ಬೆಂಕಿ, ಕಳ್ಳತನ, ಭೂಕಂಪ, ಪ್ರವಾಹ ಮುಂತಾದ ಅನಿರೀಕ್ಷಿತ ಘಟನೆಗಳಿಂದಾಗಿ ನಿಮ್ಮ ವಾಹನಕ್ಕೆ ಕಾರ್ ಇನ್ಶೂರೆನ್ಸ್ ಪಾಲಿಸಿಯು ಕವರೇಜನ್ನು ಒದಗಿಸುತ್ತದೆ. 1988 ರ ಮೋಟಾರ್ ವಾಹನ ಕಾಯ್ದೆಯ ಪ್ರಕಾರ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವುದು ಕಾನೂನು ಅವಶ್ಯಕತೆ ಕೂಡ ಆಗಿದೆ. ಕಾನೂನು ಮಾನದಂಡದ ಪ್ರಕಾರ ಪ್ರತಿ ವಾಹನ ಮಾಲೀಕರು ಕನಿಷ್ಠ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕವರ್ ಹೊಂದಿರಬೇಕು. ಆದಾಗ್ಯೂ, ನಿಮ್ಮ ವಾಹನದ ಒಟ್ಟಾರೆ ರಕ್ಷಣೆಗಾಗಿ, ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವುದಕ್ಕಾಗಿ ಸಲಹೆ ನೀಡಲಾಗುತ್ತದೆ. ಸ್ಕೋಡಾಗಾಗಿ ಕಾರ್ ಇನ್ಶೂರೆನ್ಸ್ ಖರೀದಿಸಲು ನಾವು ಕೆಲವು ಕಾರಣಗಳನ್ನು ನೋಡೋಣ.
ಸ್ಕೋಡಾದಂತಹ ಐಷಾರಾಮಿ ಕಾರು ಹೆಚ್ಚಿನ ನಿರ್ವಹಣಾ ವೆಚ್ಚದೊಂದಿಗೆ ಬರುತ್ತದೆ. ಒಂದು ವೇಳೆ, ಅಪಘಾತ ಅಥವಾ ಯಾವುದೇ ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳಿಂದಾಗಿ ಹಾನಿಗೊಳಗಾದರೆ, ಅದು ಭಾರಿ ರಿಪೇರಿ ಬಿಲ್‌ಗಳಿಗೆ ಕಾರಣವಾಗುತ್ತದೆ. ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ, ಅನಿರೀಕ್ಷಿತ ಘಟನೆಗಳಿಂದಾಗಿ ನಿಮ್ಮ ಸ್ಕೋಡಾ ಕಾರು ಹಾನಿಗಳಿಂದ ಸಂಪೂರ್ಣ ರಕ್ಷಣೆಯನ್ನು ಪಡೆಯುತ್ತದೆ. ನೀವು ಎಚ್‌ಡಿಎಫ್‌ಸಿ ಎರ್ಗೋ ನಗದುರಹಿತ ಗ್ಯಾರೇಜ್‌ಗಳಲ್ಲಿ ಸ್ಕೋಡಾದ ರಿಪೇರಿ ಸೇವೆಗಳನ್ನು ಕೂಡ ಪಡೆಯಬಹುದು.
ಕಾರ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಥರ್ಡ್ ಪಾರ್ಟಿ ಕವರ್ ಥರ್ಡ್ ಪಾರ್ಟಿ ಹೊಣೆಗಾರಿಕೆಗಳ ವಿರುದ್ಧ ರಕ್ಷಣೆ ನೀಡುತ್ತದೆ. ಒಂದು ವೇಳೆ, ನಿಮ್ಮ ಸ್ಕೋಡಾ ಕಾರು ಥರ್ಡ್ ಪಾರ್ಟಿ ವಾಹನ ಅಥವಾ ಆಸ್ತಿಗೆ ಹಾನಿ ಅಥವಾ ನಷ್ಟಗಳನ್ನು ಉಂಟು ಮಾಡಿದರೆ, ಅದಕ್ಕಾಗಿ ನೀವು ಕವರೇಜ್ ಪಡೆಯುತ್ತೀರಿ.
