ಸಧ್ಯದಲ್ಲಿ ಆನ್-ರೋಡ್ನಲ್ಲಿರುವ ಇತರ ಕೆಲವು ಟಾಟಾ ಕಾರುಗಳು ಮತ್ತು ಅವು ಸೇರುವ ವಿಭಾಗಗಳ ತ್ವರಿತ ನೋಟ ಇಲ್ಲಿದೆ.
ಟಾಟಾ ಕಾರ್ ಮಾಡೆಲ್‌ಗಳು | ಕಾರ್ ಸೆಗ್ಮೆಂಟ್ |
ಟಾಟಾ ಸಫಾರಿ | ಎಸ್ಯುವಿ |
ಟಾಟಾ ನೆಕ್ಸಾನ್ ಇವಿ (ಎಲೆಕ್ಟ್ರಿಕ್ ವಾಹನ) | ಎಸ್ಯುವಿ |
ನೀವು ಸುರಕ್ಷಿತ ಮತ್ತು ಎಚ್ಚರಿಕೆಯುಳ್ಳ ಚಾಲಕರಾಗಿದ್ದೀರಿ ಎಂಬುದರಲ್ಲಿ ನಮಗೆ ಸಂದೇಹವಿಲ್ಲ. ಆದರೆ ಎಲ್ಲಾ ಮುನ್ನೆಚ್ಚರಿಕೆಗಳು ಮತ್ತು ಕಾಳಜಿ ವಹಿಸಿದ ಹೊರತಾಗಿಯೂ ಆಕ್ಸಿಡೆಂಟ್ ಮತ್ತು ಅನಿರೀಕ್ಷಿತ ದುರ್ಘಟನೆಗಳಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ. ನೀವು ನಿರೀಕ್ಷೆಯನ್ನೇ ಮಾಡದಿರುವಾಗ ಅವು ಸಂಭವಿಸಬಹುದು, ಮತ್ತು ನಿಮ್ಮ ಕಾರಿಗೆ ಶಾಶ್ವತ ಹಾನಿ ಉಂಟು ಮಾಡಬಹುದು. ಅಂತಹ ಘಟನೆಗಳು ನಿಮ್ಮ ನಿಯಂತ್ರಣದಲ್ಲಿರದಿದ್ದರೂ, ಇನ್ನೊಂದು ಪ್ರಮುಖ ವಿಷಯ ನಿಮ್ಮ ಕೈಯಲ್ಲೇ ಇದೆ. ಕಾರ್ ಇನ್ಶೂರೆನ್ಸ್ ಪ್ಲಾನ್‍ನೊಂದಿಗೆ ನಿಮ್ಮ ವಾಹನವನ್ನು ಸುರಕ್ಷಿತವಾಗಿರಿಸಬಹುದು.
ನಿಮ್ಮ ಟಾಟಾ ಕಾರ್‌ಗೆ ಕಾರ್ ಇನ್ಶೂರೆನ್ಸ್ ಮುಖ್ಯವಾಗಿದೆ ಯಾಕೆ ಬೇಕೆಂದರೆ ಇದು ನಿಮಗೆ ಮತ್ತು ನಿಮ್ಮ ವಾಹನಕ್ಕೆ ಹೆಚ್ಚುವರಿ ಸುರಕ್ಷತೆಯ ಕವಚವನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ಥರ್ಡ್ ಪಾರ್ಟಿ ಇನ್ಶೂರೆನ್ಸ್ ಎಂಬ ಒಂದು ಬಗೆಯ ಕಾರ್ ಇನ್ಶೂರೆನ್ಸ್ ಇದೆ. ನಿರ್ದಿಷ್ಟವಾಗಿ ಹೇಳುವುದಾದರೆ - ಇದು ಭಾರತೀಯ ರಸ್ತೆಗಳಲ್ಲಿ ಚಾಲನೆ ಮಾಡಲು ಅಗತ್ಯವಿರುವ ಕಾನೂನು ಅವಶ್ಯಕತೆಯಾಗಿದೆ. ಮೋಟಾರ್ ವಾಹನ ಕಾಯ್ದೆಯು ಭಾರತದಲ್ಲಿ ಚಾಲನೆ ಮಾಡುವ ಎಲ್ಲಾ ವಾಹನಗಳಿಗೆ ಕನಿಷ್ಠ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕವರ್ ಹೊಂದಿರುವುದನ್ನು ಕಡ್ಡಾಯಗೊಳಿಸಿದೆ. ಆದ್ದರಿಂದ, ನಿಮ್ಮ ಟಾಟಾ ಕಾರನ್ನು ಇನ್ಶೂರ್ ಮಾಡಿಸುವುದು ಕೇವಲ ಒಂದು ಆಯ್ಕೆ ಮಾತ್ರವಲ್ಲದೆ ಕಾರು ಮಾಲೀಕತ್ವದ ಅನುಭವದ ಕಡ್ಡಾಯ ಭಾಗವೂ ಆಗಿದೆ.
ಕಾರ್ ಇನ್ಶೂರೆನ್ಸ್ ಏಕೆ ಮುಖ್ಯವಾಗಿದೆ ಎಂಬುದಕ್ಕೆ ಕೆಲವು ಇತರ ಕಾರಣಗಳು ಇಲ್ಲಿವೆ:
ಆಕ್ಸಿಡೆಂಟ್ ಅಥವಾ ಅನಿರೀಕ್ಷಿತ ದುರ್ಘಟನೆ ಸಂಭವಿಸಿದರೆ, ನಿಮ್ಮ ಟಾಟಾ ಕಾರಿಗೆ ಹಾನಿಯಾಗುವುದು ಮಾತ್ರವಲ್ಲದೆ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೂ ಕೂಡ ಹಾನಿ ಅಥವಾ ನಷ್ಟಗಳನ್ನು ಉಂಟುಮಾಡಬಹುದು. ಇದು ಥರ್ಡ್ ಪಾರ್ಟಿಗೆ ನೀವು ಹೊಣೆಗಾರರಾಗಲು ಕಾರಣವಾಗುತ್ತದೆ. ನಿಮ್ಮ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಒಂದು ಉಪಯುಕ್ತ ಸೇರ್ಪಡೆ ಎಂದು ಸಾಬೀತಾಗುವುದು ಇಲ್ಲೇ.. ಆಕ್ಸಿಡೆಂಟ್ ಆದಾಗ, ಇತರ ವ್ಯಕ್ತಿಯಿಂದ ಮಾಡಲಾದ ಕ್ಲೇಮ್‌ಗಳನ್ನು ಈ ಪಾಲಿಸಿ ಅಡಿಯಲ್ಲಿ ಕವರ್ ಮಾಡಬಹುದು, ಹೀಗಾಗಿ ನೀವು ಎದುರಿಸುತ್ತಿರುವ ಹಣಕಾಸಿನ ಹೊರೆಯನ್ನು ಇದು ಕಡಿಮೆ ಮಾಡುತ್ತದೆ.
