ಮಹೀಂದ್ರಾ ಕಾರ್ ಇನ್ಶೂರೆನ್ಸ್ ಖರೀದಿಸಿ
ಮೋಟಾರ್
ಕೇವಲ ₹2094 ರಲ್ಲಿ ಪ್ರೀಮಿಯಂ ಆರಂಭ*

ಪ್ರೀಮಿಯಂ ಆರಂಭ

ಕೇವಲ ₹2094 ಕ್ಕೆ*
8000+ ನಗದುರಹಿತ ನೆಟ್ವರ್ಕ್ ಗ್ಯಾರೇಜ್‌ಗಳು ^

8000+ ನಗದು ರಹಿತ

ನೆಟ್ವರ್ಕ್ ಗ್ಯಾರೇಜ್‌ಗಳು**
ತಡರಾತ್ರಿಯ ಕಾರ್ ರಿಪೇರಿ ಸೇವೆಗಳು ^

ತಡರಾತ್ರಿಯ ಕಾರ್

ರಿಪೇರಿ ಸೇವೆಗಳು¯
4.4 ಗ್ರಾಹಕ ರೇಟಿಂಗ್‌‌ಗಳು ^

4.4

ಗ್ರಾಹಕ ರೇಟಿಂಗ್‌‌ಗಳು
ಹೋಮ್ / ಮೋಟಾರ್ ಇನ್ಶೂರೆನ್ಸ್ / ಕಾರ್ ಇನ್ಶೂರೆನ್ಸ್ / ಮಹೀಂದ್ರಾ

ಮಹೀಂದ್ರಾ ಕಾರ್ ಇನ್ಶೂರೆನ್ಸ್ ಖರೀದಿಸಿ/ನವೀಕರಿಸಿ

ಮಹಿಂದ್ರಾ ಕಾರ್ ಇನ್ಶೂರೆನ್ಸ್
ಮಹೀಂದ್ರಾ & ಮಹೀಂದ್ರಾ (M&M) 2 ನೇ ಅಕ್ಟೋಬರ್ 1945 ರಂದು ಲುಧಿಯಾನದಲ್ಲಿ ಮಹೀಂದ್ರಾ & ಮೊಹಮ್ಮದ್ ಎಂಬ ಹೆಸರಿನ ಸ್ಟೀಲ್ ಟ್ರೇಡಿಂಗ್ ಕಂಪನಿಯಾಗಿ ಪ್ರಾರಂಭವಾಯಿತು. ನಂತರ, 1948 ರಲ್ಲಿ ಕಂಪನಿಯು ತನ್ನ ಹೆಸರನ್ನು ಮಹೀಂದ್ರಾ & ಮಹೀಂದ್ರಾ ಎಂದು ಬದಲಾಯಿಸಿತು. ಕಂಪನಿಯು ದೊಡ್ಡ MUV ಗಳ ಮಾರಾಟದಲ್ಲಿ ವ್ಯಾಪಾರ ಅವಕಾಶವನ್ನು ಗುರುತಿಸಿತು ಮತ್ತು ಭಾರತದಲ್ಲಿ ವಿಲ್ಲಿಸ್ ಜೀಪ್‌ ಪರವಾನಗಿಯಲ್ಲಿ ಜೋಡಣೆಯನ್ನು ಪ್ರಾರಂಭಿಸಿತು. ಶೀಘ್ರದಲ್ಲೇ M&M ಭಾರತದಲ್ಲಿ ಜೀಪ್ ಉತ್ಪಾದಕ ಕಂಪನಿಯಾಗಿ ಬೆಳೆಯಿತು. ಅವರ ಪ್ರಸ್ತುತ ಲೈನ್ಅಪ್ ಸ್ಕಾರ್ಪಿಯೋ, XUV 300, XUV 700, ಥಾರ್, ಬೊಲೆರೊ ನಿಯೋ, ಮರಾಝೋ ಮುಂತಾದ SUV ಗಳನ್ನು ಒಳಗೊಂಡಿದೆ. ಮಹೀಂದ್ರಾ ವೆರಿಟೊದೊಂದಿಗೆ ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಮತ್ತು KUV100 ನೊಂದಿಗೆ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ತೊಡಗಿಸಿಕೊಂಡಿದೆ.
ಮಹೀಂದ್ರಾ ಭಾರತದಲ್ಲಿ ಏಕೈಕ ಕಾರು ತಯಾರಕ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಇದು ಎಲ್ಲಾ ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನದಲ್ಲಿ ಹೆಚ್ಚು ಹೂಡಿಕೆ ಮಾಡಿದೆ ಮತ್ತು ದೇಶದಲ್ಲಿ ಮಾರಾಟದ ಮೇಲೆ ಎರಡು ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿದೆ - e20 ಹ್ಯಾಚ್‌ಬ್ಯಾಕ್ ಮತ್ತು e-ವೆರಿಟೋ ಸೆಡಾನ್. ಈ ವಾಹನಗಳು ಒಂದೇ ಚಾರ್ಜಿನಲ್ಲಿ 100 ಕಿಲೋಮೀಟರ್‌ಗೆ ಹತ್ತಿರದ ಡ್ರೈವಿಂಗ್ ಶ್ರೇಣಿಯನ್ನು ಸಾಧಿಸಲು ಸಾಧ್ಯವಾಗುತ್ತವೆ.
ನೀವು ಹೈ ಎಂಡ್ ಮಹೀಂದ್ರಾ ಕಾರ್‌ಗಳನ್ನು ಖರೀದಿಸಿದಾಗ, ಭೂಕಂಪಗಳು, ಪ್ರವಾಹಗಳು, ಗಲಭೆಗಳು, ಬೆಂಕಿ, ಕಳ್ಳತನ ಮುಂತಾದ ಅನಿರೀಕ್ಷಿತ ಸನ್ನಿವೇಶಗಳಿಂದಾಗಿ ಉಂಟಾಗಬಹುದಾದ ನಷ್ಟಗಳಿಂದ ಅದನ್ನು ರಕ್ಷಿಸುವುದು ಅಗತ್ಯವಾಗಿದೆ. ಆ ಉದ್ದೇಶಕ್ಕಾಗಿ, ನೀವು ಎಚ್‌ಡಿಎಫ್‌ಸಿ ಎರ್ಗೋದಿಂದ ಮಹೀಂದ್ರಾ ಕಾರ್ ಇನ್ಶೂರೆನ್ಸ್ ಖರೀದಿಸಬೇಕು. ನೀವು ಸಮಗ್ರ ಕವರ್, ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕವರ್ ಮತ್ತು ಥರ್ಡ್ ಪಾರ್ಟಿ ಕವರ್‌ನಂತಹ ವಿವಿಧ ಪ್ಲಾನ್‌ಗಳಿಂದ ಒಂದನ್ನು ಆಯ್ಕೆ ಮಾಡಬಹುದು. ಹೆಚ್ಚುವರಿಯಾಗಿ, ಶೂನ್ಯ ಸವಕಳಿ, ರಿಟರ್ನ್ ಟು ಇನ್ವಾಯ್ಸ್ ಮುಂತಾದ ವಿವಿಧ ಆ್ಯಡ್-ಆನ್‌ಗಳೊಂದಿಗೆ ನೀವು ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಕಸ್ಟಮೈಜ್ ಮಾಡಬಹುದು.

ನಿಮಗೆ ಮಹೀಂದ್ರಾ ಕಾರ್ ಇನ್ಶೂರೆನ್ಸ್ ಏಕೆ ಬೇಕು?