ಸ್ಕೋಡಾದ ಕಾರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ, ನೀವು ನೆಮ್ಮದಿಯಿಂದ ಡ್ರೈವ್ ಮಾಡಬಹುದು. ವಾಹನವನ್ನು ಚಾಲನೆ ಮಾಡಲು ಮತ್ತು ಅಪಘಾತದಿಂದಾಗಿ ಉಂಟಾದ ಹಾನಿಗಳಿಂದ ನಿಮ್ಮ ವೆಚ್ಚಗಳನ್ನು ರಕ್ಷಿಸಲು ಕಾರ್ ಇನ್ಶೂರೆನ್ಸ್ ಪಾಲಿಸಿಯು ಕಾನೂನು ಅನುಸರಣೆಯನ್ನು ಪೂರೈಸುತ್ತದೆ, ಆದ್ದರಿಂದ ಇನ್ಶೂರ್ಡ್ ವ್ಯಕ್ತಿಯು ಒತ್ತಡ-ರಹಿತವಾಗಿರಬಹುದು. ಇದಲ್ಲದೆ, ಮೆಟ್ರೋ ಮತ್ತು ಮೆಟ್ರೋ ಅಲ್ಲದ ನಗರಗಳಲ್ಲಿ ಅಪಘಾತದ ಸಂಭಾವ್ಯ ದರವು ಹೆಚ್ಚಾಗಿರುತ್ತದೆ, ನಿಮ್ಮ ಸ್ಕೋಡಾ ಕಾರನ್ನು ಇನ್ಶೂರ್ ಮಾಡುವುದು ಯಾವುದೇ ಅಪಘಾತದಿಂದಾಗಿ ಉಂಟಾದ ಹಾನಿಗಳಿಗೆ ಕವರೇಜನ್ನು ಖಚಿತಪಡಿಸುತ್ತದೆ.
ಸ್ವಂತ ಹಾನಿ ಕವರ್, ಥರ್ಡ್ ಪಾರ್ಟಿ ಹೊಣೆಗಾರಿಕೆ ಮತ್ತು ಪರ್ಸನಲ್ ಆಕ್ಸಿಡೆಂಟ್ ಕವರ್ ಸೇರಿದಂತೆ, ಏಕ ವರ್ಷದ ಸಮಗ್ರ ಇನ್ಶೂರೆನ್ಸ್ ಪಾಲಿಸಿಯು ನಿಮಗೆ ಮತ್ತು ನಿಮ್ಮ ವಾಹನಕ್ಕೆ ಸಂಪೂರ್ಣ ರಕ್ಷಣೆ ಒದಗಿಸುತ್ತದೆ. ನೀವು ಹಲವಾರು ಆ್ಯಡ್-ಆನ್‌ಗಳೊಂದಿಗೆ ನಿಮ್ಮ ಕಾರ್ ಇನ್ಶೂರೆನ್ಸ್ ಕವರೇಜ್ ಹೆಚ್ಚಿಸಬಹುದು.
ಅಪಘಾತ
ವೈಯಕ್ತಿಕ ಅಪಘಾತ
ನೈಸರ್ಗಿಕ ವಿಕೋಪಗಳು
ಥರ್ಡ್-ಪಾರ್ಟಿ ಹೊಣೆಗಾರಿಕೆ
ಆ್ಯಡ್-ಆನ್‌ಗಳ ಆಯ್ಕೆ
ಕಳ್ಳತನ
ಥರ್ಡ್ ಪಾರ್ಟಿ ಹೊಣೆಗಾರಿಕೆ ಇನ್ಶೂರೆನ್ಸ್ ಭಾರತೀಯ ರಸ್ತೆಗಳಲ್ಲಿ ಚಾಲನೆ ಮಾಡಲು ಕಾನೂನುಬದ್ಧವಾಗಿ ಕಡ್ಡಾಯವಾಗಿದೆ. ನಿಮ್ಮ ವಾಹನವನ್ನು ಒಳಗೊಂಡಿರುವ ಅಪಘಾತದ ಪರಿಣಾಮವಾಗಿ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಯಾವುದೇ ಹಣಕಾಸಿನ ಹೊಣೆಗಾರಿಕೆಯ ವಿರುದ್ಧ ಇದು ನಿಮ್ಮನ್ನು ಕವರ್ ಮಾಡುತ್ತದೆ.
