ಮಾರುತಿ ಸ್ವಿಫ್ಟ್ ಡಿಜೈರ್ ಮಾನ್ಯುಯಲ್ ಮತ್ತು ಆಟೋಮ್ಯಾಟಿಕ್ ಗೇರ್ ಶಿಫ್ಟ್ ಟ್ರಾನ್ಸ್ಮಿಷನ್ ಆಯ್ಕೆಗಳೊಂದಿಗೆ ಪೆಟ್ರೋಲ್ ಮಾದರಿಗಳಲ್ಲಿ ಲಭ್ಯವಿದೆ. ಎಲ್ಲಾ ಮಾದರಿಗಳು 1.2 ಲೀಟರ್ VVT ಪೆಟ್ರೋಲ್ ಎಂಜಿನ್ನಲ್ಲಿ ಲಭ್ಯವಿದ್ದು, 6000 rpm ನಲ್ಲಿ 66KW ಶಕ್ತಿಯನ್ನು ಉತ್ಪಾದಿಸಬಲ್ಲದು. ಸುಮಾರು 4400rpm ನಲ್ಲಿ ಟಾರ್ಕ್ ಫಿಗರ್ 113 NM ಆಗಿದೆ. ನೀವು ಮಾನ್ಯುಯಲ್ ಟ್ರಾನ್ಸ್ಮಿಷನ್ ಮಾದರಿ ಅಥವಾ AMT ಆಧಾರಿತ ಆಟೋ ಗೇರ್ ಶಿಫ್ಟ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಮಾದರಿ ಯಾವುದನ್ನೇ ಆಯ್ಕೆ ಮಾಡಿದರೂ, ಎರಡರಲ್ಲೂ ಟ್ರಾನ್ಸ್ಮಿಷನ್ ಆಯ್ಕೆಗಳು 5 ಸ್ಪೀಡ್ ಇರುವುದೇ ಆಗಿದೆ. ZXi+ ವೇರಿಯಂಟ್ನ ಟಾಪ್ ಲೈನ್ ಮಾದರಿಗಳಲ್ಲಿ ಮಾತ್ರ ಕ್ರೂಸ್ ಕಂಟ್ರೋಲ್ ಲಭ್ಯವಿದೆ.. ZXi ಮತ್ತು ZXi ವೇರಿಯಂಟ್ಗಳು ಸ್ಮಾರ್ಟ್ ಆ್ಯಪ್ ಬೆಂಬಲವನ್ನು ಕೂಡ ಹೊಂದಿದ್ದು, ಸ್ಮಾರ್ಟ್ಫೋನ್ ಆ್ಯಪ್ ಬಳಸಿಕೊಂಡು ನಿಮ್ಮ ಕಾರ್‌ನಲ್ಲಿ ಹಲವಾರು ಕಾರ್ಯಗಳನ್ನು ನಿಯಂತ್ರಿಸಲು ನಿಮಗೆ ಅನುವು ಮಾಡಿಕೊಡುತ್ತದೆ.
Lxi | ಪೆಟ್ರೋಲ್ 1.2L | ಮಾನ್ಯುಯಲ್ ಟ್ರಾನ್ಸ್ಮಿಷನ್ |
Vxi | ಪೆಟ್ರೋಲ್ 1.2L | ಮಾನ್ಯುಯಲ್ + AGS |
ಜೆಡ್ಎಕ್ಸ್ಐ | ಪೆಟ್ರೋಲ್ 1.2L | ಮಾನ್ಯುಯಲ್ + AGS |
ಜೆಡ್ಎಕ್ಸ್ಐ + | ಪೆಟ್ರೋಲ್ 1.2L | ಮಾನ್ಯುಯಲ್ + AGS |
ಟೂರ್ S ಮತ್ತು SO - CNG | ಪೆಟ್ರೋಲ್ 1.2L + S-CNG; | ಮಾನ್ಯುಯಲ್ ಟ್ರಾನ್ಸ್ಮಿಷನ್ |
ಮಾರುತಿ ಸ್ವಿಫ್ಟ್ ಡಿಜೈರ್ ಭಾರತದಾದ್ಯಂತ ದೊಡ್ಡ ಸಂಖ್ಯೆಗಳಲ್ಲಿ ಮಾರಾಟವಾಗುತ್ತದೆ, ಅಂದರೆ ಇನ್ಶೂರೆನ್ಸ್ ಕಂಪನಿಗಳು ಈ ವಾಹನಕ್ಕೆ ವಿವಿಧ ರೀತಿಯ ಕಾರ್ ಇನ್ಶೂರೆನ್ಸ್ ಪ್ರಾಡಕ್ಟ್‌ಗಳನ್ನು ಒದಗಿಸುತ್ತವೆ. ಮೋಟಾರ್ ವಾಹನ ಕಾಯ್ದೆಯಿಂದ ಕಡ್ಡಾಯವಾದ ಮೂಲಭೂತ ಥರ್ಡ್ ಪಾರ್ಟಿ ಕವರ್‌ನಿಂದ ಮೂರು ವರ್ಷಗಳವರೆಗೆ ಒಟ್ಟು ರಕ್ಷಣೆಯನ್ನು ಖಚಿತಪಡಿಸುವ ದೀರ್ಘಾವಧಿಯ ಸಮಗ್ರ ಪಾಲಿಸಿಗಳವರೆಗೆ, ನೀವು ಎಲ್ಲವನ್ನೂ ಎಚ್‌ಡಿಎಫ್‌ಸಿ ಎರ್ಗೋದಲ್ಲಿ ಪಡೆಯಬಹುದು.