1
ಮಹೀಂದ್ರಾ ಸ್ಕಾರ್ಪಿಯೋ N
ಸ್ಕಾರ್ಪಿಯೋ-N ತನ್ನ ಅದ್ಭುತ ವಿನ್ಯಾಸ, ರೋಮಾಂಚಕ ಕಾರ್ಯಕ್ಷಮತೆ, ಸುಧಾರಿತ ತಂತ್ರಜ್ಞಾನ, ಉತ್ತಮ ಆರಾಮ, ಅದ್ಭುತ ಫೀಚರ್‌ಗಳು ಮತ್ತು ಸುರಕ್ಷತೆಯೊಂದಿಗೆ ಪ್ರತಿ ಡ್ರೈವ್ ಅನ್ನು ಸ್ಮರಣೀಯ ಅನುಭವವನ್ನಾಗಿ ಮಾಡುತ್ತದೆ. ಇದು ನಿಜವಾಗಿಯೂ SUV ಗಳ ರಾಜ . ಈ ಕಾರು 6 ರಿಂದ 7 ಜನರ ಸೀಟಿಂಗ್ ಸಾಮರ್ಥ್ಯದೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ರೂಪಾಂತರದಲ್ಲಿ ಲಭ್ಯವಿದೆ. ನೀವು ನಾಲ್ಕು ವಿಶಾಲ ರೂಪಾಂತರಗಳಿಂದ ಆಯ್ಕೆ ಮಾಡಬಹುದು: Z2, Z4, Z6 ಮತ್ತು Z8. 2WD ಮತ್ತು 4WD ನಲ್ಲಿ ಈ ಮಾದರಿಯನ್ನು ಖರೀದಿಸುವ ಆಯ್ಕೆಯನ್ನು ಸಹ ನೀವು ಹೊಂದಿದ್ದೀರಿ.
2
ಮಹೀಂದ್ರಾ XUV700
ಈ ಮಾದರಿಯು ಸೈ-ಫೈ ತಂತ್ರಜ್ಞಾನ ಮತ್ತು ವಿಶ್ವ ದರ್ಜೆಯ ಸುರಕ್ಷತೆಯನ್ನು ಹೊಂದಿದೆ. ಇದು ನಿಜಕ್ಕೂ ಅತ್ಯುತ್ತಮ ಎಂಜಿನಿಯರಿಂಗ್‌ನೊಂದಿಗೆ ಅಭಿವೃದ್ಧಿಪಡಿಸಲಾದ SUV ಆಗಿದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ವೇರಿಯಂಟ್‌ನಲ್ಲಿ ಲಭ್ಯವಿದೆ. ಈ ಮಾಡೆಲ್‌ನಲ್ಲಿ ಆಟೋಮ್ಯಾಟಿಕ್ ಗೇರ್ ಟ್ರಾನ್ಸ್‌ಮಿಷನ್‌ಗೆ ಯಾವುದೇ ಆಯ್ಕೆ ಇಲ್ಲ. ಈ ಮಾಡೆಲ್‌ನಲ್ಲಿ ನೀವು 5 ಸೀಟರ್ ಮತ್ತು 7 ಸೀಟರ್ ಕಾರನ್ನು ಆಯ್ಕೆ ಮಾಡಬಹುದು.
3
ಮಹೀಂದ್ರಾ ಬೊಲೆರೊ
ಬೊಲೆರೊ, ಗ್ರಾಮೀಣ ಜನರ ವಿಶ್ವಾಸಾರ್ಹ ವಾಹನವಾಗಿದ್ದು ಇದೀಗ ಒಂದು ದಶಕಕ್ಕಿಂತ ಹೆಚ್ಚು ಕಾಲದಿಂದ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಯುಟಿಲಿಟಿ ವಾಹನಗಳಲ್ಲಿ ಒಂದಾಗಿದೆ. ಮಹೀಂದ್ರಾ ಇತ್ತೀಚಿಗೆ 1.5-litre ಡೀಸೆಲ್ ಮೋಟಾರ್‌ನೊಂದಿಗೆ ಬೊಲೆರೊವನ್ನು ಅಪ್ಡೇಟ್ ಮಾಡಿ, ಅದನ್ನು ಸಬ್-ಕಾಂಪ್ಯಾಕ್ಟ್ SUV ವಿಭಾಗದ ಅಡಿಯಲ್ಲಿ ತಂದಿದ್ದು, ಇದರಿಂದಾಗಿ ಬೆಲೆಯು ಕಡಿಮೆಯಾಗಿದೆ.
4
ಮಹೀಂದ್ರಾ XUV300
ಇದು ₹7.99 - 14.74 ಲಕ್ಷದ ಬೆಲೆ ಶ್ರೇಣಿಯಲ್ಲಿ ಲಭ್ಯವಿರುವ 5 ಸೀಟರ್ SUV ಆಗಿದೆ*. ಇದನ್ನು ಈ ಐದು ವಿಶಾಲ ರೂಪಾಂತರಗಳಲ್ಲಿ ಖರೀದಿಸಬಹುದು: W2, W4, W6, W8 ಮತ್ತು W8(O). ಬೇಸ್-ಸ್ಪೆಕ್ W2 ಹೊರತುಪಡಿಸಿ ಎಲ್ಲಾ ಟ್ರಿಮ್‌ಗಳಲ್ಲಿ ಟರ್ಬೋಸ್ಪೋರ್ಟ್ ಆವೃತ್ತಿಯು ಲಭ್ಯವಿದೆ. ಮಹೀಂದ್ರಾ ಸಬ್‌ಕಾಂಪ್ಯಾಕ್ಟ್ SUV, ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್‌, ಸಿಂಗಲ್-ಪೇನ್ ಸನ್‌ರೂಫ್ ಮತ್ತು ಕ್ರೂಸ್ ಕಂಟ್ರೋಲ್‌ ರೀತಿಯ ಫೀಚರ್‌ಗಳನ್ನು ಹೊಂದಿದೆ.
5
ಮಹೀಂದ್ರಾ ಥಾರ್
ಈ ಮಾಡೆಲ್ ₹10.54 - 16.78 ಲಕ್ಷದ ಬೆಲೆ ಶ್ರೇಣಿಯಲ್ಲಿ ಲಭ್ಯವಿರುವ 4 ಸೀಟರ್ SUV ಆಗಿದೆ*. ಒರಟು ಭೂಪ್ರದೇಶದ ಡ್ರೈವಿಂಗ್ ಒಳಗೊಂಡಂತೆ, ಸಾಹಸಿ ಡ್ರೈವಿಂಗ್ ಇಷ್ಟಪಡುವ ಜನರಿಗೆ ಮಹೀಂದ್ರ ಥಾರ್ ಸೂಕ್ತವಾಗಿದೆ. ನೀವು 2WD ಮತ್ತು 4WD ಯಲ್ಲಿ ಅಂತಿಮ ಸಾಹಸವನ್ನು ಅನುಭವಿಸಬಹುದು. ಇದು ಎರಡು ವಿಶಾಲ ರೂಪಾಂತರಗಳಲ್ಲಿ ಲಭ್ಯವಿದೆ: AX(O) ಮತ್ತು LX. ಥಾರ್, ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್ ಹೊಂದಿದೆ. ಅದರ ಜೊತೆಗೆ, ಇದು LED DRL ಗಳು, ಮಾನ್ಯುಯಲ್ AC, ಕ್ರೂಸ್ ಕಂಟ್ರೋಲ್ ಮತ್ತು ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಹ್ಯಾಲೋಜನ್ ಹೆಡ್‌ಲೈಟ್‌ಗಳನ್ನು ಕೂಡ ಹೊಂದಿದೆ.

ನಿಮ್ಮ ಮಹೀಂದ್ರಾಗೆ ಕಾರ್ ಇನ್ಶೂರೆನ್ಸ್ ಏಕೆ ಬೇಕು?


ಕಾರ್ ಇನ್ಶೂರೆನ್ಸ್ ಪಾಲಿಸಿಯು ಕಳ್ಳತನ, ಬೆಂಕಿ, ಭೂಕಂಪ, ಪ್ರವಾಹ ಮುಂತಾದ ಅನಿರೀಕ್ಷಿತ ಘಟನೆಗಳಿಂದ ಉಂಟಾಗುವ ಹಾನಿಗಳಿಂದ ನಿಮ್ಮ ವಾಹನವನ್ನು ರಕ್ಷಿಸುತ್ತದೆ. ಈ ಘಟನೆಗಳಿಂದಾಗಿ ಉಂಟಾಗುವ ಹಾನಿಗಳು ಹೆಚ್ಚಿನ ಬಿಲ್‌ಗಳಿಗೆ ಕಾರಣವಾಗಬಹುದು, ಆದ್ದರಿಂದ ಅಂತಹ ನಷ್ಟಗಳಿಗೆ ಕವರೇಜ್ ಪಡೆಯಲು ಕಾರ್ ಇನ್ಶೂರೆನ್ಸ್ ಅಗತ್ಯವಿದೆ. 1988 ರ ಮೋಟಾರ್ ವಾಹನ ಕಾಯ್ದೆಯ ಪ್ರಕಾರ ಪ್ರತಿ ವಾಹನ ಮಾಲೀಕರು ಕನಿಷ್ಠ ಥರ್ಡ್ ಪಾರ್ಟಿ ಕವರ್ ಹೊಂದುವುದು ಕಾನೂನು ಅವಶ್ಯಕತೆಯಾಗಿದೆ. ಆದಾಗ್ಯೂ, ನಿಮ್ಮ ವಾಹನದ ಸಂಪೂರ್ಣ ರಕ್ಷಣೆಗಾಗಿ, ವಿಶೇಷವಾಗಿ ನೀವು ಮಹೀಂದ್ರಾ ಕಾರಿನ ಮಾಲೀಕರಾಗಿದ್ದಾಗ, ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವುದು ಸೂಕ್ತವಾಗಿದೆ. ಮಹೀಂದ್ರಾಗಾಗಿ ಕಾರ್ ಇನ್ಶೂರೆನ್ಸ್ ಖರೀದಿಸಲು ನಾವು ಕೆಲವು ಕಾರಣಗಳನ್ನು ನೋಡೋಣ.

ಇದು ಹಾನಿಯ ವೆಚ್ಚವನ್ನು ಕವರ್ ಮಾಡುತ್ತದೆ

ಹಾನಿಯ ವೆಚ್ಚವನ್ನು ಕವರ್ ಮಾಡುತ್ತದೆ

ಮಹೀಂದ್ರಾ ಕಾರನ್ನು ಚೆನ್ನಾಗಿ ನಿರ್ವಹಿಸಬೇಕು ಮತ್ತು ಯಾವುದೇ ಅಪಘಾತವು ದೊಡ್ಡ ರಿಪೇರಿ ಬಿಲ್‌ಗಳಿಗೆ ಕಾರಣವಾಗಬಹುದು. ಇದಲ್ಲದೆ, ಪ್ರವಾಹ ಅಥವಾ ಇತರ ಯಾವುದೇ ನೈಸರ್ಗಿಕ ವಿಕೋಪದಿಂದಾಗಿಯೂ ನಿಮ್ಮ ಮಹೀಂದ್ರಾ ಕಾರು ಹಾನಿಗೊಳಗಾಗಬಹುದು. ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ, ನಿಮ್ಮ ಮಹೀಂದ್ರಾ ಕಾರು ಅನಿರೀಕ್ಷಿತ ಸನ್ನಿವೇಶಗಳಿಂದಾಗಿ ಆಗುವ ಹಾನಿಗಳಿಂದ ಒಟ್ಟಾರೆ ರಕ್ಷಣೆಯನ್ನು ಪಡೆಯುತ್ತದೆ. ನೀವು ಎಚ್‌ಡಿಎಫ್‌ಸಿ ಎರ್ಗೋ 6700+ ನಗದುರಹಿತ ಗ್ಯಾರೇಜ್‌ಗಳಲ್ಲಿ ಮಹೀಂದ್ರಾದ ರಿಪೇರಿ ಸೇವೆಗಳನ್ನು ಕೂಡ ಪಡೆಯಬಹುದು.

ಇದು ಮಾಲೀಕರ ಹೊಣೆಗಾರಿಕೆಯನ್ನು ಕಡಿಮೆ ಮಾಡುತ್ತದೆ

ಮಾಲೀಕರ ಹೊಣೆಗಾರಿಕೆಯನ್ನು ಕಡಿಮೆ ಮಾಡುತ್ತದೆ

ಕಾರ್ ಇನ್ಶೂರೆನ್ಸ್ ಪಾಲಿಸಿಯು ಥರ್ಡ್ ಪಾರ್ಟಿ ಹೊಣೆಗಾರಿಕೆಗಳ ವಿರುದ್ಧ ಕವರೇಜ್ ಒದಗಿಸುತ್ತದೆ. ನಿಮ್ಮ ಮಹೀಂದ್ರಾ ಕಾರನ್ನು ಚಾಲನೆ ಮಾಡುವಾಗ ನೀವು ಆಕಸ್ಮಿಕವಾಗಿ ಥರ್ಡ್ ಪಾರ್ಟಿ ವಾಹನ ಅಥವಾ ಆಸ್ತಿಗೆ ಹಾನಿ ಮಾಡಿದರೆ, ಅದಕ್ಕಾಗಿ ನೀವು ಕವರೇಜ್ ಪಡೆಯುತ್ತೀರಿ.