ವೈಯಕ್ತಿಕ ಅಪಘಾತ
ಥರ್ಡ್-ಪಾರ್ಟಿ ಆಸ್ತಿ ಹಾನಿ
ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ
ಸ್ವತಂತ್ರ ಸ್ವಂತ ಹಾನಿ ಕವರ್ ಅಪಘಾತ ಅಥವಾ ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತಿನ ಸಂದರ್ಭದಲ್ಲಿ ನಿಮ್ಮ ಸ್ವಂತ ವಾಹನಕ್ಕೆ ಆದ ಹಾನಿಯ ವಿರುದ್ಧ ಹಣಕಾಸಿನ ರಕ್ಷಣೆಯನ್ನು ಒದಗಿಸುತ್ತದೆ. ಇದು ಕಳ್ಳತನದಿಂದ ರಕ್ಷಿಸುತ್ತದೆ. ಇದು ನಿಮ್ಮ ಥರ್ಡ್-ಪಾರ್ಟಿ ಕಾರು ಇನ್ಶೂರೆನ್ಸ್ ಪಾಲಿಸಿಗೆ ಪರಿಪೂರ್ಣ ಪಾಲುದಾರ. ಆ್ಯಡ್-ಆನ್‌ಗಳ ಆಯ್ಕೆಯು ನಿಮ್ಮ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಅಪಘಾತ
ನೈಸರ್ಗಿಕ ವಿಕೋಪಗಳು
ಬೆಂಕಿ
ಆ್ಯಡ್-ಆನ್‌ಗಳ ಆಯ್ಕೆ
ಕಳ್ಳತನ
ತಜ್ಞರು ನಿಮ್ಮ ಅನುಕೂಲಕ್ಕಾಗಿ ಈ ಯೋಜನೆಯನ್ನು ವಿನ್ಯಾಸಗೊಳಿಸಿದ್ದಾರೆ. ನಿಮ್ಮ ಸ್ವಂತ ಹಾನಿಯ ಕವರ್ ಅವಧಿ ಮುಗಿದರೂ ಸಹ ನಿಮ್ಮನ್ನು ನಿರಂತರವಾಗಿ ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು 3-ವರ್ಷದ ಮೂರನೇ ವ್ಯಕ್ತಿಯ ಕವರ್ ಮತ್ತು ವಾರ್ಷಿಕ ಸ್ವಂತ ಹಾನಿ ಕವರ್ ಅನ್ನು ಒಂದು ಪ್ಯಾಕೇಜ್‌ನಲ್ಲಿ ಪಡೆಯಿರಿ. ಸಮಗ್ರ ರಕ್ಷಣೆಯನ್ನು ಆನಂದಿಸಲು ಸ್ವಂತ ಹಾನಿಯ ಕವರ್ ಅನ್ನು ಸರಳವಾಗಿ ನವೀಕರಿಸಿ.
ಅಪಘಾತ
ನೈಸರ್ಗಿಕ ವಿಕೋಪಗಳು
ವೈಯಕ್ತಿಕ ಆಕ್ಸಿಡೆಂಟ್
ಥರ್ಡ್-ಪಾರ್ಟಿ ಹೊಣೆಗಾರಿಕೆ
ಆ್ಯಡ್-ಆನ್‌ಗಳ ಆಯ್ಕೆ
ಕಳ್ಳತನ
ನೀವು ಪಡೆಯುವ ಕವರೇಜ್‌ನ ವ್ಯಾಪ್ತಿಯು ನಿಮ್ಮ ಸ್ಕೋಡಾ ಕಾರಿಗೆ ನೀವು ಆಯ್ಕೆ ಮಾಡುವ ಪ್ಲಾನ್ ಮೇಲೆ ಅವಲಂಬಿತವಾಗಿರುತ್ತದೆ. ಸಮಗ್ರ ಸ್ಕೋಡಾ ಕಾರ್ ಇನ್ಶೂರೆನ್ಸ್ ಪಾಲಿಸಿಯು ಸಾಮಾನ್ಯವಾಗಿ ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ
ಅಪಘಾತದಿಂದ ಉಂಟಾಗುವ ಆರ್ಥಿಕ ನಷ್ಟದ ವಿರುದ್ಧ ನಾವು ರಕ್ಷಣೆ ನೀಡುತ್ತೇವೆ.
