ಅತ್ಯಂತ ಜನಪ್ರಿಯವಾದ ಕ್ವಾಲಿಸ್ಗೆ ಬದಲಾಗಿ 2005 ರಲ್ಲಿ ಇನ್ನೋವಾ ಪ್ರಾರಂಭಿಸಲಾಯಿತು. ಈ ಕಾಂಪ್ಯಾಕ್ಟ್ MPV ಭಾರತೀಯರಿಗೆ ತಕ್ಷಣವೇ ಮೆಚ್ಚುಗೆಯಾಯಿತು, ಹ್ಯಾಚ್ಬ್ಯಾಕ್ ಅಥವಾ ಸೆಡಾನ್ ಅಲ್ಲದ ಕಾರಿಗೆ ಈ ರೀತಿಯ ಮೆಚ್ಚುಗೆ ಅಪರೂಪವಾಗಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಮೊಟ್ಟಮೊದಲು ಪ್ರಾರಂಭವಾದ ಮೂರು ಸಾಲು ಇರುವ ಕಾರ್ ಎನಿಸಿ ನಿರೀಕ್ಷೆಗೆ ಮೀರಿದ ಯಶಸ್ಸು ಸಾಧಿಸಿತು.
ಹೆಚ್ಚು ಉತ್ತಮವಾದ ಇಂಟೀರಿಯರ್ ಮತ್ತು ಉತ್ಕೃಷ್ಟ ವೈಶಿಷ್ಟ್ಯಗಳನ್ನು ಹೊಂದಿದ ಎರಡನೇ ತಲೆಮಾರಿನ ಇನ್ನೋವಾ ಕ್ರಿಸ್ಟಾ 2016 ರಲ್ಲಿ ಆರಂಭವಾಯಿತು. ಹೊಸದಾಗಿ ರೂಪಿಸಲಾದ ಗ್ರಿಲ್ ಮತ್ತು ಬಂಪರ್, ಅಲಾಯ್ ವೀಲ್ಸ್ ಮತ್ತು ಇತರ ಸೂಕ್ಷ್ಮ ಆಂತರಿಕ ಸುಧಾರಣೆಗಳೊಂದಿಗೆ ಇನ್ನೋವಾ ಕ್ರಿಸ್ಟಾ 2020 ರಲ್ಲಿ ಫೇಸ್ಲಿಫ್ಟ್ ಪಡೆಯಿತು.
ಟೊಯೋಟಾ ಇನ್ನೋವಾ ಕ್ರಿಸ್ಟಾದಲ್ಲಿ ಎರಡು ಎಂಜಿನ್ ಆಯ್ಕೆಗಳಿವೆ - ಒಂದು 2.7-litre ಪೆಟ್ರೋಲ್ ಎಂಜಿನ್ ಮತ್ತು 2.4-litre ಡೀಸೆಲ್ ಎಂಜಿನ್, ಇದು ಕ್ರಮವಾಗಿ 164bhp ಮತ್ತು 148bhp ಉತ್ಪಾದಿಸುತ್ತದೆ. ಮೂರು ಟ್ರಿಮ್ಗಳು ಲಭ್ಯವಿವೆ - GX, VX, ಮತ್ತು ZX . ಡೀಸೆಲ್-ಇಂಜಿನ್ ವೇರಿಯಂಟ್ಗಳಿಗೆ G ಮತ್ತು G ಪ್ಲಸ್ ಟ್ರಿಮ್ ಕೂಡ ಇದೆ. 7-ಸೀಟರ್ (7 STR ) ಮತ್ತು 8-ಸೀಟರ್ (8 STR)ನ ಆಯ್ಕೆ ಇದೆ. GX ಮತ್ತು ZX ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ನ ಆಯ್ಕೆ ಹೊಂದಿದೆ.