ಇದು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ

ಇದು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ

ಮಹೀಂದ್ರಾ ಕಾರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ, ನೀವು ಒತ್ತಡ ರಹಿತವಾಗಿ ಚಾಲನೆ ಮಾಡಬಹುದು. 1988 ರ ಮೋಟಾರ್ ವಾಹನ ಕಾಯ್ದೆಯ ಪ್ರಕಾರ ಎಲ್ಲಾ ವಾಹನಗಳಿಗೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವುದು ಕಡ್ಡಾಯವಾಗಿದೆ. ಯಾವುದೇ ಅನಿರೀಕ್ಷಿತ ಸನ್ನಿವೇಶಗಳಿಂದಾಗಿ ಆದ ಹಾನಿಗಳಿಂದ ಕೂಡ ಇದು ರಕ್ಷಿಸುತ್ತದೆ. ಆದ್ದರಿಂದ, ಮಹೀಂದ್ರಾ ಕಾರ್ ಇನ್ಶೂರೆನ್ಸ್ ಪಾಲಿಸಿ ಹೊಂದಿರುವುದು ನಿಮ್ಮನ್ನು ಯಾವಾಗಲೂ ನೆಮ್ಮದಿಯಿಂದ ಇರಿಸುತ್ತದೆ.

ನಿಮ್ಮ ಮಹೀಂದ್ರಾ ಕಾರಿಗೆ ಅತ್ಯುತ್ತಮ ಇನ್ಶೂರೆನ್ಸ್ ಪ್ಲಾನ್‌ಗಳು

ಕಾರ್ ಇನ್ಶೂರೆನ್ಸ್ ಬೆಲೆ

100% ಕ್ಲೈಮ್ ಸೆಟಲ್ಮೆಂಟ್ ಅನುಪಾತ^

ಒಂದೇ ಕ್ಲಿಕ್ಕಿನಲ್ಲಿ ಅತ್ಯುತ್ತಮ ಬೆಲೆ ಪಡೆಯುವ ಅವಕಾಶವಿರುವಾಗ ಬೇರೆಲ್ಲೋ ಯಾಕೆ ಹುಡುಕುತ್ತೀರಿ?

ನಗದುರಹಿತ ನೆರವು - ಕಾರ್ ಇನ್ಶೂರೆನ್ಸ್

6700+ ನಗದುರಹಿತ ಗ್ಯಾರೇಜ್‌‌ಗಳೊಂದಿಗೆ ನಗದುರಹಿತ ಆರಿಸಿಕೊಳ್ಳಿ!

ದೇಶಾದ್ಯಂತ ವ್ಯಾಪಿಸಿರುವ 6700+ ನೆಟ್ವರ್ಕ್ ಗ್ಯಾರೇಜುಗಳು, ಇದು ಬಹು ದೊಡ್ಡ ಸಂಖ್ಯೆ ಅಲ್ಲವೇ? ಇದಷ್ಟೇ ಅಲ್ಲ, IPO ಆ್ಯಪ್ ಮತ್ತು ವೆಬ್‌ಸೈಟ್ ಮೂಲಕ ಕ್ಲೈಮ್ ನೋಂದಣಿ ಮಾಡಲು ನಾವು ನಿಮಗೆ ಅವಕಾಶ ನೀಡುತ್ತೇವೆ.

ಸಂತುಷ್ಟ ಗ್ರಾಹಕರೊಂದಿಗೆ ಬೆಳೆಯುತ್ತಿರುವ ಬಳಗ

ನಿಮ್ಮ ಕ್ಲೈಮ್‌‌ಗೆ ಮಿತಿ ಏಕೆ? ಮಿತಿರಹಿತಾರಿಗಿರಿ!

ಎಚ್‌‌ಡಿಎಫ್‌‌ಸಿ ಅನಿಯಮಿತ ಕ್ಲೈಮ್‌ಗಳಿಗೆ ಬಾಗಿಲು ತೆರೆಯುತ್ತದೆ! ನೀವು ಎಚ್ಚರಿಕೆಯಿಂದ ಚಾಲನೆ ಮಾಡುತ್ತಿದ್ದೀರಿ ಎಂದು ನಾವು ನಂಬಿದ್ದರೂ, ನೀವು ನೋಂದಾಯಿಸಲು ಬಯಸುವ ಯಾವುದೇ ಕ್ಲೈಮ್‌ನ ಸಂದರ್ಭದಲ್ಲಿ, ನಾವು ನಿಮ್ಮನ್ನು ನಿರ್ಬಂಧಿಸುವುದಿಲ್ಲ.

ನಿದ್ರೆ ಇಲ್ಲದ ರಾತ್ರಿಗಳು ಇನ್ನಿಲ್ಲ

ತಡರಾತ್ರಿಯ ಕಾರ್ ರಿಪೇರಿ ಸೇವೆಗಳು

ಮುಸ್ಸಂಜೆಯಿಂದ ಬೆಳಗಿನ ಜಾವದವರೆಗೆ ಯಾವುದೇ ತೊಂದರೆಯಿಲ್ಲದೆ ನಾವು ಸಣ್ಣ ಆಕಸ್ಮಿಕ ಹಾನಿಗಳನ್ನು ಸರಿಪಡಿಸುತ್ತೇವೆ. ನೀವು ಸರಳವಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಬಹುದು; ನಾವು ನಿಮ್ಮ ಕಾರನ್ನು ರಾತ್ರಿಯಲ್ಲಿ ಪಿಕ್ ಮಾಡುತ್ತೇವೆ, ಅದನ್ನು ರಿಪೇರಿ ಮಾಡುತ್ತೇವೆ ಮತ್ತು ಬೆಳಿಗ್ಗೆ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೇವೆ.

ನಿಮ್ಮ ಮಹೀಂದ್ರಾ ಕಾರ್‌ಗೆ ಸೂಕ್ತವಾದ ಪ್ಲಾನ್‌ಗಳು

ಎಚ್‌ಡಿಎಫ್‌ಸಿ ಎರ್ಗೋದ ಒಂದು ವರ್ಷದ ಸಮಗ್ರ ಕವರ್ ಮಹೀಂದ್ರಾ ಕಾರನ್ನು ನೆಮ್ಮದಿಯಿಂದ ಚಲಾಯಿಸಲು ನಿಮಗೆ ಸಹಾಯ ಮಾಡುತ್ತದೆ. ಈ ಪ್ಲಾನ್ ನಿಮ್ಮ ಕಾರಿನ ಹಾನಿ ಮತ್ತು ಥರ್ಡ್ ಪಾರ್ಟಿ ವ್ಯಕ್ತಿ/ಆಸ್ತಿಗೆ ಉಂಟಾದ ಹಾನಿಗಳ ವಿರುದ್ಧ ಕವರ್ ಅನ್ನು ಒದಗಿಸುತ್ತದೆ. ನಿಮ್ಮ ಆಯ್ಕೆಯ ಆ್ಯಡ್-ಆನ್‌ಗಳೊಂದಿಗೆ ನೀವು ನಿಮ್ಮ ಕವರ್ ಅನ್ನು ಇನ್ನೂ ಹೆಚ್ಚಾಗಿ ಕಸ್ಟಮೈಸ್ ಮಾಡಬಹುದು.

X
ಸಮಗ್ರ ರಕ್ಷಣೆಯನ್ನು ಬಯಸುವ ಕಾರು ಪ್ರೇಮಿಗಳಿಗೆ ಸೂಕ್ತವಾಗಿದೆ. ಈ ಪ್ಲಾನ್, ಇವುಗಳನ್ನು ಕವರ್‌ ಮಾಡುತ್ತದೆ:
ಅಪಘಾತ

ಅಪಘಾತ

ವೈಯಕ್ತಿಕ ಅಪಘಾತ

ನೈಸರ್ಗಿಕ ವಿಕೋಪಗಳು

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

ಕಳ್ಳತನ

ಕಳ್ಳತನ

ಇನ್ನಷ್ಟು ಹುಡುಕಿ

1988 ರ ಮೋಟಾರ್ ವಾಹನ ಕಾಯ್ದೆಯ ಪ್ರಕಾರ ಥರ್ಡ್ ಪಾರ್ಟಿ ಕವರ್ ಹೊಂದುವುದು ಕಡ್ಡಾಯವಾಗಿದೆ. ನೀವು ನಿಮ್ಮ ಮಹೀಂದ್ರಾ ಕಾರನ್ನು ಆಗಾಗ್ಗೆ ಬಳಸದಿದ್ದರೆ, ಈ ಮೂಲಭೂತ ಕವರ್‌ನೊಂದಿಗೆ ಪ್ರಾರಂಭಿಸುವುದು ಮತ್ತು ದಂಡಗಳನ್ನು ಪಾವತಿಸುವ ತೊಂದರೆಯಿಂದ ನಿಮ್ಮನ್ನು ರಕ್ಷಿಸುವುದು ಉತ್ತಮವಾಗಿದೆ. ಥರ್ಡ್ ಪಾರ್ಟಿ ಕವರ್ ಅಡಿಯಲ್ಲಿ, ಥರ್ಡ್ ಪಾರ್ಟಿಗೆ ಹಾನಿ, ಗಾಯ ಅಥವಾ ನಷ್ಟದಿಂದ ಉಂಟಾಗುವ ಹೊಣೆಗಾರಿಕೆಗಳ ವಿರುದ್ಧ ರಕ್ಷಣೆಯೊಂದಿಗೆ ವೈಯಕ್ತಿಕ ಅಪಘಾತದ ಕವರ್ ಅನ್ನು ನಾವು ನಿಮಗೆ ಒದಗಿಸುತ್ತೇವೆ.

X
ಅಪರೂಪಕ್ಕೊಮ್ಮೆ ಕಾರು ಬಳಸುವವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:

ವೈಯಕ್ತಿಕ ಅಪಘಾತ

ಥರ್ಡ್-ಪಾರ್ಟಿ ಆಸ್ತಿ ಹಾನಿ

ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ

ಇನ್ನಷ್ಟು ಹುಡುಕಿ

ಸ್ಟಾಂಡ್ಅಲೋನ್ ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಅಪಘಾತಗಳು, ಪ್ರವಾಹಗಳು, ಭೂಕಂಪಗಳು, ಗಲಭೆಗಳು, ಬೆಂಕಿ ಮತ್ತು ಕಳ್ಳತನದಿಂದಾಗಿ ನಿಮ್ಮ ಕಾರಿಗೆ ಉಂಟಾಗುವ ಹಾನಿಗಳಿಂದ ನಿಮ್ಮ ವೆಚ್ಚಗಳನ್ನು ಕವರ್ ರಕ್ಷಿಸುತ್ತದೆ. ನೀವು ಹೆಚ್ಚುವರಿ ರಕ್ಷಣೆಯನ್ನು ಆನಂದಿಸಲು ಬಯಸಿದರೆ, ಕಡ್ಡಾಯ ಥರ್ಡ್ ಪಾರ್ಟಿ ಕವರ್‌ ಜೊತೆಗೆ ಹೆಚ್ಚಿನ ಆ್ಯಡ್-ಆನ್‌ಗಳೊಂದಿಗೆ ಈ ಐಚ್ಛಿಕ ಕವರ್ ಅನ್ನು ನೀವು ಆಯ್ಕೆ ಮಾಡಬಹುದು.