ನಿಮ್ಮ ಕಾರಿಗೆ ಸಂಬಂಧಿಸಿದ ಬೆಂಕಿ ಮತ್ತು ಸ್ಫೋಟಗಳಿಂದ ನೀವು ಆರ್ಥಿಕವಾಗಿ ರಕ್ಷಿಸಲ್ಪಡುತ್ತೀರಿ.
ನಿಮ್ಮ ಕಾರು ಕಳ್ಳತನವಾಗುವುದು ದುಃಸ್ವಪ್ನಗಳ ವಿಷಯವಾಗಿದೆ. ಆ ಸಂದರ್ಭದಲ್ಲಿ ನಿಮ್ಮ ಮನಸ್ಸಿನ ಶಾಂತಿಯನ್ನು ನಾವು ಖಚಿತಪಡಿಸುತ್ತೇವೆ.
ನೈಸರ್ಗಿಕ ಅಥವಾ ಮಾನವ ನಿರ್ಮಿತ, ಯಾವುದೇ ಇರಲಿ ನಾವು ವ್ಯಾಪಕ ಶ್ರೇಣಿಯ ವಿಪತ್ತುಗಳಾದ್ಯಂತ ಆರ್ಥಿಕ ವ್ಯಾಪ್ತಿಯನ್ನು ಒದಗಿಸುತ್ತೇವೆ.
ಅಪಘಾತದ ಸಂದರ್ಭದಲ್ಲಿ ನಿಮ್ಮ ಚಿಕಿತ್ಸೆಯ ಶುಲ್ಕವನ್ನು ನೋಡಿಕೊಳ್ಳಲಾಗುತ್ತದೆ.
ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿಗೆ ಆದ ಗಾಯ ಅಥವಾ ಅವರ ಆಸ್ತಿಗೆ ಆದ ಹಾನಿಯನ್ನು ಕೂಡಾ ಒಳಗೊಂಡಿದೆ.
ಜಗತ್ತು ಡಿಜಿಟಲ್ ಆಗಿದೆ, ಹಾಗೆಯೇ ಈ ನಾಲ್ಕು ತ್ವರಿತ, ಸುಲಭವಾಗಿ ಅನುಸರಿಸಬಹುದಾದ ಕ್ರಮಗಳ ಮೂಲಕ ನಮ್ಮ ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆ ಕೂಡ.
ಸ್ಕೋಡಾ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ನವೀಕರಿಸುವುದು ಅಥವಾ ಹೊಸ ಇನ್ಶೂರೆನ್ಸ್ ಖರೀದಿಸುವುದು ತುಂಬಾ ಸುಲಭ ಮತ್ತು ತ್ವರಿತವಾಗಿದೆ. ಮತ್ತು ನೀವು ಅದೆಲ್ಲವನ್ನೂ ಕೆಲವೇ ಕ್ಲಿಕ್‌ಗಳಲ್ಲಿ ಮಾಡಿ ಮುಗಿಸಬಹುದು. ನಿಜ ಹೇಳುವುದಾದರೆ, ಈಗ ಕೆಲವೇ ನಿಮಿಷಗಳಲ್ಲಿ ಪಾಲಿಸಿ ಪಡೆಯಬಹುದು. ನಿಮ್ಮನ್ನು ಕವರ್ ಮಾಡಲು ಈ ಕೆಳಗಿನ ನಾಲ್ಕು ಹಂತಗಳನ್ನು ಅನುಸರಿಸಿ.