ಇದು ಎಲ್ಲವನ್ನೂ ನೀಡುವ ಇನ್ಶೂರೆನ್ಸ್ ಪ್ರಾಡಕ್ಟ್ ಆಗಿದ್ದು, ಇದನ್ನು ಸಾಮಾನ್ಯವಾಗಿ ತಮ್ಮ ಕಾರ್‌ಗಳಿಗೆ ಎಲ್ಲಾ ರೀತಿಯ ರಕ್ಷಣೆಯನ್ನು ಬಯಸುವವರು ಆಯ್ಕೆ ಮಾಡುತ್ತಾರೆ. ನೀವು ಕಾನೂನುಬದ್ಧವಾಗಿ ಮತ್ತು ಆರ್ಥಿಕವಾಗಿ ಎಲ್ಲಾ ನಿಟ್ಟಿನಲ್ಲೂ ನಿಮ್ಮ ಕಾರನ್ನು ಸುರಕ್ಷಿತವಾಗಿರಿಸಲು ಬಯಸಿದರೆ, ಇದು ನಿಮಗಾಗಿ ಇರುವ ಅತ್ಯುತ್ತಮ ಆಯ್ಕೆಯಾಗಿದೆ. ಈ ಮಾರುತಿ ಸ್ವಿಫ್ಟ್ ಡಿಜೈರ್ ಕಾರ್ ಇನ್ಶೂರೆನ್ಸ್ ಪಾಲಿಸಿ ಮೂಲಕ, ನಿಮಗೆ,:
ಅಪಘಾತ
ವೈಯಕ್ತಿಕ ಅಪಘಾತ
ನೈಸರ್ಗಿಕ ವಿಕೋಪಗಳು
ಥರ್ಡ್-ಪಾರ್ಟಿ ಹೊಣೆಗಾರಿಕೆ
ಆ್ಯಡ್-ಆನ್‌ಗಳ ಆಯ್ಕೆ
ಕಳ್ಳತನ
ಇದು ನೀವು ಖರೀದಿಸಬಹುದಾದ ಅತ್ಯಂತ ಮೂಲಭೂತ ಮತ್ತು ಕಾನೂನಾತ್ಮಕವಾಗಿ ಕಡ್ಡಾಯವಾದ ಕಾರ್ ಇನ್ಶೂರೆನ್ಸ್ ಪಾಲಿಸಿಯಾಗಿದೆ. ಇದು ಕೇವಲ ಥರ್ಡ್ ಪಾರ್ಟಿ ಕವರ್‌ನೊಂದಿಗೆ ಬರುತ್ತದೆ ಮತ್ತು ಮೋಟಾರ್ ಆಕ್ಸಿಡೆಂಟ್ ಕ್ಲೈಮ್ಸ್ ಹಕ್ಕುಗಳ ನ್ಯಾಯಮಂಡಳಿಗಳಿಂದ ಘೋಷಿಸಬಹುದಾದ ಯಾವುದೇ ಕಾನೂನು ಹೊಣೆಗಾರಿಕೆಯಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ನಿಮ್ಮ ಒಂದೇ ವಾಹನವಾಗಿದ್ದರೆ, ಇದನ್ನು ಕಡ್ಡಾಯ ಪರ್ಸನಲ್ ಆಕ್ಸಿಡೆಂಟ್ ಕವರ್‌ನಲ್ಲಿ ಸೇರಿಸಬಹುದು. ನಿಮಗೆ:
ವೈಯಕ್ತಿಕ ಅಪಘಾತ
ಥರ್ಡ್-ಪಾರ್ಟಿ ಆಸ್ತಿ ಹಾನಿ
ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ
ಇದನ್ನು ಮೂರು ವರ್ಷಗಳವರೆಗೆ ನೀಡಲಾಗುತ್ತದೆ ಮತ್ತು ಇದು ಮೇಲೆ ಚರ್ಚಿಸಲಾದ ಥರ್ಡ್ ಪಾರ್ಟಿ ಕವರ್ ಆಗಿದೆ.. ಸಾಮಾನ್ಯವಾಗಿ, ಈ ಪಾಲಿಸಿಯನ್ನು ಹೊಸ ಕಾರ್ ಖರೀದಿಸುವವರಿಗೆ ನೀಡಲಾಗುತ್ತದೆ. ಆದರೂ, ಈಗಾಗಲೇ ಕಾರ್ ಇರುವವರು ಕೂಡ ಈ ಕವರ್ ಆಯ್ಕೆ ಮಾಡಬಹುದು.
ಅಪಘಾತ
ನೈಸರ್ಗಿಕ ವಿಕೋಪಗಳು
ಬೆಂಕಿ
ಆ್ಯಡ್-ಆನ್‌ಗಳ ಆಯ್ಕೆ
ಕಳ್ಳತನ
ಇದು ವಿಸ್ತರಿತ ಅವಧಿಯಲ್ಲಿ ಒಂದು ವರ್ಷದ ಕಾರ್ ಇನ್ಶೂರೆನ್ಸ್ನ ಎಲ್ಲಾ ಪ್ರಯೋಜನಗಳನ್ನು ನೀಡುವ ಉತ್ಪನ್ನವಾಗಿದ್ದು, ಬಹು ವರ್ಷಗಳ ಮಾನ್ಯತೆಯೊಂದಿಗೆ ಲಭ್ಯವಿದೆ. ಈ ಯೋಜನೆಯನ್ನು ಒಂದೇ ಬಾರಿಗೆ ಮೂರು ವರ್ಷಗಳವರೆಗೆ ಖರೀದಿಸಬಹುದು. ನೀವು ಸ್ವಿಫ್ಟ್ ಡಿಜೈರ್ ಕಾರ್ ಇನ್ಶೂರೆನ್ಸ್ ಆಯ್ಕೆ ಮಾಡಿದಾಗ ಈ ಕವರ್ ಆಯ್ಕೆ ಮಾಡಲು ಅನೇಕ ಕಾರಣಗಳಿವೆ. ಇದು ಮೊದಲ ವರ್ಷದ ದರಗಳಲ್ಲಿ ಬೆಲೆಯನ್ನು ಲಾಕ್ ಮಾಡಿ, ಅದರಿಂದ ನಿಮಗೆ ಗಣನೀಯವಾಗಿ ಉಳಿತಾಯ ಮಾಡಲು ಸಹಾಯ ಮಾಡುತ್ತದೆ. ನೀವು ಪ್ರಸ್ತುತ ದರದಲ್ಲಿ ತೆರಿಗೆಗಳನ್ನು ಪಾವತಿಸಿ, ತೆರಿಗೆ ಹೆಚ್ಚಳದಿಂದ ರಕ್ಷಣೆ ಪಡೆಯುತ್ತೀರಿ. ಸಂಪೂರ್ಣ ಪಾಲಿಸಿ ಅವಧಿಗೆ ನೋ ಕ್ಲೈಮ್ ಬೋನಸ್ ಕೂಡ ತಕ್ಷಣ ನೀಡಲಾಗುತ್ತದೆ.