X
ಮಾನ್ಯವಾದ ಥರ್ಡ್ ಪಾರ್ಟಿ ಕವರ್ ಹೊಂದಿರುವವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:
ಅಪಘಾತ

ಅಪಘಾತ

ನೈಸರ್ಗಿಕ ವಿಕೋಪಗಳು

ಕಳ್ಳತನ

ಬೆಂಕಿ

ಆ್ಯಡ್-ಆನ್‌ಗಳ ಆಯ್ಕೆ

ಕಳ್ಳತನ

ಕಳ್ಳತನ

ಇನ್ನಷ್ಟು ಹುಡುಕಿ

ನೀವು ಹೊಚ್ಚ ಹೊಸ ಮಹೀಂದ್ರಾ ಕಾರನ್ನು ಹೊಂದಿದ್ದರೆ, ನಿಮ್ಮ ಹೊಸ ಆಸ್ತಿಯನ್ನು ಸುರಕ್ಷಿತವಾಗಿ ಇರಿಸಲು ಹೊಸ ಕಾರುಗಳಿಗಾಗಿ ಇರುವ ನಮ್ಮ ಕವರ್ ಅಗತ್ಯವಾಗಿದೆ. ಈ ಪ್ಲಾನ್ ಸ್ವಂತ ಹಾನಿಗೆ 1-ವರ್ಷದ ಕವರೇಜನ್ನು ಒದಗಿಸುತ್ತದೆ. ಇದು ಥರ್ಡ್ ಪಾರ್ಟಿ ವ್ಯಕ್ತಿ/ಆಸ್ತಿಗಾಗುವ ಹಾನಿಯನ್ನು ಭರಿಸಲು ಕೂಡ 3 ವರ್ಷದ ಕವರ್ ನೀಡುತ್ತದೆ.

X
ಹೊಸ ಕಾರನ್ನು ಖರೀದಿಸಿದವರಿಗೆ ಸೂಕ್ತವಾಗಿದೆ, ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:
ಅಪಘಾತ

ಅಪಘಾತ

ನೈಸರ್ಗಿಕ ವಿಕೋಪಗಳು

ವೈಯಕ್ತಿಕ ಆಕ್ಸಿಡೆಂಟ್

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

ಕಳ್ಳತನ

ನಿಮ್ಮ ಪ್ರೀಮಿಯಂ ತಿಳಿಯಿರಿ: ಥರ್ಡ್ ಪಾರ್ಟಿ ಪ್ರೀಮಿಯಂ ವರ್ಸಸ್ ಓನ್ ಡ್ಯಾಮೇಜ್ ಪ್ರೀಮಿಯಂ


ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಕವರ್ ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ ಮಾತ್ರ ಕವರೇಜನ್ನು ಒದಗಿಸುತ್ತದೆ. ಆದಾಗ್ಯೂ, ಸ್ವಂತ ಹಾನಿಯ ಕವರ್ ಯಾವುದೇ ಅನಿರೀಕ್ಷಿತ ಘಟನೆಗಳಿಂದ ವಾಹನಕ್ಕೆ ಉಂಟಾದ ನಷ್ಟಗಳಿಗೆ ಕವರೇಜನ್ನು ಒದಗಿಸುತ್ತದೆ. ವ್ಯತ್ಯಾಸವನ್ನು ನಾವು ಈ ಕೆಳಗೆ ನೋಡೋಣ

ಥರ್ಡ್ ಪಾರ್ಟಿ ಪ್ರೀಮಿಯಂ ಸ್ವಯಂ ಹಾನಿ ಪ್ರೀಮಿಯಂ
ಕವರೇಜ್ ಸೀಮಿತವಾಗಿರುವುದರಿಂದ ಇದು ಕಡಿಮೆ ದುಬಾರಿಯಾಗಿದೆ. ಥರ್ಡ್ ಪಾರ್ಟಿ ಕವರ್‌ಗೆ ಹೋಲಿಸಿದರೆ ಇದು ದುಬಾರಿಯಾಗಿದೆ.
ಇದು ಮಾಡಿದ ಹಾನಿಗಳಿಗೆ ಮಾತ್ರ ಕವರೇಜ್ ಒದಗಿಸುತ್ತದೆ
ಥರ್ಡ್ ಪಾರ್ಟಿ ಆಸ್ತಿ ಅಥವಾ ವ್ಯಕ್ತಿಗೆ.
ಪ್ರವಾಹ, ಭೂಕಂಪ, ಬೆಂಕಿ, ಕಳ್ಳತನ ಮುಂತಾದ ಇನ್ಶೂರೆಬಲ್ ಅಪಾಯಗಳಿಂದ
ವಾಹನಕ್ಕೆ ಉಂಟಾಗುವ ಯಾವುದೇ ನಷ್ಟಗಳಿಗೆ ಇದು ಕವರೇಜ್ ಒದಗಿಸುತ್ತದೆ.
IRDAI ಪ್ರಕಾರ ಪ್ರೀಮಿಯಂ ಅನ್ನು ನಿಗದಿಪಡಿಸಲಾಗಿದೆ. ವಾಹನದ ವಯಸ್ಸು, ಆಯ್ಕೆ ಮಾಡಲಾದ ಆ್ಯಡ್-ಆನ್‌ಗಳು, ವಾಹನದ ಮಾಡೆಲ್ ಇತ್ಯಾದಿಗಳ,
ಆಧಾರದ ಮೇಲೆ ಪ್ರೀಮಿಯಂ ಭಿನ್ನವಾಗಿರುತ್ತದೆ.

ಮಹೀಂದ್ರಾ ಕಾರ್ ಇನ್ಶೂರೆನ್ಸ್ ಪಾಲಿಸಿ ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳು

ಅಪಘಾತದ ಕವರ್

ಅಪಘಾತಗಳು

ಅಪಘಾತಗಳು ಅನಿಶ್ಚಿತವಾಗಿವೆ. ಅಪಘಾತದಿಂದಾಗಿ ನಿಮ್ಮ ಮಹೀಂದ್ರಾ ಕಾರು ಹಾನಿಗೊಳಗಾಗಿದೆಯೇ? ಭಯಭೀತರಾಗಬೇಡಿ! ನಾವು ಅದನ್ನು ಕವರ್ ಮಾಡುತ್ತೇವೆ!
ಬೆಂಕಿ ಮತ್ತು ಸ್ಫೋಟ

ಬೆಂಕಿ ಮತ್ತು ಸ್ಫೋಟ

ಬೂಮ್! ಬೆಂಕಿ ಮತ್ತು ಸ್ಫೋಟದ ಘಟನೆಗಳಿಂದ ಬೆಂಕಿಯು ನಿಮ್ಮ ಮಹೀಂದ್ರಾ ಕಾರನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಹಾನಿಗೊಳಿಸಬಹುದು ಅದರಿಂದಾದ ಯಾವುದೇ ನಷ್ಟವಾಗಲಿ. ಚಿಂತಿಸಬೇಡಿ, ಅದನ್ನು ನಾವು ನಿಭಾಯಿಸುತ್ತೇವೆ.
ಕಳ್ಳತನ

ಕಳ್ಳತನ

ಕಾರ್ ಕಳುವಾಗಿದೆಯೇ? ನಿಜಕ್ಕೂ ತುಂಬಾ ದುಃಖದ ಸುದ್ಧಿ ಇದು! ಆದರೆ ದುಃಖ ಪಡುವ ಮೊದಲು, ನಿಮ್ಮ ವಾಹನದ ರಕ್ಷಣೆ ನಮ್ಮ ಹೊಣೆ ಎಂಬುದನ್ನು ನೆನಪಿಡಿ!
ನೈಸರ್ಗಿಕ ವಿಕೋಪಗಳು

ವಿಪತ್ತುಗಳು

ಭೂಕಂಪ, ಭೂಕುಸಿತ, ಪ್ರವಾಹ, ಗಲಭೆಗಳು, ಭಯೋತ್ಪಾದನೆ, ಇತ್ಯಾದಿಗಳು ನಿಮ್ಮ ಮೆಚ್ಚಿನ ಕಾರಿಗೆ ಹಾನಿ ಮಾಡಬಹುದು. ಆದರೆ ಚಿಂತಿಸಬೇಡಿ. ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳಿಂದ ನಿಮ್ಮ ಕಾರನ್ನು ರಕ್ಷಿಸುವ ಮೂಲಕ ನಾವು ನಿಮ್ಮ ನೆರವಿಗೆ ನಿಲ್ಲುತ್ತೇವೆ.
ವೈಯಕ್ತಿಕ ಆಕ್ಸಿಡೆಂಟ್

ವೈಯಕ್ತಿಕ ಆಕ್ಸಿಡೆಂಟ್

ನೀವು ಮಾನ್ಯ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೆ ಮಾತ್ರ, ಮಾಲೀಕ ಚಾಲಕರಿಗೆ ಈ "ಪರ್ಸನಲ್ ಆಕ್ಸಿಡೆಂಟ್ ಕವರ್" ಅನ್ನು ಆಯ್ಕೆ ಮಾಡಬಹುದು. ₹15 ಲಕ್ಷಗಳ ಪರ್ಯಾಯ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿ ಅಥವಾ ₹15 ಲಕ್ಷಗಳ "ಪರ್ಸನಲ್ ಆಕ್ಸಿಡೆಂಟ್ ಕವರ್" ಇರುವ ಮತ್ತೊಂದು ಮೋಟಾರ್ ಇನ್ಶೂರೆನ್ಸ್ ಪಾಲಿಸಿ ಹೊಂದಿದ್ದರೆ, ನಿಮಗೆ ಈ ಕವರ್‌ನ ಅವಶ್ಯಕತೆ ಇಲ್ಲ.
ಥರ್ಡ್ ಪಾರ್ಟಿ ಹೊಣೆಗಾರಿಕೆ

ಥರ್ಡ್ ಪಾರ್ಟಿ ಹೊಣೆಗಾರಿಕೆ

ನಿಮ್ಮ ವಾಹನವು ಆಕಸ್ಮಿಕವಾಗಿ ಮೂರನೇ ವ್ಯಕ್ತಿಯ ಆಸ್ತಿಗಳಿಗೆ ಹಾನಿ ಮಾಡಿದರೆ, ನಿಮ್ಮ ಎಲ್ಲಾ ಕಾನೂನು ಹೊಣೆಗಾರಿಕೆಗಳನ್ನು ಪೂರೈಸಲು ನಾವು ಸಂಪೂರ್ಣ ಕವರೇಜ್ ಒದಗಿಸುತ್ತೇವೆ! ನೀವು ಪ್ರತ್ಯೇಕ ಪಾಲಿಸಿಯಾಗಿ ಥರ್ಡ್ ಪಾರ್ಟಿ ಕವರೇಜನ್ನು ಕೂಡ ಪಡೆಯಬಹುದು!