ಸ್ಕೋಡಾ ಕಾರ್ ಇನ್ಶೂರೆನ್ಸ್ ಪಾಲಿಸಿ ಖರೀದಿಸಲು ಎಚ್‌ಡಿಎಫ್‌ಸಿ ಎರ್ಗೋ ಅನೇಕ ಕಾರಣಗಳನ್ನು ಒದಗಿಸುತ್ತದೆ. ಹೀಗೆ, ನೀವು ಅನಿಶ್ಚಿತ ಘಟನೆಗಳ ವಿರುದ್ಧ ಆರ್ಥಿಕವಾಗಿ ಕವರ್ ಆಗುವುದು ಮಾತ್ರವಲ್ಲದೆ ಕಾನೂನನ್ನು ಅನುಸರಿಸಲೂ ಸಾಧ್ಯವಾಗುತ್ತದೆ. ಎಚ್‌ಡಿಎಫ್‌ಸಿ ಎರ್ಗೋ ಕಾರ್ ಇನ್ಶೂರೆನ್ಸ್ ಪಾಲಿಸಿಗೆ ಸಂಬಂಧಿಸಿದ ಅನೇಕ ಪ್ರಯೋಜನಗಳೊಂದಿಗೆ, ನೀವು ಯಾವಾಗಲೂ ಉತ್ತಮ ಡೀಲ್ ಕೂಡ ಪಡೆಯುತ್ತೀರಿ. ನಮ್ಮ ಪ್ರಮುಖ ಪ್ರಯೋಜನಗಳು ಹೀಗಿವೆ:
ವರ್ಕ್‌ಶಾಪ್‌ಗಳಲ್ಲಿ ನೇರ ನಗದುರಹಿತ ಸೆಟಲ್ಮೆಂಟ್ ಸೌಲಭ್ಯವಿರುವುದರಿಂದ ನೀವು ಕೈಯಾರೆ ಖರ್ಚು ಮಾಡುವುದು ತಪ್ಪುತ್ತದೆ. ಮತ್ತು ದೇಶಾದ್ಯಂತ 8700 ಕ್ಕೂ ಹೆಚ್ಚು ನಗದುರಹಿತ ಗ್ಯಾರೇಜ್‌ಗಳೊಂದಿಗೆ, ನಿಮಗೆ ಯಾವಾಗ ಬೇಕಾದರೂ ನೆರವು ಸಿಗುತ್ತದೆ. 24x7 ರಸ್ತೆಬದಿಯ ನೆರವು ಕೇವಲ ಒಂದು ಫೋನ್ ಕರೆಯ ದೂರದಲ್ಲಿದ್ದು, ನೀವು ಎಂದಿಗೂ ಅಸಹಾಯಕ ಸ್ಥಿತಿಗೆ ಸಿಲುಕುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.
1.6 ಕೋಟಿಗೂ ಹೆಚ್ಚು ಸಂತುಷ್ಟ ಗ್ರಾಹಕರೊಂದಿಗೆ, ನಿಮ್ಮ ನಿಖರವಾದ ಅಗತ್ಯಗಳನ್ನು ನಾವು ತಿಳಿದಿದ್ದೇವೆ ಮತ್ತು ಮಿಲಿಯನ್ ಮುಖಗಳಲ್ಲಿ ನಗುವನ್ನು ಮೂಡಿಸಿದ್ದೇವೆ. ಆದ್ದರಿಂದ, ನಿಮ್ಮ ಚಿಂತೆಗಳನ್ನು ಪಕ್ಕಕ್ಕೆ ಇರಿಸಿ ಮತ್ತು ಕ್ಲಬ್‌ಗೆ ಸೇರಿಕೊಳ್ಳಿ!
ಎಚ್ ಡಿ ಎಫ್ ಸಿ ನೈಟ್ ಸರ್ವಿಸ್ ರಿಪೇರಿಯು ನಿಮ್ಮ ಕಾರು ಮರುದಿನ ಬಳಸಲು ಸಿದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಸಣ್ಣ ಅಪಘಾತದ ಹಾನಿ ಅಥವಾ ಸ್ಥಗಿತಗಳನ್ನು ನೋಡಿಕೊಳ್ಳುತ್ತದೆ. ಈ ರೀತಿಯಾಗಿ, ನಿಮ್ಮ ದಿನಚರಿಗೆ ಅಡ್ಡಿಯಾಗುವುದಿಲ್ಲ. ನಿಮ್ಮ ರಾತ್ರಿ ನಿಶ್ಚಿಂತೆಯಿಂದ ನಿದ್ರೆ ಮಾಡಿ ಮತ್ತು ನಿಮ್ಮ ಬೆಳಗಿನ ಪ್ರಯಾಣದ ಸಮಯಕ್ಕೆ ನಿಮ್ಮ ಕಾರನ್ನು ಸಿದ್ಧಗೊಳಿಸಲು ನಮಗೆ ಅವಕಾಶ ಮಾಡಿಕೊಡಿ.