ಆಕ್ಸಿಡೆಂಟ್ಗಳು, ನೈಸರ್ಗಿಕ ವಿಪತ್ತುಗಳು ಅಥವಾ ನಿಮ್ಮ ಕಾರಿನ ಕಳ್ಳತನವೂ ಕೂಡ ಅನಿರೀಕ್ಷಿತವಾಗಿ ಸಂಭವಿಸಬಹುದು. ಈ ಘಟನೆಗಳು ನೀವು ಭರಿಸಲು ಸಿದ್ಧವಾಗಿರದೆ ಇರಬಹುದಾದ ದೊಡ್ಡಮಟ್ಟದ ವೆಚ್ಚಗಳಿಗೆ ಕಾರಣವಾಗಬಹುದು. ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯು ಅಂತಹ ಸಂದರ್ಭಗಳಲ್ಲಿ ತುಂಬಾ ಉಪಯುಕ್ತವಾಗುತ್ತದೆ. ಈ ರೀತಿಯ ಸಮಗ್ರ ಕವರ್ ದೋಷಯುಕ್ತ ಭಾಗಗಳ ರಿಪೇರಿ ಅಥವಾ ಬದಲಿಸುವಿಕೆಯ ವೆಚ್ಚ, ಬ್ರೇಕ್‌ಡೌನ್‌ಗಳಿಗೆ ತುರ್ತು ಸಹಾಯ , ಮತ್ತು ನಿಮ್ಮ ಟಾಟಾ ಕಾರು ರಿಪೇರಿಗಾಗಿ ಹೋದಾಗ, ಪರ್ಯಾಯ ಸಾರಿಗೆಗೆ ಮಾಡುವ ಖರ್ಚುಗಳನ್ನೂ ಒಳಗೊಳ್ಳುತ್ತದೆ.
ಭಾರತದ ರಸ್ತೆಗಳಿಗೆ ಈಗಷ್ಟೇ ಹೊಂದಿಕೊಳ್ಳುತ್ತಿರುವ ಹೊಸ ಚಾಲಕರು ನೀವಾಗಿದ್ದರೆ, ಕನಿಷ್ಠ ಥರ್ಡ್ ಪಾರ್ಟಿ ಕವರ್‍ನಿಂದ ಇನ್ಶೂರ್ ಮಾಡಿಸಿಕೊಂಡಿರಲೇಬೇಕು ಎಂಬುದನ್ನು ತಿಳಿಯಲು ಇದು ಸಹಾಯ ಮಾಡುತ್ತದೆ. ಇದು ರಸ್ತೆಗಳ ಮೇಲೆ ನೀವು ಯಾವುದೇ ಚಿಂತೆ ಇಲ್ಲದೆ ಚಾಲನೆ ಮಾಡಲು ಸಹಕಾರಿಯಾಗುತ್ತದೆ. ಮತ್ತು ನೀವು ಅನುಭವಿ ಚಾಲಕರಾಗಿದ್ದರೆ, ಈಗಾಗಲೇ ಸಾಕಷ್ಟು ಆತ್ಮವಿಶ್ವಾಸ ಹೊಂದಿರುತ್ತೀರಿ. ಯಾವುದೇ ಘಟನೆಯ ವಿರುದ್ಧ ನೀವು ಹೆಚ್ಚುವರಿ ಇನ್ಶೂರೆನ್ಸ್ ಹೊಂದಿರುವಿರಿ ಎಂಬುದನ್ನು ತಿಳಿದಿರುವುದು ನಿಮ್ಮ ಟಾಟಾ ಕಾರ್ ಚಾಲನೆಯ ಅನುಭವವನ್ನು ಇನ್ನಷ್ಟು ಆಹ್ಲಾದಕರವಾಗಿಸುತ್ತದೆ.
ನೀವು ಆಲ್ ರೌಂಡ್ ಪ್ರೊಟೆಕ್ಷನ್‍ಗಾಗಿ ನೋಡುತ್ತಿದ್ದು, ಎಲ್ಲಿಂದ ಆರಂಭಿಸುವುದು ಎಂಬುದು ತಿಳಿಯುತ್ತಿಲ್ಲವಾದರೆ, ನೀವು ಹುಡುಕುತ್ತಿರುವುದು ಎಚ್ಡಿಎಫ್ಸಿ ಎರ್ಗೋ ಸಿಂಗಲ್ ಇಯರ್ ಕಾಂಪ್ರಹೆನ್ಸಿವ್ ಕವರ್ ಆಗಿರಬಹುದು. ಈ ಪ್ಲಾನ್ ನಿಮ್ಮ ಕಾರಿಗೆ ಆದ ಹಾನಿಗಳ ವಿರುದ್ಧ ಹಾಗೆಯೇ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಸ್ವತ್ತಿಗೆ ಆದ ಹಾನಿಗಳಿಗೂ ಕವರ್ ಒದಗಿಸುತ್ತದೆ. ಹೆಚ್ಚುವರಿ ರಕ್ಷಣೆಗಾಗಿ ನಿಮ್ಮ ಆಯ್ಕೆಯ ಆ್ಯಡ್-ಆನ್‌ಗಳೊಂದಿಗೆ ನೀವು ಈ ಕವರ್ ಅನ್ನು ಇನ್ನಷ್ಟು ಕಸ್ಟಮೈಜ್ ಮಾಡಬಹುದು.