ನಿಮ್ಮ ಮಹೀಂದ್ರಾ ಕಾರ್ ಇನ್ಶೂರೆನ್ಸ್‌ಗೆ ಪರಿಪೂರ್ಣ ಸಂಗಾತಿ - ನಮ್ಮ ಆ್ಯಡ್ ಆನ್ ಕವರ್‌ಗಳು

ಶೂನ್ಯ ಸವಕಳಿ ಆ್ಯಡ್-ಆನ್ ಕವರ್‌ನೊಂದಿಗೆ, ಇನ್ಶೂರ್ಡ್ ವ್ಯಕ್ತಿಯು ಸವಕಳಿ ಮೌಲ್ಯದ ಕಡಿತವಿಲ್ಲದೆ ಹಾನಿಗೊಳಗಾದ ಭಾಗಕ್ಕೆ ಸಂಪೂರ್ಣ ಕ್ಲೈಮ್ ಮೊತ್ತವನ್ನು ಪಡೆಯುತ್ತಾರೆ.
ನೋ ಕ್ಲೈಮ್ ಬೋನಸ್ (NCB) ಪ್ರೊಟೆಕ್ಷನ್ ಆ್ಯಡ್ ಆನ್ ಕವರ್, ಪಾಲಿಸಿ ಅವಧಿಯಲ್ಲಿ ಕ್ಲೈಮ್ ಮಾಡಿದ ಹೊರತಾಗಿಯೂ ನೀವು ಯಾವುದೇ NCB ಪ್ರಯೋಜನಗಳನ್ನು ಕಳೆದುಕೊಳ್ಳುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ. ಈ ಆ್ಯಡ್-ಆನ್ ಕವರ್‌ನೊಂದಿಗೆ, ಸಂಗ್ರಹಿಸಿದ NCB ಯನ್ನು ಕಳೆದುಕೊಳ್ಳದೆ ನೀವು ಪಾಲಿಸಿ ವರ್ಷದಲ್ಲಿ ಎರಡು ಕ್ಲೈಮ್‌ಗಳನ್ನು ಸಲ್ಲಿಸಬಹುದು.
ತುರ್ತು ಸಹಾಯ ಆ್ಯಡ್ ಆನ್ ಕವರ್‌ನೊಂದಿಗೆ ನೀವು ಹೈವೇ ಮಧ್ಯದಲ್ಲಿ ನಿಮ್ಮ ವಾಹನವು ಬ್ರೇಕ್‌ಡೌನ್ ಆದರೆ, ಯಾವುದೇ ಸಮಯದಲ್ಲಿ 24*7 ನಮ್ಮಿಂದ ಬೆಂಬಲವನ್ನು ಪಡೆಯಬಹುದು. ನಾವು ವಾಹನದ ಟೋಯಿಂಗ್, ಟೈರ್ ಬದಲಾವಣೆಗಳು, ಕೀ ಕಳೆದುಹೋಗುವಾಗ ಸಹಾಯ, ಇಂಧನ ಮತ್ತು ಮೆಕ್ಯಾನಿಕ್‌ಗೆ ವ್ಯವಸ್ಥೆ ಮಾಡುವಂತಹ ಸೇವೆಗಳನ್ನು ಒದಗಿಸುತ್ತೇವೆ.
ರಿಟರ್ನ್ ಟು ಇನ್ವಾಯ್ಸ್ ಆ್ಯಡ್ ಆನ್ ಕವರ್‌ನೊಂದಿಗೆ ನೀವು ಕಾರು ಕಳ್ಳತನವಾದರೆ ಅಥವಾ ರಿಪೇರಿ ಮಾಡಲಾಗದ ರೀತಿಯಲ್ಲಿದ್ದರೆ ಇನ್ವಾಯ್ಸ್ ಮೌಲ್ಯಕ್ಕೆ ಸಮನಾದ ಕ್ಲೈಮ್ ಮೊತ್ತವನ್ನು ಪಡೆಯುತ್ತೀರಿ.
ಇದು ಉತ್ತಮ ಕಾರ್ ಇನ್ಶೂರೆನ್ಸ್ ಪೂರೈಕೆದಾರರು ನೀಡುವ ಎಂಜಿನ್ ಮತ್ತು ಗೇರ್‌ ಬಾಕ್ಸ್ ರಕ್ಷಕ
ಎಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಟರ್
ಎಂಜಿನ್ ಮತ್ತು ಗೇರ್‌ಬಾಕ್ಸ್ ಚೈಲ್ಡ್ ಪಾರ್ಟ್‌ಗಳ ರಿಪೇರಿ ಮತ್ತು ಬದಲಿ ವೆಚ್ಚವನ್ನು ಕವರ್ ಮಾಡುವ ಎಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಟರ್‌ಗಳ ಆ್ಯಡ್ ಆನ್ ಕವರ್‌ನೊಂದಿಗೆ ನಿಮ್ಮ ಮಹೀಂದ್ರಾ ಕಾರನ್ನು ರಕ್ಷಿಸುವುದು ಸೂಕ್ತವಾಗಿದೆ. ನೀರಿನ ಪ್ರವೇಶ, ಲೂಬ್ರಿಕೇಟಿಂಗ್ ತೈಲದ ಸೋರಿಕೆ ಮತ್ತು ಗೇರ್ ಬಾಕ್ಸಿಗೆ ಹಾನಿಯಿಂದಾಗಿ ಹಾನಿ ಉಂಟಾದರೆ ಕವರೇಜನ್ನು ನೀಡಲಾಗುತ್ತದೆ.
ನಿಮ್ಮ ಮಹೀಂದ್ರಾ ಕಾರು ಅಪಘಾತಕ್ಕೆ ಒಳಗಾದರೆ, ಅದು ಕೆಲವು ದಿನಗಳವರೆಗೆ ಗ್ಯಾರೇಜ್‌ನಲ್ಲಿ ಇರಬೇಕು. ಆ ಸಂದರ್ಭದಲ್ಲಿ ನೀವು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಬೇಕಾಗಬಹುದು, ಇದರಿಂದಾಗಿ ನಿಮ್ಮ ದೈನಂದಿನ ಸಾರಿಗೆ ವೆಚ್ಚಗಳು ಹೆಚ್ಚಬಹುದು. ಡೌನ್‌ಟೈಮ್ ಪ್ರೊಟೆಕ್ಷನ್ ಆ್ಯಡ್ ಆನ್ ಕವರ್‌ನೊಂದಿಗೆ, ನಿಮ್ಮ ಕಾರು ಬಳಸಲು ಸಿದ್ಧವಾಗುವವರೆಗೆ ಸಾರಿಗೆಗಾಗಿ ದೈನಂದಿನ ವೆಚ್ಚಗಳಿಗೆ ವಿಮಾದಾತರು ಕವರೇಜನ್ನು ಒದಗಿಸುತ್ತಾರೆ.

ನಿಮ್ಮ ಮಹೀಂದ್ರಾ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಸುಲಭವಾಗಿ ಲೆಕ್ಕ ಹಾಕಿ

ಹಂತ 1 : ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕಿ

ಹಂತ 1

ನಿಮ್ಮ ಮಹೀಂದ್ರಾ ಕಾರ್ ನೋಂದಣಿ ನಂಬರ್ ನಮೂದಿಸಿ.

ಹಂತ 2 - ಪಾಲಿಸಿ ಕವರ್ ಆಯ್ಕೆಮಾಡಿ- ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕಿ

ಹಂತ 2

ನಿಮ್ಮ ಪಾಲಿಸಿ ಕವರ್ ಆಯ್ಕೆಮಾಡಿ*
(ಒಂದು ವೇಳೆ ನಿಮ್ಮ ಮಹೀಂದ್ರಾ ವಿವರಗಳನ್ನು ಸ್ವಯಂಚಾಲಿತವಾಗಿ ಪಡೆಯಲು ನಮಗೆ ಸಾಧ್ಯವಾಗದಿದ್ದರೆ)
ಕಾರ್ ವಿವರಗಳು, ನಮಗೆ ಕಾರಿನ ಕೆಲವು ವಿವರಗಳು ಬೇಕಾಗುತ್ತವೆ, ಉದಾಹರಣೆಗೆ ಕಾರಿನ ನಮೂನೆ,
ಮಾಡೆಲ್, ವೇರಿಯಂಟ್, ನೋಂದಣಿ ವರ್ಷ, ನಗರ, ಇತ್ಯಾದಿ ವಿವರಗಳನ್ನು ನೀಡಬೇಕಾಗುತ್ತದೆ)

 

ಹಂತ 3- ನಿಮ್ಮ ಹಿಂದಿನ ಕಾರ್ ಇನ್ಶೂರೆನ್ಸ್ ಪಾಲಿಸಿ ವಿವರಗಳು

ಹಂತ 3

ನಿಮ್ಮ ಹಿಂದಿನ ಪಾಲಿಸಿ ನೋ ಕ್ಲೈಮ್ ಬೋನಸ್ (NCB) ಸ್ಥಿತಿಯನ್ನು ಒದಗಿಸಿ.

ಹಂತ 4- ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಪಡೆಯಿರಿ

ಹಂತ 4

ನಿಮ್ಮ ಮಹೀಂದ್ರಾ ಕಾರಿಗೆ ತ್ವರಿತ ಕೋಟ್ ಪಡೆಯಿರಿ.

ನಮ್ಮೊಂದಿಗೆ ಕ್ಲೈಮ್‌ಗಳು ಸುಲಭವಾದುದು ಮಾಡಿ!