ಅಪಘಾತ
ನೈಸರ್ಗಿಕ ವಿಕೋಪಗಳು
ವೈಯಕ್ತಿಕ ಆಕ್ಸಿಡೆಂಟ್
ಥರ್ಡ್-ಪಾರ್ಟಿ ಹೊಣೆಗಾರಿಕೆ
ಆ್ಯಡ್-ಆನ್‌ಗಳ ಆಯ್ಕೆ
ಕಳ್ಳತನ
ನೀವು ಸಮಗ್ರ ಮಾರುತಿ ಸ್ವಿಫ್ಟ್ ಡಿಸೈರ್ ಕಾರ್ ಇನ್ಶೂರೆನ್ಸ್ ಪಾಲಿಸಿ ಖರೀದಿಸಿದಾಗ, ಯಾವುದೇ ಅನಿರೀಕ್ಷಿತ ಅಪಾಯದ ವಿರುದ್ಧ ಅದರ ರಕ್ಷಣೆಯನ್ನು ಖಚಿತಪಡಿಸುವ ಅನೇಕ ವಿಷಯಗಳನ್ನು ನೀವು ಪಡೆಯುತ್ತೀರಿ. ಗಮನಾರ್ಹವಾಗಿ ವ್ಯಾಪಕ ಕವರ್ ವ್ಯಾಪ್ತಿಯಿಂದಾಗಿ ಸಮಗ್ರ ಇನ್ಶೂರೆನ್ಸ್ ಪಾಲಿಸಿಯನ್ನು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯಲ್ಲಿ ಶಿಫಾರಸು ಮಾಡಲಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ನೀವು:
ನಿಮ್ಮ ಕಾರಿಗೆ ಆಕ್ಸಿಡೆಂಟ್‌ನಿಂದ ಯಾವುದೇ ಹಾನಿಯಾದರೆ ಮತ್ತು ರಿಪೇರಿಗಾಗಿ ಸೇವಾ ಕೇಂದ್ರಕ್ಕೆ ಕಳುಹಿಸಬೇಕಾದರೆ, ನಿಮ್ಮ ಮಾರುತಿ ಸ್ವಿಫ್ಟ್ ಡಿಜೈರ್ ಕಾರ್ ಇನ್ಶೂರೆನ್ಸ್ ಕಡಿತಗಳು ಮತ್ತು ಸವಕಳಿಗಳಿಗೆ ಒಳಪಟ್ಟು, ದುರಸ್ತಿ ವೆಚ್ಚಗಳನ್ನು ಕವರ್ ಮಾಡುತ್ತದೆ.
ನಿಮ್ಮ ಕಾರ್‌ಗೆ ಪ್ರವಾಹ, ಭೂಕಂಪ, ಹಿಮಪಾತ ಅಥವಾ ಆಲಿಕಲ್ಲು ಮುಂತಾದ ಯಾವುದೇ ರೀತಿಯ ನೈಸರ್ಗಿಕ ವಿಕೋಪದಿಂದ ಹಾನಿಯಾದರೆ, ಮಾರುತಿ ಸ್ವಿಫ್ಟ್ ಡಿಜೈರ್ ಕಾರ್ ಇನ್ಶೂರೆನ್ಸ್ ಅನ್ವಯವಾಗುವ ನಿಯಮಗಳ ಪ್ರಕಾರ ದುರಸ್ತಿ ವೆಚ್ಚವನ್ನು ಕವರ್ ಮಾಡುತ್ತದೆ.
ನಿಮ್ಮ ಕಾರು ಕಳ್ಳತನವಾದರೆ ಮತ್ತು ಅದನ್ನು ಪೊಲೀಸರಿಗೆ ಹುಡುಕಲು ಸಾಧ್ಯವಾಗದಿದ್ದರೆ, ಕಾರಿನ IDV ಹಾಗೂ ಅನ್ವಯವಾಗುವ ಸವಕಳಿಗಳು ಮತ್ತು ಕಡಿತಗಳ ಪ್ರಕಾರ ನಿಮ್ಮ ನಷ್ಟಕ್ಕೆ ಸಾಕಷ್ಟು ಪರಿಹಾರವನ್ನು ನೀಡಲಾಗುತ್ತದೆ.
ನಿಮಗೆ ಆಕ್ಸಿಡೆಂಟ್ ಆದರೆ, ಪಾಲಿಸಿಯ ಕಡ್ಡಾಯ ಪರ್ಸನಲ್ ಆಕ್ಸಿಡೆಂಟ್ ಕವರ್ ಸಕ್ರಿಯಗೊಂಡು, ₹ 15 ಲಕ್ಷಗಳವರೆಗೆ ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ಒದಗಿಸುತ್ತದೆ. ನಿಮ್ಮಲ್ಲಿ ಮೆಡಿಕಲ್ ಇನ್ಶೂರೆನ್ಸ್ ಇಲ್ಲದಿದ್ದಾಗ ಅಥವಾ ಕಡಿಮೆ ಮೆಡಿಕಲ್ ಇನ್ಶೂರೆನ್ಸ್ ಇರುವಾಗ ಇದು ಸಹಾಯಕವಾಗುತ್ತದೆ.
ನಿಮ್ಮ ಕಾರ್ ಆಕ್ಸಿಡೆಂಟ್‌ನಿಂದ ಥರ್ಡ್ ಪಾರ್ಟಿಗೆ ಯಾವುದೇ ಗಾಯ, ನಷ್ಟ ಅಥವಾ ಆಸ್ತಿ ಹಾನಿಯಾದರೆ, ಕಾರ್ ಇನ್ಶೂರೆನ್ಸ್ ಪರಿಹಾರವನ್ನು ಕವರ್ ಮಾಡುತ್ತದೆ.
ದಿನಗಳು ಉರುಳಿದಂತೆ, ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿ ಅದರ ಗಡುವು ದಿನಾಂಕವನ್ನು ತಲುಪಿ ಕವರ್ ಒದಗಿಸುವುದನ್ನು ನಿಲ್ಲಿಸುತ್ತದೆ. ಆದರಿಂದ ಸಮಯಕ್ಕೆ ಸರಿಯಾಗಿ ನಿಮ್ಮ ಪಾಲಿಸಿಯನ್ನು ನವೀಕರಿಸುವುದು ಮುಖ್ಯವಾಗಿದೆ. ಇದರಿಂದಾಗಿ ನೀವು ಕಾನೂನಿಗೆ ಬದ್ಧವಾಗಿ ನಿಮ್ಮ ಸ್ವಿಫ್ಟ್ ಡಿಜೈರ್ ಚಾಲನೆ ಮಾಡಬಹುದು ಮತ್ತು ಅನಿರೀಕ್ಷಿತ ಘಟನೆಯ ಸಂದರ್ಭದಲ್ಲಿ ಹಣಕಾಸಿನ ನಷ್ಟಗಳಿಂದ ರಕ್ಷಣೆ ಪಡೆಯಬಹುದು. ಜೊತೆಗೆ, ಎಚ್‌ಡಿಎಫ್‌ಸಿ ಎರ್ಗೋ ನಿಮ್ಮ ಕಾರ್ ಇನ್ಶೂರೆನ್ಸ್ ನವೀಕರಣವನ್ನು ಸುಲಭವಾಗಿಸುತ್ತದೆ.
ಸ್ವಿಫ್ಟ್ ಡಿಜೈರ್‌ಗೆ ಕಾರ್ ಇನ್ಶೂರೆನ್ಸ್ ಆಫರ್ ಮಾಡುವ ಹಲವಾರು ಕಂಪನಿಗಳಿವೆ. ಆದರೆ ಕೆಲವು ಕಂಪನಿಗಳು ಮಾತ್ರ ಎಚ್‌ಡಿಎಫ್‌ಸಿ ಎರ್ಗೋ ನೀಡುವ ಫೀಚರ್ ಮತ್ತು ಪ್ರಯೋಜನಗಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯವನ್ನು ಹೊಂದಿವೆ. ನೀವು ಚಿಂತೆ ಇಲ್ಲದ ಮತ್ತು ವೇಗವಾದ ಸುಲಭ ಕ್ಲೈಮ್ ಪ್ರಕ್ರಿಯೆಯೊಂದಿಗೆ ಏನೂ ತೊಂದರೆ ಇಲ್ಲದ ಇನ್ಶೂರೆನ್ಸ್ ಹುಡುಕುತ್ತಿದ್ದರೆ, ಎಚ್‌ಡಿಎಫ್‌ಸಿ ಎರ್ಗೋ ನಿಮ್ಮ ಆಯ್ಕೆಯಾಗಿರಬೇಕು.
ನಿಮ್ಮ ಕಾರ್ ಅನ್ನು ನಗದುರಹಿತ ವ್ಯವಸ್ಥೆಯ ಅಡಿಯಲ್ಲಿ ದುರಸ್ತಿ ಮಾಡಬಹುದಾದ ಗ್ಯಾರೇಜ್‌ಗಳ ದೊಡ್ಡ ನೆಟ್ವರ್ಕ್‌ಗಳನ್ನು ನಾವು ಹೊಂದಿದ್ದೇವೆ.. ಈ ಗ್ಯಾರೇಜ್‌ಗಳಲ್ಲಿ, ಕೇವಲ ನೀವು ನಿಮ್ಮ ಕಾರನ್ನು ದುರಸ್ತಿ ಮಾಡಿಕೊಂಡು, ದುರಸ್ತಿ ವೆಚ್ಚದ ನಿಮ್ಮ ಸ್ವಂತ ಭಾಗವನ್ನು ಪಾವತಿಸಿ ಹೋಗಿ.. ಗ್ಯಾರೇಜ್ ತಾನಾಗಿಯೇ ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ಉಳಿದ ಹಣವನ್ನು ಸೆಟಲ್ ಮಾಡುತ್ತದೆ.
ನಿಮ್ಮ ಕಾರ್ ಇನ್ಶೂರೆನ್ಸ್‌ಗಾಗಿ ಕ್ಲೈಮ್ ಮಾಡಲು ನೀವು ವೇಗವಾದ ಸರಳ ಮಾರ್ಗವನ್ನು ಹುಡುಕುತ್ತಿದ್ದರೆ, ಎಚ್‌ಡಿಎಫ್‌ಸಿ ಎರ್ಗೋ ನಿಮಗಿರುವ ಅತ್ಯುತ್ತಮ ಮಾರ್ಗವಾಗಿದೆ.. ನಮ್ಮ ಆ್ಯಪ್-ಆಧಾರಿತ ಕ್ಲೈಮ್ ಪ್ರಕ್ರಿಯೆಯೊಂದಿಗೆ, ನೀವು ಮೊಬೈಲ್ ಫೋನ್ ಆ್ಯಪ್ ಬಳಸಿ ಫೋಟೋಗಳನ್ನು ಕ್ಲಿಕ್ಕಿಸಿ ಅವುಗಳನ್ನು ಅಪ್ಲೋಡ್ ಮಾಡುವ ಮೂಲಕ ಕ್ಲೈಮ್‌ಗಳನ್ನು ಫೈಲ್ ಮಾಡಬಹುದು.
ಸಣ್ಣ ಗುರುತು, ಉಬ್ಬುಗಳು ಮತ್ತು ಚಿಕ್ಕಪುಟ್ಟ ಆಕಸ್ಮಿಕ ರಿಪೇರಿಗಳಿಗಾಗಿ, ಎಚ್‌ಡಿಎಫ್‌ಸಿ ಎರ್ಗೋ ನಿಮಗೆ ಸೂಕ್ತ ಗ್ಯಾರೇಜ್‌ನಲ್ಲಿ ಒಂದೇ ರಾತ್ರಿಯಲ್ಲಿ ಕಾರನ್ನು ರಿಪೇರಿ ಮಾಡಿಸುವ ಆಯ್ಕೆ ಒದಗಿಸುತ್ತದೆ.. ನಿಮ್ಮ ಕಾರನ್ನು ಒಂದೇ ರಾತ್ರಿಯಲ್ಲಿ ಸರಿ ಮಾಡಿ, ಬೆಳಿಗ್ಗೆ ನಿಮ್ಮ ಮನೆಬಾಗಿಲಿಗೆ ಕಳುಹಿಸಲಾಗುತ್ತದೆ.
ಇದು ನಮ್ಮ ಅನೇಕ ಗ್ರಾಹಕರು ಅವಲಂಬಿಸಿರುವ ಫೀಚರ್ ಆಗಿದೆ.. ಪಂಚರ್, ಡೆಡ್ ಬ್ಯಾಟರಿ ಅಥವಾ ಯಾವುದೇ ಸಣ್ಣ ಸಮಸ್ಯೆಯಿಂದಾಗಿ ನೀವು ಎಲ್ಲಿಯಾದರೂ ಸಿಕ್ಕಿಹಾಕಿಕೊಂಡರೆ, ನಾವು ನಿಮ್ಮ ಬಳಿ ಬಂದು ನಿಮಗೆ ನೆರವಾಗಬಹುದು.