ಅಪಘಾತ
ವೈಯಕ್ತಿಕ ಅಪಘಾತ
ನೈಸರ್ಗಿಕ ವಿಕೋಪಗಳು
ಥರ್ಡ್-ಪಾರ್ಟಿ ಹೊಣೆಗಾರಿಕೆ
ಆ್ಯಡ್-ಆನ್‌ಗಳ ಆಯ್ಕೆ
ಕಳ್ಳತನ
ಥರ್ಡ್ ಪಾರ್ಟಿ ಕವರ್ ಮೋಟಾರ್ ವಾಹನ ಕಾಯ್ದೆ, 1988 ರಿಂದ ವಿಧಿಸಲಾದ ಕಡ್ಡಾಯ ಕವರ್ ಆಗಿದೆ. ಥರ್ಡ್ ಪಾರ್ಟಿ ಕವರ್ ಅಡಿಯಲ್ಲಿ, ಥರ್ಡ್ ಪಾರ್ಟಿ ಹಾನಿ, ಗಾಯ ಅಥವಾ ನಷ್ಟದಿಂದ ಉಂಟಾಗುವ ಹೊಣೆಗಾರಿಕೆಗಳ ವಿರುದ್ಧದ ರಕ್ಷಣೆಯೊಂದಿಗೆ ನಾವು ನಿಮಗೆ ವೈಯಕ್ತಿಕ ಆಕ್ಸಿಡೆಂಟ್ ಕವರೇಜ್ ಅನ್ನೂ ಒದಗಿಸುತ್ತೇವೆ. ನಿಮ್ಮ ಟಾಟಾ ಕಾರನ್ನು ನೀವು ಆಗೊಮ್ಮೆ ಈಗೊಮ್ಮೆ ಮಾತ್ರ ರಸ್ತೆಗಿಳಿಸುವಿರಾದರೆ, ನಿಮಗೆ ಬೇಸಿಕ್ ಕವರ್ ಸಾಕಾಗುತ್ತದೆ. ಈ ರೀತಿ, ಇನ್ಶೂರೆನ್ಸ್ ಮಾಡಿಸದೇ ಇರುವುದಕ್ಕಾಗಿ ಯಾವುದೇ ದಂಡವನ್ನು ಪಾವತಿಸುವ ತೊಂದರೆಯನ್ನು ತಪ್ಪಿಸಿದಂತಾಗುತ್ತದೆ.
ವೈಯಕ್ತಿಕ ಅಪಘಾತ
ಥರ್ಡ್-ಪಾರ್ಟಿ ಆಸ್ತಿ ಹಾನಿ
ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ
ಥರ್ಡ್ ಪಾರ್ಟಿ ಕವರ್ ನೀವು ಇತರರಿಗೆ ನೀಡಬೇಕಾದ ಹೊಣೆಗಾರಿಕೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಆದರೆ ಆಕ್ಸಿಡೆಂಟ್ ಆದಾಗ ನಿಮ್ಮ ಹಣಕಾಸಿನ ನಷ್ಟಗಳನ್ನು ಯಾರು ನೋಡಿಕೊಳ್ಳುತ್ತಾರೆ? ನಿಮಗೆ ಅಗತ್ಯವಿರುವುದು ಸ್ಟ್ಯಾಂಡ್‌ಅಲೋನ್ ಓನ್ ಡ್ಯಾಮೇಜ್ ಕವರ್ ಎಂಬುದು ಸಾಬೀತಾಗುವುದು ಇಲ್ಲೇ. ಆಕ್ಸಿಡೆಂಟ್‍ಗಳು, ನೈಸರ್ಗಿಕ ವಿಕೋಪಗಳು, ಬೆಂಕಿ ಮತ್ತು ಕಳ್ಳತನದಿಂದ ನಿಮ್ಮ ಕಾರಿಗೆ ಉಂಟಾಗುವ ಹಾನಿಗಳನ್ನು ರಿಪೇರಿ ಮಾಡುವ ವೆಚ್ಚವನ್ನು ಇದು ಕವರ್ ಮಾಡುತ್ತದೆ. ನಿಮಗೆ ಹೆಚ್ಚುವರಿ ಕವರ್ ಬೇಕಿದ್ದಲ್ಲಿ, ಕಡ್ಡಾಯವಾಗಿರುವ ಥರ್ಡ್ ಪಾರ್ಟಿ ಕವರ್ ಜೊತೆಗೆ ಈ ಐಚ್ಛಿಕ ಕವರ್ ಆಯ್ಕೆ ಮಾಡಿಕೊಳ್ಳಿ.
ಅಪಘಾತ
ನೈಸರ್ಗಿಕ ವಿಕೋಪಗಳು
ಬೆಂಕಿ
ಆ್ಯಡ್-ಆನ್‌ಗಳ ಆಯ್ಕೆ
ಕಳ್ಳತನ
ನೀವು ಈಗಷ್ಟೇ ಹೊಸ ಟಾಟಾ ಕಾರನ್ನು ಖರೀದಿಸಿದ್ದರೆ, ನಾವು ನಿಮ್ಮಷ್ಟೇ ರೋಮಾಂಚಿತರಾಗಿದ್ದೇವೆ! ನಿಮ್ಮ ಹೊಸ ವಾಹನದ ಬಗ್ಗೆ ನಿಮಗೆ ಹೆಚ್ಚಿನ ಕಾಳಜಿ ಇರುವುದರಲ್ಲಿ ಸಂದೇಹವೇ ಇಲ್ಲ. ಹೊಚ್ಚ ಹೊಸ ಕಾರುಗಳಿಗೆ ನಮ್ಮ ಕವರ್ ಆಯ್ಕೆ ಮಾಡುವ ಮೂಲಕ ಅದರ ಸುರಕ್ಷತೆಯನ್ನು ಏಕೆ ಹೆಚ್ಚಿಸಬಾರದು? ಈ ಕವರ್ ಆಕ್ಸಿಡೆಂಟ್‍ಗಳು, ನೈಸರ್ಗಿಕ ವಿಕೋಪಗಳು ಮತ್ತು ಕಳ್ಳತನದಿಂದ ನಿಮ್ಮ ಕಾರಿಗೆ ಉಂಟಾಗುವ ಹಾನಿಗಳ ವಿರುದ್ಧ 1-ವರ್ಷದ ಕವರೇಜ್ ಒಳಗೊಂಡಿದೆ. ಇದು ನಿಮ್ಮ ಟಾಟಾ ಕಾರಿನಿಂದ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಉಂಟಾಗುವ ಯಾವುದೇ ಹಾನಿಗಳ ವಿರುದ್ಧ 3 ವರ್ಷದ ಕವರ್ ಅನ್ನೂ ನೀಡುತ್ತದೆ.