ಜಗತ್ತು ಡಿಜಿಟಲ್ ಆಗಿದೆ, ಹಾಗೆಯೇ ಈ ನಾಲ್ಕು ತ್ವರಿತ, ಸುಲಭವಾಗಿ ಅನುಸರಿಸಬಹುದಾದ ಕ್ರಮಗಳ ಮೂಲಕ ನಮ್ಮ ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆ ಕೂಡ.

  • ಹಂತ #1
    ಹಂತ #1
    ಪೇಪರ್‌ವರ್ಕ್‌ನೊಂದಿಗೆ ದೂರವಿರಿ ಮತ್ತು ನಿಮ್ಮ ಕ್ಲೈಮ್ ನೋಂದಣಿ ಮಾಡಲು ನಮ್ಮ ವೆಬ್‌ಸೈಟ್ ಮೂಲಕ ನಿಮ್ಮ ಡಾಕ್ಯುಮೆಂಟ್‌ಗಳನ್ನು ಆನ್ಲೈನಿನಲ್ಲಿ ಹಂಚಿಕೊಳ್ಳಿ.
  • ಹಂತ #2
    ಹಂತ #2
    ಸಮೀಕ್ಷಕರು ಅಥವಾ ವರ್ಕ್‌ಶಾಪ್ ಪಾಲುದಾರರಿಂದ ನಿಮ್ಮ ಮಹೀಂದ್ರಾದ ಸ್ವಯಂ-ತಪಾಸಣೆ ಅಥವಾ ಡಿಜಿಟಲ್ ತಪಾಸಣೆಯನ್ನು ಆಯ್ಕೆ ಮಾಡಿ.
  • ಹಂತ #3
    ಹಂತ #3
    ನಮ್ಮ ಸ್ಮಾರ್ಟ್ AI-ಸಕ್ರಿಯಗೊಳಿಸಿದ ಕ್ಲೈಮ್ ಟ್ರ್ಯಾಕರ್ ಮೂಲಕ ನಿಮ್ಮ ಕ್ಲೈಮ್ ಸ್ಥಿತಿಯನ್ನು ಟ್ರ್ಯಾಕ್ ಮಾಡಿ.
  • ಹಂತ #4
    ಹಂತ #4
    ನಿಮ್ಮ ಕ್ಲೈಮ್ ಅನ್ನು ಅನುಮೋದಿಸುವಾಗ ಮತ್ತು ನಮ್ಮ ವ್ಯಾಪಕ ನೆಟ್ವರ್ಕ್ ಗ್ಯಾರೇಜ್‌ಗಳೊಂದಿಗೆ ಸೆಟಲ್ ಮಾಡಲಾಗುವಾಗ ರಿಲ್ಯಾಕ್ಸ್ ಆಗಿರಿ!

ನೀವು ಎಲ್ಲೇ ಹೋದರೂ ನಮ್ಮನ್ನು ಹುಡುಕಿ

ನೀವು ಭಾರತದಲ್ಲಿ ಎಲ್ಲೇ ಪ್ರಯಾಣ ಮಾಡಿದರೂ ನಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ವಾಹನವನ್ನು ರಕ್ಷಿಸುತ್ತದೆ. ನಿಮ್ಮ ಮಹೀಂದ್ರಾಕ್ಕಾಗಿ ನಾವು ದೇಶಾದ್ಯಂತ 6700+ ವಿಶೇಷ ನಗದುರಹಿತ ಗ್ಯಾರೇಜ್‌ಗಳ ವ್ಯಾಪಕ ನೆಟ್ವರ್ಕ್ ಹೊಂದಿರುವುದರಿಂದ ನೀವು ಈಗ ನಿಮ್ಮ ಪ್ರಯಾಣದಲ್ಲಿ ನಿಶ್ಚಿಂತರಾಗಿ ಇರಬಹುದು. ರಿಪೇರಿಗಾಗಿ ನಗದು ಪಾವತಿಸುವ ಬಗ್ಗೆ ಚಿಂತಿಸದೆ ನೀವು ನಮ್ಮ ಪರಿಣತ ಸೇವೆಗಳನ್ನು ಅವಲಂಬಿಸಬಹುದು.

ಎಚ್‌ಡಿಎಫ್‌ಸಿ ಎರ್ಗೋದ ನಗದುರಹಿತ ಗ್ಯಾರೇಜ್ ಸೌಲಭ್ಯದೊಂದಿಗೆ, ನಿಮ್ಮ ಮಹೀಂದ್ರಾ ಕಾರ್ ಯಾವಾಗಲೂ ನಮ್ಮ ನೆಟ್ವರ್ಕ್ ಗ್ಯಾರೇಜ್‌ಗಳ ಹತ್ತಿರದಲ್ಲಿದೆ ಎಂದು ನೀವು ಖಚಿತಪಡಿಸಿಕೊಳ್ಳಬಹುದು. ಆದ್ದರಿಂದ, ನಿಮ್ಮ ಪ್ರಯಾಣದ ಮಧ್ಯದಲ್ಲಿ ನಿಮ್ಮ ಕಾರು ಎದುರಿಸಬಹುದಾದ ಯಾವುದೇ ದುರದೃಷ್ಟಕರ ಬ್ರೇಕ್‌ಡೌನ್ ಬಗ್ಗೆ ಯೋಚಿಸದೆ ನೀವು ಶಾಂತಿಯಿಂದ ಡ್ರೈವ್ ಮಾಡಬಹುದು.

ಭಾರತದಾದ್ಯಂತ 8000+ ನಗದುರಹಿತ ಗ್ಯಾರೇಜ್‌ಗಳುˇ

ನಿಮ್ಮ ಮಹೀಂದ್ರಾ ಕಾರ್‌ಗೆ ಪ್ರಮುಖ ಸಲಹೆಗಳು

ದೀರ್ಘಾವಧಿ ಪಾರ್ಕ್ ಮಾಡಿದ ಕಾರಿಗೆ ಸಲಹೆಗಳು
ದೀರ್ಘಾವಧಿ ಪಾರ್ಕ್ ಮಾಡಿದ ಕಾರಿಗೆ ಸಲಹೆಗಳು
• ಯಾವಾಗಲೂ ನಿಮ್ಮ ಮಹೀಂದ್ರಾ ಕಾರನ್ನು ಒಳಾಂಗಣದಲ್ಲಿ ಪಾರ್ಕ್ ಮಾಡಿ. ಇದು ಮಳೆ ಮತ್ತು ಸೂರ್ಯನ ಬೆಳಕಿನಿಂದ ಕಾರ್‌ಗೆ ಹಾನಿ ಮತ್ತು ದುರಸ್ತಿ ಆಗದಂತೆ ತಡೆಯುತ್ತದೆ.
• ನೀವು ನಿಮ್ಮ ಮಹೀಂದ್ರಾ ಕಾರನ್ನು ಹೊರಗೆ ಪಾರ್ಕ್ ಮಾಡುತ್ತಿದ್ದರೆ, ವಾಹನದ ಮೇಲೆ ಕವರ್ ಹಾಕಲು ಮರೆಯಬೇಡಿ.
• ನೀವು ನಿಮ್ಮ ಮಹೀಂದ್ರಾ ಕಾರನ್ನು ದೀರ್ಘಕಾಲದವರೆಗೆ ಪಾರ್ಕ್ ಮಾಡಲು ಯೋಜಿಸುತ್ತಿದ್ದರೆ, ಸ್ಪಾರ್ಕ್ ಪ್ಲಗ್ ತೆಗೆದುಹಾಕಿ. ಇದು ಸಿಲಿಂಡರ್ ಒಳಗೆ ತುಕ್ಕು ಹಿಡಿಯುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.
• ನಿಮ್ಮ ಮಹೀಂದ್ರಾ ಕಾರನ್ನು ದೀರ್ಘಕಾಲದವರೆಗೆ ಪಾರ್ಕ್ ಮಾಡುವಾಗ ಇಂಧನ ಟ್ಯಾಂಕ್ ಭರ್ತಿ ಮಾಡಿ. ಇದು ಇಂಧನ ಟ್ಯಾಂಕ್‌ಗೆ ತುಕ್ಕು ಹಿಡಿಯದಂತೆ ತಡೆಯುತ್ತದೆ.
ಪ್ರವಾಸಗಳಿಗಾಗಿ ಸಲಹೆಗಳು
ಪ್ರವಾಸಗಳಿಗಾಗಿ ಸಲಹೆಗಳು
• ನಿಮ್ಮ ಇಂಧನ ಟ್ಯಾಂಕ್ ಭರ್ತಿ ಮಾಡಿ, ರಿಸರ್ವ್‌ನಲ್ಲಿ ಡ್ರೈವಿಂಗ್ ಮಾಡುವ ರಿಸ್ಕ್ ಅನ್ನು ಎಂದಿಗೂ ತೆಗೆದುಕೊಳ್ಳಬೇಡಿ.
• ದೂರ ಪ್ರಯಾಣಕ್ಕೆ ಹೊರಡುವ ಮೊದಲು ನಿಮ್ಮ ಮಹೀಂದ್ರಾ ಕಾರ್‌ನ ಟೈರ್, ಎಂಜಿನ್ ಆಯಿಲ್ ಚೆಕ್ ಮಾಡಿ.
• ಅಗತ್ಯವಿಲ್ಲದಿದ್ದಾಗ ಎಲೆಕ್ಟ್ರಿಕಲ್ ಸ್ವಿಚ್ ಆಫ್ ಮಾಡಿ, ಇದು ನಿಮ್ಮ ಮಹೀಂದ್ರಾ ಕಾರ್ ಬ್ಯಾಟರಿ ಲೈಫ್ ಅನ್ನು ಹೆಚ್ಚಿಸುತ್ತದೆ.
ಮುನ್ನೆಚ್ಚರಿಕೆಯ ನಿರ್ವಹಣೆ
ಮುನ್ನೆಚ್ಚರಿಕೆಯ ನಿರ್ವಹಣೆ
• ಸುಗಮ ಚಾಲನೆಯನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಮಹೀಂದ್ರಾ ಕಾರ್‌ನ ಫ್ಲೂಯಿಡ್ ಅನ್ನು ನಿಯಮಿತವಾಗಿ ಚೆಕ್ ಮಾಡಿ.
• ನಿಯಮಿತವಾಗಿ ನಿಮ್ಮ ಮಹೀಂದ್ರಾ ಕಾರ್‌ನ ಟೈರ್ ಪ್ರೆಶರ್ ಪರಿಶೀಲಿಸಿ.
• ನಿಮ್ಮ ಮಹೀಂದ್ರಾ ಕಾರ್ ಎಂಜಿನ್ ಸ್ವಚ್ಛವಾಗಿ ಇರಿಸಿ.
• ನಿಯಮಿತವಾಗಿ ಲೂಬ್ರಿಕೆಂಟ್ ಮತ್ತು ಆಯಿಲ್ ಫಿಲ್ಟರ್ ಬದಲಾಯಿಸಿ.
ದೈನಂದಿನ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳು
ದೈನಂದಿನ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳು
• ಕಾರ್ ಕ್ಲೀನಿಂಗ್ ಲಿಕ್ವಿಡ್ ಸೋಪ್ ಮತ್ತು ನೀರಿನಿಂದ ನಿಯಮಿತವಾಗಿ ನಿಮ್ಮ ಮಹೀಂದ್ರಾ ಕಾರನ್ನು ತೊಳೆಯಿರಿ. ಸಾಮಾನ್ಯ ಡಿಶ್ ಸೋಪ್ ಬಳಸುವುದನ್ನು ತಪ್ಪಿಸಿ, ಏಕೆಂದರೆ ಇದು ಪೇಂಟ್ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
• ನಿಮ್ಮ ಮಹೀಂದ್ರಾ ಕಾರನ್ನು ರಸ್ತೆ ಗುಂಡಿಗಳಿಂದ ತಪ್ಪಿಸಿ. ಅಲ್ಲದೆ, ಸ್ಪೀಡ್ ಬಂಪ್‌ಗಳ ಮೇಲೆ ನಿಧಾನವಾಗಿ ಡ್ರೈವ್ ಮಾಡಿ. ರಸ್ತೆ ಗುಂಡಿಗಳು ಮತ್ತು ಸ್ಪೀಡ್ ಬಂಪ್‌ಗಳ ಮೇಲೆ ವೇಗವಾಗಿ ಹೋಗುವುದರಿಂದ ಟೈರ್‌ಗಳು, ಸಸ್ಪೆನ್ಶನ್ ಶಾಕ್ ಹೀರಕಗಳು ಹಾನಿಗೊಳಗಾಗಬಹುದು.
• ನಿಯಮಿತ ಮಧ್ಯಂತರಗಳಲ್ಲಿ ಶಾರ್ಪ್ ಬ್ರೇಕಿಂಗ್ ತಪ್ಪಿಸಿ. ABS ಬ್ರೇಕ್‌ಗಳು (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಲಾಕಪ್ ಆದರೆ ಒದ್ದೆ ಅಥವಾ ಐಸಿಯಾಗಿರುವ ರಸ್ತೆಗಳಲ್ಲಿ ಹಠಾತ್ ಬ್ರೇಕಿಂಗ್ ಮಾಡುವುದರಿಂದ ನೀವು ತ್ವರಿತವಾಗಿ ನಿಯಂತ್ರಣವನ್ನು ಕಳೆದುಕೊಳ್ಳಬಹುದು.
• ನಿಮ್ಮ ಮಹೀಂದ್ರಾ ಕಾರನ್ನು ಪಾರ್ಕ್ ಮಾಡುವಾಗ ಹ್ಯಾಂಡ್ ಬ್ರೇಕ್ ಬಳಸಿ.
• ನಿಮ್ಮ ವಾಹನವನ್ನು ಓವರ್‌ಲೋಡ್ ಮಾಡಬೇಡಿ. ಏಕೆಂದರೆ ಅದು ವಾಹನದ ಘಟಕಗಳಿಗೆ ಒತ್ತಡ ನೀಡಬಹುದು ಮತ್ತು ಇದರಿಂದಾಗಿ ನಿಮ್ಮ ವಾಹನದ ಇಂಧನ ಮೈಲೇಜ್ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ಮಹೀಂದ್ರಾ ಬ್ಲಾಗ್‌ಗಳನ್ನು ಇತ್ತೀಚಿನದು ಮಹೀಂದ್ರಾ ಇನ್ಶೂರೆನ್ಸ್ ಕುರಿತು ಬ್ಲಾಗ್‌ಗಳು