ಪೆಟ್ರೋಲ್ (2.7l) | ಡೀಸೆಲ್ (2.4l) |
ಇನ್ನೋವಾ ಕ್ರಿಸ್ಟಾ ZX 7 STR AT | ಇನ್ನೋವಾ ಕ್ರಿಸ್ಟಾ ZX 7 STR |
ಇನ್ನೋವಾ ಕ್ರಿಸ್ಟಾ ZX 7 STR | ಇನ್ನೋವಾ ಕ್ರಿಸ್ಟಾ VX 8 STR |
ಇನ್ನೋವಾ ಕ್ರಿಸ್ಟಾ GX 8 STR AT | ಇನ್ನೋವಾ ಕ್ರಿಸ್ಟಾ G ಪ್ಲಸ್ 7 STR |
ಇನ್ನೋವಾ ಕ್ರಿಸ್ಟಾ ಒಂದು ಹೆಚ್ಚು ಪ್ರೀತಿಪಾತ್ರವಾದ ಎಂಪಿವಿ ಆಗಿದ್ದು, ಇದು ಕುಟುಂಬಕ್ಕೆ ಐಷಾರಾಮಿ ಸವಾರಿಯನ್ನು ಒದಗಿಸುತ್ತದೆ. ಮತ್ತು ನಿಮ್ಮಲ್ಲಿ ಇನ್ನೋವಾ ಇದ್ದರೆ, ನೀವು ದೊಡ್ಡ ಕುಟುಂಬವನ್ನು ಹೊಂದಿದ್ದು, ಅವರ ಸುರಕ್ಷತೆ ಪ್ರಮುಖ ಕಳಕಳಿಯಾಗಿದೆ. ಇನ್ನೋವಾ ಡ್ರೈವರ್ ಮತ್ತು ಪ್ರಯಾಣಿಕರ ಏರ್ಬ್ಯಾಗ್ಗಳೊಂದಿಗೆ ಬರುತ್ತದೆ, ಯಾವುದೇ ದುರದೃಷ್ಟಕರ ಘಟನೆಗಳ ವಿರುದ್ಧ ನೀವು ಮತ್ತು ನಿಮ್ಮ ಕಾರು ಉತ್ತಮವಾಗಿ ರಕ್ಷಿಸಲ್ಪಡುವುದನ್ನು ಖಚಿತಪಡಿಸಿಕೊಳ್ಳಲು ಕಾರ್ ಇನ್ಶೂರೆನ್ಸ್ ಪಾಲಿಸಿ ಕಡ್ಡಾಯವಾಗಿದೆ. ನಿಮಗೆ ಸಿಗುವ ಆಯ್ಕೆಗಳು ಹೀಗಿವೆ:
ಇನ್ನೋವಾಗಾಗಿಏಕ ವರ್ಷದ ಸಮಗ್ರ ಇನ್ಶೂರೆನ್ಸ್ವಾರ್ಷಿಕವಾಗಿ ನವೀಕರಿಸಬಹುದಾದ ಸ್ವಂತ ಹಾನಿ ಕವರ್ ಮತ್ತು ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳಿಂದಾಗಿ ಆಕಸ್ಮಿಕ ಹಾನಿ, ಕಳ್ಳತನ ಮತ್ತು ಹಾನಿಯಿಂದ ನಿಮ್ಮನ್ನು ಆರ್ಥಿಕವಾಗಿ ರಕ್ಷಿಸುವ ಥರ್ಡ್ ಪಾರ್ಟಿ ಹೊಣೆಗಾರಿಕೆ ಕವರ್ನೊಂದಿಗೆ ಬರುತ್ತದೆ. ಅಪಘಾತದ ಸಂದರ್ಭದಲ್ಲಿ ನಿಮ್ಮ ಚಿಕಿತ್ಸೆಯ ವೆಚ್ಚಗಳನ್ನು ನೋಡಿಕೊಳ್ಳಲು ಇದು ₹15 ಲಕ್ಷಗಳ ವೈಯಕ್ತಿಕ ಅಪಘಾತ ಕವರ್ನೊಂದಿಗೆ ಬರುತ್ತದೆ.
ಅಪಘಾತ
ವೈಯಕ್ತಿಕ ಅಪಘಾತ
ನೈಸರ್ಗಿಕ ವಿಕೋಪಗಳು
ಥರ್ಡ್-ಪಾರ್ಟಿ ಹೊಣೆಗಾರಿಕೆ
ಆ್ಯಡ್-ಆನ್ಗಳ ಆಯ್ಕೆ
ಕಳ್ಳತನ
ರಸ್ತೆಯಲ್ಲಿ ಯಾವುದೇ ಕಾರಿಗೆ ಕಡ್ಡಾಯ ಕವರ್, ಥರ್ಡ್ ಪಾರ್ಟಿ ಇನ್ಶೂರೆನ್ಸ್ ಒಂದು ಬೇಸಿಕ್ ಕಾರ್ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಇದು ಥರ್ಡ್ ಪಾರ್ಟಿ ವ್ಯಕ್ತಿಗೆ, ಅವರಿಗೆ ಗಾಯ ಮಾಡಿರುವುದಕ್ಕಾಗಿ ಅಥವಾ ನಿಮ್ಮ ಕಾರು ಒಳಗೊಂಡಿರುವ ಅಪಘಾತದ ಪರಿಣಾಮವಾಗಿ ಅವರ ಆಸ್ತಿಗೆ ಹಾನಿ ಉಂಟುಮಾಡಿರುವುದಕ್ಕಾಗಿ ಕವರ್ ಮಾಡುತ್ತದೆ.
ವೈಯಕ್ತಿಕ ಅಪಘಾತ
ಥರ್ಡ್-ಪಾರ್ಟಿ ಆಸ್ತಿ ಹಾನಿ
ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ
ಇದು ಸಮಗ್ರ ಕವರ್ನ ಒಂದು ಭಾಗ. ನಿಮ್ಮ ವಾಹನಕ್ಕಾಗಿ ಈಗಾಗಲೇ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಇದ್ದಲ್ಲಿ, ಇದನ್ನು ಸ್ಟ್ಯಾಂಡ್ಅಲೋನ್ ಪಾಲಿಸಿಯಾಗಿ ಕೂಡ ಪ್ರತ್ಯೇಕವಾಗಿ ಖರೀದಿಸಬಹುದು. ಈ ಪಾಲಿಸಿಯು ಅಪಘಾತ ಅಥವಾ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳ ಪರಿಣಾಮವಾಗಿ ನಿಮ್ಮ ಸ್ವಂತ ವಾಹನಕ್ಕೆ ಉಂಟಾದ ಹಾನಿಯನ್ನು ಕವರ್ ಮಾಡುತ್ತದೆ. ಇದು ಭರಿಸಲಾಗದ ಕಳ್ಳತನದ ಸಂದರ್ಭದಲ್ಲಿ ನಿಮಗೆ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV) ಒದಗಿಸುವ ಕಳ್ಳತನ ಕವರ್ನೊಂದಿಗೆ ಕೂಡ ಬರುತ್ತದೆ.
ಅಪಘಾತ
ನೈಸರ್ಗಿಕ ವಿಕೋಪಗಳು
ಬೆಂಕಿ
ಆ್ಯಡ್-ಆನ್ಗಳ ಆಯ್ಕೆ
ಕಳ್ಳತನ
ಇದು ಹೆಚ್ಚು ಶಿಫಾರಸು ಮಾಡಲಾದ ಪಾಲಿಸಿ. ಹೊಸ ವಾಹನ ಖರೀದಿಸುವಾಗ ಈ ಪಾಲಿಸಿ ಆಯ್ಕೆ ಮಾಡುವುದು ಉತ್ತಮ. ಇದು ತ್ರಿವಾರ್ಷಿಕ ಥರ್ಡ್ ಪಾರ್ಟಿ ಲಯೆಬಿಲಿಟಿ ಕವರ್ ಹಾಗೂ ವಾರ್ಷಿಕ ನವೀಕರಣದ ಸ್ವಂತ ಹಾನಿ ಕವರ್ ಹೊಂದಿದ್ದು, ನಿಮಗೆ ವಿಸ್ತೃತ ಅವಧಿಯವರೆಗೆ ಕವರೇಜ್ ನೀಡುತ್ತದೆ. ಇದರಲ್ಲಿರುವ ವೈಯಕ್ತಿಕ ಅಪಘಾತ ಕವರ್ ಹಾಗೂ ಕಳುವಿನ ವಿರುದ್ಧದ ರಕ್ಷಣೆಯ ಜೊತೆಗೆ ಅನೇಕ ಆ್ಯಡ್-ಆನ್ ಕವರ್ಗಳನ್ನು ಆಯ್ಕೆ ಮಾಡಬಹುದು.
ಅಪಘಾತ
ನೈಸರ್ಗಿಕ ವಿಕೋಪಗಳು
ವೈಯಕ್ತಿಕ ಆಕ್ಸಿಡೆಂಟ್
ಥರ್ಡ್-ಪಾರ್ಟಿ ಹೊಣೆಗಾರಿಕೆ
ಆ್ಯಡ್-ಆನ್ಗಳ ಆಯ್ಕೆ
ಕಳ್ಳತನ
ಅಪಘಾತ ಅಥವಾ ಭೂಕಂಪ, ಬೆಂಕಿ, ಬಿರುಗಾಳಿ, ಗಲಭೆ, ವಿಧ್ವಂಸಕ ಕೃತ್ಯಗಳು ಇತ್ಯಾದಿ ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ವಿಕೋಪಗಳ ಪರಿಣಾಮವಾಗಿ ನಿಮ್ಮ ವಾಹನಕ್ಕೆ ಉಂಟಾಗುವ ಹಾನಿಯನ್ನು ಸಮಗ್ರ ಇನ್ನೋವಾ ಕ್ರಿಸ್ಟಾ ಕಾರ್ ಇನ್ಶೂರೆನ್ಸ್ ಪಾಲಿಸಿ ಕವರ್ ಮಾಡುತ್ತದೆ. ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಚಿಕಿತ್ಸಾ ಶುಲ್ಕಗಳು ಹಾಗೂ ಇತರ ವೆಚ್ಚಗಳಿಗೆ ಕೂಡ ಕವರೇಜ್ ಸಿಗುತ್ತದೆ. ಇದಲ್ಲದೆ, ಥರ್ಡ್ ಪಾರ್ಟಿ ವ್ಯಕ್ತಿ ಹಾನಿಗೊಳಗಾಗಿದ್ದಲ್ಲಿ ನಿಮ್ಮ ಆರ್ಥಿಕ ಬಾಧ್ಯತೆಗಳ ನಿರ್ವಹಣೆಗೆ ನೆರವು ನೀಡುವ ಮೂಲಕ, ಇದು ಎಲ್ಲ ರೀತಿಯ ರಕ್ಷಣೆ ನೀಡುತ್ತದೆ.
ಅಪಘಾತಗಳು ಸಾಮಾನ್ಯವಾಗಿ ಅನಿರೀಕ್ಷಿತ. ಜೊತೆಗೆ, ಕೆಲವೊಮ್ಮೆ ಅವುಗಳನ್ನು ತಪ್ಪಿಸಲಾಗುವುದಿಲ್ಲ. ಆದಾಗ್ಯೂ, ಸ್ವಂತ ಹಾನಿಯ ಕವರ್ನೊಂದಿಗೆ ನಿಮ್ಮ ವಾಹನದ ದುರಸ್ತಿಗೆ ತಗಲುವ ವೆಚ್ಚವನ್ನು ಕಡಿಮೆಗೊಳಿಸಬಹುದು.
ದುರಂತಗಳು ಸೂಚನೆ ಇಲ್ಲದೆಯೇ ಹಠಾತ್ ಆಗಿ ಎರಗಬಹುದು. ಭೂಕಂಪ, ಪ್ರವಾಹ, ಬಿರುಗಾಳಿ, ಬೆಂಕಿ, ವಿಧ್ವಂಸ, ಗಲಭೆ ಇತ್ಯಾದಿಗಳಿಂದ ಉಂಟಾಗುವ ಹಾನಿಯ ವಿರುದ್ಧ ನಿಮ್ಮ ಕಾರಿಗೆ ಆರ್ಥಿಕ ಸುರಕ್ಷೆ ನೀಡಿ.
ಕಾರ್ ಇನ್ಶೂರೆನ್ಸ್ ಇಲ್ಲದೆ ನಿಮ್ಮ ಇನ್ನೋವಾ ಕಳುವಾದರೆ ದೊಡ್ಡ ಮಟ್ಟದ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಆದರೆ, ಇನ್ಶೂರೆನ್ಸ್ ಇದ್ದಲ್ಲಿ, ನೀವು ವಾಹನದ IDV ಮೊತ್ತ ಪಡೆಯುತ್ತೀರಿ. ನೀವು ರಿಟರ್ನ್ ಟು ಇನ್ವಾಯ್ಸ್ ಕವರ್ ಹೊಂದಿದ್ದರೆ, ಕಾರಿನ ಸಂಪೂರ್ಣ ಆನ್-ರೋಡ್ ಬೆಲೆ ಪಡೆಯುತ್ತೀರಿ.
ಅಪಘಾತದ ಸಂದರ್ಭದಲ್ಲಿ ಚಿಕಿತ್ಸೆಯ ವೆಚ್ಚವನ್ನು ಕಡಿಮೆ ಮಾಡಲು ಎಲ್ಲಾ ಮಾಲೀಕರಿಗೆ ಕನಿಷ್ಠ ₹ 15 ಲಕ್ಷಗಳ ಪರ್ಸನಲ್ ಆಕ್ಸಿಡೆಂಟ್ ಕವರ್ ಕಡ್ಡಾಯವಾಗಿದೆ.
ನಿಮ್ಮಿಂದ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಹಾನಿಯಾದಲ್ಲಿ, ನಿಮ್ಮ ಹಣಕಾಸಿನ ಬಾಧ್ಯತೆಯನ್ನು ನಿಭಾಯಿಸಲು ನೆರವು ನೀಡುತ್ತದೆ.
ಕಾರುಗಳು ಸ್ಮಾರ್ಟ್ ಆಗುತ್ತಿವೆ, ಹಾಗೆಯೇ ಇನ್ಶೂರೆನ್ಸ್ ಕಂಪನಿಗಳು ಕೂಡ. ವಿಮೆ ಕಚೇರಿಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ದಿನಗಳು ಈಗಿಲ್ಲ. ಈಗ ನಿಮ್ಮ ಸ್ವಂತ ಮನೆಯಿಂದಲೇ, ಕೆಲವೇ ನಿಮಿಷಗಳಲ್ಲಿ, ಸುಲಭವಾಗಿ ನಿಮ್ಮಟೊಯೋಟಾ ಇನ್ನೋವಾ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನ್ನಲ್ಲಿ ನವೀಕರಿಸಬಹುದು. ಅದು ಹೀಗೆ:
ವಿಮಾದಾತರನ್ನು ಆಯ್ಕೆ ಮಾಡುವಾಗ, ನೀವು ಅದರ ಕ್ಲೇಮ್ ಸೆಟಲ್ಮೆಂಟ್ ರೇಶಿಯೋ ಮತ್ತು ಪ್ರಕ್ರಿಯೆ, ಗ್ರಾಹಕರ ಸಂಖ್ಯೆ ಮತ್ತು ನಿಮ್ಮ ಪ್ರದೇಶದಾದ್ಯಂತ ಅವರ ಇರುವಿಕೆಯನ್ನು ಪರಿಶೀಲಿಸಬೇಕು. ಆಗ ಮಾತ್ರ ನಿಮಗೆ ಉತ್ತಮ ಅನುಭವದ ಭರವಸೆ ಇರುತ್ತದೆ. ನೀವು ಎಚ್ಡಿಎಫ್ಸಿ ಎರ್ಗೋ ಏಕೆ ಆಯ್ಕೆ ಮಾಡಬೇಕು ಎಂಬುದು ಇಲ್ಲಿದೆ:
ನಮ್ಮ ನಗದುರಹಿತ ಗ್ಯಾರೇಜ್ಗಳೊಂದಿಗೆ ತಾತ್ಕಾಲಿಕವಾಗಿಯೂ ಸಹ ನಿಮ್ಮ ಹಣಕಾಸಿಗೆ ತೊಂದರೆಯಾಗದಂತೆ ಕಾರ್ ರಿಪೇರಿ ಮಾಡಿಸಿಕೊಳ್ಳಿ. ದೇಶಾದ್ಯಂತ 8700 ಕ್ಕೂ ಹೆಚ್ಚು ನಗದುರಹಿತ ಗ್ಯಾರೇಜ್ಗಳೊಂದಿಗೆ ನೀವು ಯಾವಾಗಲೂ ಕವರ್ ಆಗುತ್ತೀರಿ.
80% ಕ್ಕೂ ಹೆಚ್ಚು ಕಾರ್ ಇನ್ಶೂರೆನ್ಸ್ ಕ್ಲೇಮ್ಗಳನ್ನು ಅವುಗಳನ್ನು ಸಲ್ಲಿಸಿದ ದಿನದಂದೇ ಪ್ರಕ್ರಿಯೆಗೊಳಿಸುತ್ತೇವೆ. ಇದರಿಂದ ಕಾರ್ ಹಾನಿಗೊಳಗಾಗಿ ಅದು ರಿಪೇರಿಯಾಗುವ ಮಧ್ಯದ ಸಮಯದ ಅಂತರ ಕಡಿಮೆಯಾಗುತ್ತದೆ.
ನಮ್ಮ ವಿಶಿಷ್ಟ ಓವರ್ನೈಟ್ ರಿಪೇರಿ ಸೇವೆಯು ಆಕ್ಸಿಡೆಂಟ್ ಆದಾಗ ಮಾಡಬೇಕಾದ ಸಣ್ಣ ಪುಟ್ಟ ರಿಪೇರಿ ಕೆಲಸಗಳನ್ನು ನೀವು ನಿದ್ದೆ ಮಾಡುವ ಸಮಯದಲ್ಲಿ ಮಾಡಿ ಮುಗಿಸುತ್ತದೆ. ಮರುದಿನ ಬೆಳಿಗ್ಗೆ ನಿಮ್ಮ ಕಾರು ಉಪಯೋಗಿಸಲು ಸಿದ್ಧವಾಗಿರುತ್ತದೆ.
ವಾಹನ ಕೆಟ್ಟು ನಿಂತಾಗ, ಅದನ್ನು ಟೋ ಮಾಡಿಕೊಂಡು ಹೋದಾಗ ನಮ್ಮ 24x7 ನೆರವಿನ ಸೇವೆಯ ದೆಸೆಯಿಂದ ನೀವು ಎಲ್ಲಿಯೂ ಸಿಲುಕಿಕೊಳ್ಳಲಾರಿರಿ.