ಅಪಘಾತ
ನೈಸರ್ಗಿಕ ವಿಕೋಪಗಳು
ವೈಯಕ್ತಿಕ ಆಕ್ಸಿಡೆಂಟ್
ಥರ್ಡ್-ಪಾರ್ಟಿ ಹೊಣೆಗಾರಿಕೆ
ಆ್ಯಡ್-ಆನ್‌ಗಳ ಆಯ್ಕೆ
ಕಳ್ಳತನ
ಬೆಂಕಿ ಅಥವಾ ಸ್ಫೋಟದಿಂದ ನಿಮ್ಮ ಟಾಟಾ ಕಾರು ಸುಟ್ಟು ಹೋಗಬಹುದು ಅಥವಾ ಹಾನಿಗೆ ಒಳಗಾಗಬಹುದು. ಆದರೆ ಅಂತಹ ಆಕ್ಸಿಡೆಂಟ್‌ನಿಂದ ನಿಮ್ಮ ಹಣ ಪೋಲಾಗದಂತೆ ನಾವು ನೋಡಿಕೊಳ್ಳುತ್ತೇವೆ.
ನೈಸರ್ಗಿಕ ವಿಕೋಪಗಳು ನಿಮ್ಮ ಕಾರಿಗೆ ಅನಿರೀಕ್ಷಿತ ಹಾನಿ ಉಂಟುಮಾಡಬಹುದು. ಆದರೆ ನಿಮ್ಮ ಟಾಟಾ ಕಾರ್ ಇನ್ಶೂರೆನ್ಸ್ ಪ್ಲಾನ್‍ನೊಂದಿಗೆ ಅಂತಹ ಘಟನೆಯು ನಿಮ್ಮ ಹಣಕಾಸಿಗೆ ಹೊರೆಯಾಗುವುದಿಲ್ಲ ಎಂಬುದರ ಬಗ್ಗೆ ನೀವು ಖಚಿತರಾಗಿರಬಹುದು.
ಕಾರು ಕಳುವಾಗುವುದು ಅತಿದೊಡ್ಡ ಆರ್ಥಿಕ ನಷ್ಟ. ಆದರೆ ನಮ್ಮ ಇನ್ಶೂರೆನ್ಸ್ ಪಾಲಿಸಿಯು ಅಂತಹ ದುರ್ಘಟನೆ ನಡೆದಾಗ ನಿಮ್ಮ ಹಣಕಾಸು ಭದ್ರವಾಗಿರುವಂತೆ ನೋಡಿಕೊಳ್ಳುತ್ತದೆ.
ಕಾರ್ ಆಕ್ಸಿಡೆಂಟ್‍ಗಳು ನಿಮ್ಮ ಕಾರಿಗೆ ಹೇಳತೀರದಷ್ಟು ಹಾನಿಗಳನ್ನು ಉಂಟುಮಾಡಬಹುದು. ಆದರೆ ಹಾನಿಯು ಎಷ್ಟೇ ವಿಪರೀತವಾಗಿರಲಿ, ನಮ್ಮ ಟಾಟಾ ಕಾರ್ ಇನ್ಶೂರೆನ್ಸ್ ಪಾಲಿಸಿಯು ಅದನ್ನು ನೋಡಿಕೊಳ್ಳುತ್ತದೆ.
ಆಕ್ಸಿಡೆಂಟ್ನಿಂದ ನಿಮ್ಮ ಕಾರಿಗೆ ಹಾನಿಯಾಗುವುದಷ್ಟೇ ಅಲ್ಲ, ನಿಮಗೂ ಗಾಯವಾಗಬಹುದು. ಟಾಟಾ ಕಾರ್ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಗಾಯಗಳನ್ನೂ ನೋಡಿಕೊಳ್ಳುತ್ತದೆ. ಗಾಯಗಳಾದಾಗ ನಿಮ್ಮ ಇನ್ಶೂರೆನ್ಸ್ ಪ್ಲಾನ್ ಯಾವುದೇ ವೈದ್ಯಕೀಯ ಚಿಕಿತ್ಸೆಗಳ ಶುಲ್ಕಗಳನ್ನು ಕವರ್ ಮಾಡುತ್ತದೆ.
ನಿಮ್ಮ ಕಾರನ್ನು ಒಳಗೊಂಡಿರುವ ಅಪಘಾತವು ಥರ್ಡ್ ಪಾರ್ಟಿಗೆ ಹಾನಿಯನ್ನು ಉಂಟುಮಾಡಬಹುದು, ಅದು ವ್ಯಕ್ತಿ ಅಥವಾ ಆಸ್ತಿಯಾಗಿರಬಹುದು. ಅಂತಹ ಸಂದರ್ಭಗಳಲ್ಲಿ, ಆ ಹೊಣೆಗಾರಿಕೆಗಳನ್ನು ಪೂರೈಸಲು ಪಾಕೆಟ್‌ನಿಂದ ಪಾವತಿಸುವ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ನಮ್ಮ ಕಾರ್ ಇನ್ಶೂರೆನ್ಸ್ ಅದನ್ನು ಕವರ್ ಮಾಡುತ್ತದೆ.
ಈ ಕೆಳಗಿನ ಆ್ಯಡ್-ಆನ್‌ಗಳೊಂದಿಗೆ ನಿಮ್ಮ ಟಾಟಾ ಕಾರಿಗೆ ನಮ್ಮ ಕಾರ್ ಇನ್ಶೂರೆನ್ಸ್ ಒದಗಿಸುವ ರಕ್ಷಣೆಯನ್ನು ಹೆಚ್ಚಿಸಬಹುದು ಮತ್ತು ಕವರ್ ಅನ್ನು ಕಸ್ಟಮೈಜ್ ಮಾಡಿಕೊಳ್ಳಬಹುದು.
