ್ನು ತಪ್ಪಿಸಲು ಮತ್ತು ಕವರ್ ಮಾಡಲು ನಿಯಮಿತ ಕಾಳಜಿಯು ನಿಮಗೆ ಸಹಾಯ ಮಾಡುತ್ತದೆ.

ಬಜಾಜ್ - ಮೇಲ್ನೋಟ ಮತ್ತು USP ಗಳು

ಬಜಾಜ್ ಭಾರತೀಯ ವಾಹನ ಉದ್ಯಮದಲ್ಲಿ ಪ್ರಮುಖ ಹೆಸರಾಗಿದ್ದು, ಅದರ ಶ್ರೇಣಿಯ ಉನ್ನತ ಗುಣಮಟ್ಟದ ಟೂ ವೀಲರ್‌ಗಳು ಮತ್ತು ತ್ರಿ ವೀಲರ್‌ಗಳಿಗೆ ಹೆಸರುವಾಸಿಯಾಗಿದೆ. ಕಂಪನಿಯು ನಿಮ್ಮ ಬೈಕಿಗೆ ಅತ್ಯುತ್ತಮ ಕವರೇಜನ್ನು ಒದಗಿಸುವ ಸಮಗ್ರ ಬಜಾಜ್ ಬೈಕ್ ಇನ್ಶೂರೆನ್ಸ್ ಅನ್ನು ಒದಗಿಸುತ್ತದೆ. ಬಜಾಜ್ ಇನ್ಶೂರೆನ್ಸ್‌ನ ಪ್ರಮುಖ USP ಗಳು, ಬಜಾಜ್ ಬೈಕ್ ಇನ್ಶೂರೆನ್ಸ್ ಖರೀದಿಸಲು ಮತ್ತು ನವೀಕರಿಸಲು ತಡೆರಹಿತ ಆನ್ಲೈನ್ ಪ್ರಕ್ರಿಯೆಗಳು, ವಿಶಾಲ ಶ್ರೇಣಿಯ ಕವರೇಜ್ ಆಯ್ಕೆಗಳು ಮತ್ತು ವಿಶ್ವಾಸಾರ್ಹತೆ ಮತ್ತು ಗ್ರಾಹಕ ಸೇವೆಗೆ ಬಲವಾದ ಹೆಸರುಗಳನ್ನು ಒಳಗೊಂಡಿವೆ. ಬಜಾಜ್ ಟೂ ವೀಲರ್ ಇನ್ಶೂರೆನ್ಸ್ ನಗದುರಹಿತ ಕ್ಲೈಮ್‌ಗಳು, 24/7 ರಸ್ತೆಬದಿಯ ನೆರವು ಮತ್ತು ಆನ್ಲೈನ್ ಬಜಾಜ್ ಬೈಕ್ ಇನ್ಶೂರೆನ್ಸ್ ಮೂಲಕ ನಿಮ್ಮ ಪಾಲಿಸಿಯನ್ನು ನಿರ್ವಹಿಸುವ ಅನುಕೂಲತೆಯಂತಹ ಫೀಚರ್‌ಗಳೊಂದಿಗೆ ಮನಸ್ಸಿನ ಶಾಂತಿಯನ್ನು ಖಚಿತಪಡಿಸುತ್ತದೆ.

ಜನಪ್ರಿಯ ಬಜಾಜ್ ವೇರಿಯಂಟ್‌ಗಳು

1. ಬಜಾಜ್ ಪಲ್ಸರ್ 150: ಅದರ ಪವರ್ ಮತ್ತು ಇಂಧನ ದಕ್ಷತೆಯ ಸಮತೋಲನಕ್ಕಾಗಿ ಜನಪ್ರಿಯ ಆಯ್ಕೆ. ಇದು ನಗರದ ಪ್ರಯಾಣ ಮತ್ತು ದೀರ್ಘ ಸವಾರಿಗಳಿಗೆ ಸೂಕ್ತವಾಗಿದೆ.

2. ಬಜಾಜ್ ಡೊಮಿನಾರ್ 400: ದೀರ್ಘಾವಧಿಯ ಪ್ರವಾಸಕ್ಕಾಗಿ ಶಕ್ತಿಶಾಲಿ ಎಂಜಿನ್ ಮತ್ತು ಸುಧಾರಿತ ಫೀಚರ್‌ಗಳನ್ನು ಒದಗಿಸುವ ಪ್ರೀಮಿಯಂ ವೇರಿಯಂಟ್.