ಕ್ಲೈಮ್‌ಗಳನ್ನು ಮಾಡುವುದು ಸುಲಭ ಮತ್ತು ತ್ವರಿತವಾಗಿದೆ. ನಾವು ಪ್ರಕ್ರಿಯೆಯನ್ನು ಕಾಗದರಹಿತವಾಗಿ ಮಾಡುತ್ತೇವೆ, ಸ್ವಯಂ ತಪಾಸಣೆಗೆ ಅವಕಾಶ ನೀಡುತ್ತೇವೆ ಮತ್ತು ನಿಮ್ಮ ಚಿಂತೆಗಳನ್ನು ದೂರ ಮಾಡಲು ತ್ವರಿತ ಪರಿಹಾರವನ್ನು ನೀಡುತ್ತೇವೆ.
ಹೀಗೆ ಕಲ್ಪಿಸಿಕೊಳ್ಳಿ. ನೀವು ರಸ್ತೆ ಪ್ರವಾಸ ಹೊರಟಿದ್ದೀರಿ, ನಗರದ ಗಡಿಬಿಡಿಯಿಂದ ದೂರ, ನಕ್ಷೆಯ ವ್ಯಾಪ್ತಿಯಲ್ಲಿಲ್ಲದ, ಸುಂದರ ರಸ್ತೆಗಳಲ್ಲಿ ಚಾಲನೆ ಮಾಡುತ್ತಿದ್ದೀರಿ. ಅಚಾನಕ್ಕಾಗಿ, ನಿಮ್ಮ ಪ್ರಯಾಣದಲ್ಲಿ ಒಂದು ಅಡಚಣೆ ಎದುರಾಗಿದೆ. ಅಂತಹ ಸಂದರ್ಭಗಳಲ್ಲಿ, ಸಾಮಾನ್ಯವಾಗಿ, ಪಡೆದ ಸಹಾಯಕ್ಕಾಗಿ ಪಾವತಿಸಲು ನಗದು ಹುಡುಕುವುದು ಸಹಾಯ ಹುಡುಕುವುದಕ್ಕಿಂತ ಕಷ್ಟವಾಗಿದೆ. ಆದರೆ, ನಗದುರಹಿತ ಗ್ಯಾರೇಜ್‌ಗಳ ನೆಟ್ವರ್ಕ್ ಇರುವಾಗ ನೀವು ಎಂದಿಗೂ ಸಿಕ್ಕಿಹಾಕಿಕೊಳ್ಳುವುದಿಲ್ಲ.
ನಿಮ್ಮ ಸ್ಕೋಡಾ ಕಾರ್ ಎಚ್‌ಡಿಎಫ್‌ಸಿ ಎರ್ಗೋ ಕಾರ್ ಇನ್ಶೂರೆನ್ಸ್ ನಿಮಗೆ 8700+ ನಗದುರಹಿತ ಗ್ಯಾರೇಜ್‌ಗಳ ವಿಶಾಲ ನೆಟ್ವರ್ಕ್‌ಗೆ ಅಕ್ಸೆಸ್ ನೀಡುತ್ತದೆ. ಈ ನಗದುರಹಿತ ಗ್ಯಾರೇಜುಗಳು ದೇಶಾದ್ಯಂತ ಇರುವುದರಿಂದ ನುರಿತರ ಸಹಾಯ ಪಡೆದುದಕ್ಕೆ ಪಾವತಿಸಲು ನಗದು ಇಲ್ಲದಿರುವುದರ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ! ನಾವು ನಿಮ್ಮನ್ನು ಒಳಗೊಳ್ಳುವಂತೆ ಮಾಡಿದ್ದೇವೆ!