ಥರ್ಡ್ ಪಾರ್ಟಿ (TP) ಪ್ಲಾನ್: ಅಪಘಾತದ ಸಂದರ್ಭದಲ್ಲಿ, ನಿಮ್ಮ ಟಾಟಾ ಕಾರು ಥರ್ಡ್ ಪಾರ್ಟಿಗೆ ಯಾವುದೇ ಹಾನಿಗಳನ್ನು ಉಂಟುಮಾಡಿದರೆ, ಅನಿರೀಕ್ಷಿತ ಹೊಣೆಗಾರಿಕೆಗಳನ್ನು ಎದುರಿಸುತ್ತಿರುವುದನ್ನು ನೀವು ಕಂಡುಕೊಳ್ಳಬಹುದು. ಥರ್ಡ್ ಪಾರ್ಟಿ (TP) ಪ್ಲಾನ್ ಅಪಘಾತದಿಂದ ಉಂಟಾಗುವ ಅಂತಹ ಹಣಕಾಸಿನ ಮತ್ತು ಕಾನೂನು ಹೊಣೆಗಾರಿಕೆಗಳ ವಿರುದ್ಧ ನಿಮ್ಮನ್ನು ರಕ್ಷಿಸುತ್ತದೆ. ನಿಮ್ಮ ಟಾಟಾ ಕಾರಿಗೆ ಥರ್ಡ್ ಪಾರ್ಟಿ ಪ್ಲಾನ್ ಖರೀದಿಸುವ ಮೂಲಕ, ನೀವು ದಂಡಗಳನ್ನು ತಪ್ಪಿಸಬಹುದು ಮತ್ತು ಯಾವುದೇ ಥರ್ಡ್ ಪಾರ್ಟಿ ಕ್ಲೈಮ್‌ಗಳ ವಿರುದ್ಧ ನಿಮ್ಮ ಹಣಕಾಸನ್ನು ರಕ್ಷಿಸಬಹುದು. ಎಲ್ಲದಕ್ಕಿಂತ ಹೆಚ್ಚು, ಇದು ಪ್ರತಿಯೊಬ್ಬರಿಗೂ ಸಮಂಜಸವಾದ ಬೆಲೆಯ ಪಾಲಿಸಿಯಾಗಿದೆ. ಹೇಗೆ ಎಂದು ಯೋಚಿಸುತ್ತಿದ್ದೀರಾ? ಪ್ರತಿ ವಾಹನದ ಕ್ಯೂಬಿಕ್ ಸಾಮರ್ಥ್ಯದ ಆಧಾರದ ಮೇಲೆ ಥರ್ಡ್ ಪಾರ್ಟಿ ಪ್ಲಾನ್‌ಗಳಿಗೆ IRDAI ಪ್ರೀಮಿಯಂ ಅನ್ನು ಪೂರ್ವನಿರ್ಧರಿಸಿದೆ. ಇದು ಎಲ್ಲಾ ಟಾಟಾ ಕಾರ್ ಮಾಲೀಕರಿಗೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು ಕೈಗೆಟಕುವಂತೆ ಮಾಡುತ್ತದೆ.
ಓನ್ ಡ್ಯಾಮೇಜ್ (OD) ಇನ್ಶೂರೆನ್ಸ್: ನಿಮ್ಮ ಟಾಟಾ ಕಾರಿಗೆ ಓನ್ ಡ್ಯಾಮೇಜ್ (OD) ಇನ್ಶೂರೆನ್ಸ್ ಐಚ್ಛಿಕವಾಗಿದೆ ಆದರೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ಆಕ್ಸಿಡೆಂಟ್ ಆದಾಗ ಅಥವಾ ಭೂಕಂಪ, ಬೆಂಕಿ ಅಥವಾ ಬಿರುಗಾಳಿಯಂತಹ ನೈಸರ್ಗಿಕ ವಿಕೋಪಗಳ ಕಾರಣದಿಂದ ನಿಮ್ಮ ಟಾಟಾ ಕಾರು ಹಾನಿಗೊಳಗಾದರೆ, ಅಂತಹ ಹಾನಿಗಳನ್ನು ಸರಿಪಡಿಸುವಲ್ಲಿ ಭಾರಿ ವೆಚ್ಚಗಳು ತಗುಲಬಹುದು. ಓನ್ ಡ್ಯಾಮೇಜ್ ಇನ್ಶೂರೆನ್ಸ್ ಈ ವೆಚ್ಚಗಳನ್ನು ಕವರ್ ಮಾಡುತ್ತದೆ.
ಥರ್ಡ್ ಪಾರ್ಟಿ ಪ್ರೀಮಿಯಂನಂತಲ್ಲದೆ, ನಿಮ್ಮ ಟಾಟಾ ಕಾರಿಗೆ ಸ್ವಂತ ಹಾನಿ ಇನ್ಶೂರೆನ್ಸ್ ಪ್ರೀಮಿಯಂ ಬದಲಾಗುತ್ತದೆ. ಏಕೆ ಎಂದು ಯೋಚಿಸುತ್ತಿದ್ದೀರಾ? ನಾವು ವಿವರಿಸುತ್ತೇವೆ . ನಿಮ್ಮ ಟಾಟಾ ಕಾರಿಗೆ
ನಿಮ್ಮ ಟಾಟಾ ಕಾರಿಗೆ ಕಾರ್ ಇನ್ಶೂರೆನ್ಸ್ ಖರೀದಿಸುವುದು ಸುಲಭ. ಅದು ಕೆಲವು ಸರಳ ಮತ್ತು ತ್ವರಿತ ಹಂತಗಳನ್ನು ಒಳಗೊಂಡಿದೆ. ನೀವು ಏನು ಮಾಡಬೇಕು ಎಂಬುದನ್ನು ನೋಡಿ.