3. ಬಜಾಜ್ ಪಲ್ಸರ್ NS200: ಅದರ ಸ್ಪೋರ್ಟಿ ವಿನ್ಯಾಸ ಮತ್ತು ದೃಢವಾದ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ. ಆಧುನಿಕ ಫೀಚರ್‌ಗಳೊಂದಿಗೆ ಆಕರ್ಷಕ ರೈಡ್ ಒದಗಿಸುತ್ತದೆ.

4. ಬಜಾಜ್ ಪ್ಲಾಟಿನಾ 100: ದೈನಂದಿನ ಪ್ರಯಾಣ ಮತ್ತು ದೀರ್ಘಾವಧಿಯ ಬಳಕೆಗೆ ಸೂಕ್ತವಾದ ವಿಶ್ವಾಸಾರ್ಹ ಮತ್ತು ಆರ್ಥಿಕವಾಗಿ ಅನುಕೂಲವಾಗಿರುವ ಬೈಕ್.

5. ಬಜಾಜ್ ಅವೆಂಜರ್ ಸ್ಟ್ರೀಟ್ 160: ಆರಾಮದಾಯಕ ಬ್ಯಾಕ್ ರೈಡಿಂಗ್ ಸ್ಥಾನದೊಂದಿಗೆ ಆರಾಮದಾಯಕ ರೈಡ್‌ಗಳಿಗಾಗಿ ವಿನ್ಯಾಸಗೊಳಿಸಲಾದ ಕ್ಲಾಸಿಕ್ ಕ್ರೂಸರ್ ಬೈಕ್.

ಭಾರತದಾದ್ಯಂತ 2000+ ನೆಟ್ವರ್ಕ್ ಗ್ಯಾರೇಜ್‌ಗಳು
2000+ˇ ನೆಟ್ವರ್ಕ್ ಗ್ಯಾರೇಜ್‌ಗಳು
ಭಾರತದಾದ್ಯಂತ

ಬಜಾಜ್ ಬೈಕ್ ಇನ್ಶೂರೆನ್ಸ್ ಬಗ್ಗೆ ಇತ್ತೀಚಿನ ಸುದ್ದಿಗಳು

ಬಜಾಜ್ ಡೀಮನ್ ಬ್ಲಾಕ್ ಎಡಿಷನ್‌ನಲ್ಲಿ RS200 ಅನ್ನು ಬಿಡುಗಡೆ ಮಾಡಿದೆ

ಬಜಾಜ್ ಆಟೋ ಪಲ್ಸರ್ RS200 ನ ಡೀಮನ್ ಬ್ಲಾಕ್ ಎಡಿಷನ್ ಅನ್ನು ಪರಿಚಯಿಸಿದೆ. ಈ ವರ್ಷ ಮಾರ್ಚ್‌ನಲ್ಲಿ ಬಿಡುಗಡೆಯಾದ ನಂತರ ಪಲ್ಸರ್ RS200 15000 ಕ್ಕೂ ಹೆಚ್ಚು ಬೈಕ್‌ಗಳನ್ನು ಮಾರಾಟ ಮಾಡಿದೆ. RS200 ಡೀಮನ್ ಬ್ಲಾಕ್ ಎಡಿಷನ್ ಹೊಸದಾಗಿ ಅಭಿವೃದ್ಧಿಪಡಿಸಿದ ಪ್ರೀಮಿಯಂ ಬ್ಲ್ಯಾಕ್ ಕಲರ್‌ನಲ್ಲಿ ರೆಡ್ ಗ್ರಾಫಿಕ್ಸ್ ಹೊಂದಿದೆ. ದೆಹಲಿಯಲ್ಲಿ ಆನ್-ರೋಡ್ ₹1,32,000 (ನಾನ್- ABS) ಮತ್ತು ₹ 1,45,000 (ABS) ಆರಂಭವಾಗುವ ಬೆಲೆಗಳಲ್ಲಿ ಬೈಕ್ ಲಭ್ಯವಿರುತ್ತದೆ.