ಮಹೀಂದ್ರಾ XUV100: ಕಾರ್ಯಕ್ಷಮತೆ ಮತ್ತು ಮೌಲ್ಯದ ಸ್ಟೈಲಿಶ್ ಮಿಶ್ರಣ

ಮಹೀಂದ್ರಾ XUV100: ಕಾರ್ಯಕ್ಷಮತೆ ಮತ್ತು ಮೌಲ್ಯದ ಸ್ಟೈಲಿಶ್ ಮಿಶ್ರಣ

ಪೂರ್ತಿ ಓದಿ
ಸೆಪ್ಟೆಂಬರ್ 21, 2023 ರಂದು ಪ್ರಕಟಿಸಲಾಗಿದೆ
ಮಹೀಂದ್ರಾ ಸ್ಕಾರ್ಪಿಯೋ-N ಹೊಸ ಕಾಂಪ್ಯಾಕ್ಟ್ SUV ಆಗಿದೆ- ಫೀಚರ್‌ಗಳನ್ನು ಪರಿಶೀಲಿಸಿ!

ಮಹೀಂದ್ರಾ ಸ್ಕಾರ್ಪಿಯೋ-N ಹೊಸ ಕಾಂಪ್ಯಾಕ್ಟ್ SUV ಆಗಿದೆ- ಫೀಚರ್‌ಗಳನ್ನು ಪರಿಶೀಲಿಸಿ!

ಪೂರ್ತಿ ಓದಿ
ಸೆಪ್ಟೆಂಬರ್ 16, 2022 ರಂದು ಪ್ರಕಟಿಸಲಾಗಿದೆ
ಮಹೀಂದ್ರಾ ಹೊಂದುವುದು ಹೆಮ್ಮೆಯ ವಿಷಯವಾಗಿದೆ

ಮಹೀಂದ್ರಾ ಹೊಂದುವುದು ಹೆಮ್ಮೆಯ ವಿಷಯವಾಗಿದೆ

ಪೂರ್ತಿ ಓದಿ
ಜೂನ್ 09, 2022 ರಂದು ಪ್ರಕಟಿಸಲಾಗಿದೆ
ಮಹೀಂದ್ರಾ ಕಾರಿನಲ್ಲಿ ಮಾತ್ರ ಕಾಣಸಿಗುವ 8 ಅಂಶಗಳು

ಮಹೀಂದ್ರಾ ಕಾರಿನಲ್ಲಿ ಮಾತ್ರ ಕಾಣಸಿಗುವ 8 ಅಂಶಗಳು

ಪೂರ್ತಿ ಓದಿ
ಮಾರ್ಚ್ 23, 2022 ರಂದು ಪ್ರಕಟಿಸಲಾಗಿದೆ
slider-right
ಸ್ಲೈಡರ್-ಎಡ
ಇನ್ನಷ್ಟು ಬ್ಲಾಗ್‌ಗಳನ್ನು ನೋಡಿ