ಈ ಕೆಳಗಿನ ಹಂತಗಳನ್ನು ನೋಡುವ ಮೂಲಕ ನೀವು ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ನಿಂದ ಯಾವುದೇ ತೊಂದರೆಯಿಲ್ಲದೆ ಆನ್‌ಲೈನ್‌ನಲ್ಲಿ ಟಾಟಾ ಕಾರ್ ಇನ್ಶೂರೆನ್ಸ್ ಖರೀದಿಸಬಹುದು:
1. ಎಚ್‌ಡಿಎಫ್‌ಸಿ ಎರ್ಗೋದ ವೆಬ್‌ಸೈಟ್ ಹೋಮ್ ಪೇಜಿಗೆ ಭೇಟಿ ನೀಡಿ ಮತ್ತು ಕಾರ್ ಇನ್ಶೂರೆನ್ಸ್ ಐಕಾನ್ ಮೇಲೆ ಕ್ಲಿಕ್ ಮಾಡಿ.
2.ಒಮ್ಮೆ ನೀವು ಕಾರ್ ಇನ್ಶೂರೆನ್ಸ್ ಪುಟಕ್ಕೆ ಹೋದ ನಂತರ, ನಿಮ್ಮ ಟಾಟಾ ಕಾರಿನ ನೋಂದಣಿ ಸಂಖ್ಯೆ, ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸ ಸೇರಿದಂತೆ ವಿವರಗಳನ್ನು ಭರ್ತಿ ಮಾಡಿ.
3. ಸಮಗ್ರ ಕವರ್, ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕವರ್ ಮತ್ತು ಥರ್ಡ್ ಪಾರ್ಟಿ ಕವರ್‌ನಿಂದ ಪ್ಲಾನ್ ಆಯ್ಕೆಮಾಡಿ. ನೀವು ಸಮಗ್ರ ಅಥವಾ ಸ್ವಂತ ಹಾನಿ ಪ್ಲಾನ್ ಆಯ್ಕೆ ಮಾಡಿದರೆ, ಶೂನ್ಯ ಸವಕಳಿ, ತುರ್ತು ರಸ್ತೆಬದಿಯ ಸಹಾಯ ಮುಂತಾದ ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆ ಮಾಡುವ ಮೂಲಕ ನೀವು ಕವರೇಜನ್ನು ವಿಸ್ತರಿಸಬಹುದು.
4. ಪ್ಲಾನ್ ಆಯ್ಕೆ ಮಾಡಿದ ನಂತರ, ನೀವು ಸಲ್ಲಿಸಿ ಬಟನ್ ಮೇಲೆ ಕ್ಲಿಕ್ ಮಾಡಬಹುದು ಮತ್ತು ಕೋಟ್ ನೋಡಬಹುದು.
5. ಆನ್ಲೈನ್ ಪಾವತಿ ಮೂಲಕ ಪ್ರೀಮಿಯಂ ಮೊತ್ತವನ್ನು ಪಾವತಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಪಾಲಿಸಿಯೊಂದಿಗೆ ದೃಢೀಕರಣದ ಮೇಲ್ ಅನ್ನು ನಿಮ್ಮ ನೋಂದಾಯಿತ ಇಮೇಲ್ ID ಗೆ ಮೇಲ್ ಮಾಡಲಾಗುತ್ತದೆ.
ಟಾಟಾ ಕಾರ್ ಇನ್ಶೂರೆನ್ಸ್ ಅಡಿಯಲ್ಲಿ ಕ್ಲೈಮ್ ಫೈಲ್ ಮಾಡಲು ನೀವು ನೋಡಬೇಕಾದ ಹಂತಗಳು ಈ ರೀತಿಯಾಗಿವೆ:
• ಆಕಸ್ಮಿಕ/ಆಸ್ತಿ ಹಾನಿ, ದೈಹಿಕ ಗಾಯ, ಕಳ್ಳತನ ಮತ್ತು ಪ್ರಮುಖ ಹಾನಿಗಳ ಸಂದರ್ಭದಲ್ಲಿ ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ FIR ಅನ್ನು ಕಡ್ಡಾಯವಾಗಿ ಫೈಲ್ ಮಾಡಿ. ಭಾರೀ ಪ್ರಮಾಣದ ಹಾನಿಯಾಗಿದ್ದರೆ, ವಾಹನವನ್ನು ಸ್ಥಳಾಂತರಿಸುವ ಮುಂಚೆ ಆಕ್ಸಿಡೆಂಟ್ ಅನ್ನು ವರದಿ ಮಾಡಬಹುದು. ಆಗ ವಿಮಾದಾತರು ಹಾನಿಯ ಸ್ಥಳದ ತಪಾಸಣೆಗೆ ವ್ಯವಸ್ಥೆ ಮಾಡಬಹುದು.
• ನಮ್ಮ ವೆಬ್‌ಸೈಟ್‌ನಲ್ಲಿ 8700+ ನಗದುರಹಿತ ಗ್ಯಾರೇಜ್‌ಗಳ ನಮ್ಮ ವ್ಯಾಪಕ ನೆಟ್ವರ್ಕ್ ಹುಡುಕಿ.
• ನಿಮ್ಮ ವಾಹನವನ್ನು ಡ್ರೈವ್ ಮಾಡಿ ಅಥವಾ ಹತ್ತಿರದ ನೆಟ್ವರ್ಕ್ ಗ್ಯಾರೇಜ್‌ಗೆ ಟೋವ್ ಮಾಡಿಸಿ.
• ನಮ್ಮ ಸರ್ವೇಯರ್ ಎಲ್ಲಾ ಹಾನಿಗಳು / ನಷ್ಟಗಳನ್ನು ಮೌಲ್ಯಮಾಪನ ಮಾಡುತ್ತಾರೆ.
• ಕ್ಲೇಮ್ ಫಾರ್ಮ್ ಭರ್ತಿ ಮಾಡಿ ಮತ್ತು ಫಾರ್ಮ್‌ನಲ್ಲಿ ನಮೂದಿಸಿದ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಒದಗಿಸಿ.
• ಕ್ಲೇಮ್‌ನ ಪ್ರತಿ ಹಂತದಲ್ಲೂ SMS/ಇಮೇಲ್‌ಗಳ ಮೂಲಕ ನಿಮಗೆ ಅಪ್ಡೇಟ್ ಸಿಗುತ್ತದೆ.