ಪ್ರಕಟಣೆ ದಿನಾಂಕ: ನವೆಂಬರ್ 11, 2024

ಬಜಾಜ್ ಭಾರತದಲ್ಲಿ ಶೀಘ್ರದಲ್ಲೇ RS200 ಬಿಡುಗಡೆ ಮಾಡಲಿದೆ

ಬಜಾಜ್ ಭಾರತದಲ್ಲಿ ಮುಂಬರುವ ತಿಂಗಳುಗಳಲ್ಲಿ RS200 ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಬಜಾಜ್ ಪಲ್ಸರ್ RS200 ಅನೇಕ ಫೀಚರ್ ಅಪ್ಡೇಟ್‌ಗಳು ಮತ್ತು ಹೊಸ ಬಣ್ಣದ ಸ್ಕೀಮ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಮೋಟಾರ್‌ಸೈಕಲ್ ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಶನ್‌ನೊಂದಿಗೆ ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್ ಹೊಂದಿರಬಹುದು. RS200 LED ಹೆಡ್‌ಲ್ಯಾಂಪ್‌ಗಳು ಮತ್ತು ಹೊಸ ಪೇಂಟ್ ಸ್ಕೀಮ್‌ಗಳನ್ನು ಕೂಡ ಒಳಗೊಂಡಿರಬಹುದು. ಹೊಸ ಪಲ್ಸರ್ RS200 ಕಡಿಮೆ ಬೆಲೆ ಏರಿಕೆಯನ್ನು ಹೊಂದಬಹುದು ಮತ್ತು ಹೀರೋ ಕರೀಷ್ಮಾ XMR ಮತ್ತು ಸುಜುಕಿ ಜಿಕ್ಸರ್ SF250 ನೊಂದಿಗೆ ಸ್ಪರ್ಧಿಸಲಿದೆ.

ಪ್ರಕಟಿಸಲಾದ ದಿನಾಂಕ: ಏಪ್ರಿಲ್ 18, 2024

ಇತ್ತೀಚಿನ ಟೂ ವೀಲರ್ ಇನ್ಶೂರೆನ್ಸ್ ಬ್ಲಾಗ್‌ಗಳನ್ನುಓದಿ

ನಿಮ್ಮ ಬಜಾಜ್ ಪಲ್ಸರ್ 125 ಟೈರ್‌ಗಳನ್ನು ನಿರ್ವಹಿಸಲು ಅಲ್ಟಿಮೇಟ್ ಗೈಡ್

ನಿಮ್ಮ ಬಜಾಜ್ ಪಲ್ಸರ್ 125 ಟೈರ್‌ಗಳನ್ನು ನಿರ್ವಹಿಸಲು ಅಲ್ಟಿಮೇಟ್ ಗೈಡ್

ಪೂರ್ತಿ ಓದಿ
ಜೂನ್ 12, 2024 ರಂದು ಪ್ರಕಟಿಸಲಾಗಿದೆ
2024 ರಲ್ಲಿ ಭಾರತದಲ್ಲಿ 50000 ರ ಒಳಗಿನ ಅತ್ಯುತ್ತಮ ಬೈಕ್

2024 ರಲ್ಲಿ ಭಾರತದಲ್ಲಿ 50000 ರ ಒಳಗಿನ ಅತ್ಯುತ್ತಮ ಬೈಕ್

ಪೂರ್ತಿ ಓದಿ
ಮೇ 21, 2024 ರಂದು ಪ್ರಕಟಿಸಲಾಗಿದೆ
ಬಜಾಜ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ - ಟ್ರಯಂಫ್ ಮೋಟಾರ್‌ಸೈಕಲ್

ಬಜಾಜ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ - ಟ್ರಯಂಫ್ ಮೋಟಾರ್‌ಸೈಕಲ್

ಪೂರ್ತಿ ಓದಿ
ಆಗಸ್ಟ್ 11, 2023 ರಂದು ಪ್ರಕಟಿಸಲಾಗಿದೆ
ಬಜಾಜ್ ಡೊಮಿನಾರ್ 400 ಖರೀದಿಸುತ್ತಿದ್ದೀರಾ? ಟಾಪ್ ಫೀಚರ್‌ಗಳನ್ನು ತಿಳಿಯಿರಿ