ಆಗಾಗ ಕೇಳುವ ಪ್ರಶ್ನೆಗಳು ಮಹೀಂದ್ರಾ ಕಾರ್ ಇನ್ಶೂರೆನ್ಸ್


ನೀವು ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ನಿಂದ ಕೆಲವೇ ನಿಮಿಷಗಳಲ್ಲಿ ಮಹೀಂದ್ರಾ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ನವೀಕರಿಸಬಹುದು. ನಮ್ಮ ಕಾರ್ ಇನ್ಶೂರೆನ್ಸ್ ನವೀಕರಣ ಪ್ರಕ್ರಿಯೆ ಸರಳವಾಗಿದೆ. ಪಾಲಿಸಿಯನ್ನು ನಿಮ್ಮ ನೋಂದಾಯಿತ ಇಮೇಲ್ ID ಮತ್ತು ನಿಮ್ಮ ವಾಟ್ಸ್ ಆ್ಯಪ್ ನಂಬರ್‌ಗೆ ಕೂಡ ಕಳುಹಿಸಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಆನ್‌ಲೈನ್‌ನಲ್ಲಿ ಮಹೀಂದ್ರಾ ಕಾರ್ ಇನ್ಶೂರೆನ್ಸ್ ನವೀಕರಿಸಬಹುದು. ನೋಂದಾಯಿತ ಮೊಬೈಲ್ ನಂಬರ್‌ನೊಂದಿಗೆ ನಿಮ್ಮ ಅವಧಿ ಮುಗಿದ ಕಾರ್ ಇನ್ಶೂರೆನ್ಸ್ ಪಾಲಿಸಿಯ ವಿವರಗಳನ್ನು ನಮೂದಿಸಿ, ಆ್ಯಡ್ ಆನ್ ಕವರ್‌ಗಳನ್ನು ಸೇರಿಸಿ/ತೆಗೆದು ಹಾಕಿ ಮತ್ತು ಆನ್ಲೈನ್‌ನಲ್ಲಿ ಪ್ರೀಮಿಯಂ ಪಾವತಿಸುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ನವೀಕರಿಸಲಾದ ಪಾಲಿಸಿಯನ್ನು ನಿಮ್ಮ ನೋಂದಾಯಿತ ಇಮೇಲ್ ID ಮತ್ತು ನಿಮ್ಮ ವಾಟ್ಸ್ ಆ್ಯಪ್ ನಂಬರ್‌ಗೆ ಕಳುಹಿಸಲಾಗುತ್ತದೆ.
ಹೌದು, ನಿಮ್ಮ ಮಹೀಂದ್ರಾ ಕಾರು ಕಳ್ಳತನವಾದರೆ, ನೀವು ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ ನಷ್ಟವನ್ನು ಕ್ಲೈಮ್ ಮಾಡಬಹುದು. ನೀವು ರಿಟರ್ನ್ ಟು ಇನ್ವಾಯ್ಸ್ (RTI) ಆ್ಯಡ್ ಆನ್ ಕವರ್ ಹೊಂದಿದ್ದರೆ, ಕಾರ್ ಕಳ್ಳತನ ಅಥವಾ ಸಂಪೂರ್ಣ ನಷ್ಟದ ಸಂದರ್ಭದಲ್ಲಿ ವಿಮಾದಾತರು ಖರೀದಿ ಇನ್ವಾಯ್ಸ್ ಮೌಲ್ಯವನ್ನು ಪಾವತಿಸುತ್ತಾರೆ. RTI ಆ್ಯಡ್-ಆನ್ ಖರೀದಿಸದಿದ್ದರೆ, ವಿಮಾದಾತರು ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV) ಪಾವತಿಸುತ್ತಾರೆ. ಸವಕಳಿಯನ್ನು ಪರಿಗಣಿಸಲಾಗುವುದರಿಂದ ಈ ಮೊತ್ತವು ಇನ್ವಾಯ್ಸ್ ಮೌಲ್ಯಕ್ಕಿಂತ ಕಡಿಮೆ ಇರುತ್ತದೆ.
ಹೌದು, ನೀವು ಹೊಸ ಕಾರ್ ಇನ್ಶೂರೆನ್ಸ್ ಪಾಲಿಸಿಗೆ NCB ಪ್ರಯೋಜನವನ್ನು ವರ್ಗಾಯಿಸಬಹುದು. ನೋ ಕ್ಲೈಮ್ ಬೋನಸ್ (NCB) ನ ಪ್ರಮುಖ ಪ್ರಯೋಜನವೆಂದರೆ ಅದನ್ನು ಪಾಲಿಸಿದಾರರಿಗೆ ನೀಡಲಾಗುತ್ತದೆಯೇ ಹೊರತು ಕಾರ್‌ಗೆ ಅಲ್ಲ. ಆದ್ದರಿಂದ, ಒಬ್ಬ ವ್ಯಕ್ತಿಯು ಹೊಸ ಕಾರನ್ನು ಖರೀದಿಸಿದರೆ ಅಥವಾ ತನ್ನ ಇನ್ಶೂರೆನ್ಸ್ ಮಾಡಿಸಿದ ಕಾರನ್ನು ಮಾರಾಟ ಮಾಡಿದರೆ, ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಸಮಯಕ್ಕೆ ಸರಿಯಾಗಿ ನವೀಕರಣ ಮಾಡುತ್ತಿರುವವರೆಗೆ NCB ಅವರೊಂದಿಗೆ ಉಳಿಯುತ್ತದೆ. ಇದನ್ನು ಕಾರಿನ ಹೊಸ ಮಾಲೀಕರಿಗೆ ವರ್ಗಾಯಿಸಲಾಗುವುದಿಲ್ಲ. ಆದಾಗ್ಯೂ, ಅದೇ ಪಾಲಿಸಿದಾರರು ತಮ್ಮ ಹೊಸ ಕಾರಿಗೆ ಹೊಸ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದ್ದರೆ, ಅದನ್ನು ಟ್ರಾನ್ಸ್‌ಫರ್ ಮಾಡಬಹುದು.
ಹೌದು, ಮಹೀಂದ್ರಾ ಕಾರ್‌ನ ಎಂಜಿನ್ CC ಅದರ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ. ಕಾರ್ ಇನ್ಶೂರೆನ್ಸ್ ಪಾಲಿಸಿಯ ಥರ್ಡ್ ಪಾರ್ಟಿ ಕವರ್ ಮೇಲೆ ಪಾವತಿಸಲಾದ ಪ್ರೀಮಿಯಂ ನಿಮ್ಮ ಕಾರಿನ ಎಂಜಿನ್ CC ಆಧಾರದ ಮೇಲೆ ಇರುತ್ತದೆ.
ಮಹೀಂದ್ರಾ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ರದ್ದುಗೊಳಿಸಲು, ವಿಮಾದಾತರು ರದ್ದತಿ ಪ್ರಕ್ರಿಯೆಯನ್ನು ಆರಂಭಿಸಲು ಕನಿಷ್ಠ 15 ದಿನಗಳ ನೋಟಿಸ್‌ಗೆ ಆದ್ಯತೆ ನೀಡುತ್ತಾರೆ. ಸಾಮಾನ್ಯವಾಗಿ, ಪಾಲಿಸಿಯನ್ನು ರದ್ದುಗೊಳಿಸುವ ತಮ್ಮ ಉದ್ದೇಶವನ್ನು ತಿಳಿಸುವ ಘೋಷಣಾ ಪತ್ರವನ್ನು ಪಾಲಿಸಿದಾರರು ವಿಮಾದಾತರಿಗೆ ನೀಡಬೇಕಿದೆ. ರದ್ದತಿ ಪ್ರಕ್ರಿಯೆಯನ್ನು ಇಮೇಲ್ ಮೂಲಕವೂ ಮಾಡಬಹುದು. ಪಾಲಿಸಿ ಮಾರ್ಗಸೂಚಿಗಳ ಪ್ರಕಾರ ನೀವು ಅಗತ್ಯ ಹಂತಗಳನ್ನು ಪೂರ್ಣಗೊಳಿಸಿದ ನಂತರ ವಿಮಾದಾತರು ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯ ರದ್ದತಿಯನ್ನು ಅನುಮೋದಿಸುತ್ತಾರೆ. ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಎದುರಾಗದಿರಲು, ರದ್ದುಗೊಂಡ ಕಾರ್ ಇನ್ಶೂರೆನ್ಸ್ ಪಾಲಿಸಿಗೆ ಸಂಬಂಧಿಸಿದ ಎಲ್ಲಾ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ನೋ ಕ್ಲೈಮ್ ಬೋನಸ್ ಯಾವುದಾದರೂ ಇದ್ದರೆ, ಅದನ್ನು ಟ್ರಾನ್ಸ್‌ಫರ್ ಮಾಡಲು ಮರೆಯಬೇಡಿ. ಹೊಸ ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ NCB ರಿಯಾಯಿತಿಯನ್ನು ಪಡೆಯಬಹುದು, ಇದು ಪ್ರೀಮಿಯಂ ಮೊತ್ತವನ್ನು ಕಡಿಮೆ ಮಾಡುತ್ತದೆ.
ಹೌದು, ಆನ್ಲೈನ್‌ನಲ್ಲಿ ಮಹೀಂದ್ರಾ ಕಾರ್ ಇನ್ಶೂರೆನ್ಸ್ ಖರೀದಿಸುವುದು ಸಂಪೂರ್ಣವಾಗಿ ಸುರಕ್ಷಿತ ಮತ್ತು ಅಧಿಕೃತವಾಗಿದೆ. ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಆನ್‌ಲೈನ್‌ನಲ್ಲಿ ಮಹೀಂದ್ರಾ ಕಾರ್ ಇನ್ಶೂರೆನ್ಸ್ ನವೀಕರಿಸಬಹುದು.
ನಿಮ್ಮ ಮಹೀಂದ್ರಾ ಕಾರಿಗೆ ಮಾಡಿದ ಪ್ರತಿಯೊಂದು ಬದಲಾವಣೆ ಅಥವಾ ಮಾರ್ಪಾಡು ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯ ಮೇಲೆ ಪರಿಣಾಮ ಬೀರುತ್ತದೆ. ನೀವು ವಿಮಾದಾತರಿಗೆ ತಿಳಿಸಿದರೆ ನೀವು ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗಬಹುದು. ಆದಾಗ್ಯೂ, ಇನ್ಶೂರೆನ್ಸ್ ಕಂಪನಿಗೆ ಮಾಹಿತಿ ನೀಡದಿದ್ದರೆ ಅದನ್ನು ವಂಚನೆಯೆಂದು ಪರಿಗಣಿಸಲಾಗುತ್ತದೆ ಮತ್ತು ಅದು ನಿಮಗೆ ಸಮಸ್ಯೆಗಳನ್ನು, ವಿಶೇಷವಾಗಿ ಕ್ಲೈಮ್ ಮಾಡುವ ಸಂದರ್ಭದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಬಹುದು.
ಮಹೀಂದ್ರಾ ಕಾರ್ ಇನ್ಶೂರೆನ್ಸ್ ಕ್ಲೈಮ್‌ಗಳಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು: ನೋಂದಣಿ ಪ್ರಮಾಣಪತ್ರ (RC), ಕಾರ್ ಇನ್ಶೂರೆನ್ಸ್ ಪಾಲಿಸಿ ಕಾಪಿ, ವಿಮಾದಾತರ ಮಾನ್ಯ ID ಪುರಾವೆ, ಚಾಲಕರ ಡ್ರೈವಿಂಗ್ ಲೈಸೆನ್ಸ್ ಮತ್ತು ಸರಿಯಾಗಿ ಭರ್ತಿ ಮಾಡಿದ ಕ್ಲೈಮ್ ಫಾರ್ಮ್. ರಿಪೇರಿಗೆ ಸಂಬಂಧಿಸಿದ ಕ್ಲೈಮ್‌ಗಳಿಗಾಗಿ, ನೀವು ನಮ್ಮ ವೆಬ್‌ಸೈಟ್‌ನಲ್ಲಿ ನಮ್ಮ ನೆಟ್ವರ್ಕ್ ಗ್ಯಾರೇಜ್‌ಗಳನ್ನು ಹುಡುಕಬಹುದು ಮತ್ತು ಹತ್ತಿರದ ನೆಟ್ವರ್ಕ್ ಗ್ಯಾರೇಜ್‌ಗೆ ವಾಹನವನ್ನು ಕೊಂಡೊಯ್ಯಬಹುದು. ಎಲ್ಲಾ ಹಾನಿಗಳನ್ನು ನಮ್ಮ ಸರ್ವೇಯರ್ ಮೌಲ್ಯಮಾಪನ ಮಾಡುತ್ತಾರೆ. ಕ್ಲೇಮ್ ಫಾರ್ಮ್‌ ಭರ್ತಿ ಮಾಡಿ ಮತ್ತು ಫಾರ್ಮ್‌ನಲ್ಲಿ ನಮೂದಿಸಿದ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಒದಗಿಸಿ. ಆಸ್ತಿ ಹಾನಿ, ದೈಹಿಕ ಗಾಯ, ಕಳ್ಳತನ ಮತ್ತು ಪ್ರಮುಖ ಹಾನಿಗಳ ಸಂದರ್ಭದಲ್ಲಿ, ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ FIR ಫೈಲ್ ಮಾಡಿ. ಭಾರೀ ಪ್ರಮಾಣದ ಹಾನಿಯಾಗಿದ್ದರೆ, ವಾಹನವನ್ನು ಸ್ಥಳಾಂತರಿಸುವ ಮುಂಚೆ ಆಕ್ಸಿಡೆಂಟ್ ಅನ್ನು ವರದಿ ಮಾಡಬಹುದು. ಆಗ ವಿಮಾದಾತರು ಹಾನಿಯ ಸ್ಥಳದ ತಪಾಸಣೆಗೆ ವ್ಯವಸ್ಥೆ ಮಾಡಬಹುದು.