• ವಾಹನವು ಸಿದ್ಧವಾದ ನಂತರ, ಕಡ್ಡಾಯ ಕಡಿತ, ಸವಕಳಿ ಇತ್ಯಾದಿಗಳನ್ನು ಒಳಗೊಂಡಿರುವ ನಿಮ್ಮ ಭಾಗದ ಕ್ಲೈಮ್ ಅನ್ನು ಗ್ಯಾರೇಜ್‍ಗೆ ಪಾವತಿಸಿ ಮತ್ತು ಗಾಡಿಯನ್ನು ಕೊಂಡೊಯ್ಯಿರಿ. ಉಳಿಕೆ ಹಣವನ್ನು ನೇರವಾಗಿ ನೆಟ್ವರ್ಕ್ ಗ್ಯಾರೇಜ್‌ಗೆ ಸೆಟಲ್ ಮಾಡುತ್ತೇವೆ.
• ನಿಮ್ಮ ರೆಡಿ ರೆಕಾರ್ಡ್‌ಗಳಿಗೆ ಸಂಪೂರ್ಣ ಬ್ರೇಕ್ ಅಪ್ ಹೊಂದಿರುವ ಕ್ಲೇಮ್ ಕಂಪ್ಯೂಟೇಶನ್ ಶೀಟ್ ಅನ್ನು ಪಡೆಯಿರಿ.
1. ನೋಂದಣಿ ಪ್ರಮಾಣಪತ್ರದ ಪ್ರತಿ (RC)
2. ಅಪಘಾತದ ಸಮಯದಲ್ಲಿ ಇನ್ಶೂರ್ಡ್ ವಾಹನವನ್ನು ಚಾಲನೆ ಮಾಡುವ ವ್ಯಕ್ತಿಯ ಚಾಲಕರ ಪರವಾನಗಿಯ ಪ್ರತಿ.
3. ಹತ್ತಿರದ ಸ್ಟೇಷನ್‌ನಲ್ಲಿ ಫೈಲ್ ಮಾಡಲಾದ FIR ಪ್ರತಿ. ಒಂದುವೇಳೆ ಅಪಘಾತವು ದಂಗೆಕೋರ ಕೃತ್ಯ, ಮುಷ್ಕರ ಅಥವಾ ಗಲಭೆಯಿಂದ ಸಂಭವಿಸಿದ್ದರೆ, , FIR ಫೈಲ್ ಮಾಡುವುದು ಕಡ್ಡಾಯವಾಗಿದೆ.
4. ಗ್ಯಾರೇಜ್‌ನಿಂದ ದುರಸ್ತಿ ಅಂದಾಜುಗಳು
5. ನಿಮ್ಮ ಗ್ರಾಹಕರನ್ನು ತಿಳಿಯಿರಿ (KYC) ಡಾಕ್ಯುಮೆಂಟ್‌ಗಳು
1. RC ಬುಕ್ ಕಾಪಿ ಮತ್ತು ನಿಮ್ಮ ವಾಹನದ ಒರಿಜಿನಲ್ ಕೀ.
2. ಹತ್ತಿರದ ಪೊಲೀಸ್ ಸ್ಟೇಷನ್ ಮತ್ತು ಫೈನಲ್ ಪೊಲೀಸ್ ರಿಪೋರ್ಟಿನಲ್ಲಿ ಫೈಲ್ ಮಾಡಲಾದ FIR
3. RTO ಟ್ರಾನ್ಸ್‌ಫರ್ ಪೇಪರ್‌ಗಳು
4. KYC ಡಾಕ್ಯುಮೆಂಟ್‌ಗಳು
5. ನಷ್ಟ ಪರಿಹಾರ ಮತ್ತು ಉಪಕ್ರಮದ ಪತ್ರ
ಎಚ್ಡಿಎಫ್ಸಿ ಎರ್ಗೋ ಕಾರ್ ಇನ್ಶೂರೆನ್ಸ್ ಇರುವಾಗ ನೀವು ಹೆಚ್ಚಿನ ರಸ್ತೆಗಳಲ್ಲಿ ಪ್ರಯಾಣಿಸುವ ಹಾಗೂ ಇನ್ನೂ ಅನ್ವೇಷಿಸದ ಮಾರ್ಗಗಳನ್ನು ಪತ್ತೆಹಚ್ಚುವುದರ ಕಡೆಗೆ ಗಮನ ಹರಿಸಬಹುದು. ಏಕೆಂದರೆ ನಮ್ಮ ಕಾರ್ ಇನ್ಶೂರೆನ್ಸ್ ಕವರೇಜ್ ನಿಮ್ಮ ಟಾಟಾ ಕಾರನ್ನು ಹಗಲಿರುಳೂ ರಕ್ಷಿಸುತ್ತದೆ. ನಿಮ್ಮ ಟಾಟಾ ಕಾರಿಗೆ ನಮ್ಮ ಇನ್ಶೂರೆನ್ಸ್ ಪ್ಲಾನ್‌ಗಳು ಪ್ರಯಾಣದಲ್ಲಿ ಯಾವುದೇ ತೊಡಕುಗಳಿರದಂತೆ ನೋಡಿಕೊಳ್ಳುತ್ತವೆ. ಇದು ನಮ್ಮ ವಿಶಾಲ 8700+ ನಗದುರಹಿತ ನೆಟ್ವರ್ಕ್ ಗ್ಯಾರೇಜ್‌ಗಳ ಸಹಾಯದಿಂದ ಸಾಧ್ಯವಾಗುತ್ತದೆ. ದೇಶಾದ್ಯಂತ ಹಬ್ಬಿರುವ, ಈ ನಗದುರಹಿತ ಗ್ಯಾರೇಜ್‌ಗಳು ನೀವು ಎಲ್ಲೇ ಇರಲಿ, ನಿಮಗೆ ನುರಿತ ಸಹಾಯ ಒದಗಿಸಲು ಸಮರ್ಥವಾಗಿವೆ. ಅನಿರೀಕ್ಷಿತ ತುರ್ತು ಸಹಾಯ ಅಥವಾ ರಿಪೇರಿಗಾಗಿ ನಗದು ಪಾವತಿಸುವ ಬಗ್ಗೆ ನೀವಿನ್ನು ಚಿಂತಿಸಬೇಕಾಗಿಲ್ಲ.