ಬಜಾಜ್ ಡೊಮಿನಾರ್ 400 ಖರೀದಿಸುತ್ತಿದ್ದೀರಾ? ಟಾಪ್ ಫೀಚರ್‌ಗಳನ್ನು ತಿಳಿಯಿರಿ

ಪೂರ್ತಿ ಓದಿ
ಜೂನ್ 15, 2023 ರಂದು ಪ್ರಕಟಿಸಲಾಗಿದೆ
ಬಜಾಜ್ ಮೋಟರ್ಸ್ ಇದು ಆಲ್ ನ್ಯೂ ಪಲ್ಸರ್ 250 ಮಾಡೆಲ್‌ಗಳನ್ನು ಪ್ರಾರಂಭಿಸುತ್ತವೆ

ಬಜಾಜ್ ಮೋಟರ್ಸ್ ಇದು ಆಲ್ ನ್ಯೂ ಪಲ್ಸರ್ 250 ಮಾಡೆಲ್‌ಗಳನ್ನು ಪ್ರಾರಂಭಿಸುತ್ತವೆ

ಪೂರ್ತಿ ಓದಿ
ಏಪ್ರಿಲ್ 07, 2022 ರಂದು ಪ್ರಕಟಿಸಲಾಗಿದೆ
ಬ್ಲಾಗ್ ಬಲ ಸ್ಲೈಡರ್
ಬ್ಲಾಗ್ ಎಡ ಸ್ಲೈಡರ್
ಇನ್ನಷ್ಟು ಬ್ಲಾಗ್‌ಗಳನ್ನು ನೋಡಿ

ಆಗಾಗ್ಗೆ ಕೇಳಲಾದ ಪ್ರಶ್ನೆಗಳು


ಹೊಸ ಬೈಕ್ ಖರೀದಿಸಿದ್ದಕ್ಕೆ ಅಭಿನಂದನೆಗಳು! ಡೀಲರ್ ನಿಮಗೆ ಇನ್ಶೂರೆನ್ಸ್ ಒದಗಿಸುವ ಸಾಧ್ಯತೆ ಇದೆ, ಆದರೆ ಅದನ್ನು ಕೂಡಲೇ ಖರೀದಿಸಬೇಕು ಎಂದೇನಿಲ್ಲ. ಸ್ವಲ್ಪ ಸಮಯ ತಡೆದು ನಿಮ್ಮದೇ ಆದ ಸಂಶೋಧನೆ ಮಾಡಿದ ನಂತರ ಇನ್ಶೂರೆನ್ಸ್ ಖರೀದಿಸಬಹುದು. ಡೀಲರ್‌ಶಿಪ್‌ಗಳು ನಿಮಗೆ ಸೂಕ್ತವಾಗುವ ಇನ್ಶೂರೆನ್ಸ್ ಪಾಲಿಸಿಗಳನ್ನು ಶಿಫಾರಸು ಮಾಡಬಹುದು. ಆದರೆ, ಆನ್ಲೈನ್‌ನಲ್ಲಿ ತ್ವರಿತವಾಗಿ ಒಂದು ಸಂಶೋಧನೆ ಮಾಡುವುದು ನಿಮ್ಮ ಅವಶ್ಯಕತೆಗಳಿಗೆ ಸೂಕ್ತವಾಗುವ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
ಹೌದು, ಇದು ನಿಜ. ಮೋಟಾರ್ ವಾಹನ ಕಾಯ್ದೆಯ ಪ್ರಕಾರ 250W ಮೋಟಾರ್ ಹೊಂದಿರುವ ವಾಹನಗಳು ಮತ್ತು 25-30 kmph ವೇಗ ಹೊಂದಿರುವ ವಾಹನಗಳಿಗೆ ಇನ್ಶೂರೆನ್ಸ್ ಅಥವಾ ನೋಂದಣಿ ಅಥವಾ ಲೈಸೆನ್ಸ್ ಅಗತ್ಯವಿಲ್ಲ. ಆದರೆ ಬಜಾಜ್ ಚೇತಕ್ ಶಕ್ತಿಶಾಲಿ 4080 W ಮೋಟಾರ್ ಹೊಂದಿರುವುದರಿಂದ ಇದಕ್ಕೆ ಎಂದಿನ ಟೂ ವೀಲರ್ ನಿಯಮಗಳು ಅನ್ವಯವಾಗುತ್ತವೆ. ಗರಿಷ್ಠ ರಕ್ಷಣೆ ಪಡೆಯಲು ನಿಮ್ಮ ಬಜಾಜ್ ಚೇತಕ್‌ಗಾಗಿ ಸಮಗ್ರ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡಲು ನಾವು ಶಿಫಾರಸು ಮಾಡುತ್ತೇವೆ.
ನೀವು ಎಚ್‌ಡಿಎಫ್‌ಸಿ ಎರ್ಗೋ ಪೋರ್ಟಲ್‌ಗೆ ಲಾಗಿನ್ ಆಗಿ ನಿಮ್ಮ ಪಾಲಿಸಿ ವಿವರಗಳನ್ನು ನಮೂದಿಸಬಹುದು. ಮೊಬೈಲ್ ಆ್ಯಪ್ ಮೂಲಕ ಬೈಕ್‌ಗೆ ಆದ ಹಾನಿಯ ಬಗ್ಗೆ ಸ್ವಯಂ-ತಪಾಸಣೆ ಮಾಡಬೇಕಾಗಬಹುದು ಮತ್ತು ಅದರ ಚಿತ್ರಗಳನ್ನು ಕಳುಹಿಸಬೇಕಾಗಬಹುದು. ನೀವು ಟೋಲ್‌ಫ್ರೀ ಸಂಖ್ಯೆಗೂ ಸಹ ಕರೆ ಮಾಡಬಹುದು ಮತ್ತು ಕ್ಲೈಮ್ ನೋಂದಣಿ ಮಾಡಬಹುದು. ನಿಮ್ಮ ಪಾಲಿಸಿ ಡಾಕ್ಯುಮೆಂಟ್ ಅನ್ನು ಜೊತೆಯಲ್ಲೇ ಇಟ್ಟುಕೊಳ್ಳಿ. ಇವೆಲ್ಲವನ್ನೂ ಆಕ್ಸಿಡೆಂಟ್ ಆದ 24 ಗಂಟೆಗಳ ಒಳಗೆ, ಸಾಧ್ಯವಾದಷ್ಟು ಬೇಗ ಮಾಡಬೇಕು.
ಇದರ ಉತ್ತರವು ನಿಮ್ಮ ಟೈರ್‌ಗಳು ಹಾನಿಗೊಳಗಾದ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಆಕ್ಸಿಡೆಂಟ್ ಆದಾಗ ಟೈರ್‌ಗಳು ಹಾನಿಗೊಳಗಾದರೆ, ಬಜಾಜ್ ಆಟೋ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲಾನ್ ಆ ಹಾನಿಯ ವಿರುದ್ಧ ಕವರೇಜ್ ನೀಡುತ್ತದೆ ಮತ್ತು ಟೈರ್‌ಗಳನ್ನು ಬದಲಾಯಿಸುತ್ತದೆ. ಆದರೆ, ವಿಧ್ವಂಸಕ ಕೃತ್ಯದ ಸಂದರ್ಭದಲ್ಲಿ ಅದನ್ನು ಕವರ್ ಮಾಡಲಾಗುವುದಿಲ್ಲ.
ನೀವು ಅದನ್ನು ನವೀಕರಿಸಲು ಬಯಸಿದಾಗ ನಿಮ್ಮ ಪಾಲಿಸಿಯ ಸ್ಥಿತಿಯನ್ನು ನೋಡಲು ನಿಮ್ಮ ನೋಂದಾಯಿತ ಕ್ರೆಡೆನ್ಶಿಯಲ್‌ಗಳೊಂದಿಗೆ ಎಚ್‌ಡಿಎಫ್‌ಸಿ ಎರ್ಗೋ ಪೋರ್ಟಲ್‌ಗೆ ಲಾಗಿನ್ ಮಾಡುವ ಮೂಲಕ ನಿಮ್ಮ ಬಜಾಜ್ ಬೈಕ್ ಇನ್ಶೂರೆನ್ಸ್ ಪ್ಲಾನ್ ಪರಿಶೀಲಿಸಬಹುದು. ಅಲ್ಲದೆ, ಇಲ್ಲಿ ಕ್ಲಿಕ್ ಮಾಡುವ ಮೂಲಕ ಅದನ್ನು ಸಲ್ಲಿಸಿದ ನಂತರ ನಿಮ್ಮ ಬಜಾಜ್ ಬೈಕಿಗೆ ನಿಮ್ಮ ಕ್ಲೈಮ್ ಸ್ಟೇಟಸ್ ಅನ್ನು ನೀವು ಪರಿಶೀಲಿಸಬಹುದು: https://selfhelp.hdfcergo.com/SelfHelp/Authentication/ClaimStatus.
ಸಮಗ್ರ ಬೈಕ್ ಇನ್ಶೂರೆನ್ಸ್ ನಿಮ್ಮ ಬೈಕಿಗೆ ಉತ್ತಮವಾಗಿದೆ ಏಕೆಂದರೆ ಇದು ಥರ್ಡ್ ಪಾರ್ಟಿಗೆ ಕವರೇಜ್ ಮತ್ತು ನಿಮ್ಮ ಬೈಕಿನ ಸ್ವಂತ ಹಾನಿಗೆ ಕವರೇಜನ್ನು ಒದಗಿಸುತ್ತದೆ. ಆದಾಗ್ಯೂ, ಇದು ನಿಮ್ಮ ಅಗತ್ಯಗಳನ್ನು ಅವಲಂಬಿಸಿರುತ್ತದೆ. ನಿಮ್ಮ ಅವಶ್ಯಕತೆಗಳು ಮತ್ತು ಕೈಗೆಟುಕುವಿಕೆಯ ಆಧಾರದ ಮೇಲೆ ನೀವು ಪ್ಲಾನ್ ಮತ್ತು ಹೆಚ್ಚುವರಿ ಕವರೇಜನ್ನು ಆಯ್ಕೆ ಮಾಡಬೇಕು.
ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ, ಅವುಗಳೆಂದರೆ ಬೈಕ್‌ನ ತಯಾರಿಕೆ ಮತ್ತು ಮಾಡೆಲ್, ಭೌಗೋಳಿಕ ಸ್ಥಳ, ಇನ್ಶೂರೆನ್ಸ್ ಪ್ಲಾನ್ ವಿಧ ಮತ್ತು ಆಯ್ಕೆ ಮಾಡಿದ ಆ್ಯಡ್-ಆನ್‌ಗಳು, ನೀವು ಅರ್ಹರಾಗಿರುವ ನೋ-ಕ್ಲೈಮ್ ಬೋನಸ್ ಮೊತ್ತ ಇತ್ಯಾದಿ. ನೀವು ವಿವರಗಳನ್ನು ಭರ್ತಿ ಮಾಡಬೇಕು ಮತ್ತು ನಂತರ ಸಂಬಂಧಿತ ವಿವರಗಳನ್ನು ಇಲ್ಲಿ ಕ್ಲಿಕ್ ಮಾಡುವ ಮೂಲಕ ಅವುಗಳನ್ನು ನೀವೇ ಪರಿಶೀಲಿಸಬೇಕು: https://www.hdfcergo.com/OnlineInsurance/TWOnline/TwoWheeler/VehicleDetail/2YQATPgKx5hGqsXaeC2Yys_ocKXosLrNagJ1a5pqutP0I,E4Hf5dNi1,LG9x0aRD.
ನಿಮ್ಮ ನೋಂದಾಯಿತ ಇಮೇಲ್ ವಿಳಾಸಕ್ಕೆ ನಿಮ್ಮ ಬೈಕ್ ಇನ್ಶೂರೆನ್ಸ್ ಪ್ಲಾನಿನ ಪ್ರತಿಯನ್ನು ನೀವು ಪಡೆಯುತ್ತೀರಿ. ಆದಾಗ್ಯೂ, ನಿಮ್ಮ ಅಸ್ತಿತ್ವದಲ್ಲಿರುವ ಎಚ್‌ಡಿಎಫ್‌ಸಿ ಎರ್ಗೋ ಬೈಕ್ ಇನ್ಶೂರೆನ್ಸ್ ಪ್ಲಾನಿನ ಸಾಫ್ಟ್ ಕಾಪಿಯನ್ನು ನೀವು ಡೌನ್ಲೋಡ್ ಮಾಡಬೇಕಾಗಬಹುದು. ಆ ಸಂದರ್ಭದಲ್ಲಿ, ನೀವು 022 6234 6234 / 0120 6234 6234 ನಲ್ಲಿ ಗ್ರಾಹಕ ಸಹಾಯವಾಣಿಗೆ ಕರೆ ಮಾಡಬಹುದು ಅಥವಾ ನಿಮ್ಮ ನೋಂದಾಯಿತ ಮೊಬೈಲ್ ನಂಬರ್, ಇಮೇಲ್ ಐಡಿ ಅಥವಾ ಪಾಲಿಸಿ ನಂಬರ್‌ನೊಂದಿಗೆ ಇಲ್ಲಿ ಲಾಗಿನ್ ಮಾಡಬಹುದು: https://selfhelp.hdfcergo.com/SelfHelp/Authentication/KnowYourPolicy.
ನಿಮ್ಮ ಬಜಾಜ್ ಬೈಕ್ ಇನ್ಶೂರೆನ್ಸ್‌ಗೆ ಪ್ರೀಮಿಯಂ ಕಡಿಮೆ ಮಾಡಲು ಅನೇಕ ಮಾರ್ಗಗಳಿವೆ, ಅವುಗಳೆಂದರೆ:
ಎ. ಕಡಿಮೆ ಐಡಿವಿ (ವಿಮಾದಾರ ಘೋಷಿತ ಮೌಲ್ಯ) ಆಯ್ಕೆ ಮಾಡುವುದು, ಆದರೆ ಇದನ್ನು ಶಿಫಾರಸು ಮಾಡಲಾಗುವುದಿಲ್ಲ, ಏಕೆಂದರೆ ಎಲ್ಲಾ ಕ್ಲೈಮ್‌ಗಳನ್ನು IDV ಗೆ ಅನುಗುಣವಾಗಿ ಪಾವತಿಸಲಾಗುತ್ತದೆ. IRDAI ಪ್ರತಿ ವರ್ಷ IDV ಯನ್ನು ಕಡಿಮೆ ಮಾಡಲು ಸ್ಟ್ಯಾಂಡರ್ಡ್ ದರವನ್ನು ಹೊಂದಿದೆ ಮತ್ತು ಅದನ್ನು ಅನುಸರಿಸಲು ಶಿಫಾರಸು ಮಾಡಲಾಗುತ್ತದೆ.
ಬಿ. ಯಾವುದೇ ಆ್ಯಡ್-ಆನ್ ಕವರೇಜ್‌ಗಳನ್ನು ಆಯ್ಕೆ ಮಾಡದಿರುವುದು, ಆದರೆ ಅಗತ್ಯ ಕವರೇಜ್‌ಗಳನ್ನು ತೆಗೆದುಕೊಳ್ಳದಿದ್ದರೆ ಇದು ನಿಮ್ಮ ಬಜಾಜ್ ಬೈಕನ್ನು ಅಪಾಯದಲ್ಲಿ ಇರಿಸಬಹುದು.
ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಇನ್ಶೂರೆನ್ಸ್ ಕವರೇಜ್ ಅಗತ್ಯವಿರುವುದರಿಂದ, ಅತ್ಯಂತ ಕಡಿಮೆ ಪ್ರೀಮಿಯಂ ಆಯ್ಕೆ ಮಾಡುವುದು ಉತ್ತಮ ಆಯ್ಕೆಯಲ್ಲ. ಆದ್ದರಿಂದ, ನೀವು ಅತ್ಯಂತ ವೆಚ್ಚ-ದಕ್ಷ ಆಯ್ಕೆಯನ್ನು ಪರಿಶೀಲಿಸಿ ಮತ್ತು ನಂತರ ಅದಕ್ಕೆ ಅನುಗುಣವಾಗಿ ನಿಮ್ಮ ಪ್ಲಾನನ್ನು ಆಯ್ಕೆ ಮಾಡಬೇಕು.

ಅವಾರ್ಡ್ಸ್ ಮತ್ತು ಗುರುತಿಸುವಿಕೆ

slider-right
ಸ್ಲೈಡರ್-ಎಡ
ಎಲ್ಲಾ ಪ್ರಶಸ್ತಿಗಳನ್ನು ನೋಡಿ