ಎಚ್‌ಡಿಎಫ್‌ಸಿ ಎರ್ಗೋದಿಂದ ನಗದುರಹಿತ ಗ್ಯಾರೇಜ್ ಸೌಲಭ್ಯದೊಂದಿಗೆ, ನೀವು ಎಲ್ಲಿದ್ದರೂ ನಿಮ್ಮ ಟಾಟಾ ಕಾರಿನ ಜೊತೆಗೊಬ್ಬ ನಂಬಿಕಸ್ತ ಗೆಳೆಯನಿದ್ದಾನೆ ಎಂಬ ಖಾತ್ರಿ ಹೊಂದಬಹುದು. ಆದ್ದರಿಂದ ಯಾವುದೇ ತೊಂದರೆ ಅಥವಾ ತುರ್ತು ಅವಶ್ಯಕತೆಯನ್ನು ಕೂಡಲೇ, ಎಲ್ಲಿಂದಲಾದರೂ ಮತ್ತು ಯಾವುದೇ ಸಮಯದಲ್ಲಿ ನೋಡಿಕೊಳ್ಳಲಾಗುತ್ತದೆ.
ಟಾಟಾ ಕರ್ವ್ EV ಈಗ ನಾಲ್ಕು ವಾರಗಳ ಕಾಯುವ ಅವಧಿಯೊಂದಿಗೆ ಲಭ್ಯವಿದೆ
ಡೀಲರ್ ಮೂಲಗಳ ಪ್ರಕಾರ ಟಾಟಾ ಕರ್ವ್ EV ಈಗ ನಾಲ್ಕು ವಾರಗಳವರೆಗಿನ ಕಾಯುವ ಅವಧಿಯೊಂದಿಗೆ ಬರುತ್ತದೆ. ಟಾಟಾ ಶೋರೂಮ್‌ಗಳಲ್ಲಿ ನಿರಂತರ ಸ್ಟಾಕ್ ಆಗಮನದ ಸಹಾಯದಿಂದ, EV ಗ್ರಾಹಕರನ್ನು ವೇಗವಾಗಿ ತಲುಪುತ್ತಿದೆ. ಟಾಟಾ ಕರ್ವ್ EV ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಅನೇಕ ವೇರಿಯಂಟ್‌ಗಳಲ್ಲಿ ಲಭ್ಯವಿದೆ: ಎಂಟ್ರಿ-ಲೆವೆಲ್‌ಗೆ 40.5kWh ಪ್ಯಾಕ್ ಮತ್ತು ಪ್ರೀಮಿಯಂ ವೇರಿಯಂಟ್‌ಗಳಿಗೆ 55kWh ಪ್ಯಾಕ್. ಮುಂಭಾಗದ ಚಕ್ರಗಳನ್ನು ಚಾಲನೆ ಮಾಡುವ 167-ಹಾರ್ಸ್‌ಪವರ್ ಮೋಟಾರ್‌ನೊಂದಿಗೆ, ಕರ್ವ್ EV 8.6 ಸೆಕೆಂಡ್‌ಗಳಲ್ಲಿ 0 ರಿಂದ 100 KM/h ವರೆಗೆ ವೇಗವರ್ಧನೆ ಮಾಡಬಹುದು.
ಪ್ರಕಟಣೆ ದಿನಾಂಕ: ನವೆಂಬರ್ 14, 2024
ಚಾರ್ಜಿಂಗ್ ಮೂಲಸೌಕರ್ಯವನ್ನು ವಿಸ್ತರಿಸಲು ಟಾಟಾ ಮೋಟರ್ಸ್ ಎರಡು ಸಂಸ್ಥೆಗಳೊಂದಿಗೆ ಸಹಯೋಗ ಹೊಂದುತ್ತದೆ
ಟಾಟಾ ಮೋಟರ್ಸ್ ತನ್ನ ಎಲೆಕ್ಟ್ರಿಕ್ ಶ್ರೇಣಿಗೆ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸಲು ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಮತ್ತು ಥಂಡರ್‌ಪ್ಲಸ್ ಸಲ್ಯೂಶನ್ಸ್ ಜೊತೆಗೆ ಸಹಯೋಗ ನಡೆಸುತ್ತದೆ. ಪಾರ್ಟಿಗಳ ನಡುವಿನ ಒಪ್ಪಂದದ ಅಂಗವಾಗಿ, 250 ಎಲೆಕ್ಟ್ರಿಕ್ ಕಮರ್ಷಿಯಲ್ ವಾಹನಗಳಿಗಾಗಿ ಹೊಸ ವೇಗದ ಚಾರ್ಜಿಂಗ್ ಕೇಂದ್ರಗಳನ್ನು ದೇಶಾದ್ಯಂತ ಸ್ಥಾಪಿಸಲಾಗುವುದು. ಮೆಟ್ರೋ ನಗರಗಳನ್ನು ಒಳಗೊಂಡಂತೆ ಮತ್ತು ಅದರ ಸುತ್ತಲೂ ಕಾರ್ಯತಂತ್ರಕ್ಕೆ ಅನುಕೂಲವಾಗಿ ನೆಲೆಗೊಂಡಿರುವ 50 ನಗರಗಳಲ್ಲಿ, ಈ ಚಾರ್ಜಿಂಗ್ ಸ್ಟೇಷನ್‌ಗಳು ಅಸ್ತಿತ್ವದಲ್ಲಿರುವ 540 ಕಮರ್ಷಿಯಲ್ ವಾಹನ ಚಾರ್ಜಿಂಗ್ ಪಾಯಿಂಟ್‌ಗಳ ಜಾಲವನ್ನು ಗಣನೀಯವಾಗಿ ಹೆಚ್ಚಿಸುತ್ತವೆ.
ಪ್ರಕಟಿಸಲಾದ ದಿನಾಂಕ: ಆಗಸ್ಟ್ 